ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ ಹರಾಜು: ಪಾಂಡೆ ಕಡೆಗಣನೆ, ದೇಶಪಾಂಡೆಗೆ ಭಾರೀ ಡಿಮ್ಯಾಂಡ್!

KPL 2019 Auctions-Players retained, Live Updates

ಬೆಂಗಳೂರು, ಜುಲೈ 27: ಬೆಂಗಳೂರಿನಲ್ಲಿ ಶನಿವಾರ (ಜುಲೈ 27) ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) 2019ರ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅನುಭವಿ ಬ್ಯಾಟ್ಸ್ಮನ್ ಮನೀಷ್ ಪಾಂಡೆ ಅವರನ್ನು ಹೆಚ್ಚಿನ ಫ್ರಾಂಚೈಸಿಗಳು ಕಡೆಗಣಿಸಿದವು. ಆದರೆ ಎಡಗೈ ಬ್ಯಾಟ್ಸ್ಮನ್ ಪವನ್ ದೇಶಪಾಂಡೆ 7.30 ಲಕ್ಷ ರೂ. ಗರಿಷ್ಠ ಬೆಲೆಗೆ ಶಿವಮೊಗ್ಗ ಲಯನ್ಸ್ ಪಾಲಾಗಿದ್ದಾರೆ.

ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?

ಮನೀಶ್ ಪಾಂಡೆ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದರೂ ಆರಂಭಿಕ ಸುತ್ತುಗಳಲ್ಲಿ ಖರೀದಿಸಲು ಯಾವುದೇ ಫ್ರಾಂಚೈಸಿಗಳು ಮುಂದೆ ಬರಲಿಲ್ಲ. ಹೀಗಾಗಿ ಮನೀಷ್ ಆರಂಭದಲ್ಲಿ ಸೇಲಾಗದೆ ಉಳಿದಿದ್ದರು. ಆದರೆ ಹರಾಜಿನ ಕೊನೇ ಕ್ಷಣಗಳಲ್ಲಿ ಮನೀಷ್ ಅವರನ್ನು ಬೆಳಗಾವಿ ಪ್ಯಾಂಥರ್ಸ್ 2 ಲಕ್ಷ ರೂ.ಗೆ ಖರೀದಿಸಿತು.

ಪಾಕ್‌ ವೇಗಿ ಮೊಹಮ್ಮದ್ ಅಮೀರ್ ಮೇಲೆ ಸಿಡುಕಾಡಿದ ಅಕ್ರಮ್, ಅಖ್ತರ್!ಪಾಕ್‌ ವೇಗಿ ಮೊಹಮ್ಮದ್ ಅಮೀರ್ ಮೇಲೆ ಸಿಡುಕಾಡಿದ ಅಕ್ರಮ್, ಅಖ್ತರ್!

ಆರಂಭಿಕ ಸುತ್ತುಗಳಲ್ಲಿ ಮನೀಷ್ ಮಾರಾಟವಾಗದೆ ಉಳಿಯಲು ಕಾರಣ ವೆಸ್ಟ್ ಇಂಡೀಸ್ ಪ್ರವಾಸ ಸರಣಿ. ವಿಂಡೀಸ್‌ಗೆ ಪ್ರವಾಸ ಕೈಗೊಳ್ಳಲಿರುವ ಭಾರತದ ಏಕದಿನ ತಂಡದಲ್ಲಿ ಪಾಂಡೆ ಇದ್ದಾರೆ. ವಿಂಡೀಸ್ ಏಕದಿನ ಸರಣಿ ಆಗಸ್ಟ್ 8ರಿಂದ 14ರ ವರೆಗೆ ನಡೆಯಲಿದೆ.

ಮೈಸೂರಿನಲ್ಲಿ ಫೈನಲ್

ಮೈಸೂರಿನಲ್ಲಿ ಫೈನಲ್

ಬಿಜಾಪುರ್‌ ಬುಲ್ಸ್‌, ಮೈಸೂರು ವಾರಿಯರ್ಸ್‌, ಬಳ್ಳಾರಿ ಟಸ್ಕರ್ಸ್‌, ಬೆಳಗಾವಿ ಪ್ಯಾಂಥರ್ಸ್‌, ಬೆಂಗಳೂರು ಬ್ಲಾಸ್ಟರ್ಸ್‌, ಶಿವಮೊಗ್ಗ ಲಯನ್ಸ್‌, ಹುಬ್ಬಳ್ಳಿ ಟೈಗರ್ಸ್‌ ಹೀಗೆ ಒಟ್ಟು 7 ಫ್ರಾಂಚೈಸಿಗಳು ಟೂರ್ನಿಯಲ್ಲಿ ಸೆಣಸಾಟ ನಡೆಸಲಿವೆ. ಆಗಸ್ಟ್ 16ರಂದು ಬೆಂಗಳೂರಿನಲ್ಲಿ ಆರಂಭಗೊಳ್ಳುವ ಟೂರ್ನಿ, ಅನಂತರ ಹುಬ್ಬಳ್ಳಿ, ಮೈಸೂರು ತಾಣಗಳಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಮೈಸೂರಿನಲ್ಲಿ ನಡೆಯಲಿದೆ.

ತಂಡಗಳು ಉಳಿಸಿಕೊಂಡ ಆಟಗಾರರು

ತಂಡಗಳು ಉಳಿಸಿಕೊಂಡ ಆಟಗಾರರು

ಬಳ್ಳಾರಿ ಟಸ್ಕರ್ಸ್: ಸಿಎಂ ಗೌತಮ್ (ಪೂಲ್ ಎ), ದೇವದತ್ ಪಡಿಕ್ಕಲ್ (ಪೂಲ್ ಬಿ).
ಬಿಜಾಪುರ ಬುಲ್ಸ್: ಭಾರತ್ ಚಿಪ್ಲಿ (ಪೂಲ್ ಎ), ಕೆ.ಸಿ. ಕರಿಯಪ್ಪ (ಪೂಲ್ ಬಿ)
ಬೆಳಗಾವಿ ಪ್ಯಾಂಥರ್ಸ್: ಶುಭಾಂಗ್ ಹೆಗ್ಡೆ (ಪೂಲ್ ಎ), ಅವಿನಾಶ್ ಡಿ (ಪೂಲ್ ಬಿ)
ಬೆಂಗಳೂರು ಬ್ಲಾಸ್ಟರ್ಸ್: ವಿ ಕೌಶಿಕ್ (ಪೂಲ್ ಎ), ಮನೋಜ್ ಭಂಡಾಜೆ (ಪೂಲ್ ಎ)
ಹುಬ್ಳಿ ಟೈಗರ್ಸ್: ಆರ್ ವಿನಯ್ ಕುಮಾರ್ (ಪೂಲ್ ಎ), ಪ್ರವೀಣ್ ದುಬೆ (ಪೂಲ್ ಎ)
ಮೈಸೂರು ವಾರಿಯರ್ಸ್: ಜೆ ಸುಚಿತ್ (ಪೂಲ್ ಎ), ವಿಶಾಕ್ ವಿಜಯ್ ಕುಮಾರ್ (ಪೂಲ್ ಎ)
ಶಿವಮೊಗ್ಗ ಲಯನ್ಸ್: ನಿಹಾಲ್ ಉಲ್ಲಾಲ್ (ಪೂಲ್ ಬಿ), ಪೃಥ್ವಿರಾಜ್ ಶೇಖಾವತ್ (ಪೂಲ್ ಬಿ).

ಪೂಲ್ 'ಎ'ಯಲ್ಲಿ ಮಾರಾಟವಾದ ಎಲ್ಲಾ ಆಟಗಾರರು

ಪೂಲ್ 'ಎ'ಯಲ್ಲಿ ಮಾರಾಟವಾದ ಎಲ್ಲಾ ಆಟಗಾರರು

ಪವನ್ ದೇಶಪಾಂಡೆ - ರೂ. 7.30 ಲಕ್ಷ (ಶಿವಮೊಗ್ಗ ಲಯನ್ಸ್)
ಅನಿರುದ್ಧ್ ಜೋಶಿ - ರೂ. 7.10 ಲಕ್ಷ (ಮೈಸೂರು ವಾರಿಯರ್ಸ್)
ಮೊಹಮ್ಮದ್ ತಾಹ - ರೂ. 5.70 ಲಕ್ಷ (ಹುಬ್ಳಿ ಟೈಗರ್ಸ್)
ಅಮಿತ್ ವರ್ಮಾ - ರೂ. 5.20 ಲಕ್ಷ (ಮೈಸೂರು ವಾರಿಯರ್ಸ್)
ಸಿಎ ಕಾರ್ತಿಕ್ - ರೂ. 4.70 ಲಕ್ಷ (ಬಳ್ಳಾರಿ ಟಸ್ಕರ್ಸ್)
ಪ್ರತೀಕ್ ಜೈನ್ - ರೂ. 4.50 ಲಕ್ಷ (ಬಿಜಾಪುರ ಬುಲ್ಸ್)
ಅಭಿಮನ್ಯು ಮಿಥುನ್ - ರೂ. 3.60 ಲಕ್ಷ (ಶಿವಮೊಗ್ಗ ಲಯನ್ಸ್)
ನವೀನ್ ಎಂಜಿ - ರೂ. 3.50 ಲಕ್ಷ (ಬಿಜಾಪುರ ಬುಲ್ಸ್)
ರೋಹನ್ ಕದಮ್ - ರೂ. 3.20 ಲಕ್ಷ (ಬೆಂಗಳೂರು ಬ್ಲಾಸ್ಟರ್ಸ್)
ಆದಿತ್ಯ ಸೋಮಣ್ಣ - ರೂ. 2.60 ಲಕ್ಷ (ಹುಬ್ಲಿ ಟೈಗರ್ಸ್)
ಅಭಿಷೇಕ್ ರೆಡ್ಡಿ - ರೂ. 2.50 ಲಕ್ಷ (ಬಳ್ಳಾರಿ ಟಸ್ಕರ್ಸ್)
ಶರತ್ ಬಿ.ಆರ್ - ರೂ. 2.40 ಲಕ್ಷ (ಬೆಂಗಳೂರು ಬ್ಲಾಸ್ಟರ್ಸ್)
ಕೃಷ್ಣಪ್ಪ ಗೌತಮ್ - ರೂ. 1.90 ಲಕ್ಷ (ಬಳ್ಳಾರಿ ಟಸ್ಕರ್ಸ್)
ಶಿಶಿರ್ ಭವಾನೆ - ರೂ. 1.80 ಲಕ್ಷ (ಹುಬ್ಳಿ ಟೈಗರ್ಸ್)
ಸ್ಟಾಲಿನ್ ಹೂವರ್ - ರೂ. 1.10 ಲಕ್ಷ (ಬೆಳಗಾವಿ ಪ್ಯಾಂಥರ್ಸ್)
ದೀಕ್ಷಾಂಕ್ಷು ನೇಗಿ - ರೂ. 1 ಲಕ್ಷ ಬೆಳಗಾವಿ ಪ್ಯಾಂಥರ್ಸ್)
ಕೆ.ವಿ ಸಿದ್ಧಾರ್ಥ್ - ರೂ. 50,000 (ಮೈಸೂರು ವಾರಿಯರ್ಸ್)
ಪ್ರದೀಪ್ ಟಿ - ರೂ. 50,000 (ಬಳ್ಳಾರಿ ಟಸ್ಕರ್ಸ್)

ಪೂಲ್‌ 'ಬಿ'ಯಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟವಾದವರು

ಪೂಲ್‌ 'ಬಿ'ಯಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟವಾದವರು

ಅಬ್ರಾರ್ ಕಾಜಿ - ₹ 4.60 ಲಕ್ಷ (ಬಳ್ಳಾರಿ ಟಸ್ಕರ್ಸ್)
ರಿತೇಶ್ ಭಟ್ಕಲ್ - ₹ 3.05 ಲಕ್ಷ (ಬೆಳಗಾವಿ ಪ್ಯಾಂಥರ್ಸ್)
ಕೆ.ಪಿ.ಅಪ್ಪಣ್ಣ - ₹ 3 ಲಕ್ಷ (ಬಳ್ಳಾರಿ ಟಸ್ಕರ್ಸ್)
ಆನಂದ್ ತೊಡ್ಡಮಣಿ - ₹ 2.45 ಲಕ್ಷ (ಬೆಂಗಳೂರು ಬ್ಲಾಸ್ಟರ್ಸ್)
ಮಹೇಶ್ ಪಟೇಲ್ - ₹ 1.2 ಲಕ್ಷ (ಹುಬ್ಳಿ ಟೈಗರ್ಸ್)

Story first published: Saturday, July 27, 2019, 19:42 [IST]
Other articles published on Jul 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X