ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿಸಿಕೊಳ್ಳಬಹುದಾದ ಆಟಗಾರನಾಗಿದ್ದಾರೆ. ಇಂಗ್ಲೆಂಡ್ ಬೌಲರ್ ಟಿ20 ವಿಶ್ವಕಪ್‌ನಲ್ಲಿ ಕರಾನ್ 13 ವಿಕೆಟ್ ಪಡೆದು ಮಿಂಚಿದ್ದರು. ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 4 ಓವರ್ ಗಳಲ್ಲಿ 12 ರನ್ ನೀಡಿ 3 ವಿಕೆಟ್ ಪಡೆದು ಪಂದ್ಯದ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದರು.
ಸ್ಯಾಮ್ ಕರಾನ್ ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರು. 2022ರಲ್ಲಿ ಅವರು ಐಪಿಎಲ್‌ನಲ್ಲಿ ಆಡದ ಕಾರಣ ಸಿಎಸ್‌ಕೆ ತಂಡದಿಂದ ಬಿಡುಗಡೆ ಮಾಡಿತ್ತು. ಐಪಿಎಲ್ ಹರಾಜಿಗೆ ಮುನ್ನ ಅವರು ಈಗಾಗಲೇ ಡಿಜೆ ಬ್ರಾವೋ, ಆಡಮ್ ಮಿಲ್ನೆ, ಕ್ರಿಸ್ ಜೋರ್ಡಾನ್‌ರನ್ನು ಬಿಡುಗಡೆ ಮಾಡಿದ್ದು, ತಂಡಕ್ಕೆ ವೇಗದ ಬೌಲರ್ ಅಗತ್ಯವಿದೆ. ಸಿಎಸ್‌ಕೆ ತನ್ನ ಪರ್ಸ್‌ನಲ್ಲಿ 20.45 ಕೋಟಿ ರುಪಾಯಿ ಹೊಂದಿದ್ದು ಸ್ಯಾಮ್ ಕರನ್ ಅವರನ್ನು ಖರೀದಿಸಲೇಬೇಕೆನ್ನುವ ನಿರ್ಧಾರ ಮಾಡಿದೆ.
IPL Player Auction 2023: ಹರಾಜಿಗೆ ಮುನ್ನ ಆರ್ಸಿಬಿ ತಂಡ, ಆಟಗಾರರ ಸಂಬಳ, ಹರಾಜಿಗೆ ಉಳಿದಿರುವ ಹಣದ ವಿವರ
ಸ್ಯಾಮ್ ಕರನ್ ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದಾರೆ. ಗಾಯದ ಕಾರಣದಿಂದ ಅವರು 2022ರಲ್ಲಿ ಮೆಗಾಹರಾಜಿನಲ್ಲಿ ಭಾಗವಹಿಸಲಿಲ್ಲ. 2021ರಲ್ಲಿ ಸಿಎಸ್‌ಕೆ ಐಪಿಎಲ್ ಕಪ್ ಗೆದ್ದಾಗ ಸ್ಯಾಮ್ ಕರನ್ ತಂಡದ ಪರವಾಗಿ ಆಡಿದ್ದರು. 2023ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಕಾಯುತ್ತಿರುವ ಸಿಎಸ್‌ಕೆ ಉತ್ತಮ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಸಿದೆ.
ಸ್ಯಾಮ್ ಕರನ್‌ಗಾಗಿ ಎಂಎಸ್ ಧೋನಿ ಮೆಗಾಪ್ಲ್ಯಾನ್
ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಡಿಸೆಂಬರ್ 23 ರಂದು ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಸ್ಯಾಮ್ ಕರ್ರನ್ ಮೇಲೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಕೂಡ ನಿರ್ಧಾರ ಮಾಡಿದೆ. ಡ್ವೇನ್ ಬ್ರಾವೋ ತಂಡದಲ್ಲಿ ಇಲ್ಲದ ಕಾರಣ ಅವರಿಗೆ ಉತ್ತಮ ಬೌಲರ್ ಅಗತ್ಯವಿದೆ. ಮೂಲಗಳ ಪ್ರಕಾರ, ಕರಾನ್‌ಗೆ ದೊಡ್ಡ ಮೊತ್ತ ನೀಡಿಯಾದರೂ ಸರಿ ಬಿಡ್ ಮಾಡುವಂತೆ ಎಂಎಸ್ ಧೋನಿ ಟೀಂ ಮ್ಯಾನೇಜ್‌ಮೆಂಟ್‌ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
2020ರಲ್ಲಿ ಸ್ಯಾಮ್ ಕರನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 5.5 ಕೋಟಿ ರುಪಾಯಿಗೆ ಹರಾಜಿನಲ್ಲಿ ಖರೀದಿ ಮಾಡಿತ್ತು. ಈ ಬಾರಿಯ ಹರಾಜಿನಲ್ಲಿ ಅವರು ಇದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ. 2022ರಲ್ಲಿ ಸಿಎಸ್‌ಕೆ ತಂಡ 9ನೇ ಸ್ಥಾನಕ್ಕೆ ಕುಸಿಯುವ ಮೂಲಕ ಮುಖಭಂಗ ಅನುಭವಿಸಿತ್ತು.
ರವೀಂದ್ರ ಜಡೇಜಾ ತಂಡದಲ್ಲೇ ಉಳಿದಿರುವುದು ಸಿಎಸ್‌ಕೆ ಪಾಳಯದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಸಿಎಸ್‌ಕೆ ತಂಡದ ಪರ್ಸ್‌ನಲ್ಲಿ 20.45 ಕೋಟಿ ರುಪಾಯಿ ಇದ್ದು, 7 ಆಟಗಾರರನ್ನು ಖರೀದಿ ಮಾಡಲು ಅವಕಾಶ ಹೊಂದಿದೆ.
ಪ್ರಸ್ತುತ ಸಿಎಸ್‌ಕೆ ತಂಡ: ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಡೇಶ್‌ಪಾನ್, ಮಿಚೆಲ್ ಡೇಶ್‌ಪಾನ್, ತುಶ್‌ರಾರ್ ಸ್ಯಾಂಟ್ನರ್, ಚೌಧರಿ, ಮಥೀಶ ಪದಿರಾನ, ಸಿಮರ್ಜೀತ್ ಸಿಂಗ್, ದೀಪಕ್ ಚಹಾರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ