ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮರಾಠ ಅರೇಬಿಯನ್ಸ್ ಮುಕುಟಕ್ಕೆ ಅಬುದಾಬಿ ಟಿ10 ಚಾಂಪಿಯನ್ ಕಿರೀಟ

Maratha Arabians crowned champions of season 2

ಸಾಕಷ್ಟು ಕುತೂಹಲವನ್ನು ಮೂಡಿಸಿದ್ದ ಅಬುದಾಬಿ ಟಿ10 ಕ್ರಿಕೆಟ್ ಕೂಟದ ಎರಡನೇ ಸೀಸನ್‌ನ ಚಾಂಪಿಯನ್ ಆಗಿ ಮರಾಠಾ ಅರೇಬಿಯನ್ಸ್‌ ಹೊರಹೊಮ್ಮಿದೆ. ಡೆಕ್ಕನ್ ಗ್ಲಾಡಿಯೇಟರ್ಸ್‌ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಮರಾಟ ಅರೇಬಿಯನ್ಸ್‌ ಅಮೋಘ ಆಟವಾಡಿ ಗೆಲುವನ್ನು ತನ್ನದಾಗಿಸಿಕೊಂಡಿದೆ. ಮರಾಠ ಅರೇಬಿಯನ್ಸ್‌ನ ಚಾಡ್ವಿಕ್ ವ್ಯಾಲ್ಟನ್ ಮತ್ತು ಡ್ವೇಯ್ನ್‌ ಬ್ರಾವೋ ಅತ್ಯುತ್ತಮ ಆಟ ಪ್ರದರ್ಶಿಸಿ ಗೆಲುವನ್ನು ತಮ್ಮದಾಗಿಸಿಕೊಂಡರು.

ಅಬುಧಾಬಿ ಟಿ10ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಸಿಕ್ಸರ್ ಕಿಂಗ್ ಯುವರಾಜ್‌ ಸಿಂಗ್ಅಬುಧಾಬಿ ಟಿ10ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಸಿಕ್ಸರ್ ಕಿಂಗ್ ಯುವರಾಜ್‌ ಸಿಂಗ್

ಅಬುದಾಬಿಯ ಶೇಕ್ ಜಾಯೇದ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆದ ಮರಾಠ ಅರೇಬಿಯನ್ಸ್ ಮೊದಲಿಗೆ ಟಾಸ್‌ ಗೆದ್ದು ಫೀಲ್ಡಿಂಗ್‌ಅನ್ನು ಆಯ್ದುಕೊಂಡಿತು. ವೇಗಿ ಮಿ‍ಚೆಲ್ ಮೆಕ್ಲೆನಾಘನ್ ತಮ್ಮ ಮೊದಲ ಓವರ್‌ನಲ್ಲೇ ಸ್ಪೋಟಕ ಆಟಗಾರ ಶೇನ್ ವಾಟ್ಸನ್‌ಅವರನ್ನು ಔಟ್ ಮಾಡಿ ಯಶಸ್ಸು ನೀಡಿದರು. ಬಳಿಕ ಲಸಿತ್ ಮಲಿಂಗ ಮೊಹಮ್ಮದ್ ಶೆಹ್ಸಾದ್ ವಿಕೆಟ್ ಕಿತ್ತು ಎದುರಾಳಿಗೆ ಆಘಾತವನ್ನು ನೀಡಿದರು.

ಬಳಿಕ ಬಂದ ಭನುಕ ರಾಜಪಕ್ಸ(23) ಮತ್ತು ಆಸಿಫ್ ಅಲಿ (25*) ರನ್‌ಗಳಿಸಿ ತಂಡಕ್ಕೆ ಉತ್ತಮ ಚೇತರಿಕೆ ನೀಡಿದರು. ಕೊನೆಗೆ ಬಂದ ಬೆನ್ ಕಟ್ಟಿಂಗ್ ಮಿಂಚಿನ ಆಟವಾಡಿ 12ರನ್ ಗಳಿಸಿದರು. ಇನ್ನಿಂಗ್ಸ್‌ ಅಂತ್ಯಕ್ಕೆ 87/8 ರನ್ ಗಳಿಸಿತು.

ಈ ಮೊತ್ತನ್ನು ಸುಲಭವಾಗಿ ಬೆನ್ನತ್ತಿದ ಮರಾಠಾ ಅರೇಬಿಯನ್ಸ್ ಕೇವಲ ಎರಡು ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪಿತು. ಆರಂಭಿಕ ಆಟಗಾರ ಚಾಡ್ವಿಕ್ ವಾಲ್ಟನ್ 26ಎಸೆತಗಳಲ್ಲಿ 51 ರನ್ ಸಿಡಿಸಿದರೆ ಮತ್ತೋರ್ವ ಆಟಗಾರ ಕ್ರಿಸ್ ಲೇನ್ 10ಎಸೆತಗಳಲ್ಲಿ 16ರನ್ ಸಿಡಿಸಿದ್ರು. ಇನ್ನೋರ್ವ ಆಟಗಾರ ನಝಿಬುಲ್ ಝಾಡ್ರನ್ ಕೇವಲ 5ಎಸೆತಗಳಲ್ಲಿ 12 ರನ್ ಚಚ್ಚಿದರು.

ಅಬುಧಾಬಿ ಟಿ10ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಯುವರಾಜ್, ಅಂಬಾಟಿ ರಾಯುಡು?!ಅಬುಧಾಬಿ ಟಿ10ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಯುವರಾಜ್, ಅಂಬಾಟಿ ರಾಯುಡು?!

ಡೆಕ್ಕನ್ ಗ್ಲಾಡಿಯೇಟರ್ಸ್ ನೀಡಿದ ಗುರಿಯನ್ನು ಮರಾಠಾ ಅರೇಬಿಯನ್ಸ್‌ ಇನ್ನೂ 2.4ಓವರ್ ಇರುವಂತೆಯೇ ತಲುಪಿ ಎರಡನೇ ಆವೃತ್ತಿಯ ಚಾಂಪಿಯನ್ಸ್‌ ಎನಿಸಿತು. ಮರಾಠಾ ಪರವಾಗಿ ಮಿಗಾಯಿಲ್ ಪ್ರೆಟೋರಿಯಸ್ (1/16) ಮತ್ತು ಝಹೂರ್ ಖಾನ್(1/22) ಮಾತ್ರ ಎದುರಾಳಿಗೆ ಸ್ವಲ್ಪ ಮಟ್ಟಿಗೆ ತಡೆಯಾಗುವಲ್ಲಿ ಯಶಸ್ಸು ಕಂಡರು. ಆಸ್ಟ್ರೇಲಿಯಾದ ಕ್ರಿಕೆಟರ್ ಕ್ರಿಸ್ ಲೇನ್ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನವನ್ನು ನೀಡಿ 371ರನ್ ಸಿಡಿಸಿದ್ದಾರೆ. ಸರಣಿಯುದ್ಧಕ್ಕೂ ಮರಾಠಾ ಅರೇಬಿಯನ್ಸ್ ಸಂಘಟಿತ ಪ್ರದರ್ಶನವನ್ನು ನೀಡಿ ಅರ್ಹವಾಗಿಯೇ ಟ್ರೋಫಿಗೆ ಮುತ್ತಿಕ್ಕಿದೆ.

Story first published: Monday, November 25, 2019, 11:58 [IST]
Other articles published on Nov 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X