ಐಪಿಎಲ್ ಅಥವಾ ಪಾಕಿಸ್ತಾನ ಪ್ರವಾಸ: ನಿರ್ಧಾರದ ಸ್ವಾತಂತ್ರ್ಯ ಆಟಗಾರರಿಗೆ ಬಿಟ್ಟ ನ್ಯೂಜಿಲೆಂಡ್ ಮಂಡಳಿ

ಮುಂದಿನ ವರ್ಷ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವುದು ಖಚಿತವಾಗಿದೆ. ಆದರೆ ಈ ಸರಣಿ ಹಾಗೂ 2023ರ ಆವೃತ್ತಿಯ ಐಪಿಎಲ್ ಟೂರ್ನಿಯ ದಿನಾಂಕಗಳು ಒಂದೇ ಸಮಯಕ್ಕೆ ಬರುವ ಸಾಧ್ಯತೆಯಿದೆ. ಹೀಗಾಗಿ ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರರು ಸಂದಿಗ್ಧ ಸ್ಥಿತಿಯನ್ನು ಎದುರಿಸಲಿದ್ದಾರೆ. ಈ ವಿಚಾರವಾಗಿ ನ್ಯೂಜಿಲಂಡ್ ಕ್ರಿಕೆಟ್ ಮಂಡಳಿ ಕುತೂಹಲಕಾರಿ ನಿರ್ಧಾರವನ್ನು ತೆಗೆದುಕೊಂಡಿದೆ.

ನ್ಯೂಜಿಲೆಂಡ್ ತಂಡದ ಪಾಕಿಸ್ತಾನ ಪ್ರವಾಸದ ಸಂದರ್ಭದಲ್ಲಿ ಐಪಿಎಲ್ ಕೂಡ ನಡೆಯುವ ಸಾಧ್ಯತೆಯಿರುವ ಕಾರಣ ಈ ಪ್ರವಾಸದಲ್ಲಿ ಭಾಗವಹಿಸುವ ನಿರ್ಧಾರವವನ್ನು ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರಿಗೆ ಬಿಟ್ಟಿದೆ. ತಾವೇ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದ್ದು ಮುಂದಿನ ವರ್ಷ ನಡೆಯಲಿರುವ ಈ ಪ್ರವಾಸ ಈಗ ಕುತೂಹಲ ಮೂಡಿಸಿದೆ.

ಪ್ರೊ ಕಬಡ್ಡಿ ಲೀಗ್ ಸೀಸನ್ 9: ನವೀನ್ ಸಾಹಸದಿಂದ ಗುಜರಾತ್ ಜೈಂಟ್ಸ್ ವಿರುದ್ಧ ದಬಾಂಗ್ ಡೆಲ್ಲಿಗೆ ರೋಚಕ ಜಯಪ್ರೊ ಕಬಡ್ಡಿ ಲೀಗ್ ಸೀಸನ್ 9: ನವೀನ್ ಸಾಹಸದಿಂದ ಗುಜರಾತ್ ಜೈಂಟ್ಸ್ ವಿರುದ್ಧ ದಬಾಂಗ್ ಡೆಲ್ಲಿಗೆ ರೋಚಕ ಜಯ

ಎರಡು ಬಾರಿ ಪಾಕಿಸ್ತಾನಕ್ಕೆ ಹಾರಲಿದೆ ನ್ಯೂಜಿಲೆಂಡ್: ಪಾಕಿಸ್ತಾನದ ವಿರುದ್ಧ ಮೂರು ಮಾದರಿಯಲ್ಲಿ ಸರಣಿಯನ್ನಾಡಲಿದೆ. ಟೆಸ್ಟ್ ಏಕದಿನ ಹಾಗೂ ಟಿ20 ಮಾದರಿಯ ಸರಣಿಗಾಗಿ ನ್ಯೂಜಿಲೆಂಡ್ ತಂಡ ಎರಡು ಹಂತಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಕರಾಚಿ, ಲಾಹೋರ್, ಮುಲ್ತಾನ್ ಹಾಗೂ ರಾವಲ್ಪಿಂಡಿಯಲ್ಲಿ ಈ ಸರಣಿಯ ಪಂದ್ಯಗಳು ನಡೆಯಲಿದೆ.

ನ್ಯೂಜಿಲೆಂಡ್ ಕ್ರಿಕೆಟ್ ಸಿಇಒ ಹೇಳಿದ್ದಿಷ್ಟು: ಇನ್ನು ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಇಸಿಒ ಡೇವಿಡ್ ವೈಟ್ ಇಂಡಿಯಾ ಟುಡೇ ವಾಹಿನಿಗೆ ಹೇಳಿಕೆ ನೀಡಿರುದನ್ನು ಉಲ್ಲೇಖಿಸಲಾಗಿದೆ. "ನಮ್ಮ ಪ್ರಕಾರ ಪೂರ್ಣ ಸಾಮರ್ಥ್ಯದ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ವಿಚಾರವಾಗಿ ನಾನು ಆಟಗಾರರ ಜೊತೆಗೆ ಇನ್ನೂ ಮಾತನಾಡಿಲ್ಲ. ಆದರೆ ಐಪಿಎಲ್‌ನಲ್ಲಿ ಭಾಗವಹಿಸುವ ಆಟಗಾರರಿಗೆ ನಿರ್ಧಾರವನ್ನು ತೆಗೆದುಕೊಳ್ಳಳು ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಐಪಿಎಲ್ ಅಥವಾ ಪಾಕಿಸ್ತಾನ ಪ್ರವಾಸಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ" ಎಂದಿದ್ದಾರೆ.

ಟಿ20I ಡೆತ್ ಓವರ್‌ನಲ್ಲಿ ಅತಿ ಹೆಚ್ಚು ರನ್ ಕೊಳ್ಳೆ ಹೊಡೆದ 6 ಆಟಗಾರರು: ಪಟ್ಟಿಯಲ್ಲಿ ಇಬ್ಬರು ಭಾರತೀಯರು!ಟಿ20I ಡೆತ್ ಓವರ್‌ನಲ್ಲಿ ಅತಿ ಹೆಚ್ಚು ರನ್ ಕೊಳ್ಳೆ ಹೊಡೆದ 6 ಆಟಗಾರರು: ಪಟ್ಟಿಯಲ್ಲಿ ಇಬ್ಬರು ಭಾರತೀಯರು!

2021ರಲ್ಲಿ ಪಾಕ್ ಪ್ರವಾಸದಿಂದ ಹಿಂದೆ ಸರಿದಿದ್ದ ಕಿವೀಸ್: ಇನ್ನು ನ್ಯೂಜಿಲೆಂಡ್ ತಂಡ 2021ರಲ್ಲಿಯೇ ಪಾಕಿಸ್ತಾನ ಪ್ರವಾಸ ಕೈಗೊಂಡು ಸರಣಿಯಲ್ಲಿ ಭಾಗಿಯಾಗಬೇಕಾಗಿತ್ತು. ಆದರೆ ಪಂದ್ಯದ ಆರಂಭಕ್ಕೆ ಕೆಲವೇ ಕ್ಷಣಗಳಿರುವಾಗ ಭದ್ರತೆಯ ಕಾರಣವನ್ನು ನೀಡಿ ನ್ಯೂಜಿಲೆಂಡ್ ತಂಡ ಈ ಪ್ರವಾಸವನ್ನು ರದ್ದುಗೊಳಿಸಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಮುಖಭಂಗಕ್ಕೂ ಕಾರಣವಾಗಿತ್ತು. ಈ ಸರಣಿಯನ್ನು ಮುಂದಿನ ವರ್ಷ ಆಯೋಜಿಸಲು ಇದೀಗ ನಿರ್ಧಾರ ತೆಗೆದುಕೊಳ್ಳಲಾಗಿದೆ.

ತ್ರಿಕೋನ ಸರಣಿಯಲ್ಲಿ ಭಾಗಿಯಾಗಿವೆ ಪಾಕ್, ಕಿವೀಸ್ ಪಡೆ: ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಸದ್ಯ ಟಿ20 ತ್ರಿಕೋನ ಸರಣಿಯಲ್ಲಿ ಭಾಗಿಯಾಗಿದ್ದು ಬಾಂಗ್ಲಾದೇಶ ಈ ಸರಣಿಯಲ್ಲಿ ಭಾಗಿಯಾಗಿರುವ ಮೂರನೇ ತಂಡವಾಗಿದೆ. ನ್ಯೂಜಿಲೆಂಡ್‌ನಲ್ಲಿ ಈ ಸರಣಿ ಆಯೋಜನೆಯಾಗಿದ್ದು ವಿರ್ಶವಕಪ್‌ಗೂ ಮುನ್ನ ಪೂರ್ವತಯಾರಿಯ ಭಾಗವಾಗಿ ಈ ಸರಣಿಯಲ್ಲಿ ಈ ತಂಡಗಳು ಭಾಗಿಯಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, October 12, 2022, 15:34 [IST]
Other articles published on Oct 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X