ನಿಶ್ಚಿತಾರ್ಥದ ಚಿತ್ರವನ್ನು ಹಂಚಿಕೊಂಡ ಮಯಾಂಕ್!

Posted By:
Mayank Agarwal gets engaged to Aashita Sood

ಕರ್ನಾಟಕ ಹಾಗೂ ಕಿಂಗ್ಸ್ ಎಲೆವನ್ ಪಂಜಾಬ್ ಪರ ಆಡುವ ಕ್ರಿಕೆಟರ್ ಮಯಾಂಕ್‌ ಅಗರವಾಲ್‌‌ ಅವರು ತಮ್ಮ ವಿವಾಹ ನಿಶ್ಚಿತಾರ್ಥದ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು ನಗರದ ಉನ್ನತ ಪೊಲೀಸ್‌‌ ಅಧಿಕಾರಿ ಪ್ರವೀಣ್‌‌ ಸೂದ್‌‌ ಅವರ ಪುತ್ರಿ ಆಶಿತಾ ಸೂದ್‌‌ ಜೊತೆ ಇತ್ತೀಚೆಗೆ ಇವರ ವಿವಾಹ ನಿಶ್ಚಿತಾರ್ಥ ನೆರವೇರಿತ್ತು.

'ಲಂಡನ್ ಐ' ಸಾಕ್ಷಿಯಾಗಿ ಗೆಳತಿಗೆ ಲವ್ ಪ್ರಪೋಸ್ ಮಾಡಿದ ಮಯಾಂಕ್

ಕರ್ನಾಟಕದ ರಣಜಿ ತಂಡದ ಆರಂಭಿಕ ಬ್ಯಾಟ್ಸ್‌‌ಮನ್‌ ಮಯಾಂಕ್‌ ಹಾಗೀ ಆಶಿತಾ ಸೂದ್ ನಡುವೆ ಏಳು ವರ್ಷಗಳಿಂದ ಪ್ರೇಮ ಸಂಬಂಧವಿದೆ.

ಲಂಡನ್ನಿನ ಥೇಮ್ಸ್ ನದಿಯ ತಪ್ಪಲಿನಲ್ಲಿ ಲಂಡನ್ ಐ ಟವರ್ ನಲ್ಲಿ ತನ್ನ ಗೆಳತಿಗೆ ಕ್ರಿಕೆಟರ್ ಮಯಾಂಕ್ ಅಗರವಾಲ್ ಅವರು ಡಿಸೆಂಬರ್ ತಿಂಗಳಿನಲ್ಲಿ ಪ್ರಪೋಸ್ ಮಾಡಿದ್ದರು. ಈಗ ಹಿರಿಯರ ಆಶೀರ್ವಾದೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಮುಂದಿನ ವರ್ಷ ಮಯಾಂಕ್‌ ಅವರ ಬಿಡುವಿನ ಸಮಯವನ್ನು ನೋಡಿಕೊಂಡು ಮದುವೆ ನೆರವೇರಿಸಲು ಎರಡು ಮನೆ ಕಡೆಯವರು ಒಪ್ಪಿಕೊಂಡಿದ್ದಾರೆ. ಸದ್ಯ ಆಶಿತಾ ಅವರು ಲಂಡನ್ನಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 11ನೇ ಆವೃತ್ತಿಯಲ್ಲಿ 1 ಕೋಟಿ ರು ನೀಡಿ ಮಯಾಂಕ್ ರನ್ನು ಪಂಜಾಬ್ ತಂಡ ಖರೀದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Friday, February 2, 2018, 14:38 [IST]
Other articles published on Feb 2, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ