ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಮಗೂ ನಿಮಗೂ ಇರೋ ವ್ಯತ್ಯಾಸ ಇಷ್ಟೇ! ಪಾಕ್ ಪ್ರಧಾನಿಗೆ ಇರ್ಫಾನ್ ಪಠಾಣ್ ತಿರುಗೇಟು

Irfan Pathan Give Strong Reply To Pakistan PM Shehbaz Sharifs Tweet

ಟಿ20 ವಿಶ್ವಕಪ್‌ ಸೆಮಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲನುಭವಿಸಿ ಪಂದ್ಯಾವಳಿಯಿಂದ ಹೊರಬಿದ್ದಿದೆ. ಫೈನಲ್‌ನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಸೆಣೆಸಲಿವೆ. ಇಂಗ್ಲೆಂಡ್ ಭಾರತವನ್ನು ಸೋಲಿಸುತ್ತಿದ್ದಂತೆ ಪಾಕಿಸ್ತಾನದ ಪ್ರಧಾನಿ ವ್ಯಂಗ್ಯವಾಗಿ ಟ್ವೀಟ್ ಮಾಡುವ ಮೂಲಕ ಭಾರತ ತಂಡದ ಕಾಲೆಳೆದಿದ್ದರು. ಇದಕ್ಕೆ ಭಾರತದ ಮಾಜಿ ಆಲ್‌ ರೌಂಡರ್ ಇರ್ಫಾನ್ ಪಠಾಣ್ ಪ್ರತ್ಯುತ್ತರ ನೀಡಿದ್ದಾರೆ.

ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ದಾಖಲೆಯ 170 ರನ್ ಆರಂಭಿಕ ಜೊತೆಯಾಟದ ಮೂಲಕ ಎರಡನೇ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ 10 ವಿಕೆಟ್‌ಗಳಿಂದ ಜಯ ಸಾಧಿಸಿದ್ದರು. 2021ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ 10 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿದ್ದರು. 152 ರನ್‌ಗಳ ದಾಖಲೆಯನ್ನು ವಿಕೆಟ್‌ ನಷ್ಟವಿಲ್ಲದೆ ಪಾಕಿಸ್ತಾನ ಯಶಸ್ವಿಯಾಗಿ ಚೇಸ್ ಮಾಡಿತ್ತು.

IPL 2023: ಪ್ರಮುಖ ಆಟಗಾರನನ್ನು ಕೈಬಿಟ್ಟ ಮುಂಬೈ, ಸಿಎಸ್‌ಕೆ ತಂಡದಲ್ಲೇ ಉಳಿಯಲಿದ್ದಾರೆ ಸ್ಟಾರ್ ಆಲ್‌ರೌಂಡರ್IPL 2023: ಪ್ರಮುಖ ಆಟಗಾರನನ್ನು ಕೈಬಿಟ್ಟ ಮುಂಬೈ, ಸಿಎಸ್‌ಕೆ ತಂಡದಲ್ಲೇ ಉಳಿಯಲಿದ್ದಾರೆ ಸ್ಟಾರ್ ಆಲ್‌ರೌಂಡರ್

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್‌ ಇದನ್ನೇ ಬಳಸಿಕೊಂಡು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. ಭಾನುವಾರ ಇಂಗ್ಲೆಂಡ್-ಪಾಕಿಸ್ತಾನ ಸೆಮಿಫೈನಲ್ ಕುರಿತು ಮೆಸೇಜ್ ಮಾಡಿದ್ದು, ಭಾನುವಾರ 150/0 Vs 170/0 ನಡುವೆ ಫೈನಲ್ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಇರ್ಫಾನ್ ಪಠಾಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Irfan Pathan Give Strong Reply To Pakistan PM Shehbaz Sharifs Tweet

ಇದೇ ನಮಗೂ ನಿಮಗೂ ಇರೋ ವ್ಯತ್ಯಾಸ

ಶೆಹಬಾಜ್ ಷರೀಫ್‌ ಟ್ವೀಟ್ ಮಾಡಿದ ರೀತಿ ಇರ್ಫಾನ್ ಪಠಾಣ್‌ಗೆ ಇಷ್ಟವಾಗಿಲ್ಲ. ಶೆಹಬಾಜ್ ಷರೀಫ್‌ ಟ್ವೀಟ್‌ಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಬೇರೊಬ್ಬರ ಸೋಲಿಗೆ ಖುಷಿಪಡುವುದನ್ನು ಬಿಟ್ಟು, ದೇಶದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಹೇಳಿದ್ದಾರೆ.

"ಇದೇ ನಮ್ಮ ಮತ್ತು ನಿಮ್ಮ ನಡುವೆ ಇರುವ ವ್ಯತ್ಯಾಸವಾಗಿದೆ. ನಮ್ಮೊಂದಿಗೆ ನಾವು ಸಂತೋಷವಾಗಿದ್ದೇವೆ. ಬೇರೊಬ್ಬರ ಸೋಲಿನಲ್ಲಿ ನೀವು ಸಂತೋಷಪಡುತ್ತಿದ್ದೀರಿ. ಆದ್ದರಿಂದಲೇ ನೀವು ನಿಮ್ಮ ದೇಶದ ಪರಿಸ್ಥಿತಿಯನ್ನು ಉತ್ತಮಪಡಿಸುವತ್ತ ಗಮನಹರಿಸುತ್ತಿಲ್ಲ" ಎಂದು ಹೇಳಿದರು.

ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲ

ಭಾರತ ತಂಡ ಸೂಪರ್ 12 ಹಂತದಲ್ಲಿ 5 ರಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಗ್ರಸ್ಥಾನಿಗಳಾಗಿ ಸೆಮಿಫೈನಲ್ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ ಒತ್ತಡದಲ್ಲಿ ಆಡುವಲ್ಲಿ ವಿಫಲವಾದರು. ಭಾರತ ತಂಡದ ಬೌಲರ್ ಗಳ ವೈಫಲ್ಯ ಸೋಲಿಗೆ ಕಾರಣವಾಯಿತು.

ಭಾರತ ತಂಡ ಸೋಲುತ್ತಿದ್ದಂತೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಟೀಂ ಇಂಡಿಯಾವನ್ನು ಟ್ರೋಲ್ ಮಾಡಿದ್ದರು. ಇದಕ್ಕೆ ಭಾರತೀಯ ಅಭಿಮಾನಿಗಳು ಕೂಡ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಮತ್ತೊಂದೆಡೆ ಐಪಿಎಲ್ ಬ್ಯಾನ್ ಮಾಡುವಂತೆ ಕೆಲವು ಒತ್ತಾಯಿಸಿದ್ದರೆ. ಮತ್ತೆ ಕೆಲವರು, ಭಾರತದ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಲು ಅನುಮತಿ ನೀಡುವಂತೆ ಆಗ್ರಹಿಸಿದ್ದಾರೆ.

Story first published: Saturday, November 12, 2022, 18:02 [IST]
Other articles published on Nov 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X