ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ನಾಯಕತ್ವ ಕಿತ್ತುಕೊಳ್ಳುತ್ತಾ ಮುಂಬೈ ಇಂಡಿಯನ್ಸ್?: ನಾಯಕತ್ವಕ್ಕಾಗಿ MI ಮುಂದಿದೆ 3 ಆಯ್ಕೆ!

IPL 2022: Will Mumbai Indians Change skipper of the team: who could replace Rohit Sharma as captain

ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ 2022ರ ಆವೃತ್ತಿಯಲ್ಲಿ ಸಂಪೂರ್ಣವಾಗಿ ಮಂಕಾಗಿದ್ದಾರೆ. ವೈಯಕ್ತಿಕ ಪ್ರದರ್ಶನ ಹಾಗೂ ನಾಯಕತ್ವ ಎರಡೂ ವಿಭಾಗದಲ್ಲಿಯೂ ರೋಹಿತ್ ಸತತ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿಯ ಆವೃತ್ತಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಒಂದೂ ಗೆಲುವು ಸಾಧಿಸಲು ಸಾಧ್ಯವಾಗದೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಪ್ರದರ್ಶನ ಮುಂಬೈ ಇಂಡಿಯನ್ಸ್ ಅಭಿಮಾಣಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಮಾತ್ರವಲ್ಲದೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆ ಮಾಡಲಿ ಎಂಬ ಚರ್ಚೆಗೂ ಕಾರಣವಾಗಿದೆ.

ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ನಾಯಕನಾಗಿ ನೀಡಿರುವ ಅಮೋಘ ಕೊಡುಗೆಯ ಕಾರಣದಿಂದಾಗಿ ಇತ್ತೀಚೆಗಷ್ಟೇ ಟೀಮ್ ಇಂಡಿಯಾದ ಎಲ್ಲಾ ಮಾದರಿಗೂ ರೋಹಿತ್ ಶರ್ಮಾ ನಾಯಕನಾಗಿ ಆಯ್ಕೆಯಾಗಿದ್ದಾರೆ. ಭಾರತ ತಂಡದ ನಾಯಕನಾಗಿ ರೋಹಿತ್ ಸಾಧನೆ ಉತ್ತಮವಾಗಿದೆ. ಆದರೆ ಐಪಿಎಲ್‌ನಲ್ಲಿ ಶರ್ಮಾ ಪ್ರದರ್ಶನ ಕಳೆಗುಂದಿದೆ. ಆಡಿರುವ ಐದು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಕೇವಲ 108 ರನ್ ಮಾತ್ರವೇ ಗಳಿಸಿದ್ದಾರೆ. ಅಲ್ಲದೆ ಸತತ ಎರಡನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದು ಪ್ಲೇಆಫ್‌ಗೇರುವ ಅವಕಾಶ ಕಳೆದುಕೊಳ್ಳುವ ಭೀತಿಯಲ್ಲಿದೆ.

IPL 2022: ಸತತ 5 ಪಂದ್ಯ ಸೋತ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌IPL 2022: ಸತತ 5 ಪಂದ್ಯ ಸೋತ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌

ಒತ್ತಡಕ್ಕೊಳಗಾಗಿದ್ದಾರಾ ರೋಹಿತ್ ಶರ್ಮಾ

ಒತ್ತಡಕ್ಕೊಳಗಾಗಿದ್ದಾರಾ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಅವರ ಪ್ರದರ್ಶನದಲ್ಲಿ ಈ ಪ್ರಮಾಣದ ಹಿನ್ನಡೆಗೆ ಕಾರಣವೇನು ಎಂಬುದು ಎಲ್ಲರಿಗೆ ಮೂಡುತ್ತಿರುವ ಪ್ರಶ್ನೆಯಾಗಿದೆ. ಈಗಾಗಲೇ ಹೇಳಿದಂತೆ ರೋಹಿತ್ ಶರ್ಮಾ ಪ್ರಸ್ತುತ ಟೀಮ್ ಇಂಡಿಯಾದ ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಅಲ್ಲದೆ ಐಪಿಎಲ್ ತಂಡದ ನಾಯಕತ್ವದ ಹೊಣೆಗಾರಿಕೆ ಕೂಡ ಶರ್ಮಾ ಮೇಲಿದೆ. ಹೀಗಾಗಿ ಈ ನಾಲ್ಕು ಮಾದರಿಗಳಲ್ಲಿನ ನಾಯಕತ್ವ ಜವಾಬ್ಧಾರಿ ರೋಹಿತ್ ಶರ್ಮಾಗೆ ಹೊರೆಯಾಗಿದೆಯಾ ಎಂಬ ಅನುಮಾನಗಳನ್ನು ಕೆಲ ಕ್ರಿಕೆಟ್ ಪಂಡಿತರು ವ್ಯಕ್ತಪಡಿಸುತ್ತಿದ್ದಾರೆ.

ನಾಯಕತ್ವ ಬದಲಾವಣೆಯ ಯೋಚನೆ ಮಾಡಲಿದೆಯಾ ಮುಂಬೈ

ನಾಯಕತ್ವ ಬದಲಾವಣೆಯ ಯೋಚನೆ ಮಾಡಲಿದೆಯಾ ಮುಂಬೈ

ಸತತವಾಗಿ ಸೋಲು ಕಾಣುತ್ತಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯಾವ ರೀತಿಯ ಯೋಚನೆ ಮಾಡಲಿದೆ ಎಂಬುದು ಕುತೂಹಲ ಮೂಡಿಸುತ್ತಿದೆ. ನಾಯಕನಾಗಿ ರೋಹಿತ್ ಶರ್ಮಾ ವೈಫಲ್ಯವನ್ನು ಅನುಭವಿಸುತ್ತಿದ್ದು ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಮದ ಇತರ ಯಾವುದಾದರೂ ಆಟಗಾರನಿಗೆ ನಾಯಕತ್ವದ ಜವಾಬ್ಧಾರಿ ನೀಡಲಿದೆಯಾ ಎಂಬುದು ಕುತೂಹಲ ಮೂಡಿಸಿದೆ. ಇದಲ್ಲದೆ ಒತ್ತಡದ ಪರಿಸ್ಥಿಯನ್ನು ಗಮನದಲ್ಲಿಟ್ಟುಕೊಂಡು ಸ್ವತಃ ರೋಹಿತ್ ಶರ್ಮಾ ಅವರೇ ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಗಳ ಬಗ್ಗೆಯೂ ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ಚರ್ಚೆಗಳು ನಡೆಯುತ್ತಿದೆ.

ನಾಯಕತ್ವ ಬದಲಾದರೆ ಯಾರಿಗೆ ದೊರೆಯಲಿದೆ ಜವಾಬ್ಧಾರಿ?

ನಾಯಕತ್ವ ಬದಲಾದರೆ ಯಾರಿಗೆ ದೊರೆಯಲಿದೆ ಜವಾಬ್ಧಾರಿ?

ಮುಂಬೈ ಇಂಡಿಯನ್ಸ್ ತಂಡ ಸತತವಾಗಿ ಸೋಲು ಅನುಭವಿಸುತ್ತಿರುವ ಕಾರಣ ನಾಯಕತ್ವ ಬದಲಾವನೆ ಮಾಡುವ ನಿರ್ಧಾರವನ್ನು ಫ್ರಾಮಚೈಸಿ ತೆಗೆದುಕೊಂಡರೆ, ಅಥವಾ ಸ್ವತಃ ರೋಹಿತ್ ಶರ್ಮಾ ಅವರೇ ನಾಯಕತ್ವದಿಮದ ಹಿಂದೆ ಸರಿದು ಇತರ ಆಟಗಾರರಿಗೆ ತಂಡವನ್ನು ಮುನ್ನಡೆಸುವ ಅವಕಾಶ ಮಾಡಿಕೊಡುವ ನಿರ್ಧಾರ ಮಾಡಿದರೆ ಯಾರಾಗಲಿದ್ದಾರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಎಂಬುದು ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದೆ. ತಂಡವನ್ನು ಮುನ್ನಡೆಸಬಲ್ಲ ಕೆಲ ಪ್ರಮುಖ ಆಟಗಾರರಿದ್ದು ಅವರಲ್ಲಿ ಯಾರನ್ನು ಫ್ರಾಂಚೈಸಿ ಆಯ್ಕೆ ಮಾಡಲಿದೆ ಎಂಬುದು ಪ್ರಶ್ನೆಯಾಗಿದೆ.

ಪೊಲಾರ್ಡ್, ಬೂಮ್ರಾ ಅಥವಾ ಸೂರ್ಯಕುಮಾರ್

ಪೊಲಾರ್ಡ್, ಬೂಮ್ರಾ ಅಥವಾ ಸೂರ್ಯಕುಮಾರ್

ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆಯ ಪರಿಸ್ಥಿತಿ ಬಂದರೆ ನಾಯಕತ್ವ ವಹಿಸಿಕೊಳ್ಳಲು ಮೊದಲು ಕೇಳಿ ಬರುವ ಹೆಸರು ಕಿರಾನ್ ಪೊಲಾರ್ಡ್. ಮುಂಬೈ ಇಂಡಿಯನ್ಸ್ ತಂಡದಲ್ಲಿ ಸುದೀರ್ಘ ಕಾಲದಿಂದ ಇರುವ ಪೊಲಾರ್ಡ್ ಹಲವು ಸಂದರ್ಭದಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ತಂಡವನ್ನು ಮುನ್ನಡೆಸಿದ ಅನುಭವ ಪೊಲಾರ್ಡ್‌ಗೆ ಇದೆ.
ಇನ್ನು ಈ ಆಯ್ಕೆಯನ್ನು ಹೊರತುಪಡಿಸಿದರೆ ಭಾರತದ ಇಬ್ಬರು ಪ್ರಮುಖ ಆಟಗಾರರು ನಾಯಕತ್ವದ ಸ್ಪರ್ಧೆಯಲ್ಲಿರಲಿದ್ದಾರೆ. ಸೂರ್ಯಕುಮಾರ್ ಯಾದವ್ ಮುಂಬೈ ತಂಡದ ಪ್ರಮುಖ ಭಾಗವಾಗಿದ್ದು ನಾಯಕತ್ವಕ್ಕೂ ಸಮರ್ಥರೆನಿಸಿಕೊಳ್ಳಬಹುದು. ಮತ್ತೋರ್ವ ಆಟಗಾರ ಜಸ್ಪ್ರೀತ್ ಬೂಮ್ರಾ ಕೂಡ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವ ರೇಸ್‌ನಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ.

Story first published: Thursday, April 14, 2022, 13:26 [IST]
Other articles published on Apr 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X