ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆರಿಬಿಯನ್‌ ನೆಲದಲ್ಲಿ ಪ್ರಿನ್ಸ್‌ ಲಾರಾ ದಾಖಲೆ ಮುರಿದ ಕಿಂಗ್‌ ಕೊಹ್ಲಿ!

Virat Kohli broke Brian Lara 2019

ಪೋರ್ಟ್‌ ಆಫ್‌ ಸ್ಪೇನ್‌, ಆಗಸ್ಟ್‌ 12: ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿ ಕಂಗೊಳಿಸುತ್ತಿರುವ ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ 5 ಇನಿಂಗ್ಸ್‌ಗೆ ಒಂದು ಶತಕದಂತೆ ಈವರೆಗೆ ಒಟ್ಟು 42 ಶತಕಗಳನ್ನು ಬಾರಿಸಿ ಪ್ರಾಬಲ್ಯ ಮೆರೆದಿದ್ದಾರೆ.

1
46245

ಭಾನುವಾರ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ 2ನೇ ಪಂದ್ಯದಲ್ಲಿ ವಿರಾಟ್‌ 42ನೇ ಶತಕ ಬಾರಿಸಿ ತಂಡಕ್ಕೆ 59 ರನ್‌ಗಳ (ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ) ಜಯ ತಂದುಕೊಟ್ಟರು. ಈ ಸಂದರ್ಭದಲ್ಲಿ ನಾನಾ ದಾಖಲೆಗಳನ್ನು ಕಿಂಗ್‌ ಕೊಹ್ಲಿ ಧೂಳೀಪಟ ಮಾಡಿದ್ದಾರೆ.

ODIನಲ್ಲಿ ಕಿಂಗ್‌ ಕೊಹ್ಲಿ 42ನೇ ಶತಕ, ದಾದಾ ದಾಖಲೆ ಧೂಳೀಪಟ!ODIನಲ್ಲಿ ಕಿಂಗ್‌ ಕೊಹ್ಲಿ 42ನೇ ಶತಕ, ದಾದಾ ದಾಖಲೆ ಧೂಳೀಪಟ!

ವೆಸ್ಟ್‌ ಇಂಡೀಸ್‌ ವಿರುದ್ಧ ಒಡಿಐನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದ ಜಾವೇದ್‌ ಮಿಯಾಂದಾದ್‌ (1930 ರನ್‌, 64 ಇನಿಂಗ್ಸ್‌) ಅವರ 26 ವರ್ಷಗಳ ಹಳೆಯ ದಾಖಲೆಯ ನುಚ್ಚು ನೂರು ಮಾಡಿದ ಕೊಹ್ಲಿ, ಇದೇ ವೇಳೆ ಭಾರತದ ಪರ ಒಡಿಐನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪೈಕಿ ಮಾಜಿ ನಾಯಕ ಸೌರವ್‌ ಗಂಗೂಲಿ (11,363 ರನ್‌) ಅವರನ್ನು ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.

ಪ್ರಿನ್ಸ್‌ ಲಾರಾಗೆ ಸಡ್ಡುಹೊಡೆದ ಕಿಂಗ್‌ ಕೊಹ್ಲಿ

ಪ್ರಿನ್ಸ್‌ ಲಾರಾಗೆ ಸಡ್ಡುಹೊಡೆದ ಕಿಂಗ್‌ ಕೊಹ್ಲಿ

ಇಷ್ಟೇಲ್ಲಾ ದಾಖಲೆ ಬರೆದ ಕೊಹ್ಲಿ, ಸದ್ದಿಲ್ಲದಂತೆ ವೆಸ್ಟ್‌ ಇಂಡೀಸ್‌ನ ದಂತಕತೆ ಹಾಗೂ ಮಾಜಿ ನಾಯಕ ಬ್ರಿಯಾನ್‌ ಲಾರಾ ಅವರ ದಾಖಲೆಯನ್ನು ಮುರಿದಿದ್ದಾರೆ. ತಂಡದ ನಾಯಕನಾಗಿ ಕೆರಿಬಿಯನ್‌ ನೆಲದಲ್ಲಿ ಇನಿಂಗ್ಸ್‌ ಒಂದರಲ್ಲಿ ಗರಿಷ್ಠ ಸ್ಕೋರ್‌ ದಾಖಲಿಸಿದ ದಾಖಲೆ ಕಿಂಗ್‌ ಕೊಹ್ಲಿ ಮುಡಿಗೇರಿದೆ. 2003ರಲ್ಲಿ ಶ್ರೀಲಂಕಾ ವಿರುದ್ಧ ಬಾರ್ಬೇಡೊಸ್‌ನಲ್ಲಿ ನಡೆದ ಪಂದ್ಯದಲ್ಲಿ ಪ್ರಿನ್ಸ್‌ ಖ್ಯಾತಿಯ ಲಾರಾ, 116 ರನ್‌ಗಳನ್ನು ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.
ಇನ್ನು ವಿಂಡೀಸ್‌ ನೆಲದಲ್ಲಿ ಶತಕ ಬಾರಿಸಿದ ನಾಯಕ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಮೂರನೇ ಸ್ಥಾನದಲ್ಲಿದ್ದಾರೆ. ಜಯವರ್ಧನೆ 2005ರಲ್ಲಿ ಜಮೈಕಾದ ಸಬೈನಾ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ಅಜೇಯ 115 ರನ್‌ ಬಾರಿಸಿದ್ದರು.

5 ಇನಿಂಗ್ಸ್‌ಗೆ ಒಂದು ಶತಕದ ಸರಾಸರಿ

5 ಇನಿಂಗ್ಸ್‌ಗೆ ಒಂದು ಶತಕದ ಸರಾಸರಿ

ಕಳೆದ ತಿಂಗಳು ಅಂತ್ಯಗೊಂಡ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಸತತ 5 ಅರ್ಧಶತಕ ದಾಖಲಿಸಿದರೂ ಒಂದನ್ನೂ ಶತಕವನ್ನಾಗಿ ಪರಿವರ್ತಿಸದೆ ನಿರಾಸೆ ಅನುಭವಿಸಿದ್ದ ಕೊಹ್ಲಿ, ಭಾನುವಾರದ ಪಂದ್ಯದಲ್ಲಿ ತಮ್ಮ ವಿರಾಟ ರೂಪ ಅನಾವರಣ ಪಡಿಸಿ 125 ಎಸೆತಗಳಲ್ಲಿ 14 ಫೋರ್‌ ಮತ್ತೊಂದು ಸಿಕ್ಸರ್‌ ಒಳಗೊಂಡ 120 ರನ್‌ಗಳನ್ನು ಚೆಚ್ಚಿದರು. 41ನೇ ಶತಕ ಬಾರಿಸಿದ ನಂತರ 42ನೇ ಶತಕ ಸಲುವಾಗಿ ಕೊಹ್ಲಿ ತೆಗೆದುಕೊಂಡದ್ದು 12 ಇನಿಂಗ್ಸ್‌ಗಳನ್ನು ಎಂಬುದು ವಿಶೇಷ.

ತಂಡಕ್ಕೆ ಶತಕದ ಅಗತ್ಯವಿತ್ತು

ತಂಡಕ್ಕೆ ಶತಕದ ಅಗತ್ಯವಿತ್ತು

"ಶತಕ ಗಳಿಸುವುದು ಆನಂದ ನೀಡುತ್ತದೆ. ತಂಡಕ್ಕೂ ಕೂಡ ನನ್ನ ಶತಕದ ಅಗತ್ಯವಿತ್ತು. ಶಿಖರ್‌ ಮತ್ತು ರೋಹಿತ್‌ ದೊಡ್ಡ ಇನಿಂಗ್ಸ್‌ ಆಡಿರಲಿಲ್ಲ. ಹೀಗಾಗಿ ಅಗ್ರ ಮೂವರಲ್ಲಿ ಒಬ್ಬರು ಶತಕ ಗಳಿಸುವ ಅಗತ್ಯವಿದ್ದೇ ಇರುತ್ತದೆ. ಹಿರಿಯ ಆಟಗಾರರಿಗೆ ಮುನ್ನುಗ್ಗಿ ಆಡುವ ಅಗತ್ಯವಿರುತ್ತದೆ. ಇಂದು ಆ ಅವಕಾಶ ನನ್ನದಾಗಿತ್ತು,' ಎಂದು ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸಾರ್ವಕಾಲಿಕ ಪಟ್ಟಿಯಲ್ಲಿ 8ನೇ ಗರಿಷ್ಠ ಸ್ಕೋರರ್‌

ಸಾರ್ವಕಾಲಿಕ ಪಟ್ಟಿಯಲ್ಲಿ 8ನೇ ಗರಿಷ್ಠ ಸ್ಕೋರರ್‌

30 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ಕೊಹ್ಲಿ, ಭಾರತದ ಪರ 238 ಪಂದ್ಯಗಳನ್ನು ಆಡಿದ್ದು, 59.91ರ ಸರಾಸರಿಯಲ್ಲಿ 11,406 ರನ್‌ಗಳನ್ನು ಗಳಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್‌ಗಳಿಸಿದವರ ಪೈಕಿ 8ನೇ ಸ್ಥಾನಕ್ಕೇರಿದ್ದಾರೆ. ಭಾರತದ ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಈ ಪಟ್ಟಿಯಲ್ಲಿ (18,426 ರನ್‌, 463 ಪಂದ್ಯಗಳು) ಅಗ್ರಸ್ಥಾನದಲ್ಲಿದ್ದಾರೆ.

Story first published: Monday, August 12, 2019, 15:58 [IST]
Other articles published on Aug 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X