ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಲ್ ರೌಂಡರ್ ಶಕೀಬ್ ಅಲ್ ಹಸನ್‌ಗೆ 2 ವರ್ಷಗಳ ನಿಷೇಧ ವಿಧಿಸಿದ ಐಸಿಸಿ

Shakib Al Hasan ban from cricket for next 2 years
Mahmudullah, Mominul handed T20I and Test captaincy after Shakib’s ban

ಧಾಕಾ, ಅಕ್ಟೋಬರ್ 30: ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್ ರೌಂಡರ್ ಶಕೀಬ್ ಅಲ್ ಹಸನ್‌ಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2 ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಭ್ರಷ್ಟಾಚಾರ ಆರೋಪದಲ್ಲಿ ಶಕೀಬ್‌ ನಿಷೇಧ ಶಿಕ್ಷೆಗೆ ಒಳಪಟ್ಟಿದ್ದಾರೆ. 3 ಬಾರಿ ಬುಕ್ಕಿಗಳು ಸಂಪರ್ಕಿಸಿದ್ದನ್ನು ಐಸಿಸಿಗೆ ತಿಳಿಸದ ಕಾರಣ ಶಕೀಬ್‌ ನಿಷೇಧಕ್ಕೀಡಾಗಿದ್ದಾರೆ.

ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾ ಕ್ರಿಕೆಟ್‌ ತಂಡ, ಆತಿಥೇಯ ಭಾರತದ ವಿರುದ್ಧ 3 ಪಂದ್ಯಗಳ ಟಿ20 ಮತ್ತು 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಶಕೀಬ್ ನಿಷೇಧಕ್ಕೀಡಾಗಿರುವುದರಿಂದ ಅವರ ಬದಲಿಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ಬೇರೆ ಆಟಗಾರರನ್ನು ಟಿ20 ಮತ್ತು ಟೆಸ್ಟ್ ನಾಯಕರಾಗಿ ಹೆಸರಿಸಿದೆ.

ಮಹಮುದುಲ್ಲ ರಿಯಾದ್‌ಗೆ ಟಿ20 ನಾಯಕತ್ವ, ಮೊಮೀನುಲ್ಲ ಹಕ್‌ಗೆ ಟೆಸ್ಟ್‌ ನಾಯಕತ್ವ ವಹಿಸಲಾಗಿದೆ. ನಿಷೇಧ ಶಿಕ್ಷೆಗೆ ಮುನ್ಸೂಚನೆಯೆಂಬಂತೆ ಭಾರತ ವಿರುದ್ಧದ ಸರಣಿಗಾಗಿ ಬಾಂಗ್ಲಾದ ಅಭ್ಯಾಸದಲ್ಲಿ ಶಕೀಬ್ ಅವರನ್ನು ಬಿಸಿಬಿ ಹೊರಗಿಟ್ಟಿತ್ತು.

ಸ್ಥಳೀಯ ಮಾಧ್ಯಮಗಳಲ್ಲಿನ ವರದಿಯ ಪ್ರಕಾರ ಶಕೀಬ್ ಅಲ್ ಹಸನ್ ಅವರಿಗೆ ಬುಕ್ಕಿಯಿಂದ ಆಫರ್ ಬಂದಿತ್ತು. ಆದರೆ ಶಕೀಬ್ ಇದನ್ನು ಐಸಿಸಿಯ ಭ್ರಷ್ಟಾಚಾರ ವಿರೋಧಿ ಘಟಕಕ್ಕೆ ತಿಳಿಸಿರಲಿಲ್ಲ. ಈ ಪ್ರಕರಣ ಶಕೀಬ್‌ಗೆ ಮುಳ್ಳಾಗಿದೆ.

Story first published: Tuesday, October 29, 2019, 23:02 [IST]
Other articles published on Oct 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X