ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಯಿಂದ ಸ್ಯಾಮ್ ಕರನ್‌ವರೆಗೆ; ಪ್ರತಿ ಆವೃತ್ತಿಯಲ್ಲಿ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರರು!

Most costly biddings from each IPL Auction from 2008 to 2023

ಇಂಡಿಯನ್ ಪ್ರೀಮಿಯರ್ ಲೀಗ್‌ನ 2023ರ ಆವೃತ್ತಿಯ ಹರಾಜು ಪ್ರಕ್ರಿಯೆ ಅಂತ್ಯವಾಗಿದೆ. ಕೊಚ್ಚಿಯಲ್ಲಿ ನಡೆದ ಈ ಹರಾಜಿನಲ್ಲಿ ಒಟ್ಟು 405 ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಇದರಲ್ಲಿ 10 ಫ್ರಾಂಚೈಸಿಗಳು ಒಟ್ಟಾರೆಯಾಗಿ 80 ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಇದರಲ್ಲಿ 29 ಆಟಗಾರರು ವಿದೇಶಿಗರಾಗಿದ್ದಾರೆ. ಎಲ್ಲಾ ಫ್ರಾಂಚೈಸಗಳು ಒಟ್ಟು 167 ಕೋಟಿ ರೂಪಾಯಿಯನ್ನು ಈ ಹರಾಜಿಗೆ ವ್ಯಯಿಸಿದೆ.

ಇನ್ನು ಇಂಗ್ಲೆಂಡ್‌ನ ಯುವ ಆಟಗಾರ ಸ್ಯಾಮ್ ಕರನ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ 18.50 ಕೋಟಿಗೆ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಕ್ಯಾಮರೂನ್ ಗ್ರೀನ್ 17.50 ಕೋಟಿ ಹಾಗೂ ಬೆನ್ ಸ್ಟೋಕ್ಸ್ 16.50 ಕೋಟಿ ಮೊತ್ತವನ್ನು ಈ ಹರಾಜಿನಲ್ಲಿ ಗಿಟ್ಟಿಸಿಕೊಂಡಿದ್ದಾರೆ.

ಹಾಗಾದರೆ ಐಪಿಎಲ್ ಹರಾಜಿನಲ್ಲಿ ಆರಂಭಿಕ ಆವೃತ್ತಿಯಿಂದ ಈವರೆಗೆ ಪ್ರತಿ ಆವೃತ್ತಿಯಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರರು ಯಾರು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಐಪಿಎಲ್ 2023: ಮಿನಿ ಹರಾಜಿನ ಬಳಿಕ ಆರ್‌ಸಿಬಿ ಸಂಪೂರ್ಣ ತಂಡ ಹೇಗಿದೆ? ಇಲ್ಲಿದೆ ಮಾಹಿತಿಐಪಿಎಲ್ 2023: ಮಿನಿ ಹರಾಜಿನ ಬಳಿಕ ಆರ್‌ಸಿಬಿ ಸಂಪೂರ್ಣ ತಂಡ ಹೇಗಿದೆ? ಇಲ್ಲಿದೆ ಮಾಹಿತಿ

2008, ಎಂಎಸ್ ಧೋನಿ

2008, ಎಂಎಸ್ ಧೋನಿ

2008ರ ಚೊಚ್ಚಲ ಆವೃತ್ತಿಯಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರ ಎಂದರೆ ಅದು ಎಂಎಸ್ ಧೋನಿ. ಸಿಎಸ್‌ಕೆ ಫ್ರಾಂಚೈಸಿ ಧೋನಿಯನ್ನು 9.5 ಕೋಟಿ ನೀಡಿ ತೆಕ್ಕೆಗೆ ಹಾಕಿಕೊಂಡಿತ್ತು. ಓ ಮೂಲಕ ಪ್ರಥಮ ಆವೃತ್ತಿಯಲ್ಲಿ ಮಾಹಿ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರ ಎನಿಸಿಕೊಂಡರು

2009, ಕೆವಿನ್ ಪೀಟರ್ಸನ್ ಹಾಗೂ ಆಂಡ್ರೋ ಫ್ಲಿಂಟಾಫ್

2009, ಕೆವಿನ್ ಪೀಟರ್ಸನ್ ಹಾಗೂ ಆಂಡ್ರೋ ಫ್ಲಿಂಟಾಫ್

2009ರಲ್ಲಿ ನಡೆದ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಇಬ್ಬರು ಇಂಗ್ಲೆಂಡ್ ಆಟಗಾರರು ಹರಾಜಾಗಿದ್ದರು. ಕೆವಿನ್ ಪೀಟರ್ಸನ್ ಅವರನ್ನು ಆರ್‌ಸಿಬಿ ಹಾಗೂ ಆಂಡ್ರ್ಯೋ ಫ್ಲಿಂಟಾಫ್ ಅವರನ್ನು ಸಿಎಸ್‌ಕೆ ತನ್ನ ತಂಡಕ್ಕೆ ಸೇರ್ಪಡೆಗೊಳಿಸಿತ್ತು. ತಲಾ 9.8 ಕೋಟಿ ನೀಡಿ ಈ ಆಟಗಾರರು ಹರಾಜಾಗಿದ್ದರು.

2010, ಶೇನ್ ಬಾಂಡ್ ಹಾಗೂ ಕೀರನ್ ಪೊಲಾರ್ಡ್

2010, ಶೇನ್ ಬಾಂಡ್ ಹಾಗೂ ಕೀರನ್ ಪೊಲಾರ್ಡ್

2010ರಲ್ಲಿ ನಡೆದ ಮಿನಿ ಹರಾಜಿನಲ್ಲಿ ನ್ಯೂಜಿಲೆಂಡ್‌ನ ಶೇನ್ ಬಾಂಡ್ ಹಾಗೂ ವೆಸ್ಟ್ ಇಂಡೀಸ್‌ನ ಕೀರನ್ ಪೊಲಾರ್ಡ್ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರರಾಗಿದ್ದಾರೆ. ಶೇನ್ ಬಾಂಡ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಹಾಗೂ ಪೊಲಾರ್ಡ್ ಮುಂಬೈ ಇಂಡಿಯನ್ಸ್ ತಂಡಕ್ಕೆ ತಲಾ 4.8 ಕೋಟಿ ರೂಪಾಯಿಗೆ ಹಾರಾಜಾಗಿದ್ದರು.

2011 ಗೌತಮ್ ಗಂಭೀರ್

2011 ಗೌತಮ್ ಗಂಭೀರ್

2011ರಲ್ಲಿ ಗೌತಮ್ ಗಂಭೀರ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಬೃಹತ್ ಮೊತ್ತ ನೀಡಿ ಖರೀದಿತ್ತು. 14.9 ಕೋಟಿಗೆ ಗಂಭೀರ್ ಕೆಕೆಆರ್‌ಗೆ ಹರಾಜಾಗುವ ಮೂಲಕ ಆ ಆವೃತ್ತಿಯ ದುಬಾರಿ ಆಟಗಾರ ಎನಿಸಿದರು.

2012, ರವೀಂದ್ರ ಜಡೇಜಾ

2012, ರವೀಂದ್ರ ಜಡೇಜಾ

2012ರ ಆವೃತ್ತಿಗೂ ಮುನ್ನ ನಡೆದ ಹರಾಜಿನಲ್ಲಿ ರವೀಂದ್ರ ಜಡೇಜಾ 12.8 ಕೋಟಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗುವ ಮೂಲಕ ಆ ಆವೃತ್ತಿಯ ದುಬಾರಿ ಆಟಗಾರ ಎನಿಸಿಕೊಂಡರು. ಜಡೇಜಾ ಈಗಲೂ ಸಿಎಸ್‌ಕೆ ತಂಡದ ಪ್ರಮುಖ ಭಾಗವಾಗಿದ್ದಾರೆ.

2013, ಗ್ಲೆನ್ ಮ್ಯಾಕ್ಸ್‌ವೆಲ್

2013, ಗ್ಲೆನ್ ಮ್ಯಾಕ್ಸ್‌ವೆಲ್

2013ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಮುಂಬೈ ಇಂಡಿಯನ್ಸ್ 6.3 ಕೋಟಿ ನೀಡಿ ಖರೀದಿಸುವ ಮೂಲಕ ಆ ಆವೃತ್ತಿಯಲ್ಲಿ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರ ಎನಿಸಿಕೊಂಡಿದ್ದಾರೆ.

2014, ಯುವರಾಜ್ ಸಿಂಗ್

2014, ಯುವರಾಜ್ ಸಿಂಗ್

ಈ ಆವೃತ್ತಿಯಲ್ಲಿ ಟೀಮ್ ಇಂಡಿಯಾದ ಆಲ್‌ರೌಂಡರ್ ಯುವರಾಜ್ ಸಿಂಗ್ 14 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾದರು. ಇದು 2014ರ ಆವೃತ್ತಿಯ ದುಬಾರಿ ಹರಾಜು ಎನಿಸಿಕೊಂಡಿದೆ.

2015, ಯುವರಾಜ್ ಸಿಂಗ್

2015, ಯುವರಾಜ್ ಸಿಂಗ್

2015ರ ಆವೃತ್ತಿಗೆ ಆರ್‌ಸಿಬಿ ಯುವರಾಜ್ ಸಿಂಗ್ ಅವರನ್ನು ಹರಾಜಿಗೆ ಬಿಡುಗಡೆಗೊಳಿಸಿದ ಕಾರಣ ಮತ್ತೊಮ್ಮೆ ಹರಾಜಿಗೆ ಬಂದರು. ಈ ಆವೃತ್ತಿಯಲ್ಲಿ ದಾಖಲೆಯ 16 ಕೋಟಿ ಮೊತ್ತಕ್ಕೆ ಡೆಲ್ಲಿ ಡೇರ್‌ಡೆವಿಲ್ಸ್(ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದ ಪಾಲಾದರು.

2016, ಶೇನ್ ವಾಟ್ಸನ್

2016, ಶೇನ್ ವಾಟ್ಸನ್

2016ರಲ್ಲಿ ಆರ್‌ಸಿಬಿ ತಂಡ ಶೇನ್ ವಾಟ್ಸನ್ ಅವರನ್ನು 9.5 ಕೊಟಿ ನೀಡಿ ಖರೀದಿಸಿತು. ಈ ಮೂಲಕ ಆ ಆವೃತ್ತಿಯ ಅತ್ಯಂತ ದಿಬಾರಿ ಆಟಗಾರನಾಗಿ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್‌ ಹೊರಹೊಮ್ಮಿದ್ದರು.

2017, ಬೆನ್ ಸ್ಟೋಕ್ಸ್

2017, ಬೆನ್ ಸ್ಟೋಕ್ಸ್

2017ರ ಆವೃತ್ತಿಯ ಹರಾಜಿನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ ಬೆನ್ ಸ್ಟೋಕ್ಸ್ ಅವರನ್ನು 14.5 ಕೋಟಿ ನೀಡಿ ಖರೀದಿಸಿತ್ತು.

2018, ಬೆನ್ ಸ್ಟೋಕ್ಸ್

2018, ಬೆನ್ ಸ್ಟೋಕ್ಸ್

ಯುವರಾಜ್ ಸಿಂಗ್ ಬಳಿಕ ಸತತ ಎರಡನೇ ಬಾರಿಗೆ ಅತ್ಯಂತ ದುಬಾರಿ ಮೊತ್ತಕ್ಕೆ ಹಾರಾಜಾದ ಆಟಗಾರ ಎನಿಸಿಕೊಂಡಿದ್ದಾರೆ ಬೆನ್ ಸ್ಟೋಕ್ಸ್. 2018ರಲ್ಲಿ ಇವರು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 12.5 ಕೋಟಿ ಮೊತ್ತಕ್ಕೆ ಹರಾಜಾದರು.

2019, ಜಯ್‌ದೇವ್ ಉನಾದ್ಕಟ್ ಹಾಗೂ ವರುಣ್ ಚಕ್ರವರ್ತಿ

2019, ಜಯ್‌ದೇವ್ ಉನಾದ್ಕಟ್ ಹಾಗೂ ವರುಣ್ ಚಕ್ರವರ್ತಿ

2019ರಲ್ಲಿ ಭಾರತದ ಆಟಗಾರರಾದ ಜಯ್‌ದೇವ್ ಉನಾದ್ಕಟ್ ಹಾಗೂ ವರುಣ್ ಚಕ್ರವರ್ತಿ ಅತ್ಯಂತ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದರು. ಉನಾದ್ಕಟ್ ಅವರನ್ನು ರಾಜಸ್ಥಾನ್ ರಾಯಲ್ಸ್ ಹಾಗೂ ವರುಣ್ ಚಕ್ರವರ್ತಿ ಅವರನ್ನು ಪಂಜಾಬ್ ಕಿಂಗ್ಸ್ ತಲಾ 8.4 ಕೋಟಿ ನೀಡಿ ಖರೀದಿಸಿತ್ತು.

2020, ಪ್ಯಾಟ್ ಕಮ್ಮಿನ್ಸ್

2020, ಪ್ಯಾಟ್ ಕಮ್ಮಿನ್ಸ್

2020ರ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಆಸಿಸ್ ವೇಗಿ ಪ್ಯಾಟ್ ಕಮ್ಮಿನ್ಸ್‌ಗಾಗಿ ಬರೊಬ್ಬರಿ 15.5 ಕೋಟಿ ನೀಡಿ ಖರೀಸಿತ್ತು. ಈ ಮೂಲಕ ಆ ಆವೃತ್ತಿಯ ದುಬಾರಿ ಆಟಗಾರ ಎನಿಸಿಕೊಂಡರು ಆಸಿಸ್ ಸ್ಟಾರ್ ವೇಗಿ.

2021, ಕ್ರಿಸ್ ಮೋರಿಸ್

2021, ಕ್ರಿಸ್ ಮೋರಿಸ್

ದಕ್ಷಿಣ ಆಫ್ರಿಕಾದ ಬೌಲಿಂಗ್ ಆಲ್‌ರೌಂಡರ್ ಕ್ರಿಸ್ ಮೋರಿಸ್ ಅವರನ್ನು ರಾಜಸ್ಥಾನ್ ರಾಯಲ್ಸ್ 2021ರ ಆವೃತ್ತಿಯ ಹರಾಜಿನಲ್ಲಿ ಬರೊಬ್ಬರಿ 16.25 ಕೋಟಿ ನೀಡಿ ಖರೀದಿಸಿತ್ತು. ಈ ಮೂಲಕ ದಾಖಲೆಯ ಮೊತ್ತಕ್ಕೆ ಹಾರಾಜಾದರು ಕ್ರಿಸ್ ಮೋರಿಸ್.

2022, ಇಶಾನ್ ಕಿಶನ್

2022, ಇಶಾನ್ ಕಿಶನ್

ಮೆಗಾ ಹರಾಜಿಗೂ ಮುನ್ನ ಬಿಡುಗಡೆ ಮಾಡಿದ್ದ ಇಶಾನ್ ಕಿಶನ್ ಅವರನ್ನು ಮತ್ತೆ ತಂಡಕ್ಕೆ ಸೇರ್ಪಡೆಗೊಳಿಸಲು ಮುಂಬೈ ಇಂಡಿಯನ್ಸ್ ಬರೊಬ್ಬರಿ 15.25 ಕೋಟಿ ನೀಡಿಬೇಕಾಯಿತು. ಈ ಮೂಲಕ ಮೆಗಾ ಹರಾಜಿನ ಅತ್ಯಂತ ದುಬಾರಿ ಆಟಗಾರ ಎನಿಸಿದರು ಇಶಾನ್ ಕಿಶನ್.

2023, ಸ್ಯಾಮ್ ಕರನ್

2023, ಸ್ಯಾಮ್ ಕರನ್

ಇನ್ನು ಇಂಗ್ಲೆಂಡ್ ತಂಡದ ಯುವ ಆಲ್‌ರೌಂಡರ್ ಸ್ಯಾಮ್ ಕರನ್ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಸ್ಯಾಮ್ ಕರನ್ ಬರೊಬ್ಬರಿ 18.50 ಕೋಟಿಗೆ ಹರಾಜಾಗುವ ಮೂಲಕ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಸ್ಯಾಮ್ ಕರನ್‌ಗಾಗಿ ಪಂಜಾಬ್ ಕಿಂಗ್ಸ್ ಈ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದೆ.

Story first published: Saturday, December 24, 2022, 14:26 [IST]
Other articles published on Dec 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X