ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಸಿಸಿ 2018 : ಸುದೀಪ್ ತಂಡದ ಮೇಲೆ ಗಣೇಶ್ ತಂಡದ ಸವಾರಿ

By Mahesh
KCC 2018 : Wodeyar Chargers vs Kadamba Lions

ಬೆಂಗಳೂರು, ಸೆಪ್ಟೆಂಬರ್ 08: ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಟಿ10 ಕ್ರಿಕೆಟ್ ಟೂರ್ನಿಗೆ ಶನಿವಾರ ಚಾಲನೆ ಸಿಕ್ಕಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರದಂದು ಕ್ರಿಕೆಟ್ ಹಬ್ಬ ಕ್ರಿಕೆಟ್ ಹಾಗೂ ಸಿನಿಮಾ ಪ್ರೇಮಿಗಳ ಮನಸ್ಸು ತಣಿಸಲಿದೆ.

ಸ್ಟಾರ್ ನಟರು ವಿವಿಧ ತಂಡಗಳ ಸಾರಥ್ಯ ವಹಿಸಿದ್ದರೆ ಮಾಜಿ ಸ್ಟಾರ್ ಕ್ರಿಕೆಟಿಗರು ತಂಡಕ್ಕೆ ಬಲ ತುಂಬಲಿದ್ದಾರೆ. ಮಾಧ್ಯಮ ಸಿಬ್ಬಂದಿ ಮತ್ತು ರಾಜ್ಯದ ಹಾಲಿ ವೃತ್ತಿಪರ ಆಟಗಾರರು ಕೂಡ ಟೂರ್ನಿಯಲ್ಲಿ ಆಡಲಿದ್ದಾರೆ. ಕಿಚ್ಚ ಸುದೀಪ್ ಸಾರಥ್ಯದ ಕದಂಬ ಲಯನ್ಸ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ ತಂಡಗಳು ಶನಿವಾರದ ಮೊದಲ ಪಂದ್ಯ ಜಾರಿಯಲ್ಲಿದೆ.


ವಡೇಯರ್ಸ್ ಚೇಸಿಂಗ್:
ದಿಲ್ಶನ್ ಹಾಗೂ ಸೈಯದ್ ಆರಂಭಿಕರಾಗಿ ಕಣಕ್ಕಿಳಿದರು. 122ರನ್ ಟಾರ್ಗೆಟ್ ಚೇಸಿಂಗ್ ಉತ್ತಮವಾಗಿ ಆರಂಭಿಸಿದ್ದಾರೆ.3 ಓವರ್ ಗಳ ನಂತರ 28ರನ್ ಚೆಚ್ಚಿದರು. ರಿತೇಶ್ ಭಟ್ಕಳ್ ಉತ್ತಮವಾಗಿ ಆಡಿ ತಂಡಕ್ಕೆ 5 ವಿಕೆಟ್ ಗಳ ಜಯ ತಂದಿತ್ತರು. ಕೊನೆ ಎರಡು ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿದರು.

ಕದಂಬ ಲಯನ್ಸ್ :
ಮೊದಲು ಬ್ಯಾಟ್ ಮಾಡಿದ ಕಿಚ್ಚ ಸುದೀಪ್ ಅವರ ಕದಂಬ ಲಯನ್ಸ್ ಪರ ವೀರೇಂದ್ರ ಸೆಹ್ವಾಗ್ ಹಾಗೂ ಪ್ರದೀಪ್ ಬೋಗಾದಿ ಆರಂಭಿಕರಾಗಿ ಕಣಕ್ಕಿಳಿದರು. ಸೆಹ್ವಾಗ್ 16 ಎಸೆತಗಳಲ್ಲಿ 29ರನ್ ಸಿಡಿಸಿ ಔಟಾದರು. ಕದಂಬ ಲಯನ್ಸ್ 5 ಓವರ್ ನಂತರ 61/1. ಅಂತಿಮವಾಗಿ 121ರನ್ ಗಳಿಸಲು ಸಾಧ್ಯವಾಯಿತು.

ಕಣದಲ್ಲಿರುವ ತಂಡಗಳು: ವಿಜಯನಗರ ಪೇಟ್ರಿಯಾಟ್ಸ್, ಗಂಗಾ ವಾರಿಯರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ಹೊಯ್ಸಳ ಈಗಲ್ಸ್, ಕದಂಬ ಲಯನ್ಸ್, ಒಡೆಯರ್ ಚಾರ್ಜರ್ಸ್.

ಅಂತಾರಾಷ್ಟ್ರೀಯ ಮಾಜಿ ಆಟಗಾರರಾದ ಭಾರತದ ವೀರೇಂದ್ರ ಸೆಹ್ವಾಗ್, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್, ಇಂಗ್ಲೆಂಡ್​ನ ಒವೇಸ್ ಷಾ, ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಲ್ಯಾನ್ಸ್ ಕ್ಲುಸ್ನರ್ ಹಾಗೂ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಆಡಂ ಗಿಲ್ ಕ್ರಿಸ್ಟ್ ಕೂಡ ಈ ವರ್ಷ ವಿವಿಧ ತಂಡಗಳ ಪರ ಆಡುತ್ತಿರುವುದು ವಿಶೇಷ.

Story first published: Sunday, September 9, 2018, 11:41 [IST]
Other articles published on Sep 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X