ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಎಸ್ಎಲ್ 2018 : ಪುಟಿದೆದ್ದ ಚೆನ್ನೈ ಗೆ ಶರಣಾದ ಪುಣೆ

 ISL: Chennaiyin recover, leave Pune down in the dumps

ಪುಣೆ, ನವೆಂಬರ್ 7 : ಚೆನ್ನೈ ತಂಡ ಪುಣೆ ವಿರುದ್ಧ ಸೋತಿರಲೇ ಇಲ್ಲ, ಈ ಬಾರಿ ಸೋಲುತ್ತದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಮನೆ ಮಾಡಿತ್ತು. ಅದೇ ರೀತಿ ಪುಣೆ ತಂಡ ಪ್ರಥಮಾರ್ಧದಲ್ಲಿ ಆಶಿಕ್ ಕುರ್ನಿಯಾನ್ 9ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಮೇಲುಗೈ ಸಾಧಿಸಿತ್ತು. ಆದರೆ ಚೆನ್ನೈ ತಂಡ ದ್ವಿತೀಯಾರ್ಧದಲ್ಲಿ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಇದ್ದಕ್ಕಿದ್ದಂತೆ ಇಂಡಿಯನ್ ಸೂಪರ್ ಲೀಗ್ ನಲ್ಲಿ ಫೀನಿಕ್ಸ್ ರೀತಿ ಮೇಲಕ್ಕೆದ್ದಿತು.

ಮೆಲಿಸಾನ್ ಅಲ್ವೇಸ್ (54ನೇ ನಿಮಿಷ), ಗ್ರೆಗೊರಿ ನೆಲ್ಸನ್ (56ನೇ ನಿಮಿಷ), ಇನಿಗೋ ಕಾಲ್ದೆರೆನ್ (69ನೇ ನಿಮಿಷ), ಥೊಯ್ ಸಿಂಗ್ (72ನೇ ನಿಮಿಷ) ಗಲಿಸಿದ ಗೋಲು ಪಂದ್ಯದ ಗತಿಯನ್ನೇ ಬದಲಾಯಿಸಿತು. ಚೆನ್ನೈಯಿನ್ ತಂಡ 4-2 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮುಂದೆ ಸಾಗುವ ತನ್ನ ಆಸೆಯನ್ನು ಜೀವಂತವಾಗಿರಿಸಿತು. ಜೊನಾಥನ್ ವಿಲ್ಲಾ (90ನೇ ನಿಮಿಷ) ಗಳಿಸಿದ ಗೋಲು ಪುಣೆಯ ಸೋಲಿನ ಅಂತರವನ್ನು ಕಡಿಮೆ ಮಾಡಿತು.

ಪುಣೆ ಮೇಲುಗೈ: ಹಾಲಿ ಚಾಂಪಿಯನ್ ತಂಡ ಚೆನ್ನೈಯಿನ್‌ಗೆ ಪ್ರಥಮಾರ್ಧದಲ್ಲಿ ನಿರಾಸೆ. ಹತಾಶೆ. ಗೋಲು ಗಳಿಸುವ ಪ್ರಯತ್ನಗಳು ವಿಲವಾದವು. ರಾಬಿನ್ ಸಿಂಗ್ ನೀಡಿದ ಉತ್ತ ಮ ಪಾಸ್‌ನಿಂದ ಆಶಿಕ್ ಕುರ್ನಿಯಾನ್ 9ನೇ ನಿಮಿಷದಲ್ಲಿ ಗಳಿಸಿದ ಗೋಲು ಚೆನ್ನೈ ತಂಡ ಉತ್ಸಾಹವನ್ನೇ ಕರಗಿಸಿತು. ಅಲ್ಲಿಂದ ಚೆನ್ನೈಯಿನ್ ತಂಡಕ್ಕೆ ಒತ್ತ್ಖಕ್ಷಿದ ಮೇಲೆ ಒತ್ತಡ. ನಿರಂತರ ಪ್ರಯತ್ನ ನಡೆಸಿದರೂ ಗೋಲು ಮಾತ್ರ ದಾಖಲಾಗಲಿಲ್ಲ, ಫ್ರಾನ್ಸಿಸ್ಕೊ ಹಾಗೂ ಜೆಜೆ ಇಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಆಡಲಿಲ್ಲ.

ರಾಬಿನ್ ಸಾಹಸದಲ್ಲಿ ಗೋಲು
ಪುಣೆ ತಂಡಕ್ಕೆ ಆ ಗೋಲು ಪ್ರಮುಖವಾಯಿತು. ಆದರೆ ಪ್ರೇಕ್ಷಕರಿಗೆ ರಾಬಿನ್ ಸನ್ ನೀಡಿದ ಪಾಸ್ ಅದ್ಭುತವಾಗಿತ್ತು. ಅಂಥ ಪಾಸ್ ಬಾರದೇ ಇರುತ್ತಿದ್ದರೆ ಆಶಿಕ್ ಕುರುನಿಯಾನ್‌ಗೆ ಗೋಲು ಗಳಿಸುವುದು ಅಷ್ಟು ಸುಲಭವಾಗುತ್ತಿರಲಿಲ್ಲ. ಚೆನ್ನೈಯಿನ್ ಡಿಫೆನ್ಸ್ ವಿಭಾಗದ ಹತ್ತಿರದಲ್ಲೇ ಸಿಕ್ಕ ಪಾಸ್, 9ನೇ ನಿಮಿಷದಲ್ಲಿ ದಾಖಲಾದ ಈಗೋಲ ಚೆನ್ನೈ ತಂಡದಲ್ಲಿ ಆತಂಕ ಮನೆ ಮಾಡುವಂತೆ ಮಾಡಿತಲ್ಲದೆ, ಪುಣೆಗೆ ಅಪೂರ್ವ ಜಯಕ್ಕೆ ವೇದಿಕೆ ಹಾಕಿದಂತಿತ್ತು.

ಗೆಲ್ಲಲೇಬೇಕು
ಪುಣೆ ಸಿಟಿ ತಂಡ ಹಾಗೂ ಚೆನ್ನೈಯಿನ್ ತಂಡಗಳಿಗೆ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮುಂದೆ ಸಾಗಬೇಕಾದರೆ ಇವತ್ತಿನ ಪಂದ್ಯಗಳಲ್ಲಿ ಜಯ ಗಳಿಸಲೇಬೇಕಾಗಿದೆ. ಅದೇ ಉದ್ದೇಶ ಇರಿಸಿಕೊಂಡು ಇತ್ತಂಡಗಳು ಪುಣೆಯ ಶಿವಛತ್ರಪತಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾದವು, ಯಾವುದೇ ಲೆಕ್ಕಾಚಾರದ ಅಗತ್ಯವಿಲ್ಲ, ಬದಲಾಗಿ ಮೂರು ಅಂಕಗಳು ಸಿಕ್ಕರೇನೇ ತೃಪ್ತಿ. ಎರಡೂ ತಂಡಗಳು ಕೊನೆಯ ಸ್ಥಾನದಲ್ಲಿದ್ದು, ಅಲ್ಲಿಂದ ಮೇಲಕ್ಕೇರಬೇಕಾದರೆ ಇಲ್ಲಿ ಮೂರು ಅಂಕಗಳ ಅಗತ್ಯವಿದೆ. ಯಾರೇ ಗೆದ್ದರೂ ಋತುವಿನ ಮೊದಲ ಜಯ ಗಳಿಸಿದಂತಾಗುತ್ತದೆ.

ಆಕ್ರಮಣಕಾರಿ ಆಟ ಪ್ರದರ್ಶಿಸಿದರೆ ಮಾತ್ರ ಪುಣೆ ಸಿಟಿ ತಂಡ ಜಯದ ಗೋಲನ್ನು ದಾಖಲಿಸಬಹದು. ಮಾರ್ಸೆಲೋ ಹಾಗೂ ಅಲ್ಫಾರೋ ಅವರಿಗೆ ತಂಡದ ಪರ ಗೋಲು ಗಳಿಸಲು ಇದು ಸೂಕ್ತ ಕಾಲ. ಇನ್ನೂ ಕಾಯಬೇಕೆಂದರೆ ಆ ಸಮಯ ಈಗಾಗಲೇ ಹಾದು ಹೋಗಿದೆ.

ಕಳೆದ ಬಾರಿ ಡೆಲ್ಲಿ ಡೈನಮೋಸ್ ತಂಡ ಅನುಭವಿಸಿದ ಪರಿಸ್ಥಿತಿಯನ್ನೇ ಚೆನ್ನೆ ಹಾಗೂ ಪುಣೆ ತಂಡಗಳು ಅನುಭವಿಸುತ್ತಿವೆ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಚೆನ್ನೈ ತಂಡ ಪುಣೆ ಸಿಟಿ ವಿರುದ್ಧ ಸೋತಿರಲಿಲ್ಲ. ಎಂಟು ಬಾರಿ ಇತ್ತಂಡಗಳು ಮುಖಾಮುಖಿಯಾಗಿವೆ. ಚೆನ್ನೈಯಿನ್ ತಂಡ ಆರು ಬಾರಿ ಗೆದ್ದಿದ್ದು, ಎರಡು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.

Story first published: Wednesday, November 7, 2018, 13:05 [IST]
Other articles published on Nov 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X