ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Delhi Capitals Captain : ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಈತನೇ ನಾಯಕ! ವಿಕೆಟ್‌ ಕೀಪರ್ ಆಗಲಿದ್ದಾರೆ ಸ್ಫೋಟಕ ಬ್ಯಾಟರ್

IPL 2023: David Warner Likely Appointed As Delhi Capitals Captain, Sarfraz Khan Will Be Wicket Keeper

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಪಂತ್ ಈ ಬಾರಿ ಐಪಿಎಲ್‌ನಿಂದ ಹೊರಗುಳಿಯುವುದು ಖಚಿತವಾಗಿದೆ. ಇಂಗ್ಲೆಂಡ್‌ನಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದ್ದು, ಏಷ್ಯಾಕಪ್‌ ವೇಳೆಗೆ ಫಿಟ್ ಆಗುವ ಸಾಧ್ಯತೆ ಇದೆ.

2023ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್ ಬದಲಿಗೆ ಬೇರೆ ನಾಯಕನ ನೇಮಕ ಮಾಡಬೇಕಿದೆ. ವಿಕೆಟ್ ಕೀಪರ್ ಸ್ಥಾನಕ್ಕೆ ಕೂಡ ಬದಲೀ ಆಟಗಾರರನ್ನು ಆಯ್ಕೆ ಮಾಡಬೇಕಿದೆ. ಮೂಲಗಳ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡೇವಿಡ್ ವಾರ್ನರ್ ನಾಯಕರಾಗಿ ನೇಮಕವಾಗುವುದು ಬಹುತೇಕ ಖಚಿತವಾಗಿದೆ.

Asia Cup 2023: ಒಂದೇ ಗುಂಪಿನಲ್ಲಿ ಸ್ಪರ್ಧಿಸಲಿವೆ ಭಾರತ, ಪಾಕಿಸ್ತಾನAsia Cup 2023: ಒಂದೇ ಗುಂಪಿನಲ್ಲಿ ಸ್ಪರ್ಧಿಸಲಿವೆ ಭಾರತ, ಪಾಕಿಸ್ತಾನ

ಡೇವಿಡ್ ವಾರ್ನರ್ ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್‌ ಪ್ರಾಂಚೈಸಿಯ ಎಲ್ಲಾ ಕ್ರಿಕೆಟ್‌ ಕಾರ್ಯಾಚರಣೆಗಳಿಗೆ ಮುಖ್ಯಸ್ಥ ಸೌರವ್ ಗಂಗೂಲಿ ಮತ್ತು ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಈ ಬಗ್ಗೆ ಚರ್ಚೆ ನಡೆಸಲಿದ್ದು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ತಂಡದ ಮ್ಯಾನೇಜ್‌ಮೆಂಟ್ ಡೇವಿಡ್ ವಾರ್ನರ್ ಜೊತೆ ಈ ಬಗ್ಗೆ ಮಾತನಾಡಲಿದ್ದು, ಅವರು ಒಪ್ಪಿಗೆ ನೀಡಿದರೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ ತಕ್ಷಣಕ್ಕೆ ಯಾವುದೇ ನಿರ್ಧಾರ ಪ್ರಕಟಿಸದೆ, ಐಪಿಎಲ್ ಹತ್ತಿರವಾದಾಗ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಯಶಸ್ವಿ ನಾಯಕ ವಾರ್ನರ್

ಯಶಸ್ವಿ ನಾಯಕ ವಾರ್ನರ್

ಡೇವಿಡ್ ವಾರ್ನರ್ ಐಪಿಎಲ್‌ನ ಯಶಸ್ವಿ ನಾಯಕರಲ್ಲೊಬ್ಬರು. ಹಲವು ಆವೃತ್ತಿಗಳಲ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಆಧಾರಸ್ಥಂಭವಾಗಿದ್ದರು. 2016ರಲ್ಲಿ ವಾರ್ನರ್ ನಾಯಕತ್ವದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಚಾಂಪಿಯನ್ ಆಗಿತ್ತು.

2021ರ ಆವೃತ್ತಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡದ ಕಾರಣ ಸನ್‌ರೈಸರ್ಸ್ ಹೈದರಾಬಾದ್ ತಂಡ ಅವರನ್ನು 2022ರ ಮೆಗಾಹರಾಜಿಗೆ ಮುನ್ನ ಬಿಡುಗಡೆ ಮಾಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಡೇವಿಡ್‌ ವಾರ್ನರ್ ರನ್ನು 6.25 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು.

IPL 2023: ಐಪಿಎಲ್‌ನಲ್ಲಿ ಬೌಲಿಂಗ್ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ ಕೆಮರೂನ್ ಗ್ರೀನ್

ವಾರ್ನರ್ ನಾಯಕನಾದರೆ ತಂಡಕ್ಕೆ ಲಾಭ

ವಾರ್ನರ್ ನಾಯಕನಾದರೆ ತಂಡಕ್ಕೆ ಲಾಭ

ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ಅನುಭವಿ ನಾಯಕ, ಅವರ ಅನುಭವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಹಳ ಮುಖ್ಯವಾಗಿದೆ. ಮತ್ತೊಂದೆಡೆ ಅವರು ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಅಜೇಯ 200 ರನ್ ಗಳಿಸಿದ್ದಾರೆ. ಅವರು ಫಾರ್ಮ್‌ಗೆ ಮರಳಿರುವುದು ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್‌ಮೆಂಟ್‌ನ ವಿಶ್ವಾಸ ಹೆಚ್ಚಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ಒಮ್ಮೆಯೂ ಐಪಿಎಲ್ ಕಪ್ ಗೆದ್ದಿಲ್ಲ, 2020ರಲ್ಲಿ ಅವರು ಫೈನಲ್‌ಗೆ ತಲುಪಿದ್ದರೂ ಕೂಡ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿದರು. ಚೊಚ್ಚಲ ಕಪ್‌ ಗೆಲ್ಲಲು ನೋಡುತ್ತಿರುವ ಅವರಿಗೆ ವಾರ್ನರ್ ದೊಡ್ಡ ಅಸ್ತ್ರವಾಗುವ ಸಾಧ್ಯತೆ ಇದೆ.

ವಿಕೆಟ್ ಕೀಪರ್ ಸರ್ಫರಾಜ್‌ ಖಾನ್‌ಗೆ ಅವಕಾಶ

ವಿಕೆಟ್ ಕೀಪರ್ ಸರ್ಫರಾಜ್‌ ಖಾನ್‌ಗೆ ಅವಕಾಶ

ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಮತ್ತೊಬ್ಬ ವಿಕೆಟ್ ಕೀಪರ್ ಸರ್ಫರಾಜ್ ಖಾನ್ ವಿಕೆಟ್ ಕೀಪರ್ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ. ಪಂತ್ ಅನುಪಸ್ಥಿತಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟರ್ ಡೆಲ್ಲಿ ತಂಡಕ್ಕೆ ಅಗತ್ಯವಿದೆ. ಇದೇ ಕಾರಣಕ್ಕೆ ಸರ್ಫರಾಜ್ ಖಾನ್ ತಂಡಕ್ಕೆ ಮೊದಲ ಆಯ್ಕೆಯಾಗುವ ಸಾಧ್ಯತೆ ಇದೆ.

ದೇಶೀಯ ಕ್ರಿಕೆಟ್‌ ಲೀಗ್‌ನಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿರುವ ಸರ್ಫರಾಜ್ ಖಾನ್, ಸ್ಫೋಟಕ ಬ್ಯಾಟಿಂಗ್ ಕೂಡ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಪ್ರಥಮ ದರ್ಜೆ ಪಂದ್ಯದಲ್ಲಿ 49 ಇನ್ನಿಂಗ್ಸ್‌ಗಳಿಂದ 77.43 ಸರಾಸರಿಯಲ್ಲಿ 4564 ರನ್ ಗಳಿಸಿದ್ದಾರೆ. ಅಜೇಯ 301 ರನ್ ಗಳಿಸುವ ಮೂಲಕ ಅವರು ಗಮನ ಸೆಳೆದಿದ್ದಾರೆ.

Story first published: Thursday, January 5, 2023, 16:22 [IST]
Other articles published on Jan 5, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X