ಐಪಿಎಲ್ ಲೀಗ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಪಾಯ; ಐಸಿಸಿ ಅಧ್ಯಕ್ಷ

ಹದಿನೈದನೇ ಐಪಿಎಲ್ 2022ರ ಫೈನಲ್ ಇಂದು (ಭಾನುವಾರ ಮೇ 29) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಸೀಸನ್ ತನ್ನ ಅಂತಿಮ ಹಂತವನ್ನು ತಲುಪಿದ್ದು, 74 ದಿನಗಳ ಸುದೀರ್ಘ ಪಂದ್ಯಾವಳಿ ಮುಗಿಯಲಿದೆ. ಪ್ರಸಕ್ತ ಋತುವಿನಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಫೈನಲ್ ಫೈಟ್ ನಡೆಸಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಮತ್ತು ಶ್ರೀಮಂತ ಟಿ20 ಲೀಗ್ ಆಗಿದೆ. ಈ ಟೂರ್ನಿಯಲ್ಲಿ ವಿಶ್ವದ ಹಲವು ಕ್ರಿಕೆಟಿಗರು ವಿವಿಧ ಪ್ರಾಂಚೈಸಿಗಳ ಪರವಾಗಿ ಆಡುತ್ತಾರೆ. ಆದರೆ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಐಪಿಎಲ್ ಲೀಗ್ ಕುರಿತು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಐಪಿಎಲ್ ಅಪಾಯ ತಂದೊಡ್ಡಬಹುದು ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲಿ ಎಚ್ಚರಿಕೆ ನೀಡಿದ್ದಾರೆ. ಐಪಿಎಲ್‌ನಂತಹ ಟಿ20 ಲೀಗ್‌ಗಳ ಅವಧಿ ಹೆಚ್ಚಾದರೆ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಐಪಿಎಲ್ ಋತುವಿನಲ್ಲಿ ಎರಡು ಹೊಸ ತಂಡಗಳು ಸೇರಿಕೊಂಡಿವೆ. ಈ ಮೂಲಕ ಟೂರ್ನಿಯ ಒಟ್ಟು ಪಂದ್ಯಗಳ ಸಂಖ್ಯೆ ಈಗ 74ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಈ ಋತುವಿನ ಅವಧಿಯೂ ಎರಡು ತಿಂಗಳಿಗಿಂತ ಹೆಚ್ಚಾಗಿದೆ.

ಐಪಿಎಲ್‌ನಂತಹ ಟಿ20 ಲೀಗ್‌ಗಳು ಐಸಿಸಿ ಸದಸ್ಯ ರಾಷ್ಟ್ರಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಅವರು ತಮಗೆ ಇಷ್ಟ ಬಂದಂತೆ ಆಡಬಹುದು. ಆದರೆ ಅಂತಹ ಸ್ಪರ್ಧೆಗಳ ಅವಧಿಯನ್ನು ಹೆಚ್ಚಿಸಿದರೆ ಮತ್ತು ದೀರ್ಘ ಕಾಲದವರೆಗೆ ನಡೆಸಿದರೆ, ಮುಂದಿನ ದಿನಗಳಲ್ಲಿ ದೇಶಗಳ ದ್ವಿಪಕ್ಷೀಯ ಸರಣಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂತಾರಾಷ್ಟ್ರೀಯ ಪಂದ್ಯಗಳ ಸಂಖ್ಯೆಯು ಸ್ಥಿರವಾಗಿ ಕುಸಿಯುತ್ತದೆ ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಹೇಳಿದರು.

ಅಲ್ಲದೇ ವರ್ಷದಲ್ಲಿ ಕೇವಲ 365 ದಿನಗಳು. ಆಟಗಾರರನ್ನು ಸೆಳೆಯುವ ಕ್ರಿಕೆಟ್ ಲೀಗ್‌ಗಳ ಸಂಖ್ಯೆ ಹೆಚ್ಚಾದರೆ, ಇತರ ಟೂರ್ನಿಗಳು ಅಥವಾ ದ್ವಿಪಕ್ಷೀಯ ಸರಣಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗುತ್ತದೆ. ಈ ಲೀಗ್ ಐಸಿಸಿ ಟೂರ್ನಿಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ವರ್ಷ ಐಸಿಸಿ ಟೂರ್ನಿಗಳು ನಡೆಯುವುದರಲ್ಲಿ ಕಡಿಮೆ ಆಗಲಿದೆ ಎಂದರು.

ದ್ವಿಪಕ್ಷೀಯ ಸರಣಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೂ, ಐಪಿಎಲ್ ಟೂರ್ನಿಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳ ನಂತರ ಭಾರತಕ್ಕೆ ಐಪಿಎಲ್ ಸಿಕ್ಕಿರುವುದು ಸಂತಸ ತಂದಿದೆ. ಐಪಿಎಲ್ ನನ್ನ ನೆಚ್ಚಿನ ಕ್ರಿಕೆಟ್ ಲೀಗ್. ಬಿಸಿಸಿಐ ಈ ಕ್ರಿಕೆಟ್‌ಗಾಗಿ ಸಾಕಷ್ಟು ಕೆಲಸ ಮಾಡಿದೆ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Sunday, May 29, 2022, 23:01 [IST]
Other articles published on May 29, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X