ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಹಳಷ್ಟು ಪ್ರತಿಭಾವಂತರಿದ್ದಾರೆ, ಐಪಿಎಲ್ ವಿಸ್ತರಣೆಗೆ ಸಜ್ಜಾಗಿದೆ: ದ್ರಾವಿಡ್

Lot of talent in store, IPL is ready for expansion: Rahul Dravid

ಬೆಂಗಳೂರು: ದೇಶದಲ್ಲಿ ಬಹಳಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ಹೀಗಾಗಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ತಂಡಗಳ ಸಂಖ್ಯೆ ಹೆಚ್ಚಿಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ವಿಸ್ತರಣೆಗೆ ಸಜ್ಜಾಗಿದೆ ಎಂದು ಭಾರತದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಮುಂದಿನ ಐಪಿಎಲ್ ಟೂರ್ನಿ ವೇಳೆ ತಂಡಗಳನ್ನು ಹೆಚ್ಚಿಸಲು ಬಿಸಿಸಿಐ ಯೋಚಿಸುತ್ತಿದೆ ಎಂಬ ಮಾತುಗಳು ಕೇಳಿ ಬಂದಿದೆ. 2023ರ ವೇಳೆಗೆ ಐಪಿಎಲ್ ತಂಡಗಳನ್ನು 8ರ ಬದಲು 10ಕ್ಕೆ ಏರಿಸುವ ದೀರ್ಘ ಕಾಲಿಕ ಯೋಜನೆ ಬಿಸಿಸಿಐ ತಲೆಯಲ್ಲಿದೆ ಎನ್ನಲಾಗಿದೆ.

ಅಸ್ಸಾಂ ಆಸ್ಪತ್ರೆಗೆ ತೆಂಡೂಲ್ಕರ್‌ರಿಂದ ವೈದ್ಯಕೀಯ ಸಲಕರಣೆ ಕೊಡುಗೆಅಸ್ಸಾಂ ಆಸ್ಪತ್ರೆಗೆ ತೆಂಡೂಲ್ಕರ್‌ರಿಂದ ವೈದ್ಯಕೀಯ ಸಲಕರಣೆ ಕೊಡುಗೆ

ಮನೋಜ್ ಬದಲೆ ಅವರ 'ಅ ನ್ಯೂ ಥಿಂಗ್ಸ್' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ದ್ರಾವಿಡ್, 'ಪ್ರತಿಭೆ ದೃಷ್ಟಿಯಲ್ಲಿ ನಾವು ನೋಡಿದರೆ ನಮ್ಮಲ್ಲಿ ಬಹಳಷ್ಟು ಹೊಸ ಹೆಸರುಗಳಿವೆ, ಮುಖಗಳಿವೆ,' ಎಂದಿದ್ದಾರೆ. ದ್ರಾವಿಡ್ ಸದ್ಯ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದಾರೆ.

'ಬಿಸಿಸಿಐ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಇದಕ್ಕೆ ನಿಖರವಾದ ವಿಧಾನ ಏನೆಂದು ಬಿಸಿಸಿಐ ನೋಡಲಿದೆ,' ಎಂದು ದ್ರಾವಿಡ್ ತಿಳಿಸಿದ್ದಾರೆ. 2021ರ ಐಪಿಎಲ್ ವೇಳೆ 8ಕ್ಕೆ ಬದಲಾಗಿ 9 ಐಪಿಎಲ್ ತಂಡಗಳು ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಯಾವ ರಾಜ್ಯದ ತಂಡ ಐಪಿಎಲ್ ಕಣಕ್ಕಿಳಿಯಲಿದೆ ಅನ್ನೋದು ಇನ್ನೂ ಸ್ಪಷ್ಟಗೊಂಡಿಲ್ಲ.

Story first published: Friday, November 13, 2020, 20:34 [IST]
Other articles published on Nov 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X