ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಫೈನಲ್ 2019: ವಿಜೇತ ತಂಡಕ್ಕೆ ಭರ್ಜರಿ ನಗದು ಬಹುಮಾನ

IPL 2019 : ಗೆದ್ದ ತಂಡದ ಜೊತೆಗೆ ಸೋತ ತಂಡಕ್ಕೂ ಸಿಕ್ತು ಭರ್ಜರಿ ದುಡ್ಡು..? | Oneindia kannada
IPL Final 2019: Prize money on offer and all the other awards

ಹೈದರಾಬಾದ್, ಮೇ 12: ವಿಶ್ವದ ಶ್ರೀಮಂತ ಕ್ರಿಕೆಟ್ ಪಂದ್ಯಾವಳಿಯಾಗಿ ಗುರುತಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮ ಘಟ್ಟಕ್ಕೆ ಸಮೀಪಿಸಿದೆ. ಭಾನುವಾರ (ಮೇ 12) ಹೈದರಾಬಾದ್‌ನಲ್ಲಿ ನಡೆಯುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್ ತಂಡಗಳು ಕಾದಾಡುತ್ತಿವೆ.

ಐಪಿಎಲ್ ಫೈನಲ್‌: ಚೆನ್ನೈ vs ಮುಂಬೈ, ಕುತೂಹಲಕಾರಿ ಅಂಕಿ-ಅಂಶಗಳು!ಐಪಿಎಲ್ ಫೈನಲ್‌: ಚೆನ್ನೈ vs ಮುಂಬೈ, ಕುತೂಹಲಕಾರಿ ಅಂಕಿ-ಅಂಶಗಳು!

ಅಂತಿಮ ಸುತ್ತಿನಲ್ಲಿ ಮುಖಾಮುಖಿಯಾಗುತ್ತಿರುವ ಎರಡೂ ತಂಡಗಳೂ ಈ ವರೆಗೆ ತಲಾ 3 ಸಾರಿ ಟ್ರೋಫಿ ಗೆದ್ದಿವೆ. ಹೀಗಾಗಿ 2019ರ ಚಾಂಪಿಯನ್‌ ತಂಡ ಐಪಿಎಲ್ (ಈವರೆಗಿನ) ಇತಿಹಾಸದಲ್ಲೇ ಅತೀ ಬಲಿಷ್ಠ ತಂಡವಾಗಿ ಹೊರಹೊಮ್ಮಲಿದೆ.

ಐಪಿಎಲ್: 'ಬಲ್ ಅಪರೂಪ'ದ ಕ್ಷಣಕ್ಕೆ ಸಾಕ್ಷಿಯಾದ ಪಂತ್-ರೈನಾ-ವಿಡಿಯೋಐಪಿಎಲ್: 'ಬಲ್ ಅಪರೂಪ'ದ ಕ್ಷಣಕ್ಕೆ ಸಾಕ್ಷಿಯಾದ ಪಂತ್-ರೈನಾ-ವಿಡಿಯೋ

ಟೂರ್ನಿಯಲ್ಲಿ ವಿನ್ನರ್, ರನ್ನರ್ ಜೊತೆ ಇನ್ನಿತರ ವಿಭಾಗಗಳಲ್ಲೂ ಆಟಗಾರರನ್ನು ಗುರುತಿಸಿ ಅವರಿಗೆ ಬಹುಮಾನ ನೀಡಲಾಗುತ್ತದೆ. ಈ ಬಾರಿ ತಂಡ ಗೆಲ್ಲುವ ನಗದು ಪುರಸ್ಕಾರ, ಹಿಂದಿನ ಆವೃತ್ತಿಗಳಲ್ಲಿ ವಿಶೇಷ ಪ್ರಶಸ್ತಿ ಪಡೆದುಕೊಂಡವರ ಮಾಹಿತಿ ಇಲ್ಲಿವೆ.

ಚಾಂಪಿಯನ್‌ಗೆ 25 ಕೋ.ರೂ. ನಗದು

ಚಾಂಪಿಯನ್‌ಗೆ 25 ಕೋ.ರೂ. ನಗದು

ನಗದು ಶ್ರೀಮಂತ ಪಂದ್ಯಾಟ ಐಪಿಎಲ್‌ನಲ್ಲಿ ಈ ಸಾರಿ ಟ್ರೋಫಿ ಗೆಲ್ಲುವ ತಂಡಕ್ಕೆ ಒಟ್ಟು 20 ಕೋ.ರೂ. ನಗದು ಪುರಸ್ಕಾರ ಲಭಿಸಲಿದೆ. ಇದರಲ್ಲಿ ಶೇ. 50 ಫ್ರಾಂಚೈಸಿಗೆ ಹೋದರೆ ಇನ್ನುಳಿದ 50 ಶೇ. ಗೆಲ್ಲೋ ತಂಡದ ಆಟಗಾರರ ಮಧ್ಯೆ ಹಂಚಲಾಗುತ್ತದೆ.

ರನ್ನರ್ಸ್ ತಂಡಕ್ಕೂ ದೊಡ್ಡಮೊತ್ತ

ರನ್ನರ್ಸ್ ತಂಡಕ್ಕೂ ದೊಡ್ಡಮೊತ್ತ

ಇನ್ನು ರನ್ನರ್ಸ್ ತಂಡವೂ ದೊಡ್ಡ ಮೊತ್ತದ ಅಂದರೆ 12.5 ಕೋ.ರೂ. ಪಡೆದುಕೊಳ್ಳಲಿದೆ. ಮೂರನೇ ಸ್ಥಾನಿ ಮತ್ತು ನಾಲ್ಕನೇ ಸ್ಥಾನಿ ತಂಡವೂ ನಗದು ಪುರಸ್ಕಾರ ಪಡೆದುಕೊಳ್ಳಲಿದ್ದು ಅವುಗಳಿಗೆ ಕ್ರಮವಾಗಿ 10.5 ಕೋ.ರೂ ಮತ್ತು 8.5 ಕೋ.ರೂ.ಗಳನ್ನು ಪಡೆದುಕೊಳ್ಳಲಿದೆ.

ಎಮರ್ಜಿಂಗ್ ಪ್ಲೇಯರ್

ಎಮರ್ಜಿಂಗ್ ಪ್ಲೇಯರ್

1993 ಏಪ್ರಿಲ್ 1ರ ನಂತರ ಜನಿಸಿ, 5ಕಿಂತ ಕಡಿಮೆ ಟೆಸ್ಟ್ ಪಂದ್ಯ ಅಥವಾ 20ಕ್ಕೂ ಕಡಿಮೆ ಅಂತಾರಾಷ್ಟ್ರೀಯ ಏಕದಿನ ಪಂದ್ಯ, 25ಕ್ಕೂ ಕಡಿಮೆ ಐಪಿಎಲ್ ಪಂದ್ಯಗಳನ್ನಾಡಿದ ಆಟಗಾರನನ್ನು ಈ ವಿಭಾಗದ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಹಿಂದಿನ ಆವೃತ್ತಿಗಳಲ್ಲಿ ಎಮರ್ಜಿಂಗ್ ಪ್ಲೇಯರ್ ಆಗಿ ಗುರುತಿಸಿಕೊಂಡವರ ಪಟ್ಟಿ ಇಲ್ಲಿದೆ.
2008 - ಶ್ರೀವತ್ಸ್ ಗೋಸ್ವಾಮಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು),
2009 - ರೋಹಿತ್ ಶರ್ಮಾ (ಡೆಕ್ಕನ್ ಚಾರ್ಜರ್ಸ್)
2010 - ಸೌರಭ್ ತಿವಾರಿ (ಮುಂಬಯಿ ಇಂಡಿಯನ್ಸ್)
2011 - ಇಕ್ಬಾಲ್ ಅಬ್ದುಲ್ಲಾ (ಕೋಲ್ಕತಾ ನೈಟ್ ರೈಡರ್ಸ್)
2012 - ಮಂದೀಪ್ ಸಿಂಗ್ (ಕಿಂಗ್ಸ್ XI ಪಂಜಾಬ್)
2013 - ಸಂಜು ಸ್ಯಾಮ್ಸನ್ (ರಾಜಸ್ಥಾನ್ ರಾಯಲ್ಸ್)
2014 - ಅಕ್ಸರ್ ಪಟೇಲ್ (ಕಿಂಗ್ಸ್ XI ಪಂಜಾಬ್)
2015 - ಶ್ರೇಯಸ್ ಐಯ್ಯರ್ (ಡೆಲ್ಲಿ ಡೇರ್ ಡೆವಿಲ್ಸ್)
2016 - ಮುಸ್ತಾಫಿಜರ್ ರೆಹಮಾನ್ (ಸನ್ರೈಸರ್ಸ್ ಹೈದರಾಬಾದ್)
2017 - ಬೆಸಿಲ್ ತಂಪಿ (ಗುಜರಾತ್ ಲಯನ್ಸ್)
2018 - ರಿಷಬ್ ಪಂತ್ (ಡೆಲ್ಲಿ ಡೇರ್ ಡೆವಿಲ್ಸ್)

ಆರೆಂಜ್ ಕ್ಯಾಪ್

ಆರೆಂಜ್ ಕ್ಯಾಪ್

ಟೂರ್ನಿಯಲ್ಲಿ ಅತ್ಯಧಿಕ ರನ್‌ಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಸಾರಿ ಈ ಪ್ರಶಸ್ತಿ ಸನ್ ರೈಸರ್ಸ್ ಹೈದರಾಬಾದ್‌ನ ಡೇವಿಡ್ ವಾರ್ನರ್ ಪಾಲಾಗುವುದರಲ್ಲಿದೆ. ವಾರ್ನರ್ 12 ಇನ್ನಿಂಗ್ಸ್‌ಗಳಲ್ಲಿ 692 ರನ್ ಕಲೆ ಹಾಕಿದ್ದಾರೆ. ಇದಕ್ಕೆ 10 ಲಕ್ಷ ರೂ. ಬಹುಮಾನ.
2008 - ಶಾನ್ ಮಾರ್ಷ್ (ಕಿಂಗ್ಸ್ XI ಪಂಜಾಬ್)
2009 - ಮ್ಯಾಥ್ಯೂ ಹೇಡನ್ (ಚೆನ್ನೈ ಸೂಪರ್ ಕಿಂಗ್ಸ್)
2010 - ಸಚಿನ್ ತೆಂಡುಲ್ಕರ್ (ಮುಂಬಯಿ ಇಂಡಿಯನ್ಸ್)
2011 - ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
2012 - ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
2013 - ಮೈಕೆಲ್ ಹಸ್ಸಿ (ಚೆನ್ನೈ ಸೂಪರ್ ಕಿಂಗ್ಸ್)
2014 - ರಾಬಿನ್ ಉತ್ತಪ್ಪ (ಕೊಲ್ಕತ್ತಾ ನೈಟ್ ರೈಡರ್ಸ್)
2015 - ಡೇವಿಡ್ ವಾರ್ನರ್ (ಸನ್ರೈಸರ್ಸ್ ಹೈದರಾಬಾದ್)
2016 - ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
2017 - ಡೇವಿಡ್ ವಾರ್ನರ್ (ಸನ್ರೈಸರ್ಸ್ ಹೈದರಾಬಾದ್)
2018 - ಕೇನ್ ವಿಲಿಯಮ್ಸನ್ (ಸನ್ರೈಸರ್ಸ್ ಹೈದರಾಬಾದ್)

ಪರ್ಪಲ್ ಕ್ಯಾಪ್

ಪರ್ಪಲ್ ಕ್ಯಾಪ್

ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರು ಈ ಪ್ರಶಸ್ತಿ ಪಡೆದುಕೊಳ್ಳುತ್ತಾರೆ. ಕೇವಲ 12 ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ನ ಕಾಗಿಸೋ ರಬಾಡಾ ಸದ್ಯ ಮುಂಚೂಣಿಯಲ್ಲಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಇಮ್ರಾನ್ ತಾಹಿರ್ (16 ಪಂದ್ಯಗಳಲ್ಲಿ 24 ವಿಕೆಟ್) ಮೇಲುಗೈ ಸಾಧಿಸುವ ನಿರೀಕ್ಷೆಯಿದೆ. ಈ ಪ್ರಶಸ್ತಿಗೆ 10 ಲಕ್ಷ ರೂ. ಪುರಸ್ಕಾರವಿದೆ.
2008 - ಸೊಹೈಲ್ ತನ್ವೀರ್ (ರಾಜಸ್ಥಾನ್ ರಾಯಲ್ಸ್)
2009 - ಆರ್ ಪಿ ಸಿಂಗ್ (ಡೆಕ್ಕನ್ ಚಾರ್ಜರ್ಸ್)
2010 - ಪ್ರಗ್ಯಾನ್ ಓಜಾ (ಡೆಕ್ಕನ್ ಚಾರ್ಜರ್ಸ್)
2011 - ಲಸಿತ್ ಮಾಲಿಂಗ (ಮುಂಬಯಿ ಇಂಡಿಯನ್ಸ್)
2012 - ಮಾರ್ನೆ ಮೊರ್ಕೆಲ್ (ಡೆಲ್ಲಿ ಡೇರ್ ಡೆವಿಲ್ಸ್)
2013 - ಡ್ವೇನ್ ಬ್ರಾವೋ (ಚೆನ್ನೈ ಸೂಪರ್ ಕಿಂಗ್ಸ್)
2014 - ಮೋಹಿತ್ ಶರ್ಮಾ (ಚೆನ್ನೈ ಸೂಪರ್ ಕಿಂಗ್ಸ್)
2015 - ಡ್ವೇನ್ ಬ್ರಾವೋ (ಚೆನ್ನೈ ಸೂಪರ್ ಕಿಂಗ್ಸ್)
2016 - ಭುವನೇಶ್ವರ ಕುಮಾರ್ (ಸನ್ರೈಸರ್ಸ್ ಹೈದರಾಬಾದ್)
2017 - ಭುವನೇಶ್ವರ ಕುಮಾರ್ (ಸನ್ರೈಸರ್ಸ್ ಹೈದರಾಬಾದ್)
2018 - ಆಂಡ್ರ್ಯೂ ಟೈ (ಕಿಂಗ್ಸ್ XI ಪಂಜಾಬ್)

ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್

ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್

ಸೀಸನ್‌ನಲ್ಲಿ ತಂಡದ ಗೆಲುವಿಗಾಗಿ ಹೋರಾಡುವ ಆಟಗಾರರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
2008 - ಶೇನ್ ವ್ಯಾಟ್ಸನ್ (ರಾಜಸ್ಥಾನ್ ರಾಯಲ್ಸ್)
2009 - ಆಡಮ್ ಗಿಲ್‌ಕ್ರಿಸ್ಟ್ (ಡೆಕ್ಕನ್ ಚಾರ್ಜರ್ಸ್)
2010 - ಜಾಕ್ ಕ್ಯಾಲೀಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
2011 - ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
2012 - ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
2013 - ಶೇನ್ ವ್ಯಾಟ್ಸನ್ (ರಾಜಸ್ಥಾನ್ ರಾಯಲ್ಸ್)
2014 - ಗ್ಲೆನ್ ಮ್ಯಾಕ್ಸ್‌ವೆಲ್ (ಕಿಂಗ್ಸ್ XI ಪಂಜಾಬ್)
2015 - ಆ್ಯಂಡ್ರೆ ರಸೆಲ್ (ಕೋಲ್ಕತಾ ನೈಟ್ ರೈಡರ್ಸ್)
2016 - ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
2017 - ಬೆನ್ ಸ್ಟೋಕ್ಸ್ (ರೈಸಿಂಗ್ ಪುಣೆ ಸೂಪರ್ಜೆಟ್)
2018 - ಸುನಿಲ್ ನರೇನ್ (ಕೋಲ್ಕತಾ ನೈಟ್ ರೈಡರ್ಸ್)

Story first published: Monday, May 13, 2019, 10:38 [IST]
Other articles published on May 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X