IPL 2023 Auction: ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಆಟಗಾರರು ಪ್ರಾಬಲ್ಯ ಸಾಧಿಸಲು ಇಲ್ಲಿದೆ ಕಾರಣ

ಡಿಸೆಂಬರ್ 23, ಶುಕ್ರವಾರ ಕೊಚ್ಚಿಯಲ್ಲಿ 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ನಡೆದ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಆಟಗಾರರಿಗೆ ಫ್ರಾಂಚೈಸಿಗಳು ಭಾರಿ ಪೈಪೋಟಿ ನಡೆಸಿದರು. ಹಳೆಯ ದಾಖಲೆಗಳನ್ನು ಮುರಿದ ಹರಾಜಿನಲ್ಲಿ ಒಟ್ಟು ಎಂಟು ಆಟಗಾರರನ್ನು ಐಪಿಎಲ್ ಫ್ರಾಂಚೈಸಿಗಳು ಖರೀದಿ ಮಾಡಿದರು.

ಸ್ಯಾಮ್ ಕರ್ರಾನ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾಗಿ ಹೊರಹೊಮ್ಮಿದರು. ಪಂಜಾಬ್ ಕಿಂಗ್ಸ್ ತಂಡ ಬರೋಬ್ಬರಿ 18.5 ಕೋಟಿ ರೂ.ಗೆ ಬಿಡ್ ಮಾಡಿದರು. ಮತ್ತೊಂದೆಡೆ, ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಅವರನ್ನು 16.25 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪೈಪೋಟಿ ನೀಡಿ ಖರೀದಿಸಿತು.

IPL 2023: ಸಿಎಸ್‌ಕೆ ತಂಡಕ್ಕೆ ಈತನೇ ಮುಂದಿನ ಹೊಸ ನಾಯಕ; ಎಂಎಸ್ ಧೋನಿ ಯುಗಾಂತ್ಯ?IPL 2023: ಸಿಎಸ್‌ಕೆ ತಂಡಕ್ಕೆ ಈತನೇ ಮುಂದಿನ ಹೊಸ ನಾಯಕ; ಎಂಎಸ್ ಧೋನಿ ಯುಗಾಂತ್ಯ?

ಮೊದಲ ಎರಡು ಸ್ಥಾನಗಳನ್ನು ಹೊರತುಪಡಿಸಿ, ಹ್ಯಾರಿ ಬ್ರೂಕ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಜೋ ರೂಟ್ ಮತ್ತು ವಿಲ್ ಜ್ಯಾಕ್ಸ್ 2023ರ ಮಿನಿ ಹರಾಜಿನಲ್ಲಿ ಹರಾಜಿನಲ್ಲಿ ಉತ್ತಮ ಹಣ ಪಡೆದುಕೊಂಡರು. ಈ ಋತುವಿನಲ್ಲಿ ಇಂಗ್ಲೆಂಡ್ ಆಟಗಾರರು ಏಕೆ ಹೆಚ್ಚು ಬೇಡಿಕೆಯಲ್ಲಿದ್ದರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಆಡುವ ವಿಧಾನದಲ್ಲಿ ಮಾಡಿಕೊಂಡಿರುವ ಬದಲಾವಣೆ

ಆಡುವ ವಿಧಾನದಲ್ಲಿ ಮಾಡಿಕೊಂಡಿರುವ ಬದಲಾವಣೆ

ಇಂಗ್ಲೆಂಡ್‌ನ ವೈಟ್ ಬಾಲ್ ಕ್ರಿಕೆಟ್ ಕ್ರಾಂತಿಯು ಇತ್ತೀಚಿನ ದಿನಗಳಲ್ಲಿ ಆಟವನ್ನು ಆಡುವ ವಿಧಾನದಲ್ಲಿ ಮಾಡಿಕೊಂಡಿರುವ ಬದಲಾವಣೆಯ ಕಾರಣಗಳಲ್ಲಿ ಒಂದಾಗಿದೆ. ವಿಶೇಷ ಪಾತ್ರ ಮತ್ತು ವಿಶಿಷ್ಟ ಕೌಶಲ್ಯಗಳನ್ನು ಹೊಂದಿರುವ ಕೆಲವೇ ಆಟಗಾರರು ವೈಯಕ್ತಿಕ ಪ್ರದರ್ಶನಗಳಿಂದ ಪಂದ್ಯವನ್ನು ಒಯ್ಯುವ ಬದಲು ತಂಡವನ್ನು ಗೆಲ್ಲಿಸಲು ಒಗ್ಗೂಡಿ ಆಡುತ್ತಾರೆ.

ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವುದು ಇಂಗ್ಲೆಂಡ್‌‌ನ ಆಟಗಾರರ ಮತ್ತು ತಂಡದ ಬೆಳವಣಿಗೆಯಲ್ಲಿ ಯಶಸ್ಸು ಕಂಡಿದ್ದಾರೆ. ಡೇಟಾ ಮತ್ತು ಅನಾಲಿಟಿಕ್ಸ್ ಇಂಗ್ಲೆಂಡ್‌ನ ವೈಟ್-ಬಾಲ್ ಆಟವನ್ನು ಕ್ರಾಂತಿಗೊಳಿಸಿದೆ.

2022ರ ಟಿ20 ವಿಶ್ವಕಪ್ ಗೆಲುವು

2022ರ ಟಿ20 ವಿಶ್ವಕಪ್ ಗೆಲುವು

ವಿಶ್ವಕಪ್ ನಡೆಯುವ ವರ್ಷವು ಯಾವಾಗಲೂ ಪಂದ್ಯಾವಳಿಯನ್ನು ಗೆಲ್ಲುವ ತಂಡಕ್ಕೆ ಸಹಾಯ ಮಾಡುತ್ತದೆ. 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಫೈನಲ್‌ನಲ್ಲಿ ಜಯಗಳಿಸುವವರೆಗೆ ಇಂಗ್ಲೆಂಡ್ ಹೋರಾಡಿದ ರೀತಿ, ಕಠಿಣ ಪರಿಸ್ಥಿತಿಗಳಲ್ಲಿ ಒತ್ತಡವನ್ನು ನಿಭಾಯಿಸಿದ ನಂತರ ಸೋಲನ್ನು ಹೇಗೆ ಹಿಮ್ಮೆಟ್ಟಬೇಕು ಎಂಬುದಕ್ಕೆ ಜೋಸ್ ಬಟ್ಲರ್ ತಂಡವು ಜಗತ್ತಿಗೆ ತೋರಿಸಿದೆ. ಇದು ಆಟಗಾರರ ಮನೋಬಲ ಹೆಚ್ಚಾಗಲು ಕಾರಣವಾಗಿದೆ. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ಇಂಗ್ಲೆಂಡ್ ಆಟಗಾರರಿಗೆ ದೊಡ್ಡ ಬೇಡಿಕೆ ಬರಲು ಕಾರಣವಾಯಿತು.

ವಿಶ್ವಕಪ್‌ನಲ್ಲಿ ಪಂದ್ಯ ಮತ್ತು ಸರಣಿ ಶ್ರೇಷ್ಠ ಆಟಗಾರ

ವಿಶ್ವಕಪ್‌ನಲ್ಲಿ ಪಂದ್ಯ ಮತ್ತು ಸರಣಿ ಶ್ರೇಷ್ಠ ಆಟಗಾರ

ಟಿ20 ವಿಶ್ವಕಪ್‌ನಲ್ಲಿ ಸ್ಯಾಮ್ ಕರ್ರಾನ್ ಪಂದ್ಯಾವಳಿಯ ಆಟಗಾರರಾಗಿದ್ದರೆ, ಫೈನಲ್‌ನಲ್ಲಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಪಂದ್ಯ ಶ್ರೇಷ್ಠ ಆಟಗಾರರಾದರು. ಇದು ಐಪಿಎಲ್ ಮಿನಿ ಹರಾಜಿನಲ್ಲಿ ಅವರು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದಾರೆ ಎಂಬುದು ಅರ್ಥ ಮಾಡಿಕೊಳ್ಳಬೇಕಾದ ವಿಷಯ.

ಆಟಗಾರರ ಲಭ್ಯತೆ
ಜೂನ್‌ನಲ್ಲಿ ನಡೆಯಲಿರುವ ಆಶಸ್ ಸರಣಿಯ ಹೊರತಾಗಿಯೂ ಇಂಗ್ಲೆಂಡ್ ಆಟಗಾರರು ಐಪಿಎಲ್ ಪಂದ್ಯಾವಳಿಯ ಸಂಪೂರ್ಣ ಭಾಗಕ್ಕೆ ಲಭ್ಯವಿರುತ್ತಾರೆ ಎಂದು ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಐ ಬರೆದ ಪತ್ರವೊಂದರಲ್ಲಿ ದೃಢಪಡಿಸಿದೆ. ಇದು ಫ್ರಾಂಚೈಸಿಗಳ ನಿರ್ಧಾರದ ಮೇಲೆ ದೊಡ್ಡ ಪರಿಣಾಮ ಬೀರಿತು, ಏಕೆಂದರೆ ಫ್ರಾಂಚೈಸಿಗಳು ಸಾಮಾನ್ಯವಾಗಿ ತಮ್ಮ ಮನಸ್ಸಿನಲ್ಲಿ ರಾಷ್ಟ್ರೀಯ ತಂಡ ಮೊದಲು ಎನ್ನುವ ಇಂಗ್ಲೆಂಡ್ ಆಟಗಾರರಿಂದ ದೂರವಿರಲು ಇಷ್ಟಪಡುತ್ತಾರೆ.

ಆರ್‌ಸಿಬಿಗೆ ಡೆತ್ ಓವರ್ ಸ್ಪೆಷಲಿಸ್ಟ್ ರೀಸ್ ಟೋಪ್ಲೆ

ಆರ್‌ಸಿಬಿಗೆ ಡೆತ್ ಓವರ್ ಸ್ಪೆಷಲಿಸ್ಟ್ ರೀಸ್ ಟೋಪ್ಲೆ

ಐಪಿಎಲ್ ಮತ್ತೆ ತವರು ಮತ್ತು ಎದುರಾಳಿ ನೆಲದಲ್ಲಿ ಆಡುವ ನಿಯಮಗಳಿಗೆ ಮರಳುವುದರೊಂದಿಗೆ ತಂಡಗಳಿಗೆ ಈಗ ಅವರ ಮನೆಯ ಪರಿಸ್ಥಿತಿಗಳಿಗೆ ಸೂಕ್ತವಾದ ಕೌಶಲ್ಯದ ಅಗತ್ಯವಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ರೀಸ್ ಟೋಪ್ಲೆಯಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಅನ್ನು ಕಂಡು ಖರೀದಿಸಿತು ಮತ್ತು ರಾಜಸ್ಥಾನ ರಾಯಲ್ಸ್ ಮಧ್ಯಮ ಕ್ರಮಾಂಕದಲ್ಲಿ ವಿಶ್ವಾಸಾರ್ಹ ಸ್ಪಿನ್ ಬ್ಯಾಟಿಂಗ್ ಸ್ಪೆಷಲಿಸ್ಟ್ ಜೋ ರೂಟ್ ಅವರನ್ನು ಖರೀದಿಸಲು ಇದು ಕಾರಣವಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ಪಂದ್ಯವನ್ನು ಗೆಲ್ಲಿಸಬಲ್ಲ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಾಗಿ ಹುಡುಕಾಡುತ್ತಿತ್ತು. ಹೀಗಾಗಿ ಅವರು ದೊಡ್ಡ ಹಣಕ್ಕಾಗಿ ಹ್ಯಾರಿ ಬ್ರೂಕ್‌ರನ್ನು ಸೆಳೆದುಕೊಂಡರು. ಆದರೆ ಭವಿಷ್ಯದಲ್ಲಿ ತಂಡದ ನಾಯಕರಾಗಬೇಕಿದ್ದ ಬೆನ್ ಸ್ಟೋಕ್ಸ್ ಅವರನ್ನು ಖರೀದಿಸುವ ಅವಕಾಶವನ್ನು ಕಳೆದುಕೊಂಡರು.

ಒಟ್ಟಾರೆಯಾಗಿ, ಇಂಡಿಯನ್ ಪ್ರೀಮಿಯರ್ ಲೀಗ್ 2023 ಮಿನಿ ಹರಾಜಿನಲ್ಲಿ ಖರೀದಿಸಿದ ಹೆಚ್ಚಿನ ಇಂಗ್ಲೆಂಡ್ ಆಟಗಾರರು ಆಟದ ಸಮಯವನ್ನು ಹೊಂದಿರುತ್ತಾರೆ ಮತ್ತು ಅವರಲ್ಲಿ ಕೆಲವರು ಮುಂದಿನ ದಿನಗಳಲ್ಲಿ ಫ್ರಾಂಚೈಸಿಯ ಅವಿಭಾಜ್ಯ ಅಂಗವಾಗುವ ಹೆಚ್ಚಿನ ಸಾಧ್ಯತೆವಿದೆ.

2023ರ ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್ ಆಟಗಾರರು

2023ರ ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್ ಆಟಗಾರರು

ಸ್ಯಾಮ್ ಕರ್ರಾನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಜೋ ರೂಟ್, ವಿಲ್ ಜ್ಯಾಕ್ಸ್.

For Quick Alerts
ALLOW NOTIFICATIONS
For Daily Alerts
Story first published: Saturday, December 24, 2022, 17:05 [IST]
Other articles published on Dec 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X