ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ತಂಡದ ಆಯ್ಕೆಯಲ್ಲಿ ಸಿಇಒ ವೆಂಕಿ ಮೈಸೂರು ಭಾಗಿ' ಹೇಳಿಕೆಗೆ KKR ನಾಯಕ ಶ್ರೇಯಸ್ ಅಯ್ಯರ್ ಸ್ಪಷ್ಟನೆ

KKR Skipper Shreyas Iyer Clarifies Statement On CEO Venky Mysore Involved In Team Selection Comment

ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರು ಶನಿವಾರ ತಾವು ನೀಡಿದ್ದ ಹೇಳಿಕೆಗೆ ಸ್ಪಷ್ಟೀಕರಣವನ್ನು ನೀಡಿದರು. ಅಂದು ಶ್ರೇಯಸ್ ಅಯ್ಯರ್ ಅವರು ಕೆಕೆಆರ್ ತಂಡದ 'ಸಿಇಒ ಕೂಡ ತಂಡದ ಆಯ್ಕೆಯಲ್ಲಿ ತೊಡಗಿಸಿಕೊಂಡಿದ್ದಾರೆ' ಎಂದು ಹೇಳಿದ್ದರು.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಗೆಲುವಿನ ನಂತರ ಮಾತನಾಡಿದ ಶ್ರೇಯಸ್ ಅಯ್ಯರ್, "ಆಡುವ ಹನ್ನೊಂದರ ಭಾಗವಾಗಿರದ ಆಟಗಾರರನ್ನು 'ಸಾಂತ್ವನ' ಮಾಡಲು ಸಿಇಒ ವೆಂಕಿ ಮೈಸೂರು ಇದ್ದಾರೆ ಎಂದು ಹೇಳಲು ಉದ್ದೇಶಿಸಿದ್ದೆ," ಎಂದು ಸ್ಪಷ್ಟಪಡಿಸಿದರು.

"ನಾನು ಕೊನೆಯ ಸಂದರ್ಶನವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ, ನಾನು ಸಿಇಒ ಅವರ ಹೆಸರನ್ನು ತೆಗೆದುಕೊಂಡಾಗ, ನಾನು ಮೂಲ ವಿಷಯವನ್ನು ಹೇಳಲು ಬಯಸಿದ್ದೆ. ಅವರು ಹೊರಗೆ ಕುಳಿತಿರುವ (ಬೆಂಚ್) ಆಟಗಾರರನ್ನು ಸಮಾಧಾನಪಡಿಸಲು ಇದ್ದಾರೆ, ನಾವು ತಂಡವನ್ನು ಆಯ್ಕೆ ಮಾಡುವಾಗ ಇದು ನಿಜವಾಗಿಯೂ ನಮಗೆ ಕಠಿಣವಾಗಿತ್ತು ಎಂದು ಹೇಳಿರುವುದು ಹೌದು,"ಎಂದು ಶನಿವಾರದಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ ಶ್ರೇಯಸ್ ಅಯ್ಯರ್ ಹೇಳಿದರು.

KKR Skipper Shreyas Iyer Clarifies Statement On CEO Venky Mysore Involved In Team Selection Comment

ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ 54 ರನ್‌ಗಳ ಜಯ ದಾಖಲಿಸಿ ಐಪಿಎಲ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಿದ ನಂತರ ಶ್ರೇಯಸ್ ಹೇಳಿಕೆಗೆ ಸ್ಪಷ್ಟನೆ ನೀಡಿದರು.

ಇದಕ್ಕೂ ಮೊದಲು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ನಂತರ ಮಾತನಾಡಿದ್ದ ಶ್ರೇಯಸ್, ಆಟಗಾರರು ಆಡುವ ಹನ್ನೊಂದರ ಭಾಗವಾಗಿಲ್ಲ ಎಂದು ಹೇಳುವುದು ಎಷ್ಟು ಕಷ್ಟ ಎಂದು ತೆರೆದಿಟ್ಟರು ಮತ್ತು 'ಸಿಇಒ ಸಹ ತಂಡದ ಆಯ್ಕೆಯಲ್ಲಿ ತೊಡಗಿಸಿಕೊಂಡಿದ್ದಾರೆ' ಎಂದು ಹೇಳಿದ್ದರು.

"ಇದು ನಿಜವಾಗಿಯೂ ಕಷ್ಟಕರವಾಗಿದೆ, ಏಕೆಂದರೆ ನಾನು ಒಮ್ಮೆ ಐಪಿಎಲ್ ಆಡಲು ಪ್ರಾರಂಭಿಸಿದಾಗ ನಾನು ಕೂಡ ಆ ಸ್ಥಾನದಲ್ಲಿದ್ದೆ. ನಾವು ತರಬೇತುದಾರರೊಂದಿಗೆ ಚರ್ಚಿಸಿದ್ದೇವೆ ಮತ್ತು ನಿಸ್ಸಂಶಯವಾಗಿ ಸಿಇಒ ಕೂಡ ತಂಡದ ಆಯ್ಕೆಯಲ್ಲಿ ತೊಡಗಿಸಿಕೊಂಡಿದ್ದಾರೆ".

"ಆದ್ದರಿಂದ ವಿಶೇಷವಾಗಿ, ಬಾಜ್ (ಬ್ರೆಂಡನ್ ಮೆಕಲಮ್) ಅವರು ಆಟಗಾರರ ಬಳಿಗೆ ಹೋಗಿ ಹೇಳುತ್ತಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರೆಲ್ಲರೂ ನಿರ್ಧಾರ ತೆಗೆದುಕೊಳ್ಳುವಲ್ಲಿ ತುಂಬಾ ಬೆಂಬಲ ನೀಡುತ್ತಾರೆ ಮತ್ತು ಅವರು ಪ್ರತಿಯೊಬ್ಬ ವ್ಯಕ್ತಿಯನ್ನು ಬೆಂಬಲಿಸುತ್ತಾರೆ. ಇದು ನಾಯಕನಾಗಿ ಹೆಮ್ಮೆಪಡುವ ವಿಷಯ," ಎಂದು ಅಯ್ಯರ್ ಹೇಳಿದ್ದರು.

ಕೆಕೆಆರ್ ಮತ್ತು ಎಸ್‌ಆರ್‌ಎಚ್ ನಡುವಿನ ಆಟದ ಕುರಿತಾಗಿ ಹೇಳುವುದಾದರೆ, ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಆಂಡ್ರೆ ರಸೆಲ್ ಅವರ ಅಜೇಯ 49 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 177/6 ಸ್ಕೋರ್ ಮಾಡಿದರು.

Mayank Agarwal ಮಾಡಿದ ತ್ಯಾಗವೇ RCB ಪಾಲಿಗೆ ಕಂಟಕವಾಯ್ತು | Oneindia Kannada

ಈ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಆಂಡ್ರೆ ರಸೆಲ್ ದಾಳಿಗೆ ಸಿಲುಕಿ 8 ವಿಕೆಟ್ ನಷ್ಟಕ್ಕೆ 123 ರನ್ ಮಾತ್ರ ಗಳಿಸಲು ಸೀಮಿತವಾಯಿತು. ಈ ಮೂಲಕ ಕೆಕೆಆರ್ 54 ರನ್‌ಗಳಿಂದ ಜಯ ದಾಖಲಿಸಿತು. ಆಂಡ್ರೆ ರಸೆಲ್ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.

Story first published: Monday, May 16, 2022, 9:10 [IST]
Other articles published on May 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X