ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿ: ಗೇಲ್ ದಾಖಲೆಗಿಲ್ಲ ಸರಿಸಾಟಿ

ಟಿ20 ವಿಶ್ವಕಪ್ ಪಂದ್ಯಾವಳಿ ಕಣ್ತುಂಬಿಕೊಳ್ಳಲು ಸಮಯ ಹತ್ತಿರವಾಗುತ್ತಿದೆ. ಟಿ20 ಕ್ರಿಕೆಟ್ ಎಂದರೆ ಹೊಡಿ ಬಡಿ ಆಟ ಎಂದೇ ಅರ್ಥ. ಪವರ್ ಹಿಟ್ಟರ್ ಬ್ಯಾಟರ್‌ಗಳು ಬೌಂಡರಿ ಗೆರೆಗಳ ಹೊರಗೆ ಚೆಂಡನ್ನು ಹೊಡೆಯುವ ಮೂಲಕ ಆಟದ ಈ ಚಿಕ್ಕ ಸ್ವರೂಪವನ್ನು ರೋಮಾಂಚನಗೊಳಿಸುತ್ತಾರೆ.

ಟಿ 20 ವಿಶ್ವಕಪ್‌ನಲ್ಲಿ, ಯುವರಾಜ್ ಸಿಂಗ್ ಅವರಂತಹ ಬ್ಯಾಟ್ಸ್‌ಮನ್ ಆರಂಭಿಕ ಋತುವಿನಲ್ಲಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆಯನ್ನು ಸಾಧಿಸಿದ ದಾಖಲೆಯಾಗಿದೆ. ಯುವರಾಜ್ ಸಿಂಗ್ ನಂತರ ಟಿ20 ವಿಶ್ವಕಪ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಈ ಮೈಲಿಗಲ್ಲು ತಲುಪಿಲ್ಲ.

ಟಿ20 ವಿಶ್ವಕಪ್‌ನಲ್ಲಿ ಸಿಕ್ಸರ್ ಬಾರಿಸಿದ ಅಗ್ರ ಐದು ಆಟಗಾರರ ಪಟ್ಟಿಯಲ್ಲಿರುವ ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ 2022ರ ಟಿ20 ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ, ಉಳಿದ ಮೂವರು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

MI ಎಮಿರೇಟ್ಸ್ ಮುಖ್ಯ ಕೋಚ್ ಶೇನ್ ಬಾಂಡ್, ಬೌಲಿಂಗ್ ಕೋಚ್ ಆಗಿ ಕನ್ನಡಿಗ ವಿನಯ್ ಕುಮಾರ್ ನೇಮಕMI ಎಮಿರೇಟ್ಸ್ ಮುಖ್ಯ ಕೋಚ್ ಶೇನ್ ಬಾಂಡ್, ಬೌಲಿಂಗ್ ಕೋಚ್ ಆಗಿ ಕನ್ನಡಿಗ ವಿನಯ್ ಕುಮಾರ್ ನೇಮಕ

ಟಿ20 ವಿಶ್ವಕಪ್‌ನಲ್ಲಿ ಹೆಚ್ಚಿನ ಸಿಕ್ಸರ್‌ಗಳ ವಿಷಯದಲ್ಲಿ ಕ್ರಿಸ್‌ ಗೇಲ್ ಎಲ್ಲಾ ಆಟಗಾರರಿಗಿಂತ ಭಾರಿ ಮುಂದಿದ್ದಾರೆ. ಸದ್ಯಕ್ಕೆ ಕ್ರಿಸ್ ಗೇಲ್ ಸಾಧನೆಯನ್ನು ಮುರಿಯುವುದು ಕಷ್ಟ, ಎರಡನೇ ಸ್ಥಾನದಲ್ಲಿ ಭಾರತದ ಎಡಗೈ ಬ್ಯಾಟರ್ ಯುವರಾಜ್ ಸಿಂಗ್ ಇದ್ದಾರೆ.

 ಗೇಲ್ ಸಿಕ್ಸರ್ ಆರ್ಭಟದ ದಾಖಲೆ

ಗೇಲ್ ಸಿಕ್ಸರ್ ಆರ್ಭಟದ ದಾಖಲೆ

ವೆಸ್ಟ್ ಇಂಡೀಸ್‌ನ ಎಡಗೈ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಅಗ್ರ ಸ್ಥಾನದಲ್ಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಆಗಿದ್ದಾರೆ ಮತ್ತು ಅವರ 31 ಇನ್ನಿಂಗ್ಸ್‌ಗಳಿಂದ ಟಿ 20 ವಿಶ್ವಕಪ್‌ನಲ್ಲಿ 63 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.

2007ರ ಮೊದಲನೇ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಪಂದ್ಯದಲ್ಲಿ 57 ಎಸೆತಗಳಲ್ಲಿ 117 ರನ್ ಗಳಿಸಿದರು. ಟಿ 20 ವಿಶ್ವಕಪ್‌ನಲ್ಲಿ ಮೊದಲ ಶತಕ ಗಳಿಸಿದ ಆಟಗಾರ ಕೂಡ ಕ್ರಿಸ್‌ ಗೇಲ್ ಆಗಿದ್ದಾರೆ. ಕ್ರಿಸ್ ಗೇಲ್ ಫೆಬ್ರವರಿ 16, 2006 ರಂದು ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಟಿ20 ಚೊಚ್ಚಲ ಪಂದ್ಯವನ್ನು ಆಡಿದರು ಮತ್ತು ನವೆಂಬರ್ 6, 2021 ರಂದು ಅಬುಧಾಬಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದರು.

Asia Cup: ಇದೇ ಭಾರತ ತಂಡದ ದೊಡ್ಡ ಸಮಸ್ಯೆ; ಏಷ್ಯಾ ಕಪ್ ಸೋಲಿನ ಹಿನ್ನೆಲೆ ವಿಮರ್ಶಿಸಿದ ಬಿಸಿಸಿಐ

ಸಿಕ್ಸರ್ ಮೂಲಕ ಅಬ್ಬರಿಸಿದ್ದ ಯುವರಾಜ್ ಸಿಂಗ್

ಸಿಕ್ಸರ್ ಮೂಲಕ ಅಬ್ಬರಿಸಿದ್ದ ಯುವರಾಜ್ ಸಿಂಗ್

ಭಾರತದ ಮಾಜಿ ಎಡಗೈ ಆಲ್‌ರೌಂಡರ್ ಯುವರಾಜ್ ಸಿಂಗ್, ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ 2ನೇ ಸ್ಥಾನದಲ್ಲಿದ್ದಾರೆ. 2007 ರಿಂದ 2016 ರವರೆಗಿನ ಅವರ ಟಿ20 ವಿಶ್ವಕಪ್ ವೃತ್ತಿಜೀವನದಲ್ಲಿ, ಅವರು 31 ಟಿ20 ಪಂದ್ಯಗಳನ್ನಾಡಿದ್ದಾರೆ.

ಯುವರಾಜ್ ಸಿಂಗ್ 28 ಇನ್ನಿಂಗ್ಸ್‌ಗಳಿಂದ 33 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. 2007 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೆಮಿ-ಫೈನಲ್ ಪಂದ್ಯದಲ್ಲಿ 70 ರನ್ ಗಳಿಸಿದರು, ಅದು ಭಾರತೀಯ ತಂಡವನ್ನು ಫೈನಲ್ ತಲುಪಲು ಸಹಾಯ ಮಾಡಿತು ಮತ್ತು ಆ ಪಂದ್ಯದಲ್ಲಿ ಯುವಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

31 ಸಿಕ್ಸರ್ ಬಾರಿಸಿರುವ ಶೇನ್ ವ್ಯಾಟ್ಸನ್

31 ಸಿಕ್ಸರ್ ಬಾರಿಸಿರುವ ಶೇನ್ ವ್ಯಾಟ್ಸನ್

ಆಸ್ಟ್ರೇಲಿಯಾದ ಮಾಜಿ ಬಲಗೈ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಶೇನ್ ವ್ಯಾಟ್ಸನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಇಷ್ಟಪಡುವ ಪ್ರಮುಖ ಆಟಗಾರರಾಗಿದ್ದರು. ಟಿ20 ವಿಶ್ವಕಪ್‌ನಲ್ಲಿ ಅವರ 22 ಇನ್ನಿಂಗ್ಸ್‌ಗಳಿಂದ 31 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಶೇನ್‌ ವ್ಯಾಟ್ಸನ್ ಗರಿಷ್ಠ 81 ರನ್ ಗಳಿಸಿದರು.

2007 ರಿಂದ 2016 ರವರೆಗಿನ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಶೇನ್‌ ವ್ಯಾಟ್ಸನ್ 24 ಪಂದ್ಯಗಳನ್ನು ಆಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 5 ಅರ್ಧಶತಕಗಳೊಂದಿಗೆ 140.94 ಸ್ಟ್ರೈಕ್ ರೇಟ್‌ನಲ್ಲಿ 537 ರನ್ ಗಳಿಸಿದರು. ಫೆಬ್ರವರಿ 24, 2006 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು, ಶೇನ್ ವ್ಯಾಟ್ಸನ್ 56 ಟಿ20 ಇನ್ನಿಂಗ್ಸ್‌ಗಳಿಂದ 145.32 ಸ್ಟ್ರೈಕ್ ರೇಟ್‌ನಲ್ಲಿ 1462 ರನ್‌ ಗಳಿಸಿದ್ದಾರೆ.

ಪವರ್ ಹಿಟ್ಟರ್ ರೋಹಿತ್ ಶರ್ಮಾ

ಪವರ್ ಹಿಟ್ಟರ್ ರೋಹಿತ್ ಶರ್ಮಾ

ಭಾರತ ತಂಡದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 30 ಇನ್ನಿಂಗ್ಸ್ ಆಡಿರುವ ರೋಹಿತ್ ಶರ್ಮಾ 31 ಸಿಕ್ಸರ್ ಸಿಡಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ 2 ನೇ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ.

2022ರ ಆಸ್ಟ್ರೇಲಿಯಾ ವಿಶ್ವಕಪ್‌ನಲ್ಲಿ ಭಾರತ ತಂಡದ ನಾಯಕನಾಗಿರು ರೋಹಿತ್ ಶರ್ಮಾ, ಈ ವರೆಗೆ ಟಿ20 ವಿಶ್ವಕಪ್‌ನಲ್ಲಿ 33 ಪಂದ್ಯಗಳನ್ನಾಡಿದ್ದು 131.5 ಸ್ಟ್ರೈಕ್ ರೇಟ್‌ನಲ್ಲಿ 847 ರನ್ ಗಳಿಸಿದ್ದಾರೆ.

5ನೇ ಸ್ಥಾನದಲ್ಲಿ ಡೇವಿಡ್ ವಾರ್ನರ್

5ನೇ ಸ್ಥಾನದಲ್ಲಿ ಡೇವಿಡ್ ವಾರ್ನರ್

ಆಸ್ಟ್ರೇಲಿಯಾದ ಎಡಗೈ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 30 ಇನ್ನಿಂಗ್ಸ್‌ಗಳಲ್ಲಿ 31 ಸಿಕ್ಸರ್‌ಗಳನ್ನು ಬಾರಿಸಿರುವ ಡೇವಿಡ್ ವಾರ್ನರ್ ವಿಶ್ವದ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರು.

2007 ರಿಂದ 2021 ರವರೆಗಿನ ಅವರ ಟಿ20 ವಿಶ್ವಕಪ್ ಪ್ರಯಾಣದಲ್ಲಿ, ಅವರು 30 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು 135.10 ರ ಸ್ಟ್ರೈಕ್ ರೇಟ್‌ನಲ್ಲಿ 762 ರನ್‌ ಗಳಿಸಿದ್ದಾರೆ. 2021 ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

Story first published: Sunday, September 18, 2022, 19:25 [IST]
Other articles published on Sep 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X