IPL 2022ರಲ್ಲಿ ತನ್ನ ಸಕ್ಸಸ್‌ಗೆ, ರೋಹಿತ್ ಶರ್ಮಾ ನೀಡಿದ ಈ ಸಲಹೆ ಕಾರಣ ಎಂದ ಯುಜವೇಂದ್ರ ಚಹಾಲ್

ಇಂಡಿಯನ್ ಪ್ರೀಮಿಯರ್ ಲೀಗ್ 2022ರಲ್ಲಿ ನನ್ನ ಯಶಸ್ಸಿಗೆ ಪ್ರಮುಖ ಕಾರಣ ಟೀಂ ಇಂಡಿಯಾ ರೋಹಿತ್ ಶರ್ಮಾ ಎಂದು ಸ್ಟಾರ್ ಸ್ಪಿನ್ನರ್ ಯುಜವೇಂದ್ರ ಚಹಾಲ್ ಬಹಿರಂಗಪಡಿಸಿದ್ದಾರೆ. ಐಪಿಎಲ್ 15ನೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾದಲ್ಲಿ ತನ್ನ ಸ್ಥಾನವನ್ನ ಭದ್ರಪಡಿಸಿಕೊಂಡ ಚಹಾಲ್ ಹಿಟ್‌ಮ್ಯಾನ್ ಸಲಹೆಗಳನ್ನ ತಿಳಿಸಿದ್ದಾರೆ.

ಐಪಿಎಲ್ 2022ರ ಸೀಸನ್‌ನಲ್ಲಿ ಎದುರಾಳಿಗಳ ವಿರುದ್ಧ ರಾಜಸ್ತಾನ್ ರಾಯಲ್ಸ್ ಸ್ಪಿನ್ನರ್ ಅದ್ಭುತ ಪ್ರದರ್ಶನ ನೀಡಿದ್ರು. ಸ್ಟಾರ್ ಬ್ಯಾಟರ್‌ಗಳ ವಿರುದ್ಧ ಮೇಲುಗೈ ಸಾಧಿಸಿದ ಚಹಾಲ್ 17 ಪಂದ್ಯಗಳಲ್ಲಿ 19.52ರ ಸರಾಸರಿ ಹಾಗೂ 7.75 ಎಕಾನಮಿಯಲ್ಲಿ 27 ವಿಕೆಟ್‌ಗಳನ್ನ ಉರುಳಿಸಿದ್ರು. ಈ ಮೂಲಕ ಪರ್ಪಲ್ ಕ್ಯಾಪ್ ಕೂಡ ತಮ್ಮದಾಗಿಸಿಕೊಂಡರು.

ಐಪಿಎಲ್ 15ನೇ ಸೀಸನ್‌ನಲ್ಲಿ ಚಹಾಲ್ ಸಾಧನೆ

ಐಪಿಎಲ್ 15ನೇ ಸೀಸನ್‌ನಲ್ಲಿ ಚಹಾಲ್ ಸಾಧನೆ

ಐಪಿಎಲ್ 2022ರ ಸೀಸನ್‌ನಲ್ಲಿ 17 ಪಂದ್ಯಗಳನ್ನಾಡಿರುವ ಯುಜವೇಂದ್ರ ಚಹಾಲ್ ಒಟ್ಟು 68 ಓವರ್‌ಗಳ ಬೌಲಿಂಗ್‌ನಲ್ಲಿ 19.52ರ ಸರಾಸರಿಯಲ್ಲಿ ಒಟ್ಟು 27 ವಿಕೆಟ್ ಪಡೆದು ಮಿಂಚಿದ್ದಾರೆ. ಹ್ಯಾಟ್ರಿಕ್ ವಿಕೆಟ್ ಸೇರಿದಂತೆ ಐದು ವಿಕೆಟ್‌ಗಳ ಗೊಂಚಲನ್ನು ಒಂದು ಬಾರಿ ಪಡೆದಿದ್ದಾರೆ. ಒಂದು ಬಾರಿ ನಾಲ್ಕು ವಿಕೆಟ್‌ಗಳನ್ನ ತನ್ನದಾಗಿಸಿಕೊಂಡಿದ್ದಾರೆ.

ಫೈನಲ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಸ್ಪಿನ್ನರ್ ವಹಿಂದು ಹಸರಂಗನಷ್ಟೇ ವಿಕೆಟ್ ಪಡೆದಿದ್ದರೂ ಸಹ, ಎಕಾನಮಿಯಲ್ಲಿ ಹಿಂದೆ ಬಿದ್ದಿದ್ದ ಚಹಾಲ್, ಫೈನಲ್‌ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 20 ರನ್‌ ನೀಡಿ 1 ವಿಕೆಟ್ ಪಡೆದ ಚಹಾಲ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಹಾಗೂ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎಂಬ ಸಾಧನೆ ಮಾಡಿದ್ರು.

T20 World Cup 2022: ಭಾರತ ತಂಡದ ಘೋಷಣೆ ದಿನಾಂಕ ಫೈನಲ್‌, ಆದ್ರೆ ಇನ್ನೂ ತಪ್ಪಿಲ್ಲ ಸೆಲೆಕ್ಷನ್ ತಲೆನೋವು!

ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡಲು ಸಲಹೆ

ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡಲು ಸಲಹೆ

ಸ್ಪೋರ್ಟ್ಸ್‌ ಯಾರಿ ಜೊತೆಗೆ ಮಾತನಾಡಿರುವ ಯುಜವೇಂದ್ರ ಚಹಾಲ್, ತನ್ನ ಐಪಿಎಲ್ 2022 ಸಕ್ಸಸ್ ಹಿಂದಿನ ಗುಟ್ಟು ಬಿಚ್ಚಿಟ್ಟಿದ್ದಾರೆ. ತನಗೆ ಟೂರ್ನಿ ಆರಂಭಕ್ಕೂ ಮುನ್ನವೇ ಪವರ್‌ಪ್ಲೇ ಓವರ್‌ಗಳಲ್ಲಿ ಹಾಗೂ ಡೆತ್‌ ಓವರ್‌ಗಳಲ್ಲಿ ಬೌಲಿಂಗ್ ಮಾಡುವಂತೆ ರೋಹಿತ್ ಶರ್ಮಾ ಸಲಹೆ ನೀಡಿದ್ದರು ಎಂದಿದ್ದಾರೆ.

''ಐಪಿಎಲ್‌ಗೆ ಹೋಗುವ ಮುನ್ನವೇ, ರೋಹಿತ್ ಭಾಯ್ ತನಗೆ ಕೊನೆಯ ಓವರ್‌ಗಳಲ್ಲಿ ಮತ್ತು ಪವರ್‌ಪ್ಲೇ ಓವರ್‌ಗಳಲ್ಲಿ ಬೌಲಿಂಗ್ ಮಾಡುವಂತೆ ಸಲಹೆ ನೀಡಿದ್ದರು. ನಾನು ಇದನ್ನು ಸಂಜು(ಸ್ಯಾಮ್ಸನ್) ಜೊತೆಗೆ ಮಾತನಾಡಿದ್ದೆ, ಇದು ನನಗೆ ಆತ್ಮವಿಶ್ವಾಸ ತುಂಬಿದ್ದಲ್ಲದೆ, ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನಕ್ಕೂ ಕಾರಣವಾಯಿತು'' ಎಂದು ಚಹಾಲ್‌ ಹೇಳಿದ್ದಾರೆ.

ನಾಯಕನಾಗಿ ತನ್ನ ಮುಖ್ಯ ಜವಾಬ್ಧಾರಿ ಯಾವುದೆಂದು ಹೇಳಿದ ರೋಹಿತ್ ಶರ್ಮಾ

ವಿರಾಟ್ ಕೊಹ್ಲಿ ಫಾರ್ಮ್ ಕುರಿತು ಚಹಾಲ್ ಮಾತು

ವಿರಾಟ್ ಕೊಹ್ಲಿ ಫಾರ್ಮ್ ಕುರಿತು ಚಹಾಲ್ ಮಾತು

ಇನ್ನು ಇದೇ ವೇಳೆಯಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಕುರಿತು ಮಾತನಾಡಿರುವ ಯುಜವೇಂದ್ರ ಚಹಾಲ್ ಜನರು ಕೇವಲ ಕೊಹ್ಲಿಯ ಸೆಂಚುರಿ ಕುರಿತು ಚಿಂತೆ ಮಾಡುತ್ತಿದ್ದಾರೆ. ಆದ್ರೆ 60-70 ರನ್‌ಗಳ ಪ್ರಮುಖ ಕೊಡುಗೆಯನ್ನ ಮರೆತಿದ್ದಾರೆ ಎಂದರು.

''ಆತ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ಸರಾಸರಿ ಹೊಂದಿದ್ದಾನೆ, ಟಿ20 ವಿಶ್ವಕಪ್‌ನಲ್ಲಿ ಸರಣಿ ಪ್ರಶಸ್ತಿ ಪಡೆದಿದ್ದಾನೆ, ಆತ ಎಲ್ಲಾ ಫಾರ್ಮೆಟ್‌ನಲ್ಲಿ 70 ಶತಕ ಸಿಡಿಸಿದ್ದಾನೆ. ಮೂರು ಫಾರ್ಮೆಟ್‌ನಲ್ಲಿ ನೀವು ಕೇವಲ ಆತನ ಬ್ಯಾಟಿಂಗ್ ಸರಾಸರಿ ನೋಡಿ, ನಮ್ಮ ಸಮಸ್ಯೆ ಏನಂದ್ರೆ ಕೇವಲ ಆತನ ಸೆಂಚುರಿಯನ್ನಷ್ಟೇ ನೋಡುವುದಾಗಿದೆ. ಆದ್ರೆ ಆತನ 60-70 ರನ್‌ಗಳ ಪ್ರಮುಖ ಕೊಡುಗೆ ಮರೆತು ಬಿಡುತ್ತೀರಿ, ಏಕೆಂದರೆ ಆತನ ಅಂತಹ ಸ್ಟ್ಯಾಂಡರ್ಡ್‌ ಅನ್ನು ಸೆಟ್ ಮಾಡಿದ್ದಾನೆ'' ಎಂದು ಯುಜಿ ಹೇಳಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, August 20, 2022, 16:42 [IST]
Other articles published on Aug 20, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X