ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಅತೀ ಪ್ರಮುಖ ನಿರ್ಧಾರಕ್ಕೆ ಮುಂದಾಗಿದೆ ಆಡಳಿತ ಸಮಿತಿ!

IPL 2020 : seperate umpire for calling NO ball from next season
IPL gets nod for friendlies abroad, separate umpire for no-balls

ಬೆಂಗಳೂರು, ನವೆಂಬರ್ 6: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ವಿವಾದದಲ್ಲಿ ತಳುಕು ಹಾಕಿಕೊಂಡಿದ್ದರು. ಅಸಲಿಗೆ ಅದು ಕೊಹ್ಲಿಯಿಂದಾದ ತಪ್ಪಾಗಿರಲಿಲ್ಲ, ಅಂಪೈರ್‌ನಿಂದಾದ ಎಡವಟ್ಟು ಕೊಹ್ಲಿಯನ್ನು ಸಿಟ್ಟಿಗೇಳಿಸಿಬಿಟ್ಟಿತ್ತು.

ಐಪಿಎಲ್‌ನಲ್ಲಿ ಇನ್ಮುಂದೆ ಬರಲಿದ್ದಾರೆ ಗೇಮ್ ಚೇಂಜರ್ 'ಪವರ್ ಪ್ಲೇಯರ್‌'!ಐಪಿಎಲ್‌ನಲ್ಲಿ ಇನ್ಮುಂದೆ ಬರಲಿದ್ದಾರೆ ಗೇಮ್ ಚೇಂಜರ್ 'ಪವರ್ ಪ್ಲೇಯರ್‌'!

ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳ ಮುಖಾಮುಖಿಯಲ್ಲಿ ಎಂಐ ವೇಗಿ ಲಸಿತ್ ಮಾಲಿಂಗ ಅವರ ಕೊನೇ ಎಸೆತ ನೋ ಬಾಲ್ ಆಗಿದ್ದನ್ನು ಫೀಲ್ಡ್ ಅಂಪೈರ್ ಗಮನಿಸಿರಲಿಲ್ಲ. ಮುಂಬೈ ಇಂಡಿಯನ್ ತಂಡ ಪಂದ್ಯ ಗೆದ್ದಿತ್ತಾದರೂ ರಿವ್ಯೂನಲ್ಲಿ ಮಾಲಿಂಗ ತಪ್ಪು ಕಂಡು ಬಂದಿತ್ತು.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2020 ವೇಳಾಪಟ್ಟಿಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2020 ವೇಳಾಪಟ್ಟಿ

ಅಂದಿನ ಆ ಪಂದ್ಯ ಐಪಿಎಲ್‌ ಪಾಲಿಗೆ ಕಪ್ಪು ಚುಕ್ಕೆಯಾಗಿ ಕಾಣಿಸಿತ್ತು. 'ಇದೇನು ಗಲ್ಲಿ ಕ್ರಿಕೆಟ್ಟ?' ಅಂತ ವಿರಾಟ್ ಕೊಹ್ಲಿ ಅಂಪೈರ್‌ನತ್ತ ಬೊಟ್ಟು ಮಾಡಿ ಸಿಟ್ಟು ಹೊರ ಹಾಕಿದ್ದರು.

ಕಣ್ಣು ತೆರೆದಿರಬೇಕು

ಕಣ್ಣು ತೆರೆದಿರಬೇಕು

ನೋ ಬಾಲ್ ಗಮನಿಸಿದ ಅಂಪೈರ್ ವಿರುದ್ಧ ಸಿಡುಕಾಡಿದ್ದ ಕೊಹ್ಲಿ, 'ಅಪೈರ್‌ಗಳು ಕಣ್ಣು ತೆರೆದಿರಬೇಕು,' ಎಂದು ಅಸಮಾಧಾನ ತೋರಿಕೊಂಡಿದ್ದರು. ಅಂದಾಗಿದ್ದ ವಿವಾದ ಐಪಿಎಲ್ ಆಡಳಿತ ಸಮಿತಿಯನ್ನು ಎಚ್ಚರಿಸಿದೆ. ಐಪಿಎಲ್‌ನಲ್ಲಿನ್ನು ನೋ ಬಾಲ್ ಅಂಪೈರ್‌ ಅನ್ನು ತರುವ ಯೋಜನೆಯಲ್ಲಿ ಆಡಳಿತ ಸಮಿತಿಯಿದೆ.

ಫೋರ್ತ್ ಅಂಪೈರ್‌!

ಫೋರ್ತ್ ಅಂಪೈರ್‌!

ನೋ ಬಾಲ್‌ನಿಂದ ಹುಟ್ಟುವ ವಿವಾದ ತಡೆಯಲು ಐಪಿಎಲ್‌ ಗವರ್ನಿಂಗ್ ಕಮಿಟಿ (ಜಿಸಿ), 'ನೋ ಬಾಲ್‌ ಅಂಪೈರ್‌' ಅನ್ನು ಮುಂದಿನ ಐಪಿಎಲ್‌ ಆವೃತ್ತಿಯಿಂದ ಜವಾಬ್ದಾರಿಗಿಳಿಸಲಿದೆ. 'ತಂತ್ರಜ್ಞಾನ ಇದ್ದಾಗ ನಾವದನ್ನು ಬಳಸಿಕೊಳ್ಳಬೇಕು. ಹೀಗಾಗಿ ಥರ್ಡ್ ಅಂಪೈರ್‌ನಂತೆ ನೋ ಬಾಲ್‌ಗಾಗಿಯೇ ವಿಶೇಷ ಅಂಪೈರ್‌ ಅನ್ನು ಪರಿಚಯಿಸಲಿದ್ದೇವೆ,' ಎಂದು ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.

ನಿಯಮ ಸಡಿಲಿಸಿದ ಬಿಸಿಸಿಐ

ನಿಯಮ ಸಡಿಲಿಸಿದ ಬಿಸಿಸಿಐ

ಬ್ರ್ಯಾಂಡ್‌ ಪ್ರಚಾರಾರ್ಥವಾಗಿ ವಿದೇಶಿ ಸೌಹಾರ್ದ ಟೂರ್ನಿಗಳಲ್ಲಿ ಭಾಗವಹಿಸಬೇಕೆನ್ನುವ ಐಪಿಎಲ್ ಫ್ರಾಂಚೈಸಿಗಳ ಕೋರಿಕೆಗೂ ಬಿಸಿಸಿಐ ಗ್ರೀನ್‌ ಸಿಗ್ನಲ್ ನೀಡಿದೆ. ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮುಂದಾಳತ್ವದ ಬಿಸಿಸಿಐ, ಭಾರತದ ಕ್ರಿಕೆಟ್ ಫ್ರಾಂಚೈಸಿಗಳ ವಿದೇಶಿ ಪಾಲ್ಗೊಳ್ಳುವಿಕೆ ಬಗೆಗಿದ್ದ ಕಠಿಣ ನಿಯಮವನ್ನು ಸಡಿಲಿಸಿದೆ.

ಫ್ರೆಂಡ್ಲಿ ಪಂದ್ಯಗಳಿಗೆ ಅನುಮತಿ

ಫ್ರೆಂಡ್ಲಿ ಪಂದ್ಯಗಳಿಗೆ ಅನುಮತಿ

'ಐಪಿಎಲ್‌ನಲ್ಲಿ ನಾವು ಕೇವಲ ಎರಡು ತಿಂಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತೇವೆ. ಅದಾಗಿ ಫ್ರಾಂಚೈಸಿಗಳಿಗೆ ಬೇರೆ ಚಟುವಟಿಕೆಗಳಿರೋಲ್ಲ. ಹೀಗಾಗಿ ವಿದೇಶಿ ಫ್ರೆಂಡ್ಲಿ ಪಂದ್ಯಗಳಿಗಾಗಿ ಐಪಿಎಲ್ ಫ್ರಾಂಚೈಸಿಗಳಿಗೆ ಅನುಮತಿ ನೀಡಲಾಗಿದೆ,' ಎಂದು ಐಪಿಎಲ್ ಆಡಳಿತ ಸಮಿತಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Story first published: Wednesday, November 6, 2019, 12:30 [IST]
Other articles published on Nov 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X