ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ತವರು ತಂಡ ಡೆಲ್ಲಿ ಡೇರ್ ಡೆವಿಲ್ಸ್ ಬಳಗಕ್ಕೆ ಮರಳಿದ ಶಿಖರ್ ಧವನ್

ನವದೆಹಲಿ, ಅಕ್ಟೋಬರ್ 31: ಸನ್ ರೈಸರ್ಸ್ ಹೈದರಾಬಾದ್ ಆಡಳಿತದ ವಿರುದ್ಧ ಅಸಮಾಧಾನಗೊಂಡಿದ್ದ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್, 11 ವರ್ಷಗಳ ಬಳಿಕ ತವರಿನ ತಂಡಕ್ಕೆ ಮರಳಿದ್ದಾರೆ.

ದೆಹಲಿಯವರಾದ ಶಿಖರ್ ಧವನ್, ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರವಾಗಿ ಆಡಲಿದ್ದಾರೆ.

ಡೆಲ್ಲಿ ಡೇರ್ ಡೆವಿಲ್ಸ್ ಮೂವರು ಆಟಗಾರರನ್ನು ವಿನಿಮಯ ಮಾಡಿಕೊಂಡಿದ್ದು, ಐಪಿಎಲ್‌ನ ಟ್ರೇಡಿಂಗ್ ಅವಕಾಶದಡಿ ಧವನ್, ತವರಿನ ತಂಡವನ್ನು ಸೇರಿಕೊಂಡಿದ್ದಾರೆ.

ಐಪಿಎಲ್ ಕ್ರಿಕೆಟ್: ಆರ್‌ಸಿಬಿ ತಂಡ ಸೇರಿಕೊಂಡ ಆಸ್ಟ್ರೇಲಿಯಾದ ಆಲ್‌ರೌಂಡರ್ಐಪಿಎಲ್ ಕ್ರಿಕೆಟ್: ಆರ್‌ಸಿಬಿ ತಂಡ ಸೇರಿಕೊಂಡ ಆಸ್ಟ್ರೇಲಿಯಾದ ಆಲ್‌ರೌಂಡರ್

ಡೆಲ್ಲಿ ತಂಡದಲ್ಲಿದ್ದ ವಿಜಯ್ ಶಂಕರ್, ಶಹಬಾಜ್ ನದೀಮ್ ಮತ್ತು ಅಭಿಷೇಕ್ ಶರ್ಮಾ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಿಜಯ್ ಶಂಕರ್ ಈ ಹಿಂದೆಯೂ ಹೈದರಾಬಾದ್ ತಂಡದಲ್ಲಿ ಆಡಿದ್ದರು.

ಮೂವರಿಗೆ ಒಬ್ಬ ಆಟಗಾರ!

ಮೂವರಿಗೆ ಒಬ್ಬ ಆಟಗಾರ!

ವಿಜಯ್ ಶಂಕರ್ (3.2 ಕೋಟಿ ರೂ.), ನದೀಮ್ (3.2 ಕೋಟಿ ರೂ.) ಮತ್ತು ಅಭಿಷೇಕ್ ಶರ್ಮಾ (55 ಲಕ್ಷ ರೂ.) ಅವರನ್ನು ಒಟ್ಟು 6.95 ಕೋಟಿ ರೂ.ಗೆ ಡೆಲ್ಲಿ ತಂಡ ಖರೀದಿ ಮಾಡಿತ್ತು. ಈ ವಿನಿಮಯದಲ್ಲಿ ಬಾಕಿ ಹಣವನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಗದು ರೂಪದಲ್ಲಿ ಡೆಲ್ಲಿ ತಂಡಕ್ಕೆ ನೀಡಬೇಕಿದೆ.

ಸನ್‌ರೈಸರ್ಸ್ ಮೇಲೆ ಶಿಖರ್ ಧವನ್ ಕೋಪ: ಮುಂಬೈ ಇಂಡಿಯನ್ಸ್ ಸೇರ್ಪಡೆ ಸಾಧ್ಯತೆ

ಧವನ್ ಅಸಮಾಧಾನ

ಧವನ್ ಅಸಮಾಧಾನ

ಕಳೆದ ಆವೃತ್ತಿಯ ಹರಾಜಿನಲ್ಲಿ ಹೈದರಾಬಾದ್ ಫ್ರಾಂಚೈಸಿ ತನ್ನ ಆಟಗಾರರನ್ನು ಉಳಿಸಿಕೊಳ್ಳುವ ಹಕ್ಕು ಚಲಾಯಿಸಿ ಶಿಖರ್ ಧವನ್ ಅವರನ್ನು ಉಳಿಸಿಕೊಳ್ಳಲು ಮುಂದಾಗಿರಲಿಲ್ಲ. ಆದರೆ, ಬಳಿಕ ಹರಾಜಿನ ಮೂಲಕ ಅವರನ್ನು ಮತ್ತೆ ಖರೀದಿ ಮಾಡಿತ್ತು. ತಮ್ಮನ್ನು ಉಳಿಸಿಕೊಳ್ಳದೆ ಹರಾಜಿಗೆ ಬಿಟ್ಟ ಫ್ರಾಂಚೈಸಿ ವಿರುದ್ಧ ಶಿಖರ್ ಧವನ್ ಅತೃಪ್ತಿ ಹೊರಹಾಕಿದ್ದರು.

ಕಳೆದ ಆವೃತ್ತಿಯನ್ನು ಸನ್ ರೈಸರ್ಸ್ ಧವನ್ ಅವರಿಗೆ 5.2 ಕೋಟಿಗೆ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಮರು ಖರೀದಿ ಮಾಡಿತ್ತು. ಆದರೆ, ಈ ಮೊತ್ತದ ಬಗ್ಗೆ ಧವನ್ ಅಸಮಾಧಾನಗೊಂಡಿದ್ದರು. ಈ ಕಾರಣದಿಂದ ಧವನ್ ಅವರನ್ನು ಬಿಡುಗಡೆ ಮಾಡಲು ಫ್ರಾಂಚೈಸಿ ಮುಂದಾಗಿತ್ತು.

ಐಪಿಎಲ್ 2019: ಆರ್‌ಸಿಬಿಯಿಂದ ಕ್ವಿಂಟನ್ ಡಿ ಕಾಕ್ ಔಟ್, ಮುಂಬೈ ಇಂಡಿಯನ್ಸ್ ಸೇರ್ಪಡೆ

ಮೊದಲು ಆಡಿದ್ದ ಡೆಲ್ಲಿ ಪರ

ಮೊದಲು ಆಡಿದ್ದ ಡೆಲ್ಲಿ ಪರ

2008ರಲ್ಲಿ ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಧವನ್ ತಮ್ಮ ತವರಿನ ತಂಡ ಡೆಲ್ಲಿ ಡೇರ್ ಡೆವಿಲ್ಸ್ ಪರವಾಗಿ ಆಡಿದ್ದರು. ಬಳಿಕ ಕೆಲವು ವರ್ಷ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದರು. 2013ರಲ್ಲಿ ಸನ್‌ ರೈಸರ್ಸ್ ತಂಡ ಆರಂಭವಾಗುವ ಮುನ್ನ ಡೆಕ್ಕನ್ ಚಾರ್ಜರ್ಸ್ ಪರ ಆಟವಾಡಿದ್ದರು.

ಪಂಜಾಬ್ ಜತೆ ಮಾತುಕತೆ

ಪಂಜಾಬ್ ಜತೆ ಮಾತುಕತೆ

ಶಿಖರ್ ಧವನ್ ಈಗ ಪಡೆದುಕೊಳ್ಳುತ್ತಿರುವ ಮೊತ್ತಕ್ಕಿಂತ ದುಪ್ಪಟ್ಟು ಹಣಕ್ಕೆ ಬೇಡಿಕೆ ಇರಿಸಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದೊಂದಿಗೆ ಮಾತುಕತೆ ನಡೆಸಿದ್ದರು. ಆದರೆ, ಪಂಜಾಬ್ ಫ್ರಾಂಚೈಸಿ ಈಗಿನ ಮೊತ್ತಕ್ಕಿಂತ ಒಂದು ಕೋಟಿ ರೂ. ಹೆಚ್ಚುವರಿ ಮೊತ್ತ ನೀಡುವುದಾಗಿ ಹೇಳಿತ್ತು. ಹೀಗಾಗಿ ಡೆಲ್ಲಿ ತಂಡ ಅಧಿಕ ಮೊತ್ತ ಪಾವತಿ ಮಾಡಿ ಧವನ್ ಅವರನ್ನು ಖರೀದಿಸಿದೆ ಎಂದು ಹೇಳಲಾಗಿದೆ.

ಐಪಿಎಲ್‌ನಲ್ಲಿ ಧವನ್ ಸಾಧನೆ

ಐಪಿಎಲ್‌ನಲ್ಲಿ ಧವನ್ ಸಾಧನೆ

ಸನ್ ರೈಸರ್ಸ್ ಪರ 91 ಇನ್ನಿಂಗ್ಸ್‌ಗಳಲ್ಲಿ ಧವನ್, 35.03 ಸರಾಸರಿಯಲ್ಲಿ 125.13 ಸ್ಟ್ರೈಕ್‌ ರೇಟ್‌ನಲ್ಲಿ 2768 ರನ್ ಗಳಿಸಿದ್ದಾರೆ. 2018ರ ಐಪಿಎಲ್‌ನಲ್ಲಿ 35.50 ಸರಾಸರಿಯಲ್ಲಿ 497 ರನ್ ಗಳಿಸಿದ್ದು, ಸನ್ ರೈಸರ್ಸ್ ತಂಡದಲ್ಲಿ ಅತ್ಯಧಿಕ ರನ್ ಸ್ಕೋರರ್ ಎನಿಸಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ 143 ಪಂದ್ಯಗಳಲ್ಲಿ 33.26ರ ಸರಾಸರಿ, 123.53ರ ಸ್ಟ್ರೈಕ್‌ ರೇಟ್‌ನಲ್ಲಿ 4058 ರನ್ ಗಳಿಸಿದ್ದಾರೆ.

Story first published: Wednesday, October 31, 2018, 15:39 [IST]
Other articles published on Oct 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X