ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ: ಪಡಿಕ್ಕಲ್ ಭರ್ಜರಿ ಕಮ್‌ಬ್ಯಾಕ್; ಹುಬ್ಬಳ್ಳಿ ಸೋಲಿಸಿ ಅಗ್ರಸ್ಥಾನಕ್ಕೇರಿದ ಗುಲ್ಬರ್ಗಾ ಮಿಸ್ಟಿಕ್ಸ್!

Maharaja Trophy 2022: Gulbarga Mystics beat Hubli tigers and climbed to top position in points table

ಸದ್ಯ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿರುವ ಮಹಾರಾಜ ಟ್ರೋಫಿ ಟೂರ್ನಿಯ ಲೀಗ್ ಹಂತದ 11ನೇ ಪಂದ್ಯ ಇಂದು ( ಆಗಸ್ಟ್ 12 ) ನಡೆದಿದ್ದು, ಈ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಸೋಲಿಸಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ನಾಯಕ ಮನೀಶ್ ಪಾಂಡೆ ಬೌಲಿಂಗ್ ಆಯ್ದುಕೊಂಡು ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.

ಇದೆಂಥ ಅನ್ಯಾಯ: ರೋಹಿತ್, ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಏಷ್ಯಾಕಪ್ ತಂಡದಲ್ಲಿಲ್ಲ ಸ್ಥಾನ!ಇದೆಂಥ ಅನ್ಯಾಯ: ರೋಹಿತ್, ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಏಷ್ಯಾಕಪ್ ತಂಡದಲ್ಲಿಲ್ಲ ಸ್ಥಾನ!

ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತುಷಾರ್ ಸಿಂಗ್ ಹಾಗೂ ವಿಕೆಟ್ ಕೀಪರ್ ಲವ್ನಿತ್ ಸಿಸೋಡಿಯಾ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 145 ರನ್ ಕಲೆಹಾಕಿ ಎದುರಾಳಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಕ್ಕೆ ಗೆಲ್ಲಲು 146 ರನ್‌ಗಳ ಗುರಿಯನ್ನು ನೀಡಿತು. ಅತ್ತ ಈ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗಾ ಮಿಸ್ಟಿಕ್ಸ್ ದೇವದತ್ ಪಡಿಕ್ಕಲ್ ಹಾಗೂ ರೋಹನ್ ಪಾಟೀಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 16.4 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 146 ರನ್ ಕಲೆಹಾಕಿ 9 ವಿಕೆಟ್‌ಗಳ ಭರ್ಜರಿ ಜಯವನ್ನು ಸಾಧಿಸಿತು.

ಭಾರತ ಏಷ್ಯಾಕಪ್‌ ತಂಡದಲ್ಲಿ ಈ ನಾಲ್ವರು ಇಲ್ಲದಿರುವುದು ಅನ್ಯಾಯ, ತಂಡಕ್ಕೆ ದೊಡ್ಡ ಹೊಡೆತ!ಭಾರತ ಏಷ್ಯಾಕಪ್‌ ತಂಡದಲ್ಲಿ ಈ ನಾಲ್ವರು ಇಲ್ಲದಿರುವುದು ಅನ್ಯಾಯ, ತಂಡಕ್ಕೆ ದೊಡ್ಡ ಹೊಡೆತ!

ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಗುಲ್ಬರ್ಗಾ ಮಿಸ್ಟಿಕ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮಂಗಳೂರು ಯುನೈಟೆಡ್ ತಂಡವನ್ನು ಎರಡನೇ ಸ್ಥಾನಕ್ಕೆ ತಳ್ಳಿ ಪ್ರಥಮ ಸ್ಥಾನಕ್ಕೆ ಏರಿಕೆ ಕಂಡಿದೆ. ಈ ಪಂದ್ಯದ ಅಂತ್ಯಕ್ಕೆ ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಮಂಗಳೂರು ಯುನೈಟೆಡ್ ಎರಡೂ ತಂಡಗಳೂ ಸಹ ತಲಾ 4 ಪಂದ್ಯಗಳಲ್ಲಿ ಕಣಕ್ಕಿಳಿದು 3 ಪಂದ್ಯಗಳಲ್ಲಿ ಜಯ ಸಾಧಿಸಿ 1 ಪಂದ್ಯದಲ್ಲಿ ಸೋತು 6 ಅಂಕಗಳನ್ನು ಪಡೆದುಕೊಂಡಿವೆ.

ಹುಬ್ಬಳ್ಳಿ ಟೈಗರ್ಸ್ ಸಾಮಾನ್ಯ ಬ್ಯಾಟಿಂಗ್

ಹುಬ್ಬಳ್ಳಿ ಟೈಗರ್ಸ್ ಸಾಮಾನ್ಯ ಬ್ಯಾಟಿಂಗ್

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ಪರ ಲುವ್ನಿತ್ ಸಿಸೋಡಿಯಾ ಮತ್ತು ತುಷಾರ್ ಸಿಂಗ್ ಹೊರತುಪಡಿಸಿ ಉಳಿದ ಯಾವುದೇ ಆಟಗಾರರೂ ಸಹ ಇಪ್ಪತ್ತರ ಗಡಿ ಮುಟ್ಟಲಿಲ್ಲ. ತಂಡ ಪರ ಆರಂಭಿಕರಾಗಿ ಕಣಕ್ಕಿಳಿದ ಲುವ್ನಿತ್ ಸಿಸೋಡಿಯಾ 30 ರನ್ ಕಲೆಹಾಕಿದರೆ, ಮೊಹಮ್ಮದ್ ತಹಾ 15 ರನ್ ಕಲೆಹಾಕಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಿಯು ಶಿವಕುಮಾರ್ 8 ರನ್ ಗಳಿಸಿದರೆ, ಸ್ವಪ್ನಿಲ್ ಯೆಳವೆ 5 ರನ್, ತುಷಾರ್ ಸಿಂಗ್ 42 ರನ್, ನವೀನ್ ಎಂಜಿ 24 ರನ್, ನಾಯಕ ಅಭಿಮನ್ಯು ಮಿಥುನ್ 5 ರನ್, ಜಹೂರ್ ಫರೂಕಿ 1 ರನ್ ಕಲೆಹಾಕಿದರೆ, ರೋಹನ್ ನವೀನ್ ಅಜೇಯ 6 ರನ್ ಮತ್ತು ವಾಸುಕಿ ಕೌಶಿಕ್ ಅಜೇಯ 2 ರನ್ ಕಲೆಹಾಕಿದರು.

ಹುಬ್ಬಳ್ಳಿ ಟೈಗರ್ಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದ ಗುಲ್ಬರ್ಗಾ ಮಿಸ್ಟಿಕ್ಸ್ ಪರ ಅಭಿಲಾಷ್ ಶೆಟ್ಟಿ, ಮನೋಜ್ ಭಂಡಾಗೆ ಹಾಗೂ ರಿತೇಶ್ ಭಟ್ಕಳ್ ತಲಾ 2 ವಿಕೆಟ್ ಪಡೆದರೆ, ಕಾರ್ತಿಕ್ ಸಿಎ ಮತ್ತು ವಿದ್ವತ್ ಕಾವೇರಪ್ಪ ತಲಾ ಒಂದೊಂದು ವಿಕೆಟ್ ಪಡೆದರು.

ಕಮ್‌ಬ್ಯಾಕ್ ಮಾಡಿದ ಪಡಿಕ್ಕಲ್, ರೋಹನ್ ಅಬ್ಬರ

ಕಮ್‌ಬ್ಯಾಕ್ ಮಾಡಿದ ಪಡಿಕ್ಕಲ್, ರೋಹನ್ ಅಬ್ಬರ

ಇತ್ತ ಹುಬ್ಬಳ್ಳಿ ಟೈಗರ್ಸ್ ನೀಡಿದ ಈ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗಾ ಮಿಸ್ಟಿಕ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಮತ್ತು ರೋಹನ್ ಪಾಟೀಲ್ ಜೋಡಿ 91 ರನ್‌ಗಳ ಜತೆಯಾಟವಾಡಿತು. ದೇವದತ್ ಪಡಿಕ್ಕಲ್ ಜವಾವ್ದಾರಿಯುತ ಬ್ಯಾಟಿಂಗ್ ನಡೆಸಿ 8 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 47 ಎಸೆತಗಳಲ್ಲಿ 62 ರನ್ ಕಲೆಹಾಕಿದರು. ಈ ಮೂಲಕ ಮೊದಲ ಪಂದ್ಯದಲ್ಲಿ 18 ರನ್, ದ್ವಿತೀಯ ಪಂದ್ಯದಲ್ಲಿ 9 ರನ್ ಹಾಗೂ ತೃತೀಯ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಕಳೆದುಕೊಂಡು ಬ್ಯಾಟಿಂಗ್ ಮಾಡದೇ ಕಳಪೆಯಾಗಿದ್ದ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಇನ್ನು ದೇವದತ್ ಪಡಿಕ್ಕಲ್ ಬ್ಯಾಟಿಂಗ್ ವೇಳೆ ನಾನ್ ಸ್ಟ್ರೈಕ್ ಎಂಡ್‌ನಲ್ಲಿ ಸಾಥ್ ನೀಡುತ್ತಿದ್ದ ರೋಹನ್ ಪಾಟೀಲ್ 40 ಎಸೆತಗಳಲ್ಲಿ ಅಜೇಯ 61 ರನ್ ಕಲೆಹಾಕಿದರೆ, ಜೆಸ್ವಂತ್ ಆಚಾರ್ಯ ಅಜೇಯ 17 ರನ್ ಕಲೆಹಾಕಿದರು.

ಹುಬ್ಬಳ್ಳಿ ಟೈಗರ್ಸ್ ಪರ ನಾಯಕ ಅಭಿಮನ್ಯು ಮಿಥುನ್ ಹೊರತುಪಡಿಸಿ ಉಳಿದ ಯಾವುದೇ ಬೌಲರ್ ಕೂಡ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.

ಆಡುವ ಬಳಗಗಳು

ಆಡುವ ಬಳಗಗಳು

ಗುಲ್ಬರ್ಗಾ ಮಿಸ್ಟಿಕ್ಸ್: ರೋಹನ್ ಪಾಟೀಲ್, ಜೇಸ್ವತ್ ಆಚಾರ್ಯ, ದೇವದತ್ತ್ ಪಡಿಕ್ಕಲ್, ಮನೀಶ್ ಪಾಂಡೆ (ನಾಯಕ), ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಮನೋಜ್ ಭಾಂಡಗೆ, ಕೋದಂಡ ಅಜಿತ್ ಕಾರ್ತಿಕ್, ರಿತೇಶ್ ಭಟ್ಕಳ್, ಶ್ರೀಶ ಆಚಾರ್, ಅಭಿಲಾಷ್ ಶೆಟ್ಟಿ, ವಿಧ್ವತ್ ಕಾವೇರಪ್ಪ

ಹುಬ್ಬಳ್ಳಿ ಟೈಗರ್ಸ್: ಮೊಹಮ್ಮದ್ ತಾಹಾ, ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್), ಬಿಯು ಶಿವಕುಮಾರ್, ತುಷಾರ್ ಸಿಂಗ್, ರೋಹನ್ ನವೀನ್, ಅಭಿಮನ್ಯು ಮಿಥುನ್ (ನಾಯಕ), ನವೀನ್ ಎಂಜಿ, ವಾಸುಕಿ ಕೌಶಿಕ್, ಸ್ವಪ್ನಿಲ್ ಯೆಲವೆ, ಆನಂದ್ ದೊಡ್ಡಮನಿ, ಜಹೂರ್ ಫಾರೂಕಿ

Story first published: Friday, August 12, 2022, 20:13 [IST]
Other articles published on Aug 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X