ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನ್ನ ಪ್ರೀತಿಯ ಭಾರತದ ಸ್ಥಿತಿ ಹೀಗಾಯಿತಲ್ಲ ಎಂದು ಮರುಗಿದ ಪೀಟರ್ಸನ್

Kevin Pietersen reacts to Indias situation after IPL 2021 gets suspended

ಕೊರೊನಾವೈರಸ್ ಎರಡನೇ ಅಲೆಗೆ ಭಾರತ ಅಕ್ಷರಶಃ ನಲುಗಿಹೋಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದ್ದು ಆಮ್ಲಜನಕದ ಕೊರತೆ ಉಂಟಾಗಿ ಸೋಂಕಿತರು ಸಾವಿಗೀಡಾಗುತ್ತಿದ್ದಾರೆ. ದೇಶದಾದ್ಯಂತ ವ್ಯಾಪಿಸಿರುವ ಕೊರೊನಾವೈರಸ್ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‌ಗೂ ಹೊಡೆತವನ್ನು ನೀಡಿದೆ. ಕಳೆದ ಕೆಲ ದಿನಗಳಿಂದ ವಿವಿಧ ತಂಡಗಳ ಕೆಲ ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಎಚ್ಚೆತ್ತ ಬಿಸಿಸಿಐ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ರದ್ದು ಮಾಡಿದೆ.



ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ರದ್ದಾದ ಬೆನ್ನಲ್ಲೇ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಟ್ವಿಟ್ಟರ್ ಮೂಲಕ ಭಾರತದ ಸದ್ಯದ ಸ್ಥಿತಿಯನ್ನು ಕಂಡು ಮರುಗಿದ್ದಾರೆ. ಭಾರತವನ್ನು ಹೆಚ್ಚಾಗಿ ಪ್ರೀತಿಸುವ ಕೆವಿನ್ ಪೀಟರ್ಸನ್ ಹಲವಾರು ಸಂದರ್ಶನಗಳಲ್ಲಿ ಭಾರತ ನನ್ನ ಎರಡನೇ ಮನೆ ಎಂದು ಹೇಳಿಕೊಂಡಿದ್ದಾರೆ. ತಾವು ಇಷ್ಟರಮಟ್ಟಿಗೆ ಪ್ರೀತಿಸುವ ದೇಶ ಇದೀಗ ಚಿಂತಾಜನಕ ಸ್ಥಿತಿಯಲ್ಲಿರುವುದನ್ನು ಕಂಡು ಕೆವಿನ್ ಪೀಟರ್ಸನ್ ತಮ್ಮೊಳಗಿನ ನೋವನ್ನು ಹೊರಹಾಕಿದ್ದಾರೆ.

'ನಾನು ಅತಿಯಾಗಿ ಪ್ರೀತಿಸುವಂತಹ ಭಾರತ ದೇಶವನ್ನು ಈ ಪರಿಸ್ಥಿತಿಯಲ್ಲಿ ನೋಡಲು ಹೃದಯಕ್ಕೆ ತುಂಬಾ ನೋವಾಗುತ್ತದೆ, ಈ ಕೊರೊನಾವೈರಸ್ ಹಾವಳಿಯಿಂದ ನೀವು ಹೊರಬರುತ್ತೀರ, ನೀವು ಧೈರ್ಯದಿಂದಿರಬೇಕು, ನಿಮ್ಮ ಒಳ್ಳೆಯತನ ಮತ್ತು ನಿಮ್ಮ ಔದಾರ್ಯತೆ ಇಂತಹ ಕಷ್ಟದ ಸಮಯದಲ್ಲಿ ನಿಮ್ಮನ್ನು ಕಾಯುತ್ತದೆ' ಎಂದು ಕೆವಿನ್ ಪೀಟರ್ಸನ್ ಭಾರತದ ಕುರಿತು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಈ ರೀತಿಯ ಟ್ವೀಟ್ ಮಾಡುವ ಮೂಲಕ ಕೆವಿನ್ ಪೀಟರ್ಸನ್ ಭಾರತದ ಮೇಲಿನ ತಮ್ಮ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿಕೊಂಡಿದ್ದಾರೆ.

Story first published: Wednesday, May 5, 2021, 9:59 [IST]
Other articles published on May 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X