ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಸಿಇಒ ಆಗಿ ಮನು ಸ್ವಾಹ್ನಿ ಅಧಿಕಾರ ಸ್ವೀಕಾರ

Manu Sawhney to assume the position of Chief Executive of ICC with immediate effect

ದುಬೈ, ಏಪ್ರಿಲ್ 1: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ನೂತನ ಮುಖ್ಯ ಕಾರ್ಯನಿರ್ವಾಹಕರಾಗಿ ರಕ್ಷಣದಿಂದಲೇ ಅನ್ವಯವಾಗುವಂತೆ ಮನು ಸ್ವಾಹ್ನಿ ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಕಳೆದ ಆರು ವಾರಗಳಿಂದ ಸ್ವಾಹ್ನಿ ಅವರು ರಿಚರ್ಡ್‌ಸನ್ ಜತೆಗಿದ್ದು, ಸಂಸ್ಥೆಯ ಆಡಳಿತ ನಿರ್ವಹಣೆಯ ವೈಖರಿಯನ್ನು ಅರಿತುಕೊಂಡಿದ್ದರು. 2019ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಮುಕ್ತಾಯದವರೆಗೂ ಮುಂದುವರಿಯಲು ರಿಚರ್ಡ್‌ಸನ್ ಬಯಸಿದ್ದರು. ಅದರಂತೆ ಜುಲೈವರೆಗೂ ಅವರು ಐಸಿಸಿಯಲ್ಲಿ ಇರಲಿದ್ದಾರೆ.

ಟ್ವಿಟ್ಟರ್‌ನಲ್ಲಿ ಆರ್‌ಸಿಬಿಯ ಜನ್ಮ ಜಾಲಾಡಿದ ನೆಟ್ಟಿಗರುಟ್ವಿಟ್ಟರ್‌ನಲ್ಲಿ ಆರ್‌ಸಿಬಿಯ ಜನ್ಮ ಜಾಲಾಡಿದ ನೆಟ್ಟಿಗರು

'ಡೇವಿಡ್ ಅವರಿಂದ ಅಧಿಕಾರ ಸ್ವೀಕರಿಸಲು ನನಗೆ ಬಹಳ ಸಂತೋಷವಾಗುತ್ತಿದೆ. ಕಳೆದ ಏಳು ವರ್ಷಗಳಿಂದ ಅವರು ಕ್ರೀಡೆಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾರೆ. 2019ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ಅನ್ನು ಅವರು ಮುನ್ನಡೆಸಲಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇನೆ. ಕ್ರಿಕೆಟ್‌ನ ಅತ್ಯಂತ ದೊಡ್ಡ ಸಂಭ್ರಮಾಚರಣೆಯ ಸಮಾರಂಭವನ್ನು ನಡೆಸಲು ಅವರಿಗಿಂತ ಬೇರೆ ಉತ್ತಮ ವ್ಯಕ್ತಿಯಿಲ್ಲ' ಎಂದು ಸ್ವಾಹ್ನಿ ಹೇಳಿದ್ದಾರೆ.

ಈವರೆಗಿನ ಅತ್ಯಂತ ಹೀನಾಯ ಸೋಲು ಇದು: ಕೊಹ್ಲಿ ಬೇಸರಈವರೆಗಿನ ಅತ್ಯಂತ ಹೀನಾಯ ಸೋಲು ಇದು: ಕೊಹ್ಲಿ ಬೇಸರ

ಸಿಂಗಪುರ ಸ್ಪೋರ್ಟ್ಸ್ ಹಬ್‌ನ ಮಾಜಿ ಸಿಇಒ ಆಗಿದ್ದ ಸ್ವಾಹ್ನಿ, 17 ವರ್ಷ ಇಎಸ್‌ಪಿಎನ್ ಸ್ಟಾರ್‌ಸ್ಪೋರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದರು. 2007-2015ರವರೆಗೆ ಅವರು ಐಸಿಸಿಯೊಂದಿಗೆ ಜಾಗತಿಕ ಪ್ರಸಾರ ಪಾಲುದಾರಿಕೆ ಹೊಂದಿದ್ದರು. ಆಡಿಟ್ ಕಮಿಟಿ ಆಫ್ ಮ್ಯಾಂಚೆಸ್ಟರ್ ಯುನೈಟೆಡ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದರು.

Story first published: Monday, April 1, 2019, 13:40 [IST]
Other articles published on Apr 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X