ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಸ್ಪ್ರೀತ್ ಬುಮ್ರಾ 4 ವಾರಗಳಲ್ಲಿ ಚೇತರಿಕೆ ಸಾಧ್ಯತೆ! ಟಿ20 ವಿಶ್ವಕಪ್‌ಗೆ ಲಭ್ಯವಿದ್ದಾರೆಯೇ?

jasprit bumrah

ಟಿ20 ವಿಶ್ವಕಪ್‌ಗೂ ಮುನ್ನ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಂಜ್ಯುರಿ ಟೀಂ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬುಮ್ರಾ ಗಾಯಗೊಂಡಿರುವ ಕಾರಣ 2022ರ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಆದ್ರೆ ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬುಮ್ರಾರನ್ನ ತಂಡದಿಂದ ಕೈ ಬಿಡಲಾಗಿಲ್ಲ, ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ಕುರಿತಾಗಿ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ವೇಗದ ಬೌಲರ್ ಅನ್ನು ಇನ್ನೂ ಕೈಬಿಡಲಾಗಿಲ್ಲ, ಅವರು ಬಿಸಿಸಿಐ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಗಾಯದ ಸಮಸ್ಯೆಯಿಂದ ಟಿ20 ವಿಶ್ವಕಪ್ ನಿಂದ ಹೊರಗುಳಿದಿದ್ದರು.

ಬುಮ್ರಾ ಅವರ ಬೆನ್ನಿಗೆ ಒತ್ತಡ ಹೆಚ್ಚಿದೆ!

ಬುಮ್ರಾ ಅವರ ಬೆನ್ನಿಗೆ ಒತ್ತಡ ಹೆಚ್ಚಿದೆ!

ಬುಮ್ರಾ ಅವರ ವೈದ್ಯಕೀಯ ವರದಿಗಳು ಅವರಿಗೆ 'ಒತ್ತಡದ ಪ್ರತಿಕ್ರಿಯೆ' ಇದೆಯೇ ಹೊರತು 'ಒತ್ತಡ ಮುರಿತ' ಅಲ್ಲ ಎಂದು ಸೂಚಿಸುತ್ತದೆ. ಅಂದರೆ ಗಾಯವು ತೋರುವಷ್ಟು ಕೆಟ್ಟದ್ದಲ್ಲ. ಕ್ರೀಡಾಪಟುವು ಕೆಲವು ವಾರಗಳಲ್ಲಿ ಒತ್ತಡದ ಪ್ರತಿಕ್ರಿಯೆಯಿಂದ ಚೇತರಿಸಿಕೊಳ್ಳಬಹುದು. ಬುಮ್ರಾ 4-6 ವಾರಗಳಲ್ಲಿ ಚೇತರಿಸಿಕೊಳ್ಳಬಹುದಾದರೂ, ಒತ್ತಡದ ಪ್ರತಿಕ್ರಿಯೆಯ ಸಾಮಾನ್ಯ ಚೇತರಿಕೆಯ ಅವಧಿ 4 ರಿಂದ 6 ವಾರಗಳು. ಆದರೆ ಒತ್ತಡದ ಮುರಿತಕ್ಕೆ ಇದು 4 ರಿಂದ 6 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಥರ್ಡ್ ಅಂಪೈರ್ ತಪ್ಪು ನಿರ್ಧಾರಕ್ಕೆ ಪೂಜಾ ವಸ್ತ್ರಾಕರ್ ಔಟ್‌: ಯುವರಾಜ್ ಸಿಂಗ್‌ ಅಸಮಾಧಾನ!

4 ರಿಂದ 6 ವಾರಗಳಲ್ಲಿ ಸರಿಯಾಗಬಹುದು!

4 ರಿಂದ 6 ವಾರಗಳಲ್ಲಿ ಸರಿಯಾಗಬಹುದು!

ಬಿಸಿಸಿಐ ಮೂಲಗಳ ಪ್ರಕಾರ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಯಲ್ಲಿ ಬಿಸಿಸಿಐ ವೈದ್ಯಕೀಯ ತಂಡ ನಡೆಸಿದ ಸ್ಕ್ಯಾನ್‌ಗಳು ಇದು ಒತ್ತಡದ ಮುರಿತವಲ್ಲ ಆದರೆ ಒತ್ತಡದ ಪ್ರತಿಕ್ರಿಯೆ ಎಂದು ತಿಳಿದುಬಂದಿದೆ. ಇದು ಒತ್ತಡದ ಮುರಿತಕ್ಕಿಂತ ಒಂದು ಹೆಜ್ಜೆ ಕಡಿಮೆಯಾಗಿದೆ. ಒತ್ತಡದ ಮುರಿತದಿಂದ ಚೇತರಿಸಿಕೊಳ್ಳಲು 4-6 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಒತ್ತಡದ ಪ್ರತಿಕ್ರಿಯೆಯಿಂದ ಚೇತರಿಸಿಕೊಳ್ಳಲು ಇದು ಸಾಮಾನ್ಯವಾಗಿ 4-6 ವಾರಗಳನ್ನು ತೆಗೆದುಕೊಳ್ಳುತ್ತದೆ.

IND vs SA: ಧವನ್ or ಸ್ಯಾಮ್ಸನ್?; ದಕ್ಷಿಣ ಆಫ್ರಿಕಾ ವಿರುದ್ಧದ ODI ಸರಣಿಗೆ ಯಾರು ನಾಯಕ?; ವಿವರ ಇಲ್ಲಿದೆ

ಆಫ್ರಿಕಾ ಸರಣಿಯಿಂದ ಈಗಾಗಲೇ ಔಟ್‌

ಆಫ್ರಿಕಾ ಸರಣಿಯಿಂದ ಈಗಾಗಲೇ ಔಟ್‌

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಗೆ ಮೊಹಮ್ಮದ್ ಸಿರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಗಾಯದ ಸಮಸ್ಯೆಯಿಂದ ಬುಮ್ರಾ ಮೊದಲ ಟಿ20 ಆಡಿರಲಿಲ್ಲ. ಸರಣಿ ಮುಗಿದ ಬಳಿಕ ಅಕ್ಟೋಬರ್ 5ರಂದು ಭಾರತ ತಂಡ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಆದರೆ, ಬುಮ್ರಾ ಆಸ್ಟ್ರೇಲಿಯಾಕ್ಕೆ ಹೋಗುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಅಕ್ಟೋಬರ್ 15 ರೊಳಗೆ ಭಾರತ ತಂಡ ವಿಶ್ವಕಪ್ ತಂಡದಲ್ಲಿ ಬದಲಾವಣೆಗಳನ್ನು ಮಾಡಬಹುದು.

ಅಕ್ಟೋಬರ್ 23 ರಂದು ಭಾರತದ ಮೊದಲ ಪಂದ್ಯ

ಅಕ್ಟೋಬರ್ 23 ರಂದು ಭಾರತದ ಮೊದಲ ಪಂದ್ಯ

ಐಸಿಸಿ ಟಿ20 ವಿಶ್ವಕಪ್ 2022 ಅಕ್ಟೋಬರ್ 16 ರಿಂದ ಆರಂಭವಾಗಲಿದೆ. ಈ ಮಹಾಕುಂಭದ ಮೊದಲ ಪಂದ್ಯ ಆಸ್ಟ್ರೇಲಿಯಾದಲ್ಲಿ ಶ್ರೀಲಂಕಾ ಮತ್ತು ನಮೀಬಿಯಾ ನಡುವೆ ನಡೆಯಲಿದ್ದು, ನವೆಂಬರ್ 13 ರವರೆಗೆ ನಡೆಯಲಿದೆ. ಅದೇ ಸಮಯದಲ್ಲಿ, ಸೂಪರ್-12 ಪಂದ್ಯಗಳು ಅಕ್ಟೋಬರ್ 22 ರಿಂದ ಪ್ರಾರಂಭವಾಗುತ್ತವೆ.

ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. ಈ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ನಡೆಯಲಿದೆ. ಈ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವಿನ ಮೂರನೇ ಪಂದ್ಯವಾಗಿದೆ. ಈ ಹಿಂದೆ 2022ರ ಏಷ್ಯಾಕಪ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಗ್ರೂಪ್‌ ಸ್ಟೇಜ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿದ್ರೆ, ಸೂಪರ್-4 ರಲ್ಲಿ ಪಾಕಿಸ್ತಾನವು ಭಾರತವನ್ನು ಸೋಲಿಸಿತು.

Story first published: Sunday, October 2, 2022, 18:14 [IST]
Other articles published on Oct 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X