ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾ ಕೋಚ್‌ ಆಯ್ಕೆ ಬಗ್ಗೆ ಕೊಹ್ಲಿಗೆ ಬೆಂಬಲಿಸಿದ ಗಂಗೂಲಿ

ಕೊಹ್ಲಿಗೆ ಬೆಂಬಲಿಸಿದ ಗಂಗೂಲಿ, ಮುಂದಿನ ನಿರ್ಧಾರ ಏನು? | Oneindia Kannada
former India captain Sourav Ganguly 2019

ಹೊಸದಿಲ್ಲಿ, ಜುಲೈ 31: ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ಯಾರಾಗಬೇಕು ಎಂದು ಕೇಳಿ ಪಡೆಯುವ ಹಕ್ಕು ನಾಯಕ ವಿರಾಟ್‌ ಕೊಹ್ಲಿ ಅವರಿಗಿದೆ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

"ಅವರು ತಂಡದ ನಾಯಕ. ಕೋಚ್‌ ಯಾರಾಗಬೇಕೆಂದು ಕೇಳುವ ಹಕ್ಕು ಅವರಿಗಿದೆ," ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ದಾದಾ ಖ್ಯಾತಿಯ ಮಾಜಿ ಆಟಗಾರ ಗಂಗೂಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಬಿಸಿಸಿಐ ನೂತನ ಕೋಚ್‌ ಆಯ್ಕೆ ಸಲುವಾಗಿ ಅರ್ಜಿ ಆಹ್ವಾನಿಸಿದ್ದು, ಹಾಲಿ ಕೋಚ್‌ ರವಿ ಶಾಸ್ತ್ರಿ ಮುಂದುವರಿಯುತ್ತಾರೆಯೇ ಇಲ್ಲವೇ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಐಪಿಎಲ್‌ 2020: ಮುಂಬೈ ಇಂಡಿಯನ್ಸ್‌ಗೆ ತೆಕ್ಕೆಗೆ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ಐಪಿಎಲ್‌ 2020: ಮುಂಬೈ ಇಂಡಿಯನ್ಸ್‌ಗೆ ತೆಕ್ಕೆಗೆ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌

ಇದೇ ವೇಳೆ ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದು 8 ತಿಂಗಳ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಮುಂಬೈ ಮೂಲದ ಯುವ ಕ್ರಿಕೆಟಿಗ ಹಾಗೂ ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅವರ ಕುರುತಾಗಿ ಯಾವುದೇ ಹೇಳಿಕೆ ನೀಡಲು ಗಂಗೂಲಿ ನಿರಾಕರಿಸಿದ್ದಾರೆ. "ಈ ವಿಚಾರದ ಸತ್ಯಾಸತ್ಯತೆಗಳು ನನಗೆ ತಿಳಿದಿಲ್ಲ. ಹೀಗಾಗಿ ಯಾವುದೇ ಹೇಳಿಕೆ ನೀಡಲಾರೆ," ಎಂದಿದ್ದಾರೆ.

ಇನ್ನು ಭಾರತ ತಂಡದ ಇದೀಗ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿದ್ದು, ತಲಾ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಕ್ರಿಕೆಟ್‌ ಸರಣಿಗಳನ್ನಾಡಲಿದೆ. ಬಳಿಕ 2 ಪಂದ್ಯಗ ಟೆಸ್ಟ್‌ ಸರಣಿಯೊಂದಿಗೆ ತನ್ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಭಿಯಾನವನ್ನು ಕೆರಿಬಿಯನ್‌ ನಾಡಲ್ಲಿ ಆರಂಭಿಸಲಿದೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿ

ಭಾರತ ತಂಡ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಭಾರತ ತಂಡದ ಮುಖ್ಯ ಕೋಚ್‌ ಸ್ಥಾನದಲ್ಲಿ ರವಿ ಶಾಸ್ತ್ರಿ ಅವರೇ ಮುಂದುವರಿದರೆ ತಮಗೆ ಸಂತೋಷ ಎಂದು ಹೇಳಿದ್ದರು.

"ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿಯು ನೂತನ ಕೋಚ್‌ ಆಯ್ಕೆ ವಿಚಾರದಲ್ಲಿ ನನ್ನ ಸಲಹೆ ಕೇಳಿಲ್ಲ. ನನ್ನ ಸಲಹೆ ಕೇಳಿದಲ್ಲಿ ನಾನು ಅವರ ಬಳಿ ಚರ್ಚಿಸಲಿದ್ದೇನೆ. ರವಿ ಅಣ್ಣನ ಜೊತೆಗೆ ನಮ್ಮ ಬಾಂಧವ್ಯ ಅತ್ಯುತ್ತಮವಾಗಿದೆ. ಅವರೇ ತಂಡದ ಮುಖ್ಯ ಕೋಚ್‌ ಆಗಿ ಮುಂದುವರಿದರೆ ನಮಗೆ ಸಂತಸ. ಆದರೆ, ಈ ವಿಚಾರವಾಗಿ ನನ್ನನ್ನು ಸಂಪರ್ಕಿಸಿಲ್ಲ," ಎಂದು ಕೊಹ್ಲಿ ಹೇಳಿದ್ದರು.

ಲಸಿತ್‌ ಮಾಲಿಂಗ ಸ್ಥಾನ ತುಂಬಲು ಬಂದ ಛೋಟಾ ಮಾಲಿಂಗ! ವಿಡಿಯೊಲಸಿತ್‌ ಮಾಲಿಂಗ ಸ್ಥಾನ ತುಂಬಲು ಬಂದ ಛೋಟಾ ಮಾಲಿಂಗ! ವಿಡಿಯೊ

ಇದೇ ವೇಳೆ ಕ್ರಿಕೆಟ್‌ ಸಲಾ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಅನ್ಷುಮಾನ್‌ ಗಾಯಕ್ವಾಡ್‌, ನೂತನ ಕೋಚ್‌ ಆಯ್ಕೆ ಸಲುವಾಗಿ ಬಂದಿರುವ ಅರ್ಜಿಗಳಲ್ಲಿ ಅಂತಿಮವಾಗಿ ವಿಂಗಡಿಸಲಾದ ಅಭ್ಯರ್ಥಿಗಳೊಂದಿಗೆ ಮುಕ್ತವಾಗಿ ಚರ್ಚಿಸುವುದಾಗಿ ಹೇಳಿದ್ದಾರೆ. ಭಾರತಕ್ಕೆ ಮೊದಲ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಕಪಿಲ್‌ ದೇವ್‌ ಸಾರಥ್ಯದ ಕ್ರಿಕೆಟ್‌ ಸಲಹಾ ಸಮಿತಿಯಲ್ಲಿಗಾಯಕ್ವಾಡ್‌ ಹೊರತಾಗಿ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತ ರಂಗಸ್ವಾಮಿ ಇದ್ದಾರೆ. ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐನ ಆಡಳಿತ ಸಮಿತಿ (ಸಿಒಎ) ಭಾರತ ತಂಡದ ನೂತನ ಕೋಚ್‌ ಆಯ್ಕೆ ಜವಾಬ್ದಾರಿಯನ್ನು ಕ್ರಿಕೆಟ್‌ ಸಲಹಾ ಸಮಿತಿಗೆ ಒಪ್ಪಿಸಿದೆ.

ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಟೀಮ್‌ ಇಂಡಿಯಾದ ಯಂಗ್‌ ಬ್ಯಾಟ್ಸ್‌ಮನ್‌ ಬ್ಯಾನ್‌ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಟೀಮ್‌ ಇಂಡಿಯಾದ ಯಂಗ್‌ ಬ್ಯಾಟ್ಸ್‌ಮನ್‌ ಬ್ಯಾನ್‌

ಸದ್ಯ ಈ ಗಿರುವ ಭಾರತ ತಂಡದ ತರಬೇತಿ ಸಿಬ್ಬಂದಿ ಜೊತೆಗಿನ ಒಪ್ಪಂದವು ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ನೊಂದಿಗೆ ಮುಗಿದಿದೆ. ಆದರೆ, ಭಾರತ ತಂಡದ ವೆಸ್ಟ್‌ ಇಂಡೀಸ್‌ ಪ್ರವಾಸ ಹಿನ್ನೆಲೆಯಲ್ಲಿ ರವಿ ಶಾಸ್ತ್ರಿ ಮತ್ತು ತಂಡದ ಜೊತೆಗಿನ ಒಪ್ಪಂದವನ್ನು 45 ದಿನಗಳಿಗೆ ವಿಸ್ತರಿಸಲಾಗಿದೆ. ಇದಾದ ಬಳಿಕ ನೂತನ ಕೋಚ್ ಆಯ್ಕೆ ಪ್ರಕ್ರಿಯೆ ಚುರುಕಾಗಲಿದ್ದು, ರವಿ ಶಾಸ್ತ್ರಿ ಮತ್ತು ಬಳಗಕ್ಕೂ ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

Story first published: Wednesday, July 31, 2019, 21:54 [IST]
Other articles published on Jul 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X