ಮತ್ತೆ ಮಿಂಚಿದ ಮಯಾಂಕ್, ದೆಹಲಿ ವಿರುದ್ಧ ಆಕರ್ಷಕ ಶತಕ

Posted By:

ಬೆಂಗಳೂರು, ನವೆಂಬರ್ 09: ಮಹಾರಾಷ್ಟ್ರ ವಿರುದ್ಧ ಭರ್ಜರಿ ತ್ರಿಶತಕ ಬಾರಿಸಿ ಉತ್ತಮ ಲಯದಲ್ಲಿರುವ ಮಯಾಂಕ್ ಅಗರವಾಲ್ ಅವರು ಮತ್ತೊಮ್ಮೆ ಶತಕ ಬಾರಿಸಿದ್ದಾರೆ.

ಆಲೂರಿನಲ್ಲಿ ನಡೆದಿರುವ ದೆಹಲಿ ವಿರುದ್ಧದ ಪಂದ್ಯದ ಮೊದಲ ದಿನದಂದು ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಮಯಾಂಕ್ ಅಗರವಾಲ್ ಅವರು 23 ಬೌಂಡರಿ, 3 ಸಿಕ್ಸರ್ ಗಳಿದ್ದ 169ರನ್ ಚೆಚ್ಚಿ ಅಜೇಯರಾಗಿ ಉಳಿದರು.

 Mayank Agarwal hundred gives Karnataka command

ಮಯಾಂಕ್ ಶತಕ, ಮನೀಶ್ ಪಾಂಡೆ ಅವರ 74ರನ್ ಗಳ ನೆರವಿನಿಂದ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಮೊದಲ ದಿನದ ಅಂತ್ಯಕ್ಕೆ 348/4 ಸ್ಕೋರ್ ಮಾಡಿ, ಉತ್ತಮ ಸ್ಥಿತಿಯಲ್ಲಿದೆ. ಸ್ಟುವರ್ಟ್ ಬಿನ್ನಿ 14ರನ್ ಗಳಿಸಿ ಆಡುತ್ತಿದ್ದಾರೆ.

ರಿಷಬ್ ಪಂತ್ ನಾಯಕತ್ವದ ದೆಹಲಿ ತಂಡದಲ್ಲಿ ಗೌತಮ್ ಗಂಭೀರ್, ಉನ್ಮುಕ್ತ್ ಚಂದ್, ನಿತೀಶ್ ರಾಣ ಕೂಡಾ ಆಡುತ್ತಿದ್ದಾರೆ. ದೆಹಲಿ ಪರ ನವದೀಪ್, ಕುಲ್ವಂತ್, ವಿಕಾಸ್, ಮನನ್ ಶರ್ಮ ತಲಾ ಒಂದು ವಿಕೆಟ್ ಗಳಿಸಿದರು.

Story first published: Thursday, November 9, 2017, 19:31 [IST]
Other articles published on Nov 9, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ