ಸಾಕ್ಷಿ ಧೋನಿ ಗರ್ಭಿಣಿಯಾ?: ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ವೈರಲ್!

ದುಬೈ: ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್‌ 15) ನಡೆದ ಐಪಿಎಲ್ 2021ರ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸಿಎಸ್‌ಕೆ 27 ರನ್ ಜಯ ಗಳಿಸಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಎರಡನೇ ಅತೀ ಬಲಿಷ್ಠ ತಂಡವೆಂಬ ದಾಖಲೆ ನಿರ್ಮಿಸಿದೆ.

ಟೀಮ್ ಇಂಡಿಯಾಕ್ಕೆ ಹೆಡ್ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಆಯ್ಕೆಟೀಮ್ ಇಂಡಿಯಾಕ್ಕೆ ಹೆಡ್ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಆಯ್ಕೆ

ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್‌ ಗೆಲುವು, ಸಿಎಸ್‌ಕೆ ಅಭಿಮಾನಿಗಳು, ನಾಯಕ ಎಂಎಸ್ ಧೋನಿ ಪಾಲಿಗೆ ವಿಶೇಷವೆನಿಸಿತ್ತು. ಯಾಕೆಂದರೆ ಕಳೆದ ಸೀಸನ್‌ನಲ್ಲಿ ಲೀಗ್‌ ಹಂತದಲ್ಲೇ ಹೀನಾಯ ಸೋಲುಗಳೊಂದಿಗೆ ಪ್ಲೇ ಆಫ್ಸ್‌ ಅವಕಾಶ ಕಳೆದುಕೊಂಡು ಎಲ್ಲಾ ತಂಡಗಳಿಗಿಂತ ಮೊದಲು ಟೂರ್ನಿಯಿಂದ ಹೊರ ಬಿದ್ದಿದ್ದ ಸಿಎಸ್‌ಕೆ ಈ ಬಾರಿ ಬಲಿಷ್ಠ ಕಮ್‌ಬ್ಯಾಕ್ ಮಾಡಿತ್ತು.

ಧೋನಿ ಪತ್ನಿ, ಪುತ್ರಿ ಝೀವಾ ಭಾವುಕ

ಫೈನಲ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ ಜಯ ಗಳಿಸುತ್ತಲೇ ಮೈದಾನಕ್ಕೆ ಬಂದ ಧೋನಿ ಪತ್ನಿ ಸಾಕ್ಷಿ ಧೋನಿ ಮತ್ತು ಪುತ್ರಿ ಝೀವಾ ಧೋನಿ ಮಾಹಿಯನ್ನು ಅಪ್ಪಿ ಹಿಡಿದು ಭಾವುಕರಾದರು. ಇದಕ್ಕೊಂದು ಕಾರಣವಿದೆ. ಕಳೆದ ಸೀಸನ್‌ನಲ್ಲಿ ಸಿಎಸ್‌ಕೆ ಅತ್ಯಂತ ಕಳೆಪೆ ಪ್ರದರ್ಶನ ನೀಡಿ ಎಲ್ಲಾ ತಂಡಗಳಿಂದ ಮೊದಲು ಟೂರ್ನಿಯಿಂದ ಹೊರ ಬಿದ್ದಿತ್ತು. ಅದೂ ಕೂಡ ಅದೇ ಮೊದಲ ಬಾರಿಗೆ ಪ್ಲೇ ಆಫ್ಸ್‌ಗೆ ಪ್ರವೇಶಿಸದೆ ಚೆನ್ನೈ ಹೊರ ಬಿದ್ದಿತ್ತು. ಆ ವೇಳೆ ಧೋನಿ ಬಗ್ಗೆ ಕಠಿಣ ಟೀಕೆಯ ಮಾತುಗಳು ಕೇಳಿ ಬಂದಿದ್ದವು. ಧೋನಿ ಕತೆ ಮುಗಿಯಿತು ಎಂದೆಲ್ಲ ಕ್ರಿಕೆಟ್ ಅಭಿಮಾನಿಗಳು ಮಾತನಾಡಿದ್ದರು. ಆವತ್ತು ಅವಮಾನ ಅನುಭವಿಸಿದ್ದ ಧೋನಿ ಪಡೆ ಈ ಬಾರಿ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿದೆ. ಟ್ರೋಫಿಯೂ ಗೆದ್ದಿದೆ. ಈ ಎಲ್ಲಾ ಭಾವನೆಗಳು ಮೈದಾನಕ್ಕಿಳಿದಿದ್ದ ಸಾಕ್ಷಿ, ಝೀವಾ ಅವರಲ್ಲಿ ಕಾಣಸಿತ್ತು. ಸಿಎಸ್‌ಕೆ ಗೆಲುವಿನಲ್ಲಿ ಧೋನಿ ಕುಟುಂಬ ಭಾವುಕವಾಗೇ ಪಾಲ್ಗೊಂಡಿತು.

ಸಾಕ್ಷಿ ಸಿಂಗ್ ಧೋನಿ ಗರ್ಭಿಣಿಯಾ?

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಪಂದ್ಯಗಳಿದ್ದಾಗೆಲ್ಲಾ ಸಾಕ್ಷಿ ಧೋನಿ ಮತ್ತು ಝೀವಾ ಧೋನಿ ಸ್ಟೇಡಿಯಂನಲ್ಲಿ ಕೂತು ಸಿಎಸ್‌ಗೆ ಚಿಯರ್ ಮಾಡುತ್ತಿದ್ದರು. ಈ ಚಿತ್ರಗಳು ಅನೇಕ ವೇಳೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲ, ಸಿಎಸ್‌ಕೆ ತಂಡ ಪ್ಲೇ ಆಫ್ಸ್‌ಗೆ ಪ್ರವೇಶಿಸಿದ ಬಳಿಕ ಕ್ವಾಲಿಫೈಯರ್ ಪಂದ್ಯಗಳ ವೇಳೆ ಧೋನಿಯ ಪುಟಾಣಿ ಪುತ್ರಿ ಝೀವಾ ಕೈ ಮುಗಿದು ಮುಗ್ಧತೆಯಿಂದ ತಂದೆಯ ತಂಡ ಗೆಲ್ಲುವಂತೆ ಬೇಡಿಕೊಂಡಿದ್ದ ಚಿತ್ರಗಳೂ ಸಾಮಾಜಿಕ ಜಾಲತಾಣದಲ್ಲಿ ಓಡಾಡಿದ್ದವು. ಐಪಿಎಲ್ ಫೈನಲ್‌ ಪಂದ್ಯದ ವೇಳೆ ಮತ್ತೊಂದು ಗಾಳಿ ಸುದ್ದಿ ಹಬ್ಬುತ್ತಿದೆ. ಅದೇನೆಂದರೆ ಧೋನಿ ಪತ್ನಿ ಸಾಕ್ಷಿ ಎರಡನೇ ಮಗುವಿನ ಗರ್ಭಿಣಿ ಎಂದು ಹೇಳಲಾಗುತ್ತಿದೆ. ಸಾಕ್ಷಿಯ ಉಬ್ಬಿದ ಹೊಟ್ಟೆಯ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಆದರೆ ಧೋನಿ ಫ್ಯಾಮಿಲಿಯಿಂದ ಈ ಬಗ್ಗೆ ಅಧಿಕೃತ ಘೋಷಣೆಗಳೇನೂ ಕೇಳಿ ಬಂದಿಲ್ಲ.

IPL ಟ್ರೋಫಿ ಗೆಲ್ಲೋದಕ್ಕೆ ಅರ್ಹವಾಗಿರೋರು ನಾವಲ್ಲ ಎಂದ ಧೋನಿ!ಮತ್ಯಾರು? | Oneindia Kannada

ಐಪಿಎಲ್‌ನಲ್ಲಿ ಅತೀ ಯಶಸ್ವಿ ತಂಡ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತೀ ಹೆಚ್ಚು ಟ್ರೋಫಿಗಳನ್ನು ಗೆದ್ದ ಹಿರಿಮೆ ಮುಂಬೈ ಇಂಡಿಯನ್ಸ್ ತಂಡದ್ದು. ರೋಹಿತ್ ಶರ್ಮಾ ನಾಯಕತ್ವದ ಎಂಐ ಒಟ್ಟು ಐದು ಬಾರಿ ಟ್ರೋಫಿ ಜಯಿಸಿದೆ. ಮುಂಬೈ ಬಿಟ್ಟರೆ ಚೆನ್ನೈ ಸೂಪರ್ ಕಿಂಗ್ಸ್‌ ನಾಲ್ಕನೇ ಬಾರಿಗೆ ಚಾಂಪಿಯನ್ಸ್ ಪಟ್ಟ ಗೆದ್ದಿದೆ. ಅಷ್ಟೇ ಅಲ್ಲ, ಐಪಿಎಲ್‌ನಲ್ಲಿ ಒಟ್ಟು 9 ಬಾರಿ ಫೈನಲ್‌ಗೆ ಪ್ರವೇಶಿಸಿರುವ ಚೆನ್ನೈ 4 ಬಾರಿ ಪ್ರಶಸ್ತಿ ಗೆದ್ದಿರುವ ದಾಖಲೆ ನಿರ್ಮಿಸಿದೆ. ಬಹುತೇಕ ಎಲ್ಲಾ ಸೀಸನ್‌ನಲ್ಲೂ ಚೆನ್ನೈ ಪ್ಲೇ ಆಫ್ಸ್‌ಗೆ ಪ್ರವೇಶಿಸಿದೆ. ಪ್ಲೇ ಆಫ್ಸ್‌ಗೆ ಪ್ರವೇಶಿಸದೆ ಚೆನ್ನೈ ಹೊರ ಬಿದ್ದಿರುವ ಸೀಸನ್ ಎಂದರೆ 2020ರಲ್ಲಿ. ಧೋನಿ ನಾಯಕತ್ವದಲ್ಲಿ ಚೆನ್ನೈ ಹೆಚ್ಚು ಬಲಿಷ್ಠ ತಂಡವಾಗಿ ಹೊರ ಹೊಮ್ಮಿದೆ. ಸಿಎಸ್‌ಕೆ ತಂಡದಲ್ಲಿ ಅನುಭವಿಗಳ ಸಂಖ್ಯೆ ಹೆಚ್ಚಿರುವುದು ತಂಡದ ಪ್ಲಸ್ ಪಾಯಿಂಟ್ಸ್‌ಗಳಲ್ಲೊಂದು. ತಮಿಳು ನಾಡಿನ ಚೆನ್ನೈ ಮೂಲದ ಸಿಎಸ್‌ಕೆ ಫ್ರಾಂಚೈಸಿ ಇಂಡಿಯ ಸಿಮೆಂಟ್ ಮಾಲೀಕತ್ವದಡಿಯಲ್ಲಿದೆ.

For Quick Alerts
ALLOW NOTIFICATIONS
For Daily Alerts
Story first published: Saturday, October 16, 2021, 10:40 [IST]
Other articles published on Oct 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X