ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಅಲ್ಲ ಅತಿಹೆಚ್ಚು ಸಂಭಾವನೆ ಪಡೆಯುವ ನಾಯಕ; ಇಲ್ಲಿದೆ ಟಾಪ್ 5 ನಾಯಕರ ಪಟ್ಟಿ

Joe Root pips Virat Kohli to become highest paid captain
Top 5 Highest paid Cricket Captains | ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಾಯಕ ಯಾರು ಗೊತ್ತಾ..?

ಕೊರೊನಾವೈರಸ್ ಹಾವಳಿಯ ನಡುವೆಯೂ ಈ ವರ್ಷ ಸಾಕಷ್ಟು ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲಾಗುತ್ತಿದ್ದು ವರ್ಷದ ಮುಂದಿನ ದಿನಗಳಲ್ಲಿ ಹಲವಾರು ದೊಡ್ಡ ದೊಡ್ಡ ಟೂರ್ನಿಗಳು ನಡೆಯಲಿವೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಸೇರಿದಂತೆ ಇನ್ನೂ ಹಲವಾರು ಪ್ರಮುಖ ಟೂರ್ನಿಗಳು ನಡೆಯಲಿದ್ದು ಕ್ರೀಡಾಭಿಮಾನಿಗಳಿಗೆ ಮನರಂಜನೆ ಕಟ್ಟಿಟ್ಟ ಬುತ್ತಿ.

ಟೀಮ್ ಇಂಡಿಯಾದಲ್ಲಿ ಅವಕಾಶ ನೀಡದೇ ಕಡೆಗಣಿಸಿದ್ದರ ಬಗ್ಗೆ ಮೌನ ಮುರಿದ ಯುವರಾಜ್ ಸಿಂಗ್ಟೀಮ್ ಇಂಡಿಯಾದಲ್ಲಿ ಅವಕಾಶ ನೀಡದೇ ಕಡೆಗಣಿಸಿದ್ದರ ಬಗ್ಗೆ ಮೌನ ಮುರಿದ ಯುವರಾಜ್ ಸಿಂಗ್


ಜಗತ್ತಿನಲ್ಲಿರುವ ಕ್ರೀಡಾಭಿಮಾನಿಗಳಿಗೆ ಕ್ರಿಕೆಟ್ ಅಗತ್ಯವಾಗಿ ಬೇಕಾಗಿರುವಂತಹ ಆಟಗಳಲ್ಲೊಂದು. ಕ್ರೀಡಾಭಿಮಾನಿಗಳಿಗೆ ತಮ್ಮ ನೆಚ್ಚಿನ ತಂಡದ ಆಟಗಾರರ ಮೇಲೆ ಬಹಳ ನಿರೀಕ್ಷೆಗಳಿರುತ್ತವೆ, ಈ ನಿರೀಕ್ಷೆಗಳ ಜವಾಬ್ದಾರಿಯನ್ನು ಹೊತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವವರು ತಂಡದ ನಾಯಕರು. ಇತರ ಆಟಗಾರರಂತೆ ವೈಯಕ್ತಿಕವಾಗಿ ಉತ್ತಮ ಪ್ರದರ್ಶನವನ್ನು ನೀಡುವುದು ಮಾತ್ರವಲ್ಲದೆ ತಂಡದ ಜವಾಬ್ದಾರಿಗಳನ್ನು ಹೊತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಬಾಧ್ಯತೆ ನಾಯಕನಿಗಿರುತ್ತದೆ. ಮೈದಾನದಲ್ಲಿ ಸದಾ ಭಿನ್ನ ವಿಭಿನ್ನ ಯೋಜನೆಗಳನ್ನು ಹಾಕಿಕೊಳ್ಳುತ್ತಾ ತಂಡವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸುವ ನಾಯಕರಿಗೆ ತುಸು ಹೆಚ್ಚೇ ಸಂಭಾವನೆಯನ್ನು ನೀಡಲಾಗುತ್ತದೆ. ಈ ಸಂಭಾವನೆ ಒಂದು ದೇಶದ ನಾಯಕನಿಂದ ಮತ್ತೊಂದು ದೇಶದ ನಾಯಕನಿಗೆ ಭಿನ್ನವಾಗಿರುತ್ತದೆ.

ಉಳಿದ 31 ಐಪಿಎಲ್ ಪಂದ್ಯಗಳನ್ನು ಈ ತಿಂಗಳುಗಳಲ್ಲಿ ನಡೆಸಲು ಬಿಸಿಸಿಐ ಯೋಜನೆಉಳಿದ 31 ಐಪಿಎಲ್ ಪಂದ್ಯಗಳನ್ನು ಈ ತಿಂಗಳುಗಳಲ್ಲಿ ನಡೆಸಲು ಬಿಸಿಸಿಐ ಯೋಜನೆ

ಹೀಗೆ ಅತಿಹೆಚ್ಚು ವಾರ್ಷಿಕ ಸಂಭಾವನೆಯನ್ನು ಪಡೆಯುವ ಟಾಪ್ 5 ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳ ನಾಯಕರ ಪಟ್ಟಿ ಈ ಕೆಳಕಂಡಂತಿದೆ ನೋಡಿ.

5. ಕೇನ್ ವಿಲಿಯಮ್ಸನ್: ನ್ಯೂಜಿಲೆಂಡ್‌

5. ಕೇನ್ ವಿಲಿಯಮ್ಸನ್: ನ್ಯೂಜಿಲೆಂಡ್‌

ಇತ್ತೀಚಿನ ವರ್ಷಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ನಾಯಕ ಎಂದರೆ ಅದು ಕೇನ್ ವಿಲಿಯಮ್ಸನ್. ನ್ಯೂಜಿಲೆಂಡ್ ತಂಡವನ್ನು ಎಲ್ಲ ಮಾದರಿಯಲ್ಲಿಯೂ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕೇನ್ ವಿಲಿಯಮ್ಸನ್ ಪಡೆಯುವ ಸಂಭಾವನೆ 1.77 ಕೋಟಿ ರೂಪಾಯಿಗಳು.

4. ಡೀನ್ ಎಲ್ಗರ್: ಸೌತ್ಆಫ್ರಿಕಾ

4. ಡೀನ್ ಎಲ್ಗರ್: ಸೌತ್ಆಫ್ರಿಕಾ

ದಕ್ಷಿಣ ಆಫ್ರಿಕಾದ ಟಿ ಟ್ವೆಂಟಿ ಮತ್ತು ಏಕದಿನ ತಂಡಗಳ ನಾಯಕ ಡೀನ್ ಎಲ್ಗರ್ 3.2 ಕೋಟಿ ರೂ ಸಂಭಾವನೆ ಪಡೆದರೆ, ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ತೆಂಬಾ ಬಾವುಮಾ 2.5 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ.

3. ಆ್ಯರನ್ ಫಿಂಚ್: ಆಸ್ಟ್ರೇಲಿಯಾ

3. ಆ್ಯರನ್ ಫಿಂಚ್: ಆಸ್ಟ್ರೇಲಿಯಾ

ಆಸ್ಟ್ರೇಲಿಯಾದ ಟಿ ಟ್ವೆಂಟಿ ಮತ್ತು ಏಕದಿನ ತಂಡಗಳ ನಾಯಕ ಆ್ಯರನ್ ಫಿಂಚ್ 4.87 ಕೋಟಿ ರೂ ಸಂಭಾವನೆಯನ್ನು ಪಡೆದರೆ, ಟೆಸ್ಟ್ ತಂಡವನ್ನು ಮುನ್ನಡೆಸುವ ಟಿಮ್ ಪೇನ್ ಕೂಡ 4.87 ಕೋಟಿ ರೂ ಸಂಭಾವನೆಯನ್ನು ಪಡೆಯುತ್ತಿದ್ದಾರೆ.

2. ವಿರಾಟ್ ಕೊಹ್ಲಿ: ಭಾರತ

2. ವಿರಾಟ್ ಕೊಹ್ಲಿ: ಭಾರತ

ಟೀಮ್ ಇಂಡಿಯಾ ತಂಡವನ್ನು ಎಲ್ಲಾ ಮಾದರಿಯ ಕ್ರಿಕೆಟ್‍ಗಳಲ್ಲಿ ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಾಯಕ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕನಾಗಿ 7 ಕೋಟಿ ಸಂಭಾವನೆ ಪಡೆಯುವುದರ ಮೂಲಕ ಅತಿಹೆಚ್ಚು ಸಂಭಾವನೆ ಪಡೆಯುವ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳ ನಾಯಕರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

1. ಜೋ ರೂಟ್: ಇಂಗ್ಲೆಂಡ್

1. ಜೋ ರೂಟ್: ಇಂಗ್ಲೆಂಡ್

ನಂಬಲಸಾಧ್ಯ ಎನಿಸಿದರೂ ಇದು ಸತ್ಯ, ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿರಾಟ್ ಕೊಹ್ಲಿಗಿಂತ ಅಧಿಕ ಸಂಭಾವನೆ ಪಡೆಯುವಂತಹ ನಾಯಕ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡವನ್ನು ಮುನ್ನಡೆಸುವ ಜೋ ರೂಟ್ 8.97 ಕೋಟಿ ರೂ ಸಂಭಾವನೆಯನ್ನು ಪಡೆದರೆ, ಟಿ ಟ್ವೆಂಟಿ ಮತ್ತು ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುವ ಇಯಾನ್ ಮಾರ್ಗನ್ 1.75 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ.

Story first published: Monday, May 24, 2021, 13:54 [IST]
Other articles published on May 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X