ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಈ ಟೂರ್ನಿಯಲ್ಲಿ ಮಿಂಚಿನಂತೆ ಅರ್ಧ ಶತಕ ಸಿಡಿಸಿದ 5 ಬ್ಯಾಟರ್‌ಗಳು ಇವರು!

IPL 2022: Top Five Batters With The Fastest half century in This Season

ಐಪಿಎಲ್ 15ನೇ ಆವೃತ್ತಿ ರೋಚಕತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ನಿತ್ಯವೂ ಸಾಕಷ್ಟು ಪೈಪೋಟಿಯ ಪಂದ್ಯಗಳು ನಡೆಯುತ್ತಿದ್ದು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ದೊರೆಯುತ್ತಿದೆ. ಪ್ಲೇಆಫ್ ಹಂತಕ್ಕೇರುವ ಸ್ಪರ್ಧೆ ತೀವ್ರತೆ ಪಡೆದುಕೊಂಡಿದ್ದು ಎಲ್ಲಾ ತಂಡಗಳು ಕೂಡ ಮುಂದಿನ ಹಂತಕ್ಕೇರುವ ಅವಕಾಶವನ್ನು ಪಡೆಯಲು ಪ್ರಯತ್ನವನ್ನು ಭರ್ಜರಿಯಾಗಿ ನಡೆಸುತ್ತಿದೆ. ಮುಂಬೈ ಇಂಡಿಯನ್ಸ್ ಒಂದನ್ನು ಹೊರತುಪಡಿಸಿ ಉಳಿದ ಎಲ್ಲಾ ತಂಡಗಳಿಗೂ ಪ್ಲೇಆಫ್ ಹಂತಕ್ಕೇರುವ ಅವಕಾಶ ಇದ್ದೇ ಇದೆ.

ಈವರೆಗೆ ನಡೆದ ಪಂದ್ಯದಲ್ಲಿ ಸಾಕಷ್ಟು ರೋಮಾಂಚಕನಾಗಿ ಪಂದ್ಯಗಳು ನಡೆದಿದೆ. ಅನೇಕ ಇನ್ನಿಂಗ್ಸ್‌ಗಳು ಅಭಿಮಾನಿಗಳ ನೆನಪಿನಲ್ಲಿ ಉಳಿಯುವಂತಿದೆ. ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ಸಮಾನವಾಗಿ ಈ ಟೂರ್ನಿಯಲ್ಲಿ ಯಶಸ್ಸು ಸಾಧಿಸುತ್ತಿರುವುದು ಟೂರ್ನಿಯ ಮತ್ತೊಂದು ಕುತೂಹಲಕಾರಿ ಸಂಗತಿಯಾಗಿದೆ.

IPL 2022: ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆದು, ಫ್ಲೈಯಿಂಗ್ ಕಿಸ್ ಕೊಟ್ಟ ರಿಷಿ ಧವನ್IPL 2022: ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆದು, ಫ್ಲೈಯಿಂಗ್ ಕಿಸ್ ಕೊಟ್ಟ ರಿಷಿ ಧವನ್

ಇನ್ನು ಈ ಬಾರಿಯ ಆವೃತ್ತಿಯಲ್ಲಿ ಕೆಲ ಬ್ಯಾಟರ್‌ಗಳು ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನಡೆಸಿ ತಮ್ಮ ತಂಡಕ್ಕೆ ನೆರವಾಗಿದ್ದಾರೆ. ಈ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಅತ್ಯಂತ ವೇಗವಾಗಿ ಅರ್ಧ ಶತಕ ಸಿಡಿಸಿದ ಐವರು ಬ್ಯಾಟರ್‌ಗಳನ್ನು ನೋಡೋಣ. ಮುಂದೆ ಓದಿ..

1. ಪ್ಯಾಟ್ ಕಮ್ಮಿನ್ಸ್- 14 ಎಸೆತಗಳಲ್ಲಿ ಅರ್ಧ ಶತಕ

1. ಪ್ಯಾಟ್ ಕಮ್ಮಿನ್ಸ್- 14 ಎಸೆತಗಳಲ್ಲಿ ಅರ್ಧ ಶತಕ

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಅನುಭವಿ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಈ ಬಾರಿಯ ಟೂರ್ನಿಯಲ್ಲಿ ತಾನು ಆಡಿದ ಆರಂಭಿಕ ಪಂದ್ಯದಲ್ಲಿಯೇ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಪ್ಯಾಟ್ ಕಮ್ಮಿನ್ಸ್ ಕೇವಲ 14 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಈ ಮೂಲಕ ಐಪಿಎಲ್‌ನ ಅತಿ ವೇಗದ ಅರ್ಧ ಶತಕದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕೆಎಲ್ ರಾಹುಲ್ ಜೊತೆಗೆ ಹಂಚಿಕೊಂಡಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾದ ಬೌಲರ್ ಡೇನಿಯಲ್ ಸ್ಯಾಮ್ಸ್ ಅವರ ಒಂದು ಓವರ್‌ನಲ್ಲಿ 35 ರನ್ ಸಿಡಿಸುವ ಮೂಲಕ ಅಬ್ಬರಿಸಿದರು.

ಲಿಯಾಮ್ ಲಿವಿಂಗ್‌ಸ್ಟೋನ್- 21 ಎಸೆತಗಳಲ್ಲಿ ಅರ್ಧ ಶತಕ

ಲಿಯಾಮ್ ಲಿವಿಂಗ್‌ಸ್ಟೋನ್- 21 ಎಸೆತಗಳಲ್ಲಿ ಅರ್ಧ ಶತಕ

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಲಿಯಾಮ್ ಲಿವಿಂಗ್‌ಸ್ಟೋನ್ ಇದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಲಿವಿಂಗ್‌ಸ್ಟೋನ್ ಈ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಕೇವಲ 21 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದರು ಇಂಗ್ಲೆಂಡ್ ಮೂಲದ ಈ ದಾಂಡಿಗ. ಈ ಸ್ಪೋಟಕ ಬ್ಯಾಟಿಂಗ್‌ನ ಕಾರಣದಿಂದಾಗಿ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 189 ರನ್‌ಗಳನ್ನು ಗಳಿಸಿತು. ಲಿಯಾಮ್ ಲಿವಿಂಗ್‌ಸ್ಟೋನ್ ಈ ಪಂದ್ಯದಲ್ಲಿ ಏಳು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸಿದ್ದರು. ಆದರೆ ಈ ಪಂದ್ಯವನ್ನು ಗುಜರಾತ್ ಟೈಟನ್ಸ್ ರೋಚಕವಾಗಿ ಗೆದ್ದುಕೊಂಡಿತ್ತು.

ರಾಹುಲ್ ತ್ರಿಪಾಠಿ- 21 ಎಸೆತಗಳಲ್ಲಿ ಅರ್ಧ ಶತಕ

ರಾಹುಲ್ ತ್ರಿಪಾಠಿ- 21 ಎಸೆತಗಳಲ್ಲಿ ಅರ್ಧ ಶತಕ

ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಮಿಂಚುತ್ತಿರುವ ರಾಹುಲ್ ತ್ರಿಪಾಠಿ ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ತನ್ನ ಮಾಜಿ ತಂಡವಾದ ಕೆಕೆಆರ್ ವಿರುದ್ಧ ತ್ರಿಪಾಠಿ ತಮ್ಮ ಉಗ್ರ ರೂಪವನ್ನು ತೋರಿಸಿದ್ದಾರೆ. 21 ಎಸೆತಗಳಲ್ಲಿ ರಾಹುಲ್ ತ್ರಿಪಾಠಿ ಅರ್ಥ ಶತಕವನ್ನು ಸಿಡಿಸಿದ್ದಾರೆ. ಅಂತಿಮವಾಗಿ 37 ಎಸೆತಗಳನ್ನು ಎದುರಿಸಿದ ರಾಹುಲ್ ತ್ರಿಪಾಠಿ 71 ರನ್‌ಗಳಿಸಿರು. ರಾಹಲ್ ತ್ರಿಪಾಠಿ ಅವರ ಈ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ ಆರು ಸಿಕ್ಸರ್ ಸಿಡಿಸಿದ್ದರು.

ಎವಿನ್ ಲೂಯಿಸ್ 23 ಎಸೆತಗಳಲ್ಲಿ ಅರ್ಧ ಶತಕ

ಎವಿನ್ ಲೂಯಿಸ್ 23 ಎಸೆತಗಳಲ್ಲಿ ಅರ್ಧ ಶತಕ

ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಆಡುತ್ತಿರುವ ವಿಂಡೀಸ್ ಮೂಲದ ಆಟಗಾರ ಎವಿನ್ ಲೂಯಿಸ್ ಈ ಬಾರಿಯ ಟೂರ್ನಿಯಲ್ಲಿ ವೇಗವಾಗಿ ಅರ್ಧ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ ವಿರುದ್ಧದ ಪಂದ್ಯದಲ್ಲಿ ಎವಿನ್ ಲೂಯಿಸ್ 23 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದರು. ಈ ಸ್ಪೋಟಕ ಬ್ಯಾಟಿಂಗ್‌ನ ಕಾರಣದಿಂದಾಗಿ ಎಲ್‌ಎಸ್‌ಜಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 211 ರನ್‌ಗಳ ಗುರಿಯನ್ನು ಮೀರಿ ನಿಂತಿತು.

CSK ವಿರುದ್ಧದ ಪಂದ್ಯದಲ್ಲಿ RCB ಗೆಲುವಿಗೆ ಕಾರಣವೇನು | Oneindia Kannada
ಜೋಸ್ ಬಟ್ಲರ್- 23 ಎಸೆತಗಳಲ್ಲಿ ಅರ್ಧ ಶತಕ

ಜೋಸ್ ಬಟ್ಲರ್- 23 ಎಸೆತಗಳಲ್ಲಿ ಅರ್ಧ ಶತಕ

ಈ ಬಾರಿಯ ಆವೃತ್ತಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಜೋಸ್ ಬಟ್ಲರ್ ವೇಗದ ಅರ್ಧ ಶತಕಗಳಿಸಿದ ಆಟಗಾರರ ಪಟ್ಟಿಯಲ್ಲಿಯೂ ಕಾಣಿಸಿಕೊಂಡಿದ್ದಾರೆ. ಟೂರ್ನಿಯ ಆರಂಭಿಕ ಹಂತದಲ್ಲಿ ಗುಜರಾತ್ ಟೈಟಮ್ಸ್ ವಿರುದ್ಧದ ಪಂದ್ಯದಲ್ಲಿ ಬಟ್ಲರ್ 23 ಎಸೆತಗಳಲ್ಲಿ 54 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ಜಿಟಿ ನೀಡಿದ್ದ 193 ರನ್‌ಗಳನ್ನು ಬೆನ್ನಟ್ಟಿದ ಆರ್‌ಆರ್ ತಂಡ 37 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು. ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡಿದ್ದು ಈ ಪಂದ್ಯ ತಿರುವು ಪಡೆಯಲು ಕಾರಣವಾಯಿತು.

Story first published: Wednesday, May 4, 2022, 17:48 [IST]
Other articles published on May 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X