ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಎದುರು 2008ರ ಸೆಮಿ ಸೋಲಿಗೆ ಮುಯ್ಯಿ ತೀರಿಸಿಕೊಂಡ ವಿಲಿಯಮ್ಸನ್

Kane Williamson gets revenge on Virat Kohli for 2008 semi loss

ಮ್ಯಾಂಚೆಸ್ಟರ್, ಜುಲೈ 11: 2008ರ ಅಂಡರ್ 19 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಎದುರು ಅನುಭವಿಸಿದ ಸೋಲಿಗೆ ಕೇನ್ ವಿಲಿಮ್ಸನ್ ಮುಯ್ಯಿ ತೀರಿಸಿಕೊಂಡಿದ್ದಾರೆ. ಬುಧವಾರ (ಜುಲೈ 10) ನಡೆದ ಐಸಿಸಿ ವಿಶ್ವಕಪ್ 2019ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಭಾರತ 18 ರನ್‌ಗಳಿಂದ ತಲೆ ಬಾಗಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಸುಮಾರು 11 ವರ್ಷಗಳಿಗೆ ಹಿಂದೆ ಅಂದರೆ 2008ರಲ್ಲಿ ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ನಲ್ಲಿ ಕೇನ್ ವಿಲಿಯಮ್ಸ್ ನಾಯಕತ್ವದ ನ್ಯೂಜಿಲೆಂಡ್ ತಂಡವನ್ನು ವಿರಾಟ್ ಕೊಹ್ಲಿ ಮುಂದಾಳತ್ವದ ಟೀಮ್ ಇಂಡಿಯಾ 3 ವಿಕೆಟ್‌ಗಳಿಂದ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಮಣಿಸಿತ್ತು.

ಸೆಮಿಫೈನಲ್‌ನಲ್ಲಿ ಭಾರತ ಎಡವಿದೆಲ್ಲಿ ಎಂದು ವಿವರಿಸಿದ ಗಂಗೂಲಿ!ಸೆಮಿಫೈನಲ್‌ನಲ್ಲಿ ಭಾರತ ಎಡವಿದೆಲ್ಲಿ ಎಂದು ವಿವರಿಸಿದ ಗಂಗೂಲಿ!

ಬುಧವಾರ ನ್ಯೂಜಿಲೆಂಡ್ ಇದಕ್ಕೆ ಸೇಡು ತೀರಿಸಿಕೊಂಡಂತಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ 50 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 239 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಭಾರತ 49.3 ಓವರ್‌ ಮುಕ್ತಾಯಕ್ಕೆ ಸರ್ವ ಪತನ ಕಂಡು 221 ರನ್ ಬಾರಿಸಿ ಶರಣಾಗಿದೆ.

11 ವರ್ಷಗಳ ಹಿಂದಿನ ಅಂಡರ್ 19 ವಿಶ್ವಕಪ್‌ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 50 ಓವರ್‌ಗೆ 8 ವಿಕೆಟ್ ಕಳೆದು 205 ರನ್ ಮಾಡಿತ್ತು. ಪಂದ್ಯಕ್ಕೆ ಮಳೆ ತೊಂದರೆ ನೀಡಿದ್ದರಿಂದ ಡಿಎಲ್ಎಸ್ ನಿಯಮದ ಪ್ರಕಾರ ಭಾರತಕ್ಕೆ 43 ಓವರ್‌ಗಳಲ್ಲಿ 191 ರನ್ ಟಾರ್ಗೆಟ್ ನೀಡಲಾಗಿತ್ತು. ಭಾರತ 41.3 ಓವರ್‌ನಲ್ಲಿ ಗುರಿ ತಲುಪಿ ಸಂಭ್ರಮಾಚರಿಸಿತ್ತು.

ವಿಶ್ವಕಪ್ 2019: ಫೀಲ್ಡಿಂಗ್‌ಗಾಗಿ ವಿಶಿಷ್ಠ ದಾಖಲೆ ಬರೆದ ರವೀಂದ್ರ ಜಡೇಜಾವಿಶ್ವಕಪ್ 2019: ಫೀಲ್ಡಿಂಗ್‌ಗಾಗಿ ವಿಶಿಷ್ಠ ದಾಖಲೆ ಬರೆದ ರವೀಂದ್ರ ಜಡೇಜಾ

ಅಂದಿನ ಪಂದ್ಯದಲ್ಲಿ ನಾಯಕ ವಿಲಿಯಮ್ಸನ್ 37 ರನ್ ಬಾರಿಸಿದ್ದರು. ಕೊಹ್ಲಿ 43 ರನ್ ಕೊಡುಗೆ ನೀಡಿದ್ದರು. ಬುಧವಾರದ ಪಂದ್ಯದಲ್ಲಿ ವಿಲಿಯಮ್ಸನ್ 67 ರನ್ ಬಾರಿಸಿದ್ದರೆ, ಕೊಹ್ಲಿ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಅಂತೂ ಕಿವೀಸ್ ಎದುರಿನ ಸೋಲಿನೊಂದಿಗೆ ವಿಶ್ವಕಪ್ 2018ರಲ್ಲಿ ಭಾರತದ ಸ್ಪರ್ಧೆ ಕೊನೆಗೊಂಡಿದೆ.

Story first published: Thursday, July 11, 2019, 11:18 [IST]
Other articles published on Jul 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X