ಐಪಿಎಲ್: ಎಲ್ಲಾ ಆವೃತ್ತಿಗಳಲ್ಲಿ ಆರೆಂಜ್‌ ಕ್ಯಾಪ್ ಗೆದ್ದವರ ಸಂಪೂರ್ಣ ಪಟ್ಟಿ

ಬೆಂಗಳೂರು: ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ಕೆಲವೇ ದಿನಗಳ ಬಾಕಿಯಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಗದು ಶ್ರೀಮಂತ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಯುಎಇಯ ದುಬೈ, ಶಾರ್ಜಾ, ಅಬುಧಾಬಿ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಆಡಲಿವೆ.

ಐಪಿಎಲ್ 2020: ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ!

ಈ ಬಾರಿ ಯುಎಇಯಲ್ಲಿ ನಡೆಯುತ್ತಿರುವುದು 13ನೇ ಆವೃತ್ತಿ. ಅಂದರೆ ನಾವು ಈಗಾಗಲೇ 12 ಐಪಿಎಲ್ ಆವೃತ್ತಿಗಳನ್ನು ಕಂಡಿದ್ದೇವೆ. ಪ್ರತೀ ಐಪಿಎಲ್‌ನಲ್ಲೂ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಿರುತ್ತವೆ.

ರಶೀದ್ ಖಾನ್‌ ಕೆಣಕಿದ ಆ್ಯಂಡ್ರೆ ರಸೆಲ್: ತಮಾಷೆಯ ವಿಡಿಯೋ

ಕ್ರಿಕೆಟ್‌ನಲ್ಲಿ ಬ್ಯಾಟಿಂಗ್, ಬೌಲಿಂಗ್, ತಂಡಗಳ ಸೋಲು-ಗೆಲುವುಗಳು, ಆಟಗಾರರ ವೈಯಕ್ತಿಕ ಸಾಧನೆ ಹೀಗೆ ಪ್ರತಿಯೊಂದೂ ದಾಖಲೆಯಾಗಿ ಉಳಿಯುತ್ತದೆ.

ಆರೆಂಜ್ ಕ್ಯಾಪ್‌ ಎಂದರೇನು?

ಆರೆಂಜ್ ಕ್ಯಾಪ್‌ ಎಂದರೇನು?

ಐಪಿಎಲ್‌ನಲ್ಲಿ ಅತ್ಯಧಿಕ ರನ್ ಗಳಿಸುವ ಆಟಗಾರನನ್ನು ಆರೆಂಜ್ ಕ್ಯಾಪ್‌ ಮೂಲಕ ಗುರುತಿಸಲಾಗುತ್ತದೆ. ಪ್ರತೀ ಪಂದ್ಯದ ವೇಳೆಯೂ ಆರೆಂಜ್‌ ಕ್ಯಾಪ್ ಒಬ್ಬರಿಂದ ಒಬ್ಬರಿಗೆ ಬದಲಾಗಬಹುದು. ಸೀಸನ್ ಕೊನೆಗೊಳ್ಳುವಾಗ ಹೆಚ್ಚು ರನ್ ಗಳಿಸಿದ ಮುಂಚೂಣಿ ಬ್ಯಾಟ್ಸ್‌ಮನ್‌ ಕೈಯಲ್ಲಿ ಆರೆಂಜ್ ಕ್ಯಾಪ್ ಉಳಿಯುತ್ತದೆ. ಆತ ಆರೆಂಜ್‌ ಕ್ಯಾಪ್ ವಿಜೇತನಾಗಿ ಗುರುತಿಸಿಕೊಳ್ಳುತ್ತಾನೆ.

2008ರಿಂದ 2011ರ ವಿಜೇತರು

2008ರಿಂದ 2011ರ ವಿಜೇತರು

2008 | ಶಾನ್ ಮಾರ್ಷ್, ಕಿಂಗ್ಸ್ ಇಲೆವೆನ್ ಪಂಜಾಬ್, 11 ಇನ್ನಿಂಗ್ಸ್, 616 ರನ್

2009 | ಮ್ಯಾಥ್ಯೂ ಹೇಡನ್, ಚೆನ್ನೈ ಸೂಪರ್ ಕಿಂಗ್ಸ್, 12 ಇನ್ನಿಂಗ್ಸ್, 572 ರನ್

2010 | ಸಚಿನ್ ತೆಂಡೂಲ್ಕರ್, ಮುಂಬೈ ಇಂಡಿಯನ್ಸ್, 15 ಇನ್ನಿಂಗ್ಸ್, 618 ರನ್

2011 | ಕ್ರಿಸ್ ಗೇಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, 12 ಇನ್ನಿಂಗ್ಸ್, 608 ರನ್

2012ರಿಂದ 2015ರ ವಿನ್ನರ್ಸ್

2012ರಿಂದ 2015ರ ವಿನ್ನರ್ಸ್

2012 | ಕ್ರಿಸ್ ಗೇಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, 14 ಇನ್ನಿಂಗ್ಸ್, 733 ರನ್

2013 | ಮೈಕೆಲ್ ಹಸ್ಸಿ, ಚೆನ್ನೈ ಸೂಪರ್ ಕಿಂಗ್ಸ್, 17 ಇನ್ನಿಂಗ್ಸ್, 733 ರನ್

2014 | ರಾಬಿನ್ ಉತ್ತಪ್ಪ, ಕೋಲ್ಕತಾ ನೈಟ್ ರೈಡರ್ಸ್, 16 ಇನ್ನಿಂಗ್ಸ್, 660 ರನ್

2015 | ಡೇವಿಡ್ ವಾರ್ನರ್, ಸನ್ ರೈಡರ್ಸ್ ಹೈದರಾಬಾದ್, 14 ಇನ್ನಿಂಗ್ಸ್, 562 ರನ್

2016ರಿಂದ 2019ರಲ್ಲಿ ಹೆಚ್ಚು ರನ್

2016ರಿಂದ 2019ರಲ್ಲಿ ಹೆಚ್ಚು ರನ್

2016 | ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು, 16 ಇನ್ನಿಂಗ್ಸ್, 973 ರನ್

2017 | ಡೇವಿಡ್ ವಾರ್ನರ್, ಸನ್ ರೈಸರ್ಸ್ ಹೈದರಾಬಾದ್, 14 ಇನ್ನಿಂಗ್ಸ್‌, 641 ರನ್

2018 | ಕೇನ್ ವಿಲಿಯಮ್ಸನ್, ಸನ್ ರೈಸರ್ಸ್ ಹೈದರಾಬಾದ್, 17 ಇನ್ನಿಂಗ್ಸ್‌, 735 ರನ್

2019 | ಡೇವಿಡ್ ವಾರ್ನರ್, ಸನ್ ರೈಸರ್ಸ್ ಹೈದರಾಬಾದ್, 12 ಇನ್ನಿಂಗ್ಸ್, 692

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, September 7, 2020, 17:11 [IST]
Other articles published on Sep 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X