ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್ ನಲ್ಲಿ ಧೋನಿ ಲಕ್ ತಿರುಗಿದೆ

By Mahesh

ಬೆಂಗಳೂರು, ಸೆ.1: ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡು ಕಳಪೆ ನಾಯಕ ಪಟ್ಟ ಹೊತ್ತಿರುವ ಟೀಂ ಇಂಡಿಯಾದ ನಾಯಕ ಧೋನಿಗೆ ಏಕದಿನ ಕ್ರಿಕೆಟ್ ನಲ್ಲಿ ಲಕ್ ತಿರುಗಿದೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ 3ನೇ ಪಂದ್ಯದಲ್ಲಿ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಧೋನಿ ಹೊಸ ದಾಖಲೆ ಸರಿಗಟ್ಟಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ 90 ಏಕದಿನ ಗೆಲುವಿನ ದಾಖಲೆಯನ್ನು ಮಹೇಂದ್ರಸಿಂಗ್ ಧೋನಿ (90 ಪಂದ್ಯ ಗೆಲುವು) ಸರಿಗಟ್ಟಿದ್ದಾರೆ. ಆದರೆ, ಅಂಕಿ ಅಂಶ ಲೆಕ್ಕಾಚಾರ ನೋಡಿದರೆ ಅಜರುದ್ದೀನ್ ಗಿಂತ ಧೋನಿಯೇ ಉತ್ತಮ ಎನಿಸುತ್ತದೆ.

ಅಜರುದ್ದೀನ್ 1990 ರಿಂದ 1999ರವರೆಗೆ ಟೀಂ ಇಂಡಿಯಾದ ನಾಯಕತ್ವದಲ್ಲಿ 174 ಪಂದ್ಯಗಳನ್ನು ಆಡಿ ಈ ಮೈಲುಗಲ್ಲನ್ನು ಸ್ಥಾಪಿಸಿದ್ದರು. ಆದರೆ, ಮಹೇಂದ್ರ ಸಿಂಗ್ ಧೋನಿ ಈ ದಾಖಲೆಯನ್ನು ಸರಿಗಟ್ಟಲು ಕೇವಲ 161 ಪಂದ್ಯಗಳನ್ನು ತೆಗೆದು ಕೊಂಡಿದ್ದಾರೆ. ಅಲ್ಲದೆ ಧೋನಿ ಇಂಗ್ಲೆಂಡ್ ವಿರುದ್ಧ ಅವರ ನೆಲದಲ್ಲೇ ತಾನು ಆಡಿದ 24 ಪಂದ್ಯಗಳಲ್ಲಿ 16 ಪಂದ್ಯಗಳಲ್ಲಿ ಗೆದ್ದರೆ, 5 ಪಂದ್ಯಗಳನ್ನು ಸೋತು, ಎರಡು ಟೈ ಹಾಗೂ 1 ಪಂದ್ಯ ರದ್ದಾಗುವ ಮೂಲಕ 73.9 ರ ಸರಾಸರಿಯನ್ನು ಹೊಂದದ್ದಾರೆ.

Mahendra Singh Dhoni Equals Mohammad Azharuddin's Record of India ODI Wins

ಜೊತೆಗೆ ಎಂಎಸ್ ಧೋನಿ ಈ ಪಂದ್ಯದಲ್ಲೇ ಇನ್ನೊಂದು ದಾಖಲೆ ಬರೆದಿದಾರೆ. ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಂಚೆ ಈ ದಾಖಲೆ ಶ್ರೀಲಂಕಾದ ಕುಮಾರ ಸಂಗಾಕ್ಕಾರರ ಹೆಸರಿನಲ್ಲಿತ್ತು (129 ಸ್ಟಂಪಿಂಗ್) ಇದಕ್ಕಾಗಿ ಸಂಗಾ 563 ಪಂದ್ಯಗಳನ್ನು ತೆಗೆದುಕೊಂಡಿದ್ದರು. ಆದರೆ ಧೋನಿ 382 ಪಂದ್ಯಗಳಲ್ಲಿಯೇ 131 ಸ್ಟಂಪಿಂಗ್ ಮಾಡುವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.

ಅತಿ ಹೆಚ್ಚು ಪಂದ್ಯ ಗೆದ್ದ ನಾಯಕರು: ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್- 165 ಪಂದ್ಯ, ನ್ಯೂಜಿಲ್ಯಾಂಡ್ ನ ಸ್ಟೀಫನ್ ಫ್ಲೆಮಿಂಗ್ : 98, ನಂತರದ ಸ್ಥಾನಗಳಲ್ಲಿ ಶ್ರೀಲಂಕಾದ ಅರ್ಜುನ್ ರಣತುಂಗ, ಆಸ್ಟ್ರೇಲಿಯಾದ ಅಲನ್ ಬಾರ್ಡರ್, ಅಜರುದ್ದೀನ್ ಹಾಗೂ ಎಂಎಸ್ ಧೋನಿ ಕಾಣಿಸಿಕೊಳ್ಳಲಿದ್ದಾರೆ.

ಸ್ಟಂಪಿಂಗ್ ನಲ್ಲಿ ಧೋನಿ ಬೆಸ್ಟ್;
* ಎಂಎಸ್ ಧೋನಿ : 131(382 ಪಂದ್ಯ)
* ಕುಮಾರ್ ಸಂಗಕ್ಕಾರ (563)
* ರೊಮೇಶ್ ಕಲು ವಿತರಣ(238)
* ಮೋಯಿನ್ ಖಾನ್ (288)
* ಆಡಂ ಗಿಲ್ ಕ್ರಿಸ್ಟ್ (396)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X