ಐಪಿಎಲ್ ಹರಾಜು 2023: ಈ 4 ಕ್ರಿಕೆಟಿಗರಿಗಾಗಿ ನಡೆಯಲಿದೆ ಮಹಾಕಾಳಗ: ಭಾರೀ ಮೊತ್ತ ಪಡೆಯುವ ಆಟಗಾರರು

ಐಪಿಎಲ್ ಮಿನಿ ಹರಾಜಿಗಾಗಿ ದಿನಗಣನೆ ಆರಂಭವಾಗಿದೆ. ಈ ಬಾರಿಯ ಹರಾಜಿನಲ್ಲಿಯೂ ಸಾಕಷ್ಟು ಸ್ಟಾರ್ ಆಟಗಾರರು ಹೆಸರು ನೊಂದಾಯಿಸಿದ್ದಾರೆ. ಈ ಮಹತ್ವದ ಟೂರ್ನಿಯಲ್ಲಿ ಅವಕಾಶ ಗಿಟ್ಟಿಸಿಕೊಂಡು ಮಿಂಚಲು ಆಟಗಾರರು ಕೂಡ ಹವಣಿಸುತ್ತಿದ್ದಾರೆ. ಇನ್ನು ಐಪಿಎಲ್ ಫ್ರಾಂಚೈಸಿಗಳು ಕೂಡ ಪ್ರತಿಭಾನ್ವಿತ ಆಟಗಾರರ ಮೇಲೆ ಕಣ್ಣಿಟ್ಟಿದ್ದು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಎಲ್ಲಾ ಲೆಕ್ಕಾಚಾರಗಳನ್ನು ನಡೆಸುತ್ತಿದೆ.

ಈ ಬಾರಿಯ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಕೂಡ ಈಗಾಗಲೇ ತಮ್ಮ ತಂಡದ ಆಟಗಾರರನ್ನು ಹರಾಜು ಹಾಗೂ ಬಿಡುಗಡೆಗೊಳಿಸುವ ಪ್ರಕ್ರಿಯೆ ಅಂತ್ಯಗೊಳಿಸಿವೆ. ಇನ್ನು ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಕೆಲ ಆಟಗಾರರು ಈ ಬಾರಿಯ ಐಪಿಎಲ್ ಹರಾಜಿನಿಂದ ಹೊರಗುಳಿಯುವ ನಿರ್ಧಾರವನ್ನು ಕೂಡ ಪ್ರಕಟಿಸಿದ್ದಾರೆ.

ಫಿಫಾ ವಿಶ್ವಕಪ್ 2022: ಈಕ್ವೆಡಾರ್ ಸೋಲಿಸಿ 20 ವರ್ಷಗಳ ನಂತರ ನಾಕೌಟ್ ಹಂತ ತಲುಪಿದ ಸೆನೆಗಲ್ಫಿಫಾ ವಿಶ್ವಕಪ್ 2022: ಈಕ್ವೆಡಾರ್ ಸೋಲಿಸಿ 20 ವರ್ಷಗಳ ನಂತರ ನಾಕೌಟ್ ಹಂತ ತಲುಪಿದ ಸೆನೆಗಲ್

ಈ ಬಾರಿಯ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ ಈ ಬಾರಿಯ ಹರಾಜಿನಲ್ಲಿ ಕೆಲ ಆಟಗಾರರಿಗೆ ಭಾರೀ ಬೇಡಿಕೆ ಉಂಟಾಗುವ ಸಾಧ್ಯತೆಗಳು ಸ್ಪಷ್ಟವಾಗಿದೆ. ತಮ್ಮ ತಂಡಗಳನ್ನು ಬಲಿಷ್ಠಗೊಳಿಸಲು ಕೆಲ ಆಟಗಾರರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಲೇಬೇಕೆಂದು ಕೆಲ ಫ್ರಾಂಚೈಸಿಗಳು ಪಟ್ಟು ಹಿಡಿದಿವೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಇಂಥಾ ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ. ಹಾಗಾದರೆ ಭಾರೀ ಬೇಡಿಕೆಯೊಂದಿಗೆ ದೊಡ್ಡ ಮೊತ್ತಕ್ಕೆ ಹರಾಜಾಗಲಿರುವ ನಾಲ್ವರು ಆಟಗಾರರು ಯಾರು ಎಂಬುದನ್ನು ನೋಡೋಣ ಮುಂದೆ ಓದಿ..

ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್

ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್

ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮೂರು ಮಾದರಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಐಪಿಎಲ್‌ನಲ್ಲಿ ಕೂಡ ಬೆನ್ ಸ್ಟೋಕ್ಸ್ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದು 43 ಪಂದ್ಯಗಳಲ್ಲಿ 920 ರನ್‌ಗಳಿಸಿದ್ದಾರೆ. ಎರಡು ಶತಕ ಹಾಗೂ ಎರಡು ಅರ್ಧ ಶತಕವನ್ನು ಕೂಡ ಗಳಿಸಿದ್ದಾರೆ ಬೆನ್ ಸ್ಟೋಕ್ಸ್. ಬೌಲಿಂಗ್‌ನಲ್ಲಿಯೂ ಸ್ಟೋಕ್ಸ್ ಉತ್ತಮ ಪ್ರದರ್ಶನ ನೀಡಿದ್ದು 8.55ರ ಎಕಾನಮಿಯಲ್ಲಿ 28 ವಿಕೆಟ್ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಮಿನಿ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಭಾರೀ ಬೇಡಿಕೆ ಪಡೆಯುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾದ ಭರವಸೆಯ ಆಟಗಾರ ಕ್ಯಾಮರೂನ್ ಗ್ರೀನ್

ಆಸ್ಟ್ರೇಲಿಯಾದ ಭರವಸೆಯ ಆಟಗಾರ ಕ್ಯಾಮರೂನ್ ಗ್ರೀನ್

ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿರುವ ಯುವ ಆಟಗಾರ ಕ್ಯಾಮರೂನ್ ಗ್ರೀನ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಸಮಾನವಾಗಿ ತಮ್ಮ ತಂಡಕ್ಕೆ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಬಹುತೇಕ ತಂಡಗಳು ಈ ಆಟಗಾರನ ಮೇಲೆ ಕಣ್ಣಿಟ್ಟಿರುವ ಸಾಧ್ಯತೆಯಿದೆ. ಈಗಾಗಲೇ ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಗೊಳಿಸವ ಬಗ್ಗೆ ಸುಳಿವು ನೀಡಿದ್ದು ಉಳಿದ ತಂಡಗಳು ಕೂಡ ತೀವ್ರ ಪೈಪೋಟಿ ನೀಡಲಿದೆ. ಹೀಗಾಗಿ ಎಷ್ಟು ಮೊತ್ತವನ್ನು ಪಡೆದು ಈ ಯುವ ಆಟಗಾರ ಯಾವ ತಂಡದ ಪಾಲಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಇಂಗ್ಲೆಂಡ್ ಯುವ ಆಲ್‌ರೌಂಡರ್ ಸ್ಯಾಮ್ ಕರನ್

ಇಂಗ್ಲೆಂಡ್ ಯುವ ಆಲ್‌ರೌಂಡರ್ ಸ್ಯಾಮ್ ಕರನ್

ಯಾವುದೇ ತಂಡಕ್ಕಾದರೂ ದೊಡ್ಡ ಅಸ್ತ್ರವಾಗುವಂತಾ ಆಟಗಾರ ಇಂಗ್ಲೆಂಡ್ ತಂಡದ ಯುವ ಕ್ರಿಕೆಟಿಗ ಸ್ಯಾಮ್ ಕರನ್. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿರುವ ಸ್ಯಾಮ್ ಕರನ್ ಅದ್ಭುತ ಪ್ರದರ್ಶನ ನಿಡಿ ಮಿಂಚಿದ್ದರು. ಇನ್ನು ಇಂಗ್ಲೆಂಡ್ ರಾಷ್ಟ್ರೀಯ ತಂಡದ ಪರವಾಗಿಯೂ ಸ್ಯಾಮ್ ಕರನ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಈ ವಿಶ್ವಕಪ್ ಟೂರ್ನಿಯಲ್ಲಿ ಬೌಲಿಂಗ್‌ನಲ್ಲಿ 13 ವಿಕೆಟ್ ಸಂಪಾದಿಸಿದ ಸ್ಯಾಮ್ ಕರನ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಕೇವಲ 12 ರನ್‌ಗಳಿಗೆ 3 ವಿಕೆಟ್ ಸಂಪಾದಿಸಿ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಸ್ಯಾಮ್ ಕರನ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸಾಕಷ್ಟು ಬೇಡಿಕೆ ಪಡೆಯುವುದು ನಿಶ್ಚಿತ.

ಆಕ್ರಮಣಕಾರಿ ಆಟಗಾರ ಪಾಲ್ ಸ್ಟಿರ್ಲಿಂಗ್

ಆಕ್ರಮಣಕಾರಿ ಆಟಗಾರ ಪಾಲ್ ಸ್ಟಿರ್ಲಿಂಗ್

ಐರ್ಲೆಂಡ್ ಟಿ20 ತಂಡದ ಆಕ್ರಮಣಕಾರಿ ಆಟಗಾರ ಪಾಲ್ ಸ್ಟಿರ್ಲಿಂಗ್ ರಾಷ್ಟ್ರೀಯ ತಂಡದ ಆಧಾರ ಸ್ಥಂಭವಾಗಿದ್ದಾರೆ. ಎದುರಾಳಿ ತಂಡದ ಬೌಲರ್‌ಗಳನ್ನು ನಿರ್ದಯವಾಗಿ ಆರಂಭದಿಂದಲೇ ದಂಡಿಸುವ ಸ್ಪೋಟಕ ಆಟಗಾರ ಪಾಲ್ ಸ್ಟಿರ್ಲಿಂಗ್. ಹೀಗಾಗಿ ಯಾವುದೇ ತಂಡಕ್ಕಾದರೂ ಆರಂಭಿಕನಾಗಿ ಅಸ್ತ್ರವಾಗಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಪಾಲ್ ಸ್ಟಿರ್ಲಿಂಗ್. ಮೊದಲ ಆರು ಓವರ್‌ಗಳಲ್ಲಿ ಪವರ್‌ಪ್ಲೇಯನ್ನು ಬಳಸಿಕೊಂಡು ವೇಗವಾಗಿ ರನ್‌ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಐರಿಷ್ ಆಟಗಾರ. ಹೀಗಾಗಿ ಪಾಲ್ ಸ್ಟಿರ್ಲಿಂಗ್ ಕೂಡ ಈ ಬಾರಿಯ ಐಪಿಎಲ್‌ನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, November 30, 2022, 19:00 [IST]
Other articles published on Nov 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X