ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ನಿವೃತ್ತಿ ಘೋಷಿಸಿದ ಪೊಲಾರ್ಡ್‌ಗೆ ಸಚಿನ್, ರೋಹಿತ್ ಹೇಳಿದ್ದೇನು?

IPL 2023: Rohit Sharma And Sachin Tendulkar Heartfelt Note To Kieron Pollard

ಐಪಿಎಲ್‌ನಿಂದ ಕೀರನ್ ಪೊಲಾರ್ಡ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ಅವರನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎನ್ನುವಾಗಲೇ ಈ ಮಹತ್ವದ ಘೋಷಣೆ ಮಾಡಿದ್ದಾರೆ ವೆಸ್ಟ್ ಇಂಡೀಸ್ ಆಲ್ ರೌಂಡರ್.

13 ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿರುವ ಪೊಲಾರ್ಡ್ ನಾನು ಬೇರೆ ತಂಡದಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ. ಆಟಗಾರನಾಗಿ ನಿವೃತ್ತಿಯಾದರೂ, ಅವರು ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಮುಂದುವರೆಯಲಿದ್ದಾರೆ.

2010ರಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಪೊಲಾರ್ಡ್ ನಿವೃತ್ತಿ ಹೊಂದುತ್ತಿದ್ದಂತೆ ತಂಡದ ಸಹ ಆಟಗಾರರು, ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಸಚಿನ್ ತೆಂಡೂಲ್ಕರ್ ಕೂಡ ಅವರಿಗೆ ಹೃತ್ಪೂರ್ವಕ ಸಂದೇಶ ನೀಡಿದ್ದಾರೆ.

IPL 2023: ಆರ್‌ಸಿಬಿ ಬಿಟ್ಟಿದ್ಯಾರನ್ನು, ಉಳಿದವರು ಯಾರು, ಹರಾಜಿಗೆ ಉಳಿದ ಹಣವೆಷ್ಟು?IPL 2023: ಆರ್‌ಸಿಬಿ ಬಿಟ್ಟಿದ್ಯಾರನ್ನು, ಉಳಿದವರು ಯಾರು, ಹರಾಜಿಗೆ ಉಳಿದ ಹಣವೆಷ್ಟು?

ಇನ್‌ಸ್ಟಾಗ್ರಾಮ್‌ನಲ್ಲಿ ಪೊಲಾರ್ಡ್ ಬಗ್ಗೆ ಚಿತ್ರವನ್ನು ಹಂಚಿಕೊಂಡು ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. "ದೊಡ್ಡ ಮನುಷ್ಯ, ಆತನ ಪ್ರಭಾವ ಯಾವಾಗಲೂ ದೊಡ್ಡದಾಗಿದೆ. ಆತ ಯಾವಾಗಲೂ ತಂಡಕ್ಕಾಗಿ ಆಡುತ್ತಾನೆ. ಮುಂಬೈ ಇಂಡಿಯನ್ಸ್‌ನ ಲೆಜೆಂಡ್ ಆಟಗಾರ" ಎಂದು ಶೀರ್ಷಿಕೆ ನೀಡಿದ್ದಾರೆ.

ಭಾರತದ ಬ್ಯಾಟಿಂಗ್ ದಿಗ್ಗಜ ಮತ್ತು ಮುಂಬೈ ಇಂಡಿಯನ್ಸ್ ಮೆಂಟರ್ ಸಚಿನ್ ತೆಂಡೂಲ್ಕರ್ ಕೂಡ ಟ್ವಿಟ್ಟರ್‌ನಲ್ಲಿ ಪೊಲಾರ್ಡ್ ಬಗ್ಗೆ ಬರೆದುಕೊಂಡಿದ್ದಾರೆ. "ಮುಂಬೈ ಇಂಡಿಯನ್ಸ್‌ಗೆ ಆತ ಎಂದಿಗೂ ವಿದಾಯ ಹೇಳಲ್ಲ. ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ಬ್ಯಾಟಿಂಗ್ ಕೋಚ್ ಆಗಿದ್ದಕ್ಕಾಗಿ ಅಭಿನಂದನೆಗಳು. ನಿಮ್ಮ ಇರುವಿಕೆ ತಂಡದಲ್ಲಿ ದೊಡ್ಡ ಪ್ರಭಾವ ಬೀರುತ್ತದೆ" ಎಂದು ಹೇಳಿದ್ದಾರೆ.

IPL 2023: Rohit Sharma And Sachin Tendulkar Heartfelt Note To Kieron Pollard

ಹೊಸ ವೃತ್ತಿಜೀವನಕ್ಕೆ ಶುಭಾಶಯ ಎಂದ ಬುಮ್ರಾ

ಅದಕ್ಕೂ ಮುನ್ನ, ಭಾರತದ ವೇಗಿ, ಮುಂಬೈ ಇಂಡಿಯನ್ಸ್‌ನ ಮುಖ್ಯ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಪೊಲಾರ್ಡ್ ಬಗ್ಗೆ ಸಂದೇಶವನ್ನು ಪೋಸ್ಟ್ ಮಾಡಿದರು. ಪೊಲಾರ್ಡ್ ಜೊತೆ ಕಳೆದ ದಿನಗಳನ್ನು ನೆನಪಿಸಿಕೊಂಡರು.

"ನೀವು ನಮ್ಮೊಂದಿಗೆ ಮೈದಾನದಲ್ಲಿ ಇರುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ನಮಗೆ ಸಮಯ ತೆಗೆದುಕೊಳ್ಳುತ್ತದೆ. ಆದರೆ, ನೆಟ್ಸ್‌ನಲ್ಲಿ ನಿಮ್ಮ ಜೊತೆ ಅಭ್ಯಾಸ ಮಾಡುತ್ತೇವೆ. ನಿಮ್ಮ ಹೊಸ ವೃತ್ತಿಜೀವನಕ್ಕೆ ಶುಭವಾಗಲಿ" ಎಂದು ಬರೆದುಕೊಂಡಿದ್ದಾರೆ.

ಐಪಿಎಲ್‌ ಫ್ರಾಂಚೈಸಿಗಳು 2023ರ ಐಪಿಎಲ್ ಆವೃತ್ತಿಗೆ ಆಟಗಾರರನ್ನು ಬಿಡುಗಡೆ ಮಾಡಲು ಮತ್ತು ಉಳಿಸಿಕೊಳ್ಳಲು ಗಡುವು ಅಂತ್ಯವಾಗುವ ಕೆಲ ಗಂಟೆಗಳ ಮೊದಲು ಪೊಲಾರ್ಡ್ ತಮ್ಮ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.

ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಯಶಸ್ವಿ ತಂಡವಾಗಿದೆ. ಇದುವರೆಗೂ ಐದು ಬಾರಿ ಚಾಂಪಿಯನ್ ಎನಿಸಿಕೊಂಡಿದೆ. ಎರಡು ಬಾರಿ ಚಾಂಪಿಯನ್ ಲೀಗ್‌ನಲ್ಲಿ ಜಯಶಾಲಿಯಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಸಾಧನೆಯಲ್ಲಿ ಪೊಲಾರ್ಡ್ ಕೊಡುಗೆ ಮಹತ್ವದ್ದಾಗಿದೆ.

Story first published: Wednesday, November 16, 2022, 5:30 [IST]
Other articles published on Nov 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X