ವಿಜಯ ಹಜಾರೆ ನಾಕೌಟ್ ಹಂತಕ್ಕೆ ಕರುಣ್ ನಾಯರ್ ನಾಯಕ

Posted By:
Karun Nair to lead Karnataka Vijay Hazare knockouts

ಬೆಂಗಳೂರು, ಫೆಬ್ರವರಿ 18 : ವಿಜಯ್ ಹಜಾರೆ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳು ಫೆಬ್ರವರಿ 21 ರಿಂದ 27ರ ತನಕ ನಡೆಯಲಿವೆ. ನಾಕೌಟ್ ಹಂತದಲ್ಲಿ ಕರ್ನಾಟಕ ತಂಡವನ್ನು ಕರುಣ್ ನಾಯರ್ ಅವರು ಮುನ್ನಡೆಸಲಿದ್ದಾರೆ.

ಕೊನೆ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ನಾಕೌಟ್ ಹಂತ ತಲುಪಿರುವ ಕರ್ನಾಟಕಕ್ಕೆ ಕೊಂಚ ಹಿನ್ನಡೆಯಾಗಿದೆ. ನಾಯಕ ಆರ್ ವಿನಯ್ ಕುಮಾರ್ ಅವರು ಗಾಯಗೊಂಡಿದ್ದು ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಬೆಂಗಳೂರಿನ ಹೊರ ವಲಯದ ಆಲೂರು ಮೈದಾನದಲ್ಲಿ ಕೊನೆ ಲೀಗ್ ಪಂದ್ಯಕ್ಕೂ ಮುನ್ನವೇ ನಾಯಕ ಆರ್ ವಿನಯ್ ಕುಮಾರ್ ಅವರು ತಮ್ಮ ಮೊಣಕೈಗೆ ಗಾಯಮಾಡಿಕೊಂಡರು. ಹೀಗಾಗಿ, ರೈಲ್ವೇಸ್ ವಿರುದ್ಧದ ಪಂದ್ಯವನ್ನಾಡಿರಲಿಲ್ಲ. ರೈಲ್ವೇಸ್ ವಿರುದ್ಧ 16 ರನ್ ಗಳಿಂದ ಗೆಲುವು ಸಾಧಿಸಿದ ಕರ್ನಾಟಕ ನಾಕೌಟ್ ಹಂತ ತಲುಪಿದೆ.

ಕರ್ನಾಟಕ ತಂಡ : ಕರುಣ್ ನಾಯರ್ (ನಾಯಕ), ಮಾಯಾಂಕ್ ಅಗರವಾಲ್, ಆರ್ ಸಮರ್ಥ್, ಸ್ಟುವರ್ಟ್ ಬಿನ್ನಿ, ಸಿಎಂ ಗೌತಮ್(ವಿಕೆಟ್ ಕೀಪರ್), ಪವನ್ ದೇಶಪಾಂಡೆ, ಕೆ ಗೌತಮ್, ಶ್ರೇಯಸ್ ಗೋಪಾಲ್, ಪ್ರಸಿಧ್ ಕೃಷ್ಣ, ಆರವಿಂದ್ ಎಸ್, ರೋನಿತ್ ಮೋರೆ, ಜೆ ಸುಚಿತ್, ಟಿ ಪ್ರದೀಪ್, ದೇವದತ್ ಪಿ, ಬಿಆರ್ ಶರತ್ (ವಿಕೆಟ್ ಕೀಪರ್).

Story first published: Sunday, February 18, 2018, 17:23 [IST]
Other articles published on Feb 18, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ