ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023 Mini Auction: ಪ್ರತಿ ಫ್ರಾಂಚೈಸಿಯ ಖರೀದಿ ಪಟ್ಟಿಯಲ್ಲಿರುವ ಟಾಪ್ 3 ಆಲ್‌ರೌಂಡರ್ಸ್

IPL 2023 Mini Auction: Top 3 All-rounders On Every Franchises Buying List

ಭಾರತದ ಅತಿದೊಡ್ಡ ಟಿ20 ಕ್ರಿಕೆಟ್ ಪಂದ್ಯಾವಳಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆರಂಭಕ್ಕೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಡಿಸೆಂಬರ್‌ 23ರಂದು ಆಟಗಾರರ ಹರಾಜಿನಿಂದಲೇ ಟೂರ್ನಿಯ ಗುಂಗು ಆರಂಭವಾಗುತ್ತಿದೆ.

ಇಂದು (ಶುಕ್ರವಾರ, ಡಿಸೆಂಬರ್ 23) ಮಧ್ಯಾಹ್ನ 2.30ಕ್ಕೆ ಕೇರಳದ ಕೊಚ್ಚಿಯ ಹಯಾತ್ ಹೋಟೆಲ್‌ನಲ್ಲಿ 2023ರ ಐಪಿಎಲ್ ಋತುವಿಗಾಗಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ.

IPL 2023 Auction: ಪಂಜಾಬ್ ಕಿಂಗ್ಸ್ ನಡೆಸಿಕೊಂಡ ರೀತಿಯಿಂದ ಮಯಾಂಕ್‌ಗೆ ನೋವಾಗಿದೆ; ಕ್ರಿಸ್ ಗೇಲ್IPL 2023 Auction: ಪಂಜಾಬ್ ಕಿಂಗ್ಸ್ ನಡೆಸಿಕೊಂಡ ರೀತಿಯಿಂದ ಮಯಾಂಕ್‌ಗೆ ನೋವಾಗಿದೆ; ಕ್ರಿಸ್ ಗೇಲ್

ಐಪಿಎಲ್ ಮಿನಿ ಹರಾಜು ಅತ್ಯಂತ ರೋಮಾಂಚನಕಾರಿಯಿಂದ ಕೂಡಿದ್ದು, ಟಿ20 ಕ್ರಿಕೆಟ್‌ನಲ್ಲಿನ ಕೆಲವು ಪ್ರಮುಖ ಆಟಗಾರರನ್ನು ಖರೀದಿಸಲು ಹತ್ತು ತಂಡಗಳ ಫ್ರಾಂಚೈಸಿಗಳು ಪರಸ್ಪರ ಬಿಡ್ ಮಾಡಲು ಎದುರು ನೋಡುತ್ತಿವೆ.

ಐಪಿಎಲ್ 2023ರ 16ನೇ ಆವೃತ್ತಿಗಾಗಿ 405 ಆಟಗಾರರ ಹೆಸರುಗಳು ಪಂದ್ಯಾವಳಿಗೂ ಮೊದಲು ಹರಾಜಾಗುವ ಅಂತಿಮ ಪಟ್ಟಿಯಲ್ಲಿದ್ದಾರೆ. ಈ ಹರಾಜಿನಲ್ಲಿ ವಿಶ್ವ ಕ್ರಿಕೆಟ್‌ನ ಕೆಲವು ಪ್ರಮುಖ ಆಲ್‌ರೌಂಡರ್‌ಗಳು ಹರಾಜಿನಲ್ಲಿ ಯಾವ ತಂಡಗಳಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವುದನ್ನು ನೋಡಲು ಕುತೂಹಲಕಾರಿಯಾಗಿದೆ.

IPL 2023 Auction: ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ನಾಯಕ ದೊಡ್ಡ ಮೊತ್ತಕ್ಕೆ ಖರೀದಿಯಾಗಲಿದ್ದಾರೆ; ಮಾರ್ಗನ್IPL 2023 Auction: ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ನಾಯಕ ದೊಡ್ಡ ಮೊತ್ತಕ್ಕೆ ಖರೀದಿಯಾಗಲಿದ್ದಾರೆ; ಮಾರ್ಗನ್

ಕಳೆದ ಋತುಗಳಲ್ಲಿ ಯಾವ ತಂಡಗಳಲ್ಲಿ ಹೆಚ್ಚು ಅತ್ಯುತ್ತಮ ಆಲ್‌ರೌಂಡರ್‌ಗಳನ್ನು ಹೊಂದಿದ್ದರೆಯೋ, ಆ ತಂಡಗಳು ಉತ್ತಮ ಪ್ರದರ್ಶನವನ್ನು ಕಂಡಿವೆ. ಈ ವರ್ಷದ ಹರಾಜಿನಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಟಿ20 ಟೂರ್ನಿಗಳಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿದ ಕೆಲವು ದೊಡ್ಡ ಆಲ್‌ರೌಂಡರ್‌ಗಳಿಗೆ ಭಾರಿ ಬೇಡಿಕೆ ಇದೆ.

ಐಪಿಎಲ್ 2023ರಲ್ಲಿ ಎಲ್ಲ ತಂಡಗಳ ಆದ್ಯತೆ ಪಟ್ಟಿಯಲ್ಲಿರುವ ಮೂವರು ಪ್ರಮುಖ ಆಲ್‌ರೌಂಡರ್‌ಗಳು ಇಲ್ಲಿದ್ದಾರೆ.

ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ (ಮೂಲ ಬೆಲೆ: 2 ಕೋಟಿ ರೂ.)

ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ (ಮೂಲ ಬೆಲೆ: 2 ಕೋಟಿ ರೂ.)

ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಬೆನ್ ಸ್ಟೋಕ್ಸ್ ಐಪಿಎಲ್ 2023ರ ಹರಾಜಿನ ಅತಿದೊಡ್ಡ ಖರೀದಿಗಳಲ್ಲಿ ಒಬ್ಬರಾಗುತ್ತಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

2018ರ ಐಪಿಎಲ್ ಹರಾಜಿನಲ್ಲಿ ಆಲ್‌ರೌಂಡರ್ ಅತ್ಯಂತ ದುಬಾರಿ ಆಟಗಾರನಾಗಿದ್ದಾಗ ಅವರನ್ನು ರಾಜಸ್ಥಾನ್ ರಾಯಲ್ಸ್ ರೂ. 12.5 ರೂ. ನೀಡಿ ಖರೀದಿಸಿತ್ತು. ಬೆನ್ ಸ್ಟೋಕ್ಸ್ ಒಬ್ಬ ಮೌಲ್ಯಯುತ ಕ್ರಿಕೆಟಿಗ ಎಂದು ಜಗತ್ತಿನಾದ್ಯಂತ ಪರಿಚಿತ. ಒತ್ತಡದ ಸಂದರ್ಭಗಳಲ್ಲಿಯೂ ತಂಡವನ್ನು ಗೆಲ್ಲಿಸುವ ಚಾಣಾಕ್ಷ ಆಲ್‌ರೌಂಡರ್ ಎನ್ನುವುದನ್ನು ಸಾಬೀತುಪಡಿಸಿದ ಆಟಗಾರ. ಇದಕ್ಕೆ ಎರಡು ವಿಶ್ವಕಪ್‌ಗಳಲ್ಲಿ ಅವರು ತೋರಿದ ಪ್ರದರ್ಶನವೇ ಸಾಕ್ಷಿ.

ಬೆನ್ ಸ್ಟೋಕ್ಸ್ ಉತ್ತಮ ನಾಯಕತ್ವದ ಸಾಮರ್ಥ್ಯವನ್ನು ಸಹ ಹೊಂದಿದ್ದಾನೆ ಮತ್ತು ತಂಡದಲ್ಲಿನ ಯುವ ಆಟಗಾರರು ಅವರ ಪಾತ್ರವನ್ನು ನೋಡುತ್ತಾರೆ. ಸ್ಟೋಕ್ಸ್ ಕಳೆದ ವರ್ಷದ ಐಪಿಎಲ್‌ನಲ್ಲಿ ತನ್ನ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಗಮನ ಮೇಲೆ ಕೇಂದ್ರೀಕರಿಸಲು ಬಯಸಿದ್ದರಿಂದ ಆಡಿರಲಿಲ್ಲ. ಇದೀಗ ಮಾಜಿ ರಾಜಸ್ಥಾನ ರಾಯಲ್ಸ್ ಆಟಗಾರ 16ನೇ ಆವೃತ್ತಿಯ ಪಂದ್ಯಾವಳಿಗೆ ಸಜ್ಜಾಗಿದ್ದಾನೆ ಮತ್ತು ದೊಡ್ಡ ಮೊತ್ತಕ್ಕೆ ಸಹಿ ಹಾಕಲು ಕಾಯುತ್ತಿರುವ ಆಲ್‌ರೌಂಡರ್ ಆಗಿದ್ದಾನೆ.

ಬಾಂಗ್ಲಾದ ಶಕಿಬ್ ಅಲ್ ಹಸನ್ (ಮೂಲ ಬೆಲೆ: 1.5 ಕೋಟಿ ರೂ.)

ಬಾಂಗ್ಲಾದ ಶಕಿಬ್ ಅಲ್ ಹಸನ್ (ಮೂಲ ಬೆಲೆ: 1.5 ಕೋಟಿ ರೂ.)

ಬಾಂಗ್ಲಾದೇಶದಿಂದ ಹೊರಹೊಮ್ಮಿದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಶಕೀಬ್ ಅಲ್ ಹಸನ್ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವಾರು ತಂಡಗಳ ಪ್ರಮುಖ ಆಟಗಾರನಾಗಿದ್ದಾರೆ. ಆಲ್‌ರೌಂಡರ್ ತನ್ನ ಸ್ಥಿರತೆ, ನಿಖರತೆ ಮತ್ತು ಆಕ್ರಮಣಶೀಲತೆ ಬೌಲಿಂಗ್‌ನಿಂದಾಗಿ ಹೆಸರುವಾಸಿಯಾಗಿದ್ದಾನೆ. ಅಲ್ಲದೆ ಬ್ಯಾಟಿಂಗ್ ಮಾಡುವಾಗ ಸ್ಫೋಟಕ ಹೊಡೆತಗಳ ಮೂಲಕ ಗುರುತಿಸಿಕೊಂಡಿದ್ದಾನೆ.

ಶಕಿಬ್ ಅಲ್ ಹಸನ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅವರ ಕ್ರಿಕೆಟ್ ಆಟದಿಂದ ಮಾತ್ರವಲ್ಲದೆ ಹೆಚ್ಚಿನ ಅನುಭವ ಅನೇಕ ಸಂದರ್ಭಗಳಲ್ಲಿ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಅವರನ್ನು ತಮ್ಮ ತಂಡಕ್ಕೆ ಕರೆತರಲು ಫ್ರಾಂಚೈಸಿಗಳು ಪೈಪೋಟಿ ನಡೆಸಲಿದ್ದಾರೆ.

ಇಂಗ್ಲೆಂಡ್‌ನ ಸ್ಯಾಮ್ ಕರ್ರಾನ್ (ಮೂಲ ಬೆಲೆ: 2 ಕೋಟಿ ರೂ.)

ಇಂಗ್ಲೆಂಡ್‌ನ ಸ್ಯಾಮ್ ಕರ್ರಾನ್ (ಮೂಲ ಬೆಲೆ: 2 ಕೋಟಿ ರೂ.)

2022ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಗೆಲುವಿಗೆ ಸ್ಯಾಮ್ ಕರ್ರಾನ್ ಕೊಡುಗೆ ದೊಡ್ಡದಿದೆ. ಆ ಹಿನ್ನೆಲೆಯಲ್ಲಿ ಐಪಿಎಲ್ 2023 ಹರಾಜಿಗೆ ಬಂದಿರುವ ಅವರ ಮೇಲೆ ನಿರೀಕ್ಷೆ ದೊಡ್ಡದಿದೆ. ಈ ಯುವ ಆಲ್‌ರೌಂಡರ್ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.

ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಮತ್ತು ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಐಪಿಎಲ್‌ನ ಹಿಂದಿನ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಉತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಹೆಚ್ಚು ಪರಿಣಾಮಕಾರಿಯಾದ ಆಟಗಾರನಾಗಿದ್ದಾರೆ.

ಸ್ಯಾಮ್ ಕರ್ರಾನ್ ಅನುಭವ ಬೆಳೆಸಿಕೊಳ್ಳುತ್ತಿದ್ದಾರೆ ಮತ್ತು ಅವರ ನಾಯಕತ್ವದ ಗುಣಗಳು ಅವರನ್ನು ಐಪಿಎಲ್ ತಂಡಗಳಿಗೆ ಅತ್ಯುತ್ತಮ ಖರೀದಿಯನ್ನಾಗಿ ಮಾಡುತ್ತವೆ. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರೂ ಗೆಲುವಿನ ಗಡಿ ತಲುಪಿಸುವ ಅವರ ಸಾಮರ್ಥ್ಯ ಮತ್ತು ಡೆತ್‌ ಓವರ್‌ಗಳಲ್ಲಿ ಬೌಲಿಂಗ್ ಮಾಡುವಾಗ ಅವರ ನಿಖರತೆ ಈ ವರ್ಷದ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿಗಳು ಇಷ್ಟಪಟ್ಟು ಖರೀದಿಸುವ ಆಟಗಾರನಾಗಿದ್ದಾರೆ.

Story first published: Friday, December 23, 2022, 13:18 [IST]
Other articles published on Dec 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X