ಸ್ಪಾಟ್ ಫಿಕ್ಸಿಂಗ್: ಫೆ.5ಕ್ಕೆ ಶ್ರೀಶಾಂತ್ ಕ್ರಿಕೆಟ್ ಭವಿಷ್ಯ ನಿರ್ಧಾರ

Posted By:
Life ban on S Sreesanth: Supreme Court to hear plea on February 5

ನವದೆಹಲಿ, ಫೆಬ್ರವರಿ 02: ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದ ಮೇಲೆ ಭಾರತದ ಮಾಜಿ ವೇಗಿ ಶ್ರೀಶಾಂತ್ ಅವರ ಕ್ರಿಕೆಟ್ ಭವಿಷ್ಯ ಫೆಬ್ರವರಿ 05ಕ್ಕೆ ನಿರ್ಧಾರವಾಗಲಿದೆ.

ತಮ್ಮ ಮೇಲೆ ಬಿಸಿಸಿಐ ಹೇರಿರುವ ಅಜೀವ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ. ಶ್ರೀಶಾಂತ್ ಸಲ್ಲಿಸಿರುವ ಅರ್ಜಿ ವಿಚಾರಣೆಯು ಫೆಬ್ರವರಿ 05ರಂದು ನಡೆಯಲಿದೆ.

2013ರ ಐಪಿಎಲ್ ಹಗರಣಕ್ಕೆ ಸಂಬಂಧಿಸಿದಂತೆ ನಿಷೇಧಕ್ಕೆ ಒಳಗಾಗಿದ್ದ ಶ್ರೀಶಾಂತ್ ಆವರ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಬಿಸಿಸಿಐಗೆ ಪಟಿಯಾಲ ಹೈಕೋರ್ಟ್ ಹಾಗೂ ಕೇರಳ ಹೈಕೋರ್ಟ್ ಸೂಚಿಸಿದೆ.

ಈ ಎರಡು ಕೋರ್ಟ್ ಗಳಿಂದ ಶ್ರೀಶಾಂತ್, ಅಂಕಿತ್ ಚೌಹಾಣ್, ಅಜಿತ್ ಚಾಂಡಿಲ ಸೇರಿದಂತೆ ಎಲ್ಲಾ 36 ಆರೋಪಿಗಳು ಖುಲಾಸೆಗೊಂಡಿದ್ದಾರೆ. ಆದರೆ, ಬಿಸಿಸಿಐ ಮಾತ್ರ ಶ್ರೀಶಾಂತ್ ಅವರು ಯಾವುದೇ ಕ್ರಿಕೆಟ್ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿದೆ.(ಪಿಟಿಐ)

Story first published: Friday, February 2, 2018, 12:49 [IST]
Other articles published on Feb 2, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ