ಟಿ20 ವಿಶ್ವಕಪ್‌: ಪಾಕಿಸ್ತಾನ ತಂಡದ ಕೋಚ್‌ಗಳಾಗಿ ಹೇಡನ್, ಫಿಲಾಂಡರ್‌ ನೇಮಕ

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂಬರುವ ಟಿ20 ವಿಶ್ವಕಪ್‌ಗೆ ಹೊಸ ಕೋಚ್‌ಗಳನ್ನು ನೇಮಸಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಪೋಟಕ ಆಟಗಾರ ಮ್ಯಾಥ್ಯೂ ಹೇಡನ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಫಿಲಾಂಡರ್ ಪಾಕಿಸ್ತಾನ ತಂಡಕ್ಕೆ ಕೋಚ್‌ಗಳಾಗಿ ಸೇರ್ಪಡೆಯಾಗಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಹೊಸದಾಗಿ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ರಮೀಜ್ ರಾಜಾ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂದರ್ಭದಲ್ಲಿ ಈ ಘೋಷನೆ ಮಾಡಿದ್ದಾರೆ.

ಈ ಹಿಂದೆ ಮುಖ್ಯ ಕೋಚ್ ಆಗಿದ್ದ ಮಿಸ್ಬಾ ಉಲ್ ಹಕ್ ಹಾಗೂ ವಾಕರ್ ಯೂನಿಸ್ ಇತ್ತೀಚೆಗಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಘೋಷಣೆ ಮಾಡಿದ ಕೆಲವೇ ಕ್ಷಣಗಳಲ್ಲಿ ಮಿಸ್ಬಾ ಉಲ್ ಹಕ್ ಹಾಗೂ ವಾಕರ್ ಯೂನಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹುದ್ದೆಯನ್ನು ಈಗ ಮ್ಯಾಥ್ಯೂ ಹೇಡನ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಫಿಲಾಂಡರ್ ತುಂಬಲಿದ್ದಾರೆ. ಆದರೆ ಈ ಇಬ್ಬರಿಗೆ ಕೋಚಿಂಗ್ ವಿಭಾಗದಲ್ಲಿ ಯಾವ ಹುದ್ದೆ ಎಂಬುದನ್ನು ರಮೀಜ್ ರಾಜಾ ಉಲ್ಲೇಖಿಸಿಲ್ಲ. ಆದರೆ ಈ ಸಂದರ್ಭದಲ್ಲಿ ಹೆಡ್ ಕೋಚ್ ಆಗಿ ಒಬ್ಬರು ನೇಮಕವಾಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ

ಮಿಸ್ಬಾ ಉಲ್ ಹಕ್ ಹಾಗೂ ವಾಕರ್ ಯೂನಿಸ್ ಎರಡು ವರ್ಷಗಳ ಕಾಲ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್‌ಗಳಾಗಿ ಕರ್ತವ್ಯ ನಿರ್ವಹಿಸಿದ್ದರು. ಆದರೆ ಟಿ20 ವಿಶ್ವಕಪ್‌ಗೆ ಮುನ್ನ ಈ ಇಬ್ಬರು ಕೂಡ ತಮ್ಮ ಸ್ಥಾನಕ್ಕೆ ರಾಜಹೀನಾಮೆ ನೀಡಿದ್ದಾರೆ. ಹೀಗಾಗಿ ಹೊಸ ಕೋಚಿಂಗ್ ಸ್ಟಾಫ್‌ಗಳನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನೇಮಕ ಮಾಡಿದೆ.

ಐಪಿಎಲ್ 2021: ಗೇಲ್ to ಎಬಿಡಿ, ಐಪಿಎಲ್ ಇತಿಹಾಸದ ಟಾಪ್ 5 ಸ್ಪೋಟಕ ಶತಕಗಳುಐಪಿಎಲ್ 2021: ಗೇಲ್ to ಎಬಿಡಿ, ಐಪಿಎಲ್ ಇತಿಹಾಸದ ಟಾಪ್ 5 ಸ್ಪೋಟಕ ಶತಕಗಳು

ಈ ನೇಮಕದ ಬಳಿಕ ಮಾತನಾಡಿದ ರಮೀಜ್ ರಾಜಾ "ಮ್ಯಾಥ್ಯೂ ಹೇಡನ್ ಆಸ್ಟ್ರೇಲಿಯಾ ಮೂಲದವರು. ವಿಶ್ವಕಪ್‌ಗಳಲ್ಲಿ ಗೆಲುವು ಸಾಧಿಸಿದ ಅನುಭವ ಅವರಿಗಿದೆ. ಆತನೋರ್ವ ಶ್ರೇಷ್ಠ ಆಟಗಾರನೂ ಹೌದು. ಆಸ್ಟ್ರೇಲಿಯಾದ ಕ್ರಿಕೆಟಿಗನೋರ್ವ ಪಾಕಿಸ್ತಾನ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ತುಂಬಾ ಅನುಕೂಲಕರವಾಗಲಿದೆ. ಪಾಕಿಸ್ತಾನ ಖಂಡಿತವಾಗಿಯೂ ವಿಶ್ವಕಪ್ ಗೆಲ್ಲುವ ಅವಕಾಶವಿದೆ. ಇದಕ್ಕಾಗಿ ಆಟಗಾರರು ತಮ್ಮ ಆಟದಲ್ಲಿ ಕೇವಲ 10 ಶೇಕಡಾ ಹೆಚ್ಚಿನ ಪ್ರದರ್ಶನವನ್ನು ನೀಡಬೇಕಿದೆ. ಇನ್ನು ವೆರ್ನನ್ ಫಿಲಾಂಡರ್ ಬಗ್ಗೆ ನಾನು ಚೆನ್ನಾಗಿ ಬಲ್ಲೆ. ಆತ ಬೌಲಿಂಗ್‌ಅನ್ನು ಅರ್ಥ ಮಾಡಿಕೊಳ್ಳಬಲ್ಲ. ಆಸ್ಟ್ರೇಲಿಯಾ ತಂಡದ ವಿರುದ್ಧ ಆತ ಅತ್ಯುತ್ತಮ ಬೌಲಿಂಗ್ ದಾಖಲೆ ಹೊಂದಿದ್ದಾರೆ" ಎಂದು ಹೊಸದಾಗಿ ನೇಮಕವಾಗಿರುವ ಕೋಚ್‌ಗಳ ಬಗ್ಗೆ ರಮೀಜ್ ರಾಜಾ ವಿವರಿಸಿದ್ದಾರೆ.

ಇನ್ನು ಮ್ಯಾಥ್ಯೂ ಹೇಡನ್ ಹಾಗೂ ಫಿಲಾಂಡರ್ ಇಬ್ಬರಿಗೂ ಕೋಚಿಂಗ್‌ನಲ್ಲಿ ಅನುಭವವಿಲ್ಲ. ಫಿಲಾಂಡರ್ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿದ್ದು ದಕ್ಷಿಣ ಆಫ್ರಿಕಾದ ದೇಶೀಯ ಕ್ರಿಕೆಟ್‌ನಲ್ಲಿ ಇನ್ನು ಕೂಡ ಆಡುತ್ತಿದ್ದಾರೆ. ಮತ್ತೊಂದೆಡೆ ಮ್ಯಾಥ್ಯೂ ಹೇಡನ್ 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಫಿಲಾಂಡರ್​​ 64 ಟೆಸ್ಟ್​​ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದು 8 ಅರ್ಧಶತಕ ಸೇರಿದಂತೆ 1,779ರನ್​ಗಳಿದಿದ್ದಾರೆ. ಬೌಲಿಂಗ್‌ನಲ್ಲಿ 224 ವಿಕೆಟ್​ ಪಡೆದುಕೊಂಡಿದ್ದಾರೆ. 30 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಂದ ಆಡಿರುವ ಫಿಲಾಂಡರ್ 41 ವಿಕೆಟ್ ಪಡೆದಿದ್ದಾರೆ. 7 ಟಿ-20 ಪಂದ್ಯಗಳನ್ನು ಆಡಿದ ಅನುಭವವಿರುವ ಫಿಲಾಂಡರ್ 4 ವಿಕೆಟ್​ ಗಳಿಸಿದ್ದಾರೆ. ಇನ್ನು ಮ್ಯಾಥ್ಯೂ ಹೇಡನ್ ಆಸ್ಟ್ರೇಲಿಯಾ ಪರವಾಗಿ 103 ಟೆಸ್ಟ್ ಪಂದ್ಯಗಳನ್ನು ಆಡಿದ್ದು 30 ಶತಕ, 29 ಅರ್ಧಶತಕ ಸಿಡಿಸಿದ್ದಾರೆ. ಟೆಸ್ಟ್‌ನಲ್ಲಿ ಹೇಡನ್ 8,625ರನ್ ಗಳಿಸಿದ್ದಾರೆ. 161 ಏಕದಿನ ಹಾಗೂ 9 ಟಿ-20 ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಮ್ಯಾಥ್ಯೂ ಹೇಡನ್​ ಏಕದಿನ ಪಂದ್ಯಗಳಲ್ಲಿ 10 ಶತಕ ಹಾಗೂ 36 ಅರ್ಧಶತಕ ಸೇರಿದಂತೆ 6,133 ರನ್​ಗಳಿಸಿದ್ದಾರೆ.

ಮ್ಯಾಂಚೆಸ್ಟರ್ ಟೆಸ್ಟ್ ರದ್ದಾದ ಕೋಪವನ್ನು ಐಪಿಎಲ್ ಮೇಲೆ ಹಾಕಿದ ಸ್ಟಾರ್ ಆಟಗಾರ!ಮ್ಯಾಂಚೆಸ್ಟರ್ ಟೆಸ್ಟ್ ರದ್ದಾದ ಕೋಪವನ್ನು ಐಪಿಎಲ್ ಮೇಲೆ ಹಾಕಿದ ಸ್ಟಾರ್ ಆಟಗಾರ!

ಇನ್ನು ರಮೀಜ್ ರಾಜಾ ಇಂದು ಪಿಸಿಬಿಯ ನೂತನ ಚೇರ್‌ಮನ್ ಆಗಿ ಅಧಿಕೃತವಾಗಿ ನೇಮಕವಾಗಿದ್ದಾರೆ. ಈ ಮೂಲಕ 36ನೇ ಪಿಸಿಬಿ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸ್ಥಾನಕ್ಕೇರಿದ ಕೇವಲ ನಾಲ್ಕನೇ ಕ್ರಿಕೆಟಿಗನೂ ಆಗಿದ್ದಾರೆ ರಮೀಜ್ ರಾಜಾ. ಇಜಾಜ್ ಬಟ್ (2008-11), ಜಾವೇದ್ ಬುರ್ಕಿ (1994-95) ಮತ್ತು ಅಬ್ದುಲ್ ಹಫೀಜ್ ಕರ್ದಾರ್ (1972-77) ಇದಕ್ಕೂ ಮುನ್ನ ಈ ಪಿಸಿಬಿ ಮುಖ್ಯಸ್ಥ ಸ್ಥಾನಕ್ಕೇರಿದ ಮಾಜಿ ಕ್ರಿಕೆಟಿಗರಾಗಿದ್ದಾರೆ. ಈ ಹಿಂದಿನ ಪಿಸಿಬಿ ಅಧ್ಯಕ್ಷರಾಗಿದ್ದ ಎಹ್ಸಾನ್ ಮನಿ ಹುದ್ದೆಯಿಂದ ಕೆಳಗಿಳಿದ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜಾ ನೆಚ್ಚಿನ ಅಭ್ಯರ್ಥಿಯಾಗಿದ್ದರು.

RCB ಜೆರ್ಸಿ ಚೇಂಜಾಗಿರೋದು ಯಾಕೆ ಅಂತಾ ಗೊತ್ತಾದ್ರೆ ನೀವು ಚಪ್ಪಾಳೆ ತಟ್ತೀರಾ? | Oneindia Kannada

ರಮೀಜ್ ರಾಜಾ ಒಟ್ಟು 255 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿಯೂ ಜವಾಬ್ಧಾರಿ ವಹಿಸಿಕೊಂಡಿದ್ದರು. 1984ರಿಂದ 1997ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದ ರಾಜಾ ಒಟ್ಟಾರೆಯಾಗಿ 8,674 ರನ್‌ಗಳಿಸಿದ್ದಾರೆ. ಇದಕ್ಕೂ ಮುನ್ನ 2003-04ರ ಅವಧಿಯಲ್ಲಿ ರಮೀಜ್ ರಾಜಾ ಪಿಸಿಬಿಯ ಐಸಿಸಿಯ ಮುಖ್ಯ ಕಾ್ಯನಿರ್ವಹಣಾಧಿಕಾರಿಗಳ ಸಮಿತಿಯನ್ನು ಪ್ರತಿನಿಧಿಸಿದ್ದರು. ಈಗ ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿಯಲ್ಲಿ ಸದಸ್ಯರಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, September 13, 2021, 21:56 [IST]
Other articles published on Sep 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X