ಪೃಥ್ವಿ ಶಾ, ದೇವದತ್ ಪಡಿಕ್ಕಲ್‌ರ ಇಂಗ್ಲೆಂಡ್‌ಗೆ ಕಳುಹಿಸಲು ಆಯ್ಕೆ ಸಮಿತಿ ಹಿಂದೇಟು?!

ನವದೆಹಲಿ: ಭಾರತೀಯ ಕ್ರಿಕೆಟ್ ನಿರ್ವಹಣಾ ಮಂಡಳಿಗೆ ಯುವ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್ ಅವರನ್ನು ಇಂಗ್ಲೆಂಡ್‌ಗೆ ಕರೆಸಿಕೊಳ್ಳಲು ಮನಸ್ಸಿದೆ. ಆದರೆ ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ ಇದಕ್ಕೆ ಒಪ್ಪುತ್ತಿಲ್ಲ. ಆಗಸ್ಟ್ 4ರಿಂದ ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿ ಮತ್ತು ಜುಲೈ 13ರಿಂದ ಭಾರತ-ಶ್ರೀಲಂಕಾ ಸೀಮಿತ ಓವರ್‌ಗಳ ಸರಣಿ ಆರಂಭಗೊಳ್ಳಲಿದೆ. ಇದಕ್ಕೂ ಮುನ್ನ ತಂಡದ ಹೊಂದಾಣಿಯ ಬಗ್ಗೆ ಬಿಸಿಸಿಐಗೆ ತಲೆನೋವು ತಂಶುರುವಾಗಿದೆ.

ಟೀಮ್ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿಯ ಒಪ್ಪಂದ ಶೀಘ್ರ ಕೊನೆ!ಟೀಮ್ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿಯ ಒಪ್ಪಂದ ಶೀಘ್ರ ಕೊನೆ!

ಸದ್ಯ ಟೀಮ್ ಇಂಡಿಯಾ ಎರಡು ತಂಡಗಳಾಗಿ ವಿಭಾಜಿಸಲ್ಪಟ್ಟಿದೆ. ಒಂದು ತಂಡ ಇಂಗ್ಲೆಂಡ್‌ನಲ್ಲಿ ಐದು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಸಿದ್ಧವಾಗುತ್ತಿದೆ. ಈ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿದ್ದಾರೆ. ಮತ್ತೊಂದು ತಂಡ 3 ಏಕದಿನ ಮತ್ತು 3 ಟಿ20ಐಗಾಗಿ ಶ್ರೀಲಂಕಾ ಪ್ರವಾಸದಲ್ಲಿದ್ದು, ಈ ತಂಡವನ್ನು ಶಿಖರ್ ಧವನ್ ಮುನ್ನಡೆಸುತ್ತಿದ್ದಾರೆ.

ಕೊಹ್ಲಿ ಪಡೆಗೆ ತಲೆನೋವು

ಕೊಹ್ಲಿ ಪಡೆಗೆ ತಲೆನೋವು

ಇಂಗ್ಲೆಂಡ್ ಪ್ರವಾಸದಲ್ಲಿದ್ದ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಶುಬ್ಮನ್ ಗಿಲ್ ಗಾಯಕ್ಕೀಡಾಗಿ ತಂಡದಿಂದ ಹೊರ ಬಿದ್ದಿದ್ದಾರೆ. ಹೀಗಾಗಿ ಕೊಹ್ಲಿ ಪಡೆಗೆ ತಲೆನೋವಾಗಿದೆ. ಯಾಕೆಂದರೆ ಇಂಗ್ಲೆಂಡ್‌ನಲ್ಲಿರುವ ಕೆಎಲ್ ರಾಹುಲ್ ಮತ್ತು ಮಯಾಂಕ್ ಅರ್ಗರ್ವಾಲ್ ಸದ್ಯ ಅಂಥ ಫಾರ್ಮ್‌ನಲ್ಲಿ ಇದ್ದಂತಿಲ್ಲ. ಹೀಗಾಗಿ ಶ್ರೀಲಂಕಾದಲ್ಲಿರುವ ಕನ್ನಡಿಗ ದೇವದತ್ ಪಡಿಕಲ್ ಮತ್ತು ಪೃಥ್ವಿ ಶಾ ಅವರನ್ನು ಇಂಗ್ಲೆಂಡ್‌ಗೆ ಕರೆಸಿಕೊಳ್ಳುವ ಯೋಚನೆ ಭಾರತ ತಂಡ ನಿರ್ವಹಣಾ ಸಮಿತಿಯಲ್ಲಿದೆ. ಯಾಕೆಂದರೆ ಸದ್ಯ ಇಬ್ಬರೂ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಚೇತನ್ ಶರ್ಮಾಗೆ ಮೇಲ್

ಚೇತನ್ ಶರ್ಮಾಗೆ ಮೇಲ್

"ತಂಡದ ಆಡಳಿತ ವ್ಯವಸ್ಥಾಪಕರು ಕಳೆದ ತಿಂಗಳ ಕೊನೆಯಲ್ಲಿ ಮಾಜಿ ವೇಗಿ ಚೇತನ್ ಶರ್ಮಾ ಅವರಿಗೆ ಒಂದು ಮೇಲ್ ಕಳುಹಿಸಿದ್ದಾರೆ. ಇದರಲ್ಲಿ ನಮಗೆ ಇನ್ನೂ ಇಬ್ಬರು ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಳುಹಿಸಿಕೊಡಬೇಕೆಂದು ಕೋರಿಕೊಂಡಿದ್ದಾರೆ," ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ದ್ರಾವಿಡ್ ಸರ್ ಜೊತೆ ಸಿಕ್ಕಿರುವ ಅವಕಾಶವನ್ನು ಬಾಚಿಕೊಳ್ತೀನಿ ಎಂದ ಪೃಥ್ವಿ ಶಾ | Oneindia Kannada
ಕೋರಿಕೆಗೆ ಸಂದಿಸುತ್ತಿಲ್ಲ

ಕೋರಿಕೆಗೆ ಸಂದಿಸುತ್ತಿಲ್ಲ

ಆದರೆ ಬಲ್ಲ ಮಾಹಿತಿಯ ಪ್ರಕಾರ, ಶರ್ಮಾ ಅವರಿಗೆ ಶುಬ್ಮನ್ ಗಿಲ್‌ಗೆ ಗಾಯವಾಗಿರುವ ಸಂಗತಿ ಗೊತ್ತಿದ್ದರೂ ಅವರು ತಂಡ ನಿರ್ವಹಣಾ ಸಮಿತಿಯ ಕೋರಿಗೆ ಸ್ಪಂದಿಸುವಂತೆ ಕಾಣುತ್ತಿಲ್ಲ ಎಂದು ಮೂಲ ತಿಳಿಸಿದೆ. ಕಾಲುನೋವಿಗೆ ತುತ್ತಾಗಿರುವ ಗಿಲ್‌, 6-8 ವಾರಗಳ ಕಾಲ ವಿಶ್ರಾಂತಿ ಪಡೆಯೋದು ಅನಿವಾರ್ಯವಾಗಿದೆ. ಹೀಗಾಗಿ ಭಾರತದ ಆಯ್ಕೆ ಸಮಿತಿ ಮುಂದೇನು ನಿರ್ಧರಿಸಲಿದೆ, ನಿರ್ವಹಣಾ ಸಮಿತಿ ಏನು ಮಾಡಲಿದೆ ಅನ್ನೋದು ಕುತೂಹಲ ಮೂಡಿಸಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, July 5, 2021, 21:46 [IST]
Other articles published on Jul 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X