ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಐಪಿಎಲ್‌ 2023ರಲ್ಲಿ ಆಡಲಿರುವ ಪಾಕಿಸ್ತಾನ ಮೂಲದ ಮೂವರು ಆಟಗಾರರು

Know About 3 Three Pakistan Origin Players Who Will Part Of The IPL 2023

ಐಪಿಎಲ್ ಮಿನಿ ಹರಾಜು ಮುಕ್ತಾಯಗೊಂಡಿದೆ. ಕೊಚ್ಚಿಯಲ್ಲಿ ನಡೆದ ಹರಾಜಿನಲ್ಲ ಎಲ್ಲಾ 10 ಫ್ರಾಂಚೈಸಿಗಳು ಒಟ್ಟು 80 ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. 2023ರ ಐಪಿಎಲ್ ಹಳೆಯ ಮಾದರಿಯಲ್ಲಿ ನಡೆಯಲಿದೆ. ತವರು ಹೊರಗಿನ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.

2023ರ ಐಪಿಎಲ್‌ನಲ್ಲಿ ಒಟ್ಟು 243 ಆಟಗಾರರು 10 ತಂಡಗಳಲ್ಲಿ ಭಾಗವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ನಮೀಬಿಯಾ, ಐರ್ಲೆಂಡ್ ಆಟಗಾರರು ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ.

CKS Probable 11 IPL 2023: ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಸಂಭಾವ್ಯ ಆಡುವ 11ರ ಬಳಗ; ಬೆನ್ ಸ್ಟೋಕ್ಸ್‌ಗೆ ಸ್ಥಾನವೆಲ್ಲಿ?CKS Probable 11 IPL 2023: ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಸಂಭಾವ್ಯ ಆಡುವ 11ರ ಬಳಗ; ಬೆನ್ ಸ್ಟೋಕ್ಸ್‌ಗೆ ಸ್ಥಾನವೆಲ್ಲಿ?

ಐಪಿಎಲ್‌ನಲ್ಲಿ ಪಾಕಿಸ್ತಾನದ ಆಟಗಾರರಿಗೆ ಭಾಗವಹಿಸಲು ಅವಕಾಶ ನೀಡುವುದಿಲ್ಲ. ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಮಾತ್ರ ಪಾಕಿಸ್ತಾನ ತಂಡದ ಆಟಗಾರರು ಆಡಿದ್ದರು. ನಂತರ ರಾಜಕೀಯ ಕಾರಣಗಳಿಂದಾಗಿ ಬಿಸಿಸಿಐ ಪಾಕಿಸ್ತಾನ ಆಟಗಾರರಿಗೆ ಐಪಿಎಲ್‌ನಲ್ಲಿ ಅವಕಾಶ ನೀಡುವುದನ್ನು ನಿರಾಕರಿಸಿದೆ.

ವಿವಿಧ ದೇಶಗಳ ಆಟಗಾರರು ತಮ್ಮ ದೇಶವನ್ನು ಹೊರತು ಪಡಿಸಿ ಬೇರೆ ದೇಶಗಳಿಗಾಗಿ ಕ್ರಿಕೆಟ್ ಆಡುತ್ತಾರೆ. ಪಾಕಿಸ್ತಾನ ಮೂಲದ ಆಟಗಾರರು ಕೂಡ ವಿವಿಧ ದೇಶಗಳ ತಂಡಗಳಲ್ಲಿ ಆಡುತ್ತಿದ್ದಾರೆ. 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಆವೃತ್ತಿಯಲ್ಲಿ ಮೂವರು ಪಾಕಿಸ್ತಾನ ಮೂಲದ ಕ್ರಿಕೆಟಿಗರು ವಿವಿಧ ತಂಡಗಳಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹ ಮೂವರು ಕ್ರಿಕೆಟಿಗರ ಬಗ್ಗೆ ಮಾಹಿತಿ.

ಜಿಂಬಾಬ್ವೆಯ ಸಿಕಂದರ್ ರಾಜಾ

ಜಿಂಬಾಬ್ವೆಯ ಸಿಕಂದರ್ ರಾಜಾ

ಸಿಕಂದರ್ ರಾಜಾ ಹುಟ್ಟಿದ್ದು ಪಾಕಿಸ್ತಾನದ ಸಿಯಾಲ್‌ಕೋಟ್ ನಗರದಲ್ಲಿ. ಪಾಕಿಸ್ತಾನದಲ್ಲಿ ಹುಟ್ಟಿದರೂ ಅವರು ಜಿಂಬಾಬ್ವೆಯಲ್ಲಿ ನೆಲೆಸಿದರು, ಜಿಂಬಾಬ್ವೆ ತಂಡದ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ.

ಹಲವು ವರ್ಷಗಳಿಂದ ಐಪಿಎಲ್‌ ಆಡುವ ಆಸಕ್ತಿ ಹೊಂದಿದ್ದರೂ, ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಈ ಬಾರಿ ಐಪಿಎಲ್‌ ತಂಡಕ್ಕೆ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

2023ರ ಮಿನಿ ಹರಾಜಿನಲ್ಲಿ ಸಿಕಂದರ್ ರಾಜಾರನ್ನು ಪಂಜಾಬ್ ಕಿಂಗ್ಸ್ ಮೂಲ ಬೆಲೆ 50 ಲಕ್ಷ ರುಪಾಯಿ ನೀಡಿ ಖರೀದಿ ಮಾಡಿದೆ. ಪಂಜಾಬ್ ಕಿಂಗ್ಸ್‌ಗಾಗಿ ರಾಝಾ ಫಿನಿಶರ್ ಮತ್ತು ಆಫ್-ಸ್ಪಿನ್ ಬೌಲಿಂಗ್ ಆಲ್-ರೌಂಡರ್ ಪಾತ್ರವನ್ನು ನಿರ್ವಹಿಸುವ ಸಾಧ್ಯತೆ ಇದೆ.

ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ 158 ಪಂದ್ಯಗಳನ್ನು ಆಡಿರುವ ರಾಜಾ, 129.81 ಸ್ಟ್ರೈಕ್ ರೇಟ್‌ನಲ್ಲಿ 3,109 ರನ್ ಗಳಿಸಿದ್ದಾರೆ. 7.34 ಎಕಾನಮಿ ದರದಲ್ಲಿ 79 ವಿಕೆಟ್ ಪಡೆದಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ, ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿರುವ ರಾಜಾ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡಲಿದ್ದಾರೆ.

IPL Auction 2023: ಪಿಎಸ್‌ಎಲ್‌ನಲ್ಲಿ ಕಡೆಗಣಿಸಿದ ಮೂವರು ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಒಲಿಯಿತು ಅದೃಷ್ಟ

ಪಾಕ್‌ ಮೂಲದ ಮೊಯಿನ್ ಅಲಿ

ಪಾಕ್‌ ಮೂಲದ ಮೊಯಿನ್ ಅಲಿ

ಇಂಗ್ಲೆಂಡ್‌ನ ಆಲ್‌ರೌಂಡರ್ ಮೊಯಿನ್ ಅಲಿ ಕೂಡ ಪಾಕಿಸ್ತಾನ ಮೂಲದವರಾಗಿದ್ದಾರೆ. 2022 ರ ಮೆಗಾಹರಾಜಿನಲ್ಲಿ ಮೊಯಿನ್ ಅಲಿ ಸಿಎಸ್‌ಕೆ ತಂಡವನ್ನು ಸೇರಿಕೊಂಡರು. ಅದಕ್ಕೂ ಮುನ್ನ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡುತ್ತಿದ್ದರು.

ಸಿಎಸ್‌ಕೆ 2023ರ ಐಪಿಎಲ್ ಆವೃತ್ತಿಗಾಗಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಅನುಭವಿ ಕ್ರಿಕೆಟರ್ ಮೊಯಿನ್ ಅಲಿ, ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. 2022ರ ಐಪಿಎಲ್‌ನಲ್ಲಿ ಅವರು ಉತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದರು.

ಸನ್ ರೈಸರ್ಸ್ ಹೈದರಾಬಾದ್‌ ತಂಡದ ಆದಿಲ್ ರಶೀದ್

ಸನ್ ರೈಸರ್ಸ್ ಹೈದರಾಬಾದ್‌ ತಂಡದ ಆದಿಲ್ ರಶೀದ್

ಇಂಗ್ಲೆಂಡ್‌ 2022ರ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಆದಿಲ್ ರಶೀದ್ ಪ್ರಮುಖ ಪಾತ್ರ ವಹಿಸಿದ್ದರು. ರಶೀದ್ ಕೂಡ ಪಾಕಿಸ್ತಾನ ಮೂಲದವರಾಗಿದ್ದು, ಇಂಗ್ಲೆಂಡ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ. 2023ರ ಐಪಿಎಲ್‌ ಹರಾಜಿನಲ್ಲಿ ಅವರು ಹೆಸರು ನೋಂದಾಯಿಸಿಕೊಂಡಿದ್ದರು. ಯಾವುದೇ ತಂಡ ಅವರಿಗಾಗಿ ಬಿಡ್ ಮಾಡದ ಕಾರಣ ಸನ್ ರೈಸರ್ಸ್ ಹೈದರಾಬಾದ್ ಅವರನ್ನು ಮೂಲ ಬೆಲೆ 2 ಕೋಟಿಗೆ ಖರೀದಿ ಮಾಡಿತು.

2023ರ ಐಪಿಎಲ್‌ನಲ್ಲಿ ಆದಿಲ್ ರಶೀದ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಸ್ಪಿನ್ ಬೌಲರ್ ಆಗಲಿದ್ದಾರೆ. ರಶೀದ್ ಖಾನ್‌ರನ್ನು ತಂಡದಿಂದ ಬಿಡುಗಡೆ ಮಾಡಿದ ಅವರ ಸ್ಥಾನಕ್ಕೆ ಆದಿಲ್ ರಶೀದ್ ಸೂಕ್ತ ಆಯ್ಕೆಯಾಗಿದ್ದಾರೆ.

Story first published: Wednesday, December 28, 2022, 10:50 [IST]
Other articles published on Dec 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X