ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಅದ್ಭುತ ಆಟಗಾರ, ಏನನ್ನೂ ಸಾಭೀತುಪಡಿಸಬೇಕಾಗಿಲ್ಲ: ರೋಜರ್ ಬಿನ್ನಿ

Roger binny

ಪಾಕಿಸ್ತಾನ ವಿರುದ್ಧ ಅತ್ಯಮೋಘ ಆಟವಾಡಿದ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಫಾರ್ಮೆಟ್‌ನಲ್ಲಿ ತಾನೇ ಸ್ವತಃ ಹೇಳಿದಂತೆ ಅವರದ್ದು ಬೆಸ್ಟ್ ಇನ್ನಿಂಗ್ಸ್ ಇದಾಗಿದೆ. 53 ಎಸೆತಗಳಲ್ಲಿ ಅಜೇಯ 82 ರನ್ ಕಲೆಹಾಕಿದ ವಿರಾಟ್ ಕೊಹ್ಲಿ, ಸೋಲು ಬಹುತೇಕ ಕಟ್ಟಿಟ್ಟ ಬುತ್ತಿ ಎಂಬತ್ತಿದ್ದ ಪಂದ್ಯವನ್ನ ಟೀಂ ಇಂಡಿಯಾಗೆ ಕಡೆಗೆ ತಿರುಗಿಸಿದ್ದಾರೆ.

ವಿರಾಟ್ ಕೊಹ್ಲಿ ಇನ್ನಿಂಗ್ಸ್‌ ಕುರಿತಂತೆ ಈಗಾಗಲೇ ಅನೇಕ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಹೊಗಳಿದ್ದಾಗಿದೆ. ಈ ಸಾಲಿಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಕೂಡ ಸೇರಿದ್ದಾರೆ. ಬೆಂಗಳೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಶುಕ್ರವಾರ (ಅ.28) ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ರೋಜರ್ ಬಿನ್ನಿ ವಿರಾಟ್ ಕೊಹ್ಲಿ ಬಗ್ಗೆ ಹಾಡಿ ಹೊಗಳಿದಿದ್ದಾರೆ.

ಕೆಎಸ್‌ಸಿಎ ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ ಇತ್ತೀಚೆಗಷ್ಟೇ ಬಿಸಿಸಿಐ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ.

ನನಗೆ ಆ ಒಂದು ಗೆಲುವು ಕನಸು ಕಂಡತ್ತಾಗಿತ್ತು: ರೋಜರ್ ಬಿನ್ನಿ

ನನಗೆ ಆ ಒಂದು ಗೆಲುವು ಕನಸು ಕಂಡತ್ತಾಗಿತ್ತು: ರೋಜರ್ ಬಿನ್ನಿ

ಹೊಸದಾಗಿ ಆಯ್ಕೆಗೊಂಡಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ವಿರಾಟ್ ಕೊಹ್ಲಿ ಇನ್ನಿಂಗ್ಸ್‌ ಜೊತೆಗೆ ಭಾರತ-ಪಾಕಿಸ್ತಾನ ಪಂದ್ಯವನ್ನು ಮೆಚ್ಚಿ ಮಾತನಾಡಿದ್ದಾರೆ.

''ನನಗೆ ಅದೊಂದು ಕನಸಿನ ರೀತಿಯಲ್ಲಿ. ವಿರಾಟ್ ಕೊಹ್ಲಿ ಬಾರಿಸಿದ ಚೆಂಡು ಬೌಂಡರಿ ಗೆರೆ ದಾಟಿತ್ತು ಎಂಬುದು ಅರ್ಥವಾಗುವಷ್ಟರಲ್ಲಿ ಸಿಕ್ಸರ್ ಸಿಡಿಯಿತು. ಅದೊಂದು ಅದ್ಭುತ ಗೆಲುವಾಗಿತ್ತು. ನೀವು ಆ ರೀತಿಯ ಪಂದ್ಯಗಳನ್ನ ಸಾಧ್ಯವಾಗುವುದಿಲ್ಲ. ಏಕೆಂದರೆ ಬಹುತೇಕ ಸಮಯ ಆ ರೀತಿಯ ಪಂದ್ಯಗಳು ಪಾಕಿಸ್ತಾನದ ಕಡೆಗೆ ವಾಲುತ್ತವೆ. ಆದ್ರೆ ದಿಢೀರ್ ಎಂದು ಟೀಂ ಇಂಡಿಯಾ ಕಂಬ್ಯಾಕ್ ಮಾಡಿತು. ಅಭಿಮಾನಿಗಳಿಗೆ ಬೇಕಾಗಿರುವುದು ಅದೇ ಆಗಿದ್ದು, ಕ್ರೀಡೆಗೆ ಒಳ್ಳೆಯದು'' ಎಂದು ಕೆಎಸ್‌ಸಿಎ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ರೋಜರ್ ಬಿನ್ನಿ ಹೇಳಿದ್ದಾರೆ.

T20 World Cup: ಭಾರತ Vs ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಗಮನ ಹರಿಸಬೇಕಾದ ಮೂರು ಅಂಶಗಳು

ವಿರಾಟ್ ಕೊಹ್ಲಿ ಏನನ್ನು ಸಾಭೀತುಪಡಿಸಬೇಕಾಗಿಲ್ಲ: ಬಿನ್ನಿ

ವಿರಾಟ್ ಕೊಹ್ಲಿ ಏನನ್ನು ಸಾಭೀತುಪಡಿಸಬೇಕಾಗಿಲ್ಲ: ಬಿನ್ನಿ

ಸತತ ಎರಡೂವರೆ ವರ್ಷಗಳ ಕಾಲ ಫಾರ್ಮ್ ವೈಫಲ್ಯದಿಂದ ಬಳಲಿದ್ದ ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ಏನಾದ್ರೂ ಈ ಫಾರ್ಮ್‌ನಲ್ಲಿದ್ರೆ ಅದ್ಭುತವನ್ನೇ ಸೃಷ್ಟಿಸಿಬಿಡುತ್ತಿದ್ರು. ಆದ್ರೆ ಏಷ್ಯಾಕಪ್‌ನಲ್ಲಿ ಅದಾಗಲೇ ಔಟ್ ಆಗಿದ್ದ ಭಾರತ ತಂಡವು ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನ ಎದುರಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಚೊಚ್ಚಲ ಟಿ20 ಅಂತರಾಷ್ಟ್ರೀಯ ಶತಕ ದಾಖಲಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಶತಕ ದಾಖಲಿಸಿದ್ರು.

''ಕೊಹ್ಲಿ ಏನನ್ನೂ ಸಾಭೀತುಪಡಿಸಬೇಕಾಗಿಲ್ಲ. ಆತ ಕ್ಲಾಸ್ ಪ್ಲೇಯರ್ ಮತ್ತು ಆತನಂತಹ ಆಟಗಾರರು ಒತ್ತಡದ ಸಂದರ್ಭದಲ್ಲಿ ಅದ್ಭುತವಾಗಿ ಮೇಲೇಳುವರು. ಒತ್ತಡವು ಆತನಿಂದ ಅತ್ಯುತ್ತಮವಾದದನ್ನು ಹೊರತರುತ್ತದೆ'' ಎಂದು ಬಿಸಿಸಿಐ ಅಧ್ಯಕ್ಷ ತಿಳಿಸಿದ್ದಾರೆ.

ಈ ಇಬ್ಬರು ದಕ್ಷಿಣ ಆಫ್ರಿಕಾಗೆ ವಿಶ್ವಕಪ್ ಗೆಲ್ಲಿಸಿಕೊಡಲಿದ್ದಾರೆ ಎಂದ ಡೇಲ್ ಸ್ಟೇಯ್ನ್

ಭಾರತದ ಅದ್ಭುತ ಗೆಲುವನ್ನು ಜನರು ಪ್ರೋತ್ಸಾಹಿಸಬೇಕು

ಭಾರತದ ಅದ್ಭುತ ಗೆಲುವನ್ನು ಜನರು ಪ್ರೋತ್ಸಾಹಿಸಬೇಕು

ಟೀಂ ಇಂಡಿಯಾ ಸೋತಾಗ ಟೀಕಿಸುವ ಜನರು, ಭಾರತವು ಅಂತಹ ಅದ್ಭುತ ಗೆಲುವನ್ನು ಕಂಡಾಗ ಹೆಚ್ಚು ಪ್ರೋತ್ಸಾಹಿಸಬೇಕು. ಮೊಹಮ್ಮದ್ ನವಾಜ್ ನೋ ಬಾಲ್ ಡೆಲಿವರಿ ಕುರಿತು ಸಾಕಷ್ಟು ವಿವಾದಗಳಿದ್ದರೂ ಸಹ, ಜನರು ವಾಸ್ತವವನ್ನು ಅರಿತು ಬೆಂಬಲಿಸಬೇಕಿದೆ ಎಂದಿದ್ದಾರೆ.

''ನೀವು ಯಾವಾಗ ಪಂದ್ಯ ಸೋಲುತ್ತೀರಾ, ನೀವು ಸೋಲಿನ ಜವಾಬ್ದಾರಿ ಮತ್ತು ಸತ್ಯವನ್ನ ಅರಿಯಬೇಕು. ಭಾರತ ಗೆದ್ದ ರೀತಿಯನ್ನು ಜನರು ಗುರುತಿಸಿ ಪ್ರೋತ್ಸಾಹಿಸಬೇಕು'' ಎಂದು ರೋಜರ್ ಬಿನ್ನಿ ತಮ್ಮ ಮಾತನ್ನು ಕೊನೆಗೊಳಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ರೋಚಕ ಪಂದ್ಯದಲ್ಲಿ 160ರನ್ ಬೆನ್ನತ್ತಿದ್ದ ಭಾರತದ ಪರ 19ನೇ ಓವರ್‌ನಲ್ಲಿ ಹ್ಯಾರಿಸ್ ರೌಫ್‌ಗೆ ಎರಡು ಭರ್ಜರಿ ಸಿಕ್ಸರ್ ಸಿಡಿಸಿದ್ದ ವಿರಾಟ್, ಕೊನೆಯ ಓವರ್‌ನಲ್ಲಿ ಮೊಹಮ್ಮದ್ ನವಾಜ್‌ ಬೌಲಿಂಗ್‌ನಲ್ಲಿ 16ರನ್‌ಗಳು ಬೇಕಿತ್ತು. ಹಾರ್ದಿಕ್ ಮೊದಲ ಎಸೆತದಲ್ಲೇ ಔಟಾದಾಗ ಟೀಂ ಇಂಡಿಯಾ ಕಥೆ ಇಲ್ಲಿಗೆ ಮುಗೀತಾ? ಎಂಬೆಲ್ಲಾ ಪ್ರಶ್ನೆಗಳು ಎದುರಾಗಿದ್ದವು.

ಆದ್ರೆ ವಿರಾಟ್ 2 , 6, 3 ರನ್‌ ಕಲೆಹಾಕುವ ಮೂಲಕ ಭಾರತವನ್ನ ಗೆಲುವಿನ ದಡ ಸಮೀಪಿಸಿದ್ರು. ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಔಟಾದ ಬಳಿಕ ಅಶ್ವಿನ್‌ ಸಿಂಗಲ್ಸ್‌ ತೆಗೆದುಕೊಂಡು ಭಾರತವನ್ನ ಗೆಲ್ಲಿಸಿದ್ರು. ಆದ್ರೆ ಇಲ್ಲಿ ಕೊಹ್ಲಿಯ 82ರನ್‌ಗಳು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

Story first published: Saturday, October 29, 2022, 12:31 [IST]
Other articles published on Oct 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X