ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ 2018-19 : ಕರ್ನಾಟಕದ ವೇಳಾಪಟ್ಟಿ

By Mahesh
Karnataka team schedule for schedule for Ranji Trophy 2018-19

ಬೆಂಗಳೂರು, ಆಗಸ್ಟ್ 28: 2018-19ನೇ ಸಾಲಿನ ರಣಜಿ ಟ್ರೋಫಿಯಲ್ಲಿ 37 ತಂಡಗಳು ಪಾಲ್ಗೊಳ್ಳಲಿದ್ದು, 9 ಹೊಸ ತಂಡಗಳು ಸೇರ್ಪಡೆಯಾಗಿವೆ. ಎಲೈಟ್ ಗುಂಪಿನ ಎ ಮತ್ತು ಬಿ ಗುಂಪಿನಲ್ಲಿ ತಲಾ 9 ತಂಡಗಳು ಇರಲಿದ್ದು, ಸಿ ಗುಂಪಿನಲ್ಲಿ 10 ತಂಡಗಳು ಇರಲಿವೆ. ಕರ್ನಾಟಕ ತಂಡದ ರಣಜಿ, ವಿಜಯ್ ಹಜಾರೆ ಹಾಗೂ ಸಯ್ಯದ ಮುಷ್ತಾಕ್ ಟ್ರೋಫಿಯ ವೇಳಾಪಟ್ಟಿ ಪ್ರಕಟವಾಗಿದೆ.

2018-19ರ ಅವಧಿಗೆ ಕರ್ನಾಟಕದ ಹಿರಿಯರು, ಅಂಡರ್ 23, ಅಂಡರ್ 19 ತಂಡಕ್ಕೆ ನೂತನ ಕೋಚ್ ಗಳು ಆಗಮಿಸಿದ್ದಾರೆ. ಕರ್ನಾಟಕ ರಣಜಿ ತಂಡದ ಕೋಚ್ ಗಳಾಗಿದ್ದ ಪಿವಿ ಶಶಿಕಾಂತ್ ಹಾಗೂ ಜಿಕೆ ಅನಿಲ್ ಕುಮಾರ್ ಬದಲಿಗೆ ಶ್ರೀನಾಥ್ ಅರವಿಂದ್ ಹಾಗೂ ಕರ್ನಾಟಕದ ಮಾಜಿ ಬ್ಯಾಟ್ಸ್ ಮನ್ ಕೆಟಿ ಯರೇಗೌಡ ಅವರನ್ನು ನೇಮಿಸಲಾಗಿದೆ.

ಪ್ರಸಕ್ತ ಸಾಲಿನಿಂದ ರಣಜಿಯಲ್ಲಿ ಆಡಲಿವೆ 37 ತಂಡಗಳುಪ್ರಸಕ್ತ ಸಾಲಿನಿಂದ ರಣಜಿಯಲ್ಲಿ ಆಡಲಿವೆ 37 ತಂಡಗಳು

ರಣಜಿ ಟ್ರೋಫಿ ನಾಕೌಟ್ ಪಂದ್ಯಗಳು ಜನವರಿ 15 ರಿಂದ ಆರಂಭವಾಗಲಿವೆ. ಟ್ರೋಫಿ ಗೆದ್ದ ತಂಡ ಮತ್ತು ಭಾರತದ ಇತರೆ ತಂಡಗಳ ನಡುವಣ ಇರಾನಿ ಟ್ರೋಫಿ ಫೆಬ್ರವರಿ 11 ರಂದು ನಡೆಯಲಿದೆ. ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಗಳಲ್ಲಿಯೂ ಎಲ್ಲ 37 ತಂಡಗಳು ಭಾಗವಹಿಸಲಿವೆ.

ರಣಜಿ ಟ್ರೋಫಿ 2018-19ರ ವೇಳಾಪಟ್ಟಿ

ರಣಜಿ ಟ್ರೋಫಿ 2018-19ರ ವೇಳಾಪಟ್ಟಿ

ಕರ್ನಾಟಕ ರಣಜಿ ಟ್ರೋಫಿ 2018-19ರ ವೇಳಾಪಟ್ಟಿ
ನವೆಂಬರ್ 12: v/s ವಿದರ್ಭ
ನವೆಂಬರ್ 20: ಮುಂಬೈ
ನವೆಂಬರ್ 28: ಮಹಾರಾಷ್ಟ್ರ
ಡಿಸೆಂಬರ್ 06: ಸೌರಾಷ್ಟ್ರ
ಡಿಸೆಂಬರ್ 14: ಗುಜರಾತ್
ಡಿಸೆಂಬರ್ 22 : ರೈಲ್ವೇಸ್
ಡಿಸೆಂಬರ್ 30: ಛತ್ತೀಸ್ ಗಢ
ಜನವರಿ 07: ಬರೋಡಾ

ವಿಜಯ್ ಹಜಾರೆ ಟ್ರೋಫಿ 2018-19

ವಿಜಯ್ ಹಜಾರೆ ಟ್ರೋಫಿ 2018-19

ವಿಜಯ್ ಹಜಾರೆ ಟ್ರೋಫಿ 2018-19: ಕರ್ನಾಟಕದ ವೇಳಾಪಟ್ಟಿ
ಸೆಪ್ಟೆಂಬರ್ 20: vs ಮಹಾರಾಷ್ಟ, ಎಂ ಚಿನ್ನಸ್ವಾಮಿ ಕ್ರೀಡಾಂಗಣ
ಸೆಪ್ಟೆಂಬರ್ 21: ಮುಂಬೈ, ಎಂ ಚಿನ್ನಸ್ವಾಮಿ ಕ್ರೀಡಾಂಗಣ
ಸೆಪ್ಟೆಂಬರ್ 24: ಗೋವಾ, ಜಸ್ಟ್ ಕ್ರಿಕೆಟ್ , ಬೆಂಗಳೂರು
ಸೆಪ್ಟೆಂಬರ್ 26: ಬರೋಡಾ, ಜಸ್ಟ್ ಕ್ರಿಕೆಟ್, ಬೆಂಗಳೂರು
ಸೆಪ್ಟೆಂಬರ್ 30: ವಿದರ್ಭ, ಆಲೂರು ಮೈದಾನ
ಅಕ್ಟೋಬರ್ 04: ರೈಲ್ವೇಸ್, ಎಂ ಚಿನ್ನಸ್ವಾಮಿ ಕ್ರೀಡಾಂಗಣ
ಅಕ್ಟೋಬರ್ 06 : ಹಿಮಾಚಲ ಪ್ರದೇಶ, ಎಂ ಚಿನ್ನಸ್ವಾಮಿ ಕ್ರೀಡಾಂಗಣ
ಅಕ್ಟೋಬರ್ 08 : ಪಂಜಾಬ್, ಎಂ ಚಿನ್ನಸ್ವಾಮಿ ಕ್ರೀಡಾಂಗಣ

ಸಯ್ಯದ್ ಮುಷ್ತಾಕ್ ಟ್ರೋಫಿ (ಟಿ20) 2018-19

ಸಯ್ಯದ್ ಮುಷ್ತಾಕ್ ಟ್ರೋಫಿ (ಟಿ20) 2018-19

ಸಯ್ಯದ್ ಮುಷ್ತಾಕ್ ಟ್ರೋಫಿ (ಟಿ20) 2018-19: ಕರ್ನಾಟಕದ ವೇಳಾಪಟ್ಟಿ
ಫೆಬ್ರವರಿ 21 : vs ಅಸ್ಸಾಂ
ಫೆಬ್ರವರಿ 22: ಬೆಂಗಾಲ
ಫೆಬ್ರವರಿ 24 : ಅರುಣಾಚಲ ಪ್ರದೇಶ
ಫೆಬ್ರವರಿ 25: ಮಿಜೋರಾಮ್
ಫೆಬ್ರವರಿ 27 : ಛತ್ತೀಸ್ ಗಢ
ಫೆಬ್ರವರಿ 28: ಒಡಿಶಾ
ಮಾರ್ಚ್ 02 : ಹರ್ಯಾಣ

ರಾಜ್ಯ ತಂಡ ರಣಜಿ ಅಭಿಯಾನ

ರಾಜ್ಯ ತಂಡ ರಣಜಿ ಅಭಿಯಾನ

ನವೆಂಬರ್ 12ರಂದು ಹಾಲಿ ಚಾಂಪಿಯನ್ ವಿದರ್ಭ ವಿರುದ್ಧ ಆಡುವ ಮೂಲಕ ರಾಜ್ಯ ತಂಡ ರಣಜಿ ಅಭಿಯಾನ ಆರಂಭಿಸಲಿದೆ. ಕಳೆದ ರಣಜಿ ಋತುವಿನಲ್ಲಿ ಕರ್ನಾಟಕ ತಂಡ ಸೆಮಿಫೈನಲ್ ಹಂತದಲ್ಲಿ ವಿದರ್ಭ ವಿರುದ್ಧ ಸೋಲು ಕಂಡಿತ್ತು.

ಕ್ರಮವಾಗಿ ಮುಂಬೈ, ಮಹಾರಾಷ್ಟ್ರ, ಸೌರಾಷ್ಟ್ರ, ಗುಜರಾತ್, ರೈಲ್ವೇಸ್, ಛತ್ತೀಸ್​ಗಢ ಹಾಗೂ ಕೊನೇ ಪಂದ್ಯದಲ್ಲಿ ಬರೋಡವನ್ನು ಎದುರಿಸಲಿದೆ. ಆದರೆ, ಪಂದ್ಯಗಳ ಸ್ಥಳಗಳನ್ನು ಬಿಸಿಸಿಐ ಇನ್ನಷ್ಟೇ ನಿರ್ಧಾರ ಮಾಡಬೇಕಿದೆ.

Story first published: Thursday, October 25, 2018, 15:33 [IST]
Other articles published on Oct 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X