ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್‌ಗೆ ಪ್ರಕಟವಾದ ಭಾರತ ತಂಡದಲ್ಲಿ ಆರ್‌ಸಿಬಿಯ ಇಬ್ಬರು; ಆ ಒಂದು ತಂಡದವರಿಗೆ ಇಲ್ಲ ಸ್ಥಾನ!

Asia Cup 2022: Except KKR all teams indian players of ipl 2022 have got place in asia cup 2022

ಇದೇ ತಿಂಗಳ 27ರಿಂದ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು ಈಗಾಗಲೇ ಬಿಸಿಸಿಐ ಹದಿನೈದು ಆಟಗಾರರ ಭಾರತ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ನಾಯಕತ್ವದ ಈ ತಂಡದಲ್ಲಿ ಇತ್ತೀಚೆಗೆ ಕ್ರಿಕೆಟ್ ಆಡಿರದ ಕೆಎಲ್ ರಾಹುಲ್‌ ಹಾಗೂ ಹೆಚ್ಚು ಟಿ ಟ್ವೆಂಟಿ ಪಂದ್ಯಗಳನ್ನು ಆಡಿರದ ರವಿಚಂದ್ರನ್ ಅಶ್ವಿನ್‌ಗೆ ಅವಕಾಶ ನೀಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಅವಕಾಶ ಸಿಗಬಹುದು ಎಂಬ ನಿರೀಕ್ಷಿಸಿದ್ದ ಇಶಾನ್ ಕಿಶನ್ ರೀತಿಯ ಹಲವು ಆಟಗಾರರಿಗೆ ಅವಕಾಶ ದೊರೆತಿಲ್ಲ.

2021ರ ಟಿ20 ವಿಶ್ವಕಪ್ ನಂತರ ಹೆಚ್ಚು ಟಿ20 ಪಂದ್ಯ ಗೆದ್ದಿರುವ ಹಾಗೂ ಸೋತಿರುವ ತಂಡ ಯಾವುದು?2021ರ ಟಿ20 ವಿಶ್ವಕಪ್ ನಂತರ ಹೆಚ್ಚು ಟಿ20 ಪಂದ್ಯ ಗೆದ್ದಿರುವ ಹಾಗೂ ಸೋತಿರುವ ತಂಡ ಯಾವುದು?

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿದು ಮಿಂಚಿ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿದ್ದ ಆಟಗಾರರಾದ ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯಗೂ ಈ ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ಸಿಕ್ಕಿರುವುದು ಸಾಕಷ್ಟು ಪ್ರಶಂಸೆಗೆ ಕಾರಣವಾಗಿದ್ದರೆ, ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಕಳಪೆ ಪ್ರದರ್ಶನ ನೀಡಿದ್ದ ಅವೇಶ್ ಖಾನ್‌ಗೆ ಸ್ಥಾನ ನೀಡಿರುವುದು ಟೀಕೆಗೆ ಎಡೆ ಮಾಡಿಕೊಟ್ಟಿದೆ.

ಅತಿಹೆಚ್ಚು ಬಾರಿ ಏಷ್ಯಾಕಪ್ ಗೆದ್ದಿರುವ ತಂಡ ಯಾವುದು? ಎಲ್ಲಾ ಆವೃತ್ತಿಯ ವಿನ್ನರ್ಸ್, ರನ್ನರ್ ಅಪ್ ಪಟ್ಟಿಅತಿಹೆಚ್ಚು ಬಾರಿ ಏಷ್ಯಾಕಪ್ ಗೆದ್ದಿರುವ ತಂಡ ಯಾವುದು? ಎಲ್ಲಾ ಆವೃತ್ತಿಯ ವಿನ್ನರ್ಸ್, ರನ್ನರ್ ಅಪ್ ಪಟ್ಟಿ

ಹೀಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿರುವ ಭಾರತ ತಂಡದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಯಾವ ಆಟಗಾರರಿಗೆ ಸ್ಥಾನ ಸಿಕ್ಕಿದೆ ಎಂಬುದನ್ನು ಗಮನಿಸಿದರೆ ಈ ಬಾರಿ ಭಾಗವಹಿಸಿದ್ದ ಒಟ್ಟು 10 ತಂಡಗಳ ಪೈಕಿ 9 ತಂಡಗಳ ಪರ ಆಡಿದ್ದ ಆಟಗಾರರಿಗೆ ಅವಕಾಶ ಸಿಕ್ಕಿದ್ದು ಉಳಿದ ಒಂದು ತಂಡದ ಯಾವುದೇ ಆಟಗಾರನಿಗೂ ಸಹ ಅವಕಾಶ ದೊರೆತಿಲ್ಲ. ಹೀಗೆ ಈ ಬಾರಿಯ ಏಷ್ಯಾಕಪ್‌ಗೆ ಪ್ರಕಟವಾಗಿರುವ ಭಾರತ ತಂಡದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಯಾವ ಫ್ರಾಂಚೈಸಿಯ ಎಷ್ಟು ಆಟಗಾರರಿಗೆ ಸ್ಥಾನ ಲಭಿಸಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಏಷ್ಯಾಕಪ್ ಅವಕಾಶ ಪಡೆದ ಐಪಿಎಲ್ ತಂಡವಾರು ಆಟಗಾರರ ಪಟ್ಟಿ

ಏಷ್ಯಾಕಪ್ ಅವಕಾಶ ಪಡೆದ ಐಪಿಎಲ್ ತಂಡವಾರು ಆಟಗಾರರ ಪಟ್ಟಿ

* ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್, ರವಿ ಬಿಷ್ಣೋಯಿ, ಅವೇಶ್ ಖಾನ್ ಮತ್ತು ದೀಪಕ್ ಹೂಡಾ

* ಮುಂಬೈ ಇಂಡಿಯನ್ಸ್: ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮಾ

* ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್

* ರಾಜಸ್ಥಾನ್ ರಾಯಲ್ಸ್: ಯುಜುವೇಂದ್ರ ಚಹಲ್ ಮತ್ತು ರವಿಚಂದ್ರನ್ ಅಶ್ವಿನ್

* ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್

* ಸನ್ ರೈಸರ್ಸ್ ಹೈದರಾಬಾದ್: ಭುವನೇಶ್ವರ್ ಕುಮಾರ್

* ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ

* ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ

* ಪಂಜಾಬ್ ಕಿಂಗ್ಸ್: ಅರ್ಷ್‌ದೀಪ್ ಸಿಂಗ್

ಕೆಕೆಆರ್‌ನ ಯಾವುದೇ ಆಟಗಾರನಿಗೆ ಇಲ್ಲ ಸ್ಥಾನ

ಕೆಕೆಆರ್‌ನ ಯಾವುದೇ ಆಟಗಾರನಿಗೆ ಇಲ್ಲ ಸ್ಥಾನ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದ ಯಾವುದೇ ಆಟಗಾರನಿಗೂ ಸಹ ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿರುವ ಭಾರತ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಶ್ರೇಯಸ್ ಐಯ್ಯರ್ ಅವರಿಗೆ ಅವಕಾಶ ಲಭಿಸಿದ್ದರೂ ಸಹ ಕೇವಲ ಹೆಚ್ಚುವರಿ ಆಟಗಾರನಾಗಿ ಮಾತ್ರ ಆಯ್ಕೆಯಾಗಿದ್ದು, ಆಡುವ ಅವಕಾಶ ಪಡೆಯುವುದು ಅನುಮಾನ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಲ್ವರಿಗೆ ಸ್ಥಾನ

ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಲ್ವರಿಗೆ ಸ್ಥಾನ

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕಿಳಿದಿದ್ದ ಆಟಗಾರರ ಪೈಕಿ ನಾಯಕ ಕೆಎಲ್ ರಾಹುಲ್ ಸೇರಿದಂತೆ ಒಟ್ಟು ನಾಲ್ವರು ಆಟಗಾರರಿಗೆ ಏಷ್ಯಾಕಪ್ ತಂಡದಲ್ಲಿ ಅವಕಾಶ ಲಭಿಸಿದೆ.

ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

Story first published: Wednesday, August 10, 2022, 20:00 [IST]
Other articles published on Aug 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X