ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಅಂಗಣದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಜೋ ರೂಟ್‌!

ICC World Cup 2019 : ಸಾಧನೆಯಲ್ಲಿ ರೋಹಿತ್ ಬಳಿ ಬಂದ ರೂಟ್..! | Joe Root | Oneindia Kannada
Joe Root becomes first England player to hit 500 run in World Cup

ಚೆಸ್ಟರ್‌ ಲೇ ಸ್ಟ್ರೀಟ್‌, ಜುಲೈ 03: ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆಯುತ್ತಿರುವ ಹನ್ನೆರಡನೇ ಆವೃತ್ತಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ತಂಡ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದು, ಇದೇ ಪಂದ್ಯದಲ್ಲಿ ಜೋ ರೂಟ್‌ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇಲ್ಲಿನ ರಿವರ್‌ಸೈಡ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ತಂಡದ ಪರ ರೂಟ್‌ 25 ಎಸೆತಗಳಲ್ಲಿ ಒಂದು ಫೋರ್‌ ಒಳಗೊಂಡ 24 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತರಾದರು. ಆದರೆ, ಇದೇ ವೇಳೆ ಪ್ರಸಕ್ತ ವಿಶ್ವಕಪ್‌ನಲ್ಲಿ 500 ರನ್‌ಗಳನ್ನು ಗಳಿಸಿದ ಗಡಿ ಮುಟ್ಟಿದರು.

ರಾಯುಡು ಬೇಡ ಮಯಾಂಕ್‌ ಬೇಕೆಂದಿದ್ದು, ಕೊಹ್ಲಿ ಮತ್ತು ಶಾಸ್ತ್ರಿ!ರಾಯುಡು ಬೇಡ ಮಯಾಂಕ್‌ ಬೇಕೆಂದಿದ್ದು, ಕೊಹ್ಲಿ ಮತ್ತು ಶಾಸ್ತ್ರಿ!

ಈ ಮೂಲಕ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ 500 ರನ್‌ಗಳನ್ನು ದಾಖಲಿಸಿದ ಇಂಗ್ಲೆಂಡ್‌ನ ಮೊತ್ತ ಮೊದಲ ಬ್ಯಾಟ್ಸ್‌ಮನ್‌ ಎಂಬ ಇತಿಹಾಸ ಬರೆದಿರುವ ರೂಟ್, ಆಡಿದ 9 ಪಂದ್ಯಗಳಿಂದ 2 ಶತಕಗಳನ್ನು ಒಳಗೊಂಡಂತೆ 500 ರನ್‌ಗಳನ್ನು ಗಳಿಸಿದ್ದಾರೆ. ಈ ಐತಿಹಾಸಿಕ ಮೈಲುಗಲ್ಲು ಮುಟ್ಟಿದ ಬಳಿಕ ಕಿವೀಸ್‌ನ ವೇಗಿ ಟ್ರೆಂಟ್‌ ಬೌಲ್ಟ್‌ ಇಂಗ್ಲಿಷ್‌ ಬ್ಯಾಟ್ಸ್‌ಮನ್‌ಗೆ ಪೆವಿಲಿಯನ್‌ ದಾರಿ ತೋರಿದರು.

ಅಂಬಾಟಿ ರಾಯುಡು ನಿವೃತ್ತಿ ಬಗ್ಗೆ ಗುಡುಗಿದ ಗೌತಮ್‌ ಗಂಭೀರ್‌!ಅಂಬಾಟಿ ರಾಯುಡು ನಿವೃತ್ತಿ ಬಗ್ಗೆ ಗುಡುಗಿದ ಗೌತಮ್‌ ಗಂಭೀರ್‌!

ಅಂದಹಾಗೆ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ 500 ರನ್‌ಗಳ ಗಡಿ ಮುಟ್ಟಿದವರ ಪೈಕಿ ಜೋ ರೂಟ್‌ ಐದನೇಯವರಾಗಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಟೀಮ್‌ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ (544) ಅಗ್ರಸ್ಥಾನದಲ್ಲಿದ್ದು, ಬಾಂಗ್ಲಾ ತಂಡದ ಆಲ್‌ರೌಂಡರ್‌ ಶಾಕಿಬ್‌ ಅಲ್‌ ಹಸನ್‌ (542) ದ್ವಿತೀಯ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೇವಿಡ್‌ ವಾರ್ನರ್‌ (516) ಮತ್ತು ಆರೊನ್‌ ಫಿಂಚ್‌ (504) ಕ್ರಮವಾಗಿ 3ನೇ ಮತ್ತು 4ನೇ ಸ್ಥಾನದಲ್ಲಿದ್ದಾರೆ.

ಭಾರತ ತಂಡಕ್ಕೆ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಹೆಸರಿಸಿದ ಯುವರಾಜ್‌!ಭಾರತ ತಂಡಕ್ಕೆ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಹೆಸರಿಸಿದ ಯುವರಾಜ್‌!

ಇಂಗ್ಲೆಂಡ್‌ ತಂಡ ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇದ್ದು, ನ್ಯೂಜಿಲೆಂಡ್‌ ವಿರುದ್ಧ ಗೆದ್ದರೆ ಮಾತ್ರವೇ ಸೆಮಿಫೈನಲ್ಸ್‌ಗೆ ಮುನ್ನಡೆಯುವ ಅವಕಾಶ ಪಡೆಯಲಿದೆ. ಒಂದು ವೇಳೆ ಸೋತರೆ 5ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ ತನ್ನ ಅಂತಿಮ ಲೀಗ್‌ ಪಾಂದ್ಯಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲುವಂತೆ ಇಂಗ್ಲೆಂಡ್‌ ಪ್ರಾರ್ಥಿಸಬೇಕಿದೆ. ಒಂದು ವೇಳೆ ಪಾಕ್‌ ತಂಡ ಗೆದ್ದರೂ ಭಾರಿ ರನ್‌ ರೇಟ್‌ ಮೂಲಕ ಗೆದ್ದರಷ್ಟೇ ಇಂಗ್ಲೆಂಡ್‌ಗೆ ಸಂಕಷ್ಟ ಎದುರಾಗಲಿದೆ.

Story first published: Wednesday, July 3, 2019, 19:58 [IST]
Other articles published on Jul 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X