ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಂದೇ ಸೈಕಲ್ ನಲ್ಲಿ ಧೋನಿ, ಜಡೇಜಾ, ರೈನಾ ಪ್ರಯಾಣ!

ನವದೆಹಲಿ, ಜುಲೈ 14: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಮ್ಯಾಚ್ ಫಿಕ್ಸಿಂಗ್ ಕರಾಳ ಮುಖದ ಕುರಿತು ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ತ್ರಿಸದಸ್ಯ ಪೀಠ ನೀಡಿದ ತೀರ್ಪು ಟ್ವಿಟ್ಟರ್ ನಲ್ಲಿ ಮಂಗಳವಾರದ ನಂ 1 ಟ್ರೆಂಡಿಂಗ್ ನಲ್ಲಿದೆ.

#IPLVerdict ಹೆಸರಿನಲ್ಲಿ ದೇಶಾದ್ಯಂತ ಜನರು, ಕ್ರೀಡಾಪ್ರೇಮಿಗಳು ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ತೀರ್ಪನ್ನು ಕೇಳಿ ಲಲಿತ್ ಮೋದಿ ನಗುತ್ತಿರುವ ಚಿತ್ರವನ್ನು ಹಾಕಲಾಗಿದೆ. ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಅವರ ಕನಸು ಈಗ ಈಡೇರಿತು ಎಂದು ಬರೆದವರಿದ್ದಾರೆ. ಫೇರ್ ಪ್ಲೇ ಪ್ರಶಸ್ತಿ "ಚೆನ್ನೈ"ಗೆ ಸಲ್ಲುತ್ತದೆ ಎಂದವರು ಇದ್ದಾರೆ.[ರಾಜ್ ಕುಂದ್ರಾ, ಮೇಯಪ್ಪನ್ ಗೆ ಕ್ರಿಕೆಟ್ ನಿಂದ ಆಜೀವ ನಿಷೇಧ]

ಸಿಎಸ್ ಕೆ ಮತ್ತು ಆರ್ ಆರ್ ಆತ್ಮಕ್ಕೆ ಶಾಂತಿ ಸಿಗಲಿ, ಎಲ್ಲ ತಂಡಗಳನ್ನು ನಿಷೇಧ ಮಾಡಿ, ಜನರ ದುಡ್ಡು ಹಾಳು ಮಾಡುವ ಇಂಥ ತಂಡಗಳು ಬೇಕೆ? ಕ್ರೀಡೆಯನ್ನು ವ್ಯವಹಾರವಾಗಿಸಿದ ಇನ್ನೆಷ್ಟು ಜನರು ದೇಶದಲ್ಲಿದ್ದಾರೆಯೋ? ಈ ಬಗೆಯ ಪ್ರಶ್ನೆಗಳನ್ನು ಜನ ಕೇಳಿದ್ದಾರೆ.["ಧೋನಿ ರಾವಣ ಇದ್ದಂತೆ, ಅವನು ನಿರ್ಗತಿಕನಾಗಲಿ"]

ರಾಜ್ ಕುಂದ್ರಾ ಹಾಗೂ ಗುರುನಾಥ್ ಮೇಯಪ್ಪನ್ ಅವರಿಗೆ ಅಜೀವ ನಿಷೇಧ ಹೇರಲಾಗಿದೆ. ಇಬ್ಬರು ಯಾವುದೇ ರೀತಿ ಕ್ರಿಕೆಟ್ ಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಎರಡು ತಂಡಗಳಿಗೂ ನಿಷೇಧ ಹೇರಲಾಗಿದ್ದು ಮುಂದಿನ ಬೆಳವವಣಿಗೆಗಳು ಕುತೂಹಲ ಕೆರಳಿಸಿದೆ.

ಎಲ್ಲಿಗೆ ಪಯಣ?

ಎಲ್ಲಿಗೆ ಪಯಣ?

ನ್ಯಾಯಾಲಯದ ಆದೇಶದ ನಂತರ ಗಂಟು ಮೂಟೆ ಕಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಎಲ್ಲಿಗೆ ಹೋಗಲಿದ್ದಾರೆ. ಇಂಡಿಯಾ ಸಿಮೆಂಟ್ ಬೇರೆ ಹೆಸರಲ್ಲಿ ಐಪಿಎಲ್ ಗೆ ಕಾಲಿಡಲಿದೆಯೇ ಎಂಬ ಪ್ರಶ್ನೆಯನ್ನು ಟ್ವಿಟ್ಟಿಗರು ಹೊರಹಾಕಿದ್ದಾರೆ.

ಯೋಗರಾಜ್ ಮಾತು ನಿಜವಾಯ್ತೆ?

ಯೋಗರಾಜ್ ಮಾತು ನಿಜವಾಯ್ತೆ?

ವಿಶ್ವಕಪ್ ಗೆ ಯುವರಾಜ್ ಸಿಂಗ್ ಆಯ್ಕೆಯಾಗದಿರಲು ಎಂಎಸ್ ಧೋನಿಯೇ ಕಾರಣ ಎಂದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಆಕ್ರೋಶ ಹೊರಹಾಕಿದ್ದರು. ಧೋನಿ ಭಿಕಾರಿಯಾಗಲಿ ಎಂದಿದ್ದರು, ಅದು ನಿಜವಾಗುವ ಕಾಲ ಹತ್ತಿರ ಬಂದಿದೆ.

ನಿಮ್ಮ ಆಟ ಸಾಕು

ನಿಮ್ಮ ಆಟ ಸಾಕು

ನೀವು ತಂಡ ಕಟ್ಟಿ ಆಡಿದ್ದು ಸಾಕು. ದೇಶದ ಜನರಿಗೆ ಕ್ರಿಕೆಟ್ ಮೇಲಿದ್ದ ಅಭಿಮಾನ, ಪ್ರೀತಿಯನ್ನು ವ್ಯಾಪಾರದ ಸರಕಾಗಿಸಿದ ನಿಮಗೆ ಧಿಕ್ಕಾರ

ಲಲಿತ್ ಮೋದಿ ರಿಯಾಕ್ಷನ್

ಮಂಗಳವಾರ ಐಪಿಎಲ್ ಫಿಕ್ಸಿಂಗ್ ಸಂಬಂಧ ಹೊರಬಿದ್ದ ತೀರ್ಪಿಗೆ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರ ಪ್ರತಿಕ್ರಿಯೆ ಹೀಗಿತ್ತು ಎಂದು ಟ್ವಿಟ್ಟಿಗರೊಬ್ಬರು ತಿಳಿಸಿದ್ದಾರೆ.

ಪುಸ್ತಕದಲ್ಲಿ ಕ್ರಿಕೆಟ್ ಆಡಲು ಆಗಲ್ಲ

ತೀರ್ಪನ್ನು ನೋಡಿದರೆ ಗುರುನಾಥ್ ಮೆಯಪ್ಪನ್ ಪುಸ್ತಕದಲ್ಲಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ!

ಆತ್ಮಕ್ಕೆ ಶಾಂತಿ ನೀಡಲಿ

ದೇವರು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ಆತ್ಮಕ್ಕೆ ಶಾಂತಿನೀಡಲಿ. ಇನ್ನಾದರೂ ಕ್ರಿಕೆಟ್ ನಲ್ಲಿ ಬದಲಾವಣೆ ಗಾಳಿ ಬೀಸುತ್ತದೆಯೋ ನೋಡೋಣ

ಲಲಿತ್ ಮೋದಿ ಭೋಜನ

ತೀರ್ಪನ್ನು ಕೇಳಿದ ಲಲಿತ್ ಮೋದಿ ವಿಶೇಷ ಊಟ ಮಾಡಲು ಲಂಡನ್ ನ ಪ್ರತಿಷ್ಠಿತ ಹೋಟೆಲ್ ಗೆ ದೌಢಾಯಿಸಿದ್ದಾರಂತೆ.

ಫೋಟೋ ಭದ್ರವಾಗಿ ಇಟ್ಟುಕೊಳ್ಳಿ

ಈ ಫೋಟೋ ಭದ್ರವಾಗಿ ಇಟ್ಟುಕೊಳ್ಳಿ, ಐಪಿಎಲ್ ನಲ್ಲಿ ಮುಂದೆ ಇಂಥ ಚಿತ್ರ ಕಂಡುಬರಲು ಸಾಧ್ಯವೇ ಇಲ್ಲ.

ಧೋನಿ ಮನೆಗೆ ಹೊರಟರು

ನ್ಯಾಯಾಲಯದ ಆದೇಶವನ್ನು ಕೇಳಿದ ನಂತ ಧೋನಿ ಮನೆಗೆ ಹೊರಟ ಅಶ್ವಿನ್, ರೈನಾ ಜಡೇಜಾ.

ಯೋಗರಾಜ್ ಸಿಂಗ್ ಪ್ರತಿಕ್ರಿಯೆ

ನ್ಯಾಯಾಲಯದ ಆದೇಶ ಕೇಳಿದ ಯೋಗರಾಜ್ ಸಿಂಗ್ ಪ್ರತಿಕ್ರಿಯೆ ಹೀಗಿರಬಹುದೇ?

ಸಿಎಸ್ ಕೆ ಅಭಿಮಾನಿಗಳ ಕತೆ!

ನ್ಯಾಯಾಲಯದ ಆದೇಶ ಕೇಳಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾಣಿಗಳ ಕತೆ ಏನಾಗಿರಬಹುದು ಎಂಬುದನ್ನು ಚಿತ್ರದ ಮೂಲಕ ಹೇಳಲಾಗಿದೆ.

ಎಸ್ ಶ್ರೀಶಾಂತ್ ಪ್ರತಿಕ್ರಿಯೆ

ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಘಿಯಾಗಿದ್ದ ಆರೋಪದಡಿ ನಿಷೇಧಕ್ಕೆ ಗುರಿಯಾಗಿದ್ದ ಶ್ರೀಶಾಂತ್ ಈ ರೀತಿ ತಮ್ಮ ಪ್ರತಿಕ್ರಿಯೆ ತೋರಿಸಿರಬಹುದೆ?

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X