ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟ್‌ನಲ್ಲಿ 199 ರನ್‌ಗೆ ಔಟ್ ಆಗಿ ದ್ವಿಶತಕ ಮಿಸ್ ಮಾಡಿಕೊಂಡ 12 ನತದೃಷ್ಟ ಆಟಗಾರರು ಇವರೇ

ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸುವುದು ಸುಲಭದ ಮಾತಲ್ಲ, ಈ ಮಾದರಿಯಲ್ಲಿ ಬ್ಯಾಟ್ಸ್‌ಮನ್ ಓರ್ವ ಹೆಚ್ಚು ಸಮಯ ತಾಳ್ಮೆಯಿಂದ ಬ್ಯಾಟ್ ಬೀಸಿ ದ್ವಿಶತಕ ಬಾರಿಸಿದರೆ ಅದೊಂದು ಮಹತ್ತರ ಸಾಧನೆಯೇ ಸರಿ. ಹೀಗಾಗಿಯೇ ಟೆಸ್ಟ್‌ ಕ್ರಿಕೆಟ್‌ ಆಡುವ ಅವಕಾಶ ಪಡೆಯುವ ಪ್ರತಿಯೊಬ್ಬ ಬ್ಯಾಟ್ಸ್‌ಮನ್ ಕೂಡ ದ್ವಿಶತಕದ ಮೈಲಿಗ್ಲಲ್ಲನ್ನು ಮುಟ್ಟಬೇಕೆಂಬ ಮಹಾದಾಸೆಯನ್ನು ಹೊತ್ತಿರುತ್ತಾರೆ.

ಅದರಂತೆ ಈ ಟೆಸ್ಟ್ ದ್ವಿಶತಕದ ಮೈಲಿಗಲ್ಲನ್ನು ಮುಟ್ಟುವಲ್ಲಿ ಹಲವು ಕ್ರಿಕೆಟಿಗರು ಸಫಲರಾಗಿದ್ದರೆ, ಇನ್ನೂ ಕೆಲ ಕ್ರಿಕೆಟಿಗರು ಹಲವು ದಾಖಲೆಗಳನ್ನು ಮಾಡಿದ್ದರೂ ಸಹ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಲಾಗಲಿಲ್ಲ ಎಂಬ ಬೇಸರವನ್ನು ಹೊಂದಿದ್ದಾರೆ. ಇನ್ನು ಕೆಲ ಆಟಗಾರರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ದ್ವಿಶತಕದ ಸನಿಹಕ್ಕೂ ಬರದೇ ತಮ್ಮ ಆಟವನ್ನು ಮುಗಿಸಿದ್ದರೆ, ಇನ್ನೂ ಕೆಲ ಕ್ರಿಕೆಟಿಗರು 199 ರನ್ ಗಳಿಸಿ ಔಟ್ ಆಗುವ ಮೂಲಕ ದ್ವಿಶತಕ ಬಾರಿಸುವ ಅವಕಾಶವನ್ನು ಕೈತಪ್ಪಿಸಿಕೊಂಡಿದ್ದಾರೆ. ಹೀಗೆ 199 ರನ್ ಗಳಿಸಿದ್ದಾಗ ಔಟ್ ಆಗಿ ದ್ವಿಶತ ವಂಚಿತರಾಗಿರುವ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..

199 ರನ್ ಗಳಿಸಿ ಟೆಸ್ಟ್ ದ್ವಿಶತಕ ಮಿಸ್ ಮಾಡಿಕೊಂಡ ಎಲ್ಲಾ ಬ್ಯಾಟ್ಸ್‌ಮನ್‌ಗಳ ಪಟ್ಟಿ

199 ರನ್ ಗಳಿಸಿ ಟೆಸ್ಟ್ ದ್ವಿಶತಕ ಮಿಸ್ ಮಾಡಿಕೊಂಡ ಎಲ್ಲಾ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಟೆಸ್ಟ್ ಕ್ರಿಕೆಟ್‌ನಲ್ಲಿ 199 ರನ್ ಗಳಿಸಿದ್ದಾಗ ಔಟ್ ಆಗಿ ದ್ವಿಶತಕ ಬಾರಿಸುವುದನ್ನು ಮಿಸ್ ಮಾಡಿಕೊಂಡ ಎಲ್ಲಾ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..
1. ಪಾಕಿಸ್ತಾನದ ಮುದಾಸ್ಸರ್ ನಝರ್ ಭಾರತದ ವಿರುದ್ಧ - 1984
2. ಭಾರತದ ಮೊಹಮ್ಮದ್ ಅಜರುದ್ದೀನ್ ಶ್ರೀಲಂಕಾ ವಿರುದ್ಧ - 1996
3. ಆಸ್ಟ್ರೇಲಿಯಾದ ಮ್ಯಾಥ್ಯೂ ಎಲಿಯಟ್ ಇಂಗ್ಲೆಂಡ್ ವಿರುದ್ಧ - 1997
4. ಶ್ರೀಲಂಕಾದ ಸನತ್ ಜಯಸೂರ್ಯ ಭಾರತದ ವಿರುದ್ಧ - 1997
5. ಆಸ್ಟ್ರೇಲಿಯಾದ ಸ್ಟೀವ್ ವಾ ವೆಸ್ಟ್ ಇಂಡೀಸ್ ವಿರುದ್ಧ - 1999
6. ಪಾಕಿಸ್ತಾನದ ಯೂನಸ್ ಖಾನ್ ಭಾರತದ ವಿರುದ್ಧ - 2006
7. ಇಂಗ್ಲೆಂಡ್‌ನ ಇಯಾನ್ ಬೆಲ್ ದಕ್ಷಿಣ ಆಫ್ರಿಕಾದ ವಿರುದ್ಧ - 2008
8. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ವೆಸ್ಟ್ ಇಂಡೀಸ್ ವಿರುದ್ಧ - 2015
9. ಭಾರತದ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ - 2016
10. ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ ಬಾಂಗ್ಲಾದೇಶದ ವಿರುದ್ಧ - 2017
11. ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಶ್ರೀಲಂಕಾದ ವಿರುದ್ಧ - 2020
12. ಶ್ರೀಲಂಕಾದ ಏಂಜಲೋ ಮ್ಯಾಥ್ಯೂಸ್ ಬಾಂಗ್ಲಾದೇಶದ ವಿರುದ್ಧ - 2022

199 ರನ್ ಗಳಿಸಿ ದ್ವಿಶತಕ ಮಿಸ್ ಮಾಡಿಕೊಂಡ ಪ್ರಥಮ ಕ್ರಿಕೆಟಿಗ

199 ರನ್ ಗಳಿಸಿ ದ್ವಿಶತಕ ಮಿಸ್ ಮಾಡಿಕೊಂಡ ಪ್ರಥಮ ಕ್ರಿಕೆಟಿಗ

ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಮುದಾಸ್ಸರ್ ನಝರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲಬಾರಿಗೆ 199 ರನ್ ಗಳಿಸಿ ಔಟ್ ಆಗಿ ದ್ವಿಶತಕ ಮಿಸ್ ಮಾಡಿಕೊಂಡ ಆಟಗಾರ ಎನಿಸಿಕೊಂಡಿದ್ದಾರೆ. ಫೈಜಲಾಬಾದ್‌ನಲ್ಲಿ 1984ರಲ್ಲಿ ನಡೆದಿದ್ದ ಪಾಕಿಸ್ತಾನ ಮತ್ತು ಭಾರತ ತಂಡಗಳ ನಡುವೆ ನಡೆದಿದ್ದ ಪಂದ್ಯದಲ್ಲಿ ಮುದಾಸ್ಸರ್ ನಝರ್ 199 ರನ್ ಗಳಿಸಿ ಔಟ್ ಆಗಿದ್ದರು.

Mumbai Indians ಗೆಲ್ಲುವಂತಹ ಪಂದ್ಯದಲ್ಲಿ ಸೋತಿದ್ದು ಹೀಗೆ | Oneindia Kannada
ಭಾರತದ ಕೆಎಲ್ ರಾಹುಲ್ ಕೂಡ 199 ರನ್ ಗಳಿಸಿ ದ್ವಿಶತಕ ವಂಚಿತರಾಗಿದ್ದರು

ಭಾರತದ ಕೆಎಲ್ ರಾಹುಲ್ ಕೂಡ 199 ರನ್ ಗಳಿಸಿ ದ್ವಿಶತಕ ವಂಚಿತರಾಗಿದ್ದರು

ಕನ್ನಡಿಗ ಕೆಎಲ್ ರಾಹುಲ್ ಕೂಡ 199 ರನ್ ಗಳಿಸಿ ಔಟ್ ಆಗಿ ಟೆಸ್ಟ್ ದ್ವಿಶತಕ ಸಿಡಿಸುವ ಅವಕಾಶವನ್ನು ಕೈತಪ್ಪಿಸಿಕೊಂಡಿದ್ದಾರೆ. 2016ರಲ್ಲಿ ಚೆನ್ನೈನ ಎಂ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ 199 ರನ್‌ಗಳಿಗೆ ಔಟ್ ಆಗಿದ್ದರು. ಇನ್ನು ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗಳಿಸಿರುವ ಗರಿಷ್ಟ ರನ್ ಕೂಡ ಇದೇ ಆಗಿದೆ.

Story first published: Tuesday, May 17, 2022, 18:24 [IST]
Other articles published on May 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X