ಅಂಗವೈಕಲ್ಯ ಮೆಟ್ಟಿನಿಂತ ಸಾಧಕ ಈ ಹುಬ್ಬಳ್ಳಿ ಕ್ರಿಕೆಟರ್

Posted By: ಹುಬ್ಬಳ್ಳಿ ಪ್ರತಿನಿಧಿ

ಹುಬ್ಬಳ್ಳಿ, ನವೆಂಬರ್ 26 : ಈತ ಹುಟ್ಟು ವಿಕಲಚೇತನ. ಜೀವನದಲ್ಲಿ ಏನಾದರೂ, ಸಾಧನೆ ಮಾಡಬೇಕು ಎನ್ನುವ ಹಂಬಲದಿಂದ ದೊಡ್ಡದೊಂದು ಸಾಧನೆ ಮಾಡಲು ಸನ್ನದ್ಧವಾಗಿದ್ದಾನೆ.

ಅಂಗವಿಕಲರ ಟಿ20 ಕ್ರಿಕೆಟ್ ಸ್ಥಾನ ಪಡೆದು ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಸಿದ್ದಾನೆ ಈ ಮಂಜುನಾಥ್... ಸಾಧನೆ ಯಾರ ಸ್ವತ್ತು ಅಲ್ಲಾ. ಅದು ಸಾಧಕನ ಸ್ವತ್ತು ಎನ್ನುವುದನ್ನು ಸಾಧಿಸಲು ಹೊರಟ್ಟಿದ್ದಾನೆ ಈ ವಿಕಲಚೇತನ ಯುವಕ.

ಅಂದ ಹಾಗೆ ಈತ ಹುಬ್ಬಳ್ಳಿಯ ಉಣಕಲ್ ಗ್ರಾಮದ ನಿವಾಸಿ ಮಂಜುನಾಥ ಜಾಲಗಾರ್. ಹುಟ್ಟುತ್ತಾ ಮಂಜುನಾಥ ಜಾಲಗಾರ್ ಅಂಗವಿಕಲನಾದರೂ, ಕ್ರಿಕೆಟ್ ಆಟದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಹಠದಿಂದ ದಿನನಿತ್ಯ ಮೈದಾನದಲ್ಲಿ ಪ್ರಾಕ್ಟೀಸ್ ಮಾಡ್ತಾ ಮಾಡ್ತಾ ಈವಾಗ ಅಂಗವಿಕಲರ ಕ್ರಿಕೆಟ್ ನಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾನೆ.

ಬೆಂಗಳೂರು ಬ್ಲೂಸ್ಟರ್ ಟೀಮ್ ಗೆ ಆಯ್ಕೆ

ಬೆಂಗಳೂರು ಬ್ಲೂಸ್ಟರ್ ಟೀಮ್ ಗೆ ಆಯ್ಕೆ

DPL ಬೆಂಗಳೂರು ಬ್ಲೂಸ್ಟರ್ ಟೀಮ್ ನಲ್ಲಿ ಆಯ್ಕೆಯಾಗಿದ್ದು, ಡಿಸೆಂಬರ್ 1 ರಿಂದ ಜನವರಿ 3 ರವರಿಗೆ ದೆಹಲಿಯಲ್ಲಿ ನಡೆಯುವ DPL ಟಿ20 ಪಂದ್ಯಾವಳಿಗಳಲ್ಲಿ ಆಟವನ್ನು ಆಡಲಿದ್ದಾನೆ. ತನ್ನ ಮಗ ಸಾಕಷ್ಟು ಕಷ್ಟ ಹಾಗೂ ಸವಾಲನ್ನು ಎದುರಿಸಿ ಇಂಥದೊಂದು ಸಾಧನೆ ಮಾಡಿದ್ದಾನೆ.

ಅಪ್ಪನ ಆರೈಕೆಯಲ್ಲಿ ಬೆಳದ ಮಂಜುನಾಥ್

ಅಪ್ಪನ ಆರೈಕೆಯಲ್ಲಿ ಬೆಳದ ಮಂಜುನಾಥ್

ಇನ್ನೂ ಮಂಜುನಾಥ ಬಹಳ ಕಷ್ಟ ಪಟ್ಟು ಬೆಳದಿದ್ದು, 8 ತಿಂಗಳ ಕೂಸು ಇರುವಾಗಲೇ ತಾಯಿ ಸಾವನ್ನಪ್ಪಿದ್ದು, ತಂದೆ ಈತನನ್ನು ಕಷ್ಟ ಪಟ್ಟು ಬೆಳಸಿದ್ದಾರೆ. ಮಗ ಅಂಗವಿಕಲ ಎನ್ನುವ ಚಿಂತೆಯೊಂದಿಗೆ ಮಗನ ಸಾಧನೆಗೆ ಪ್ರೋತ್ಸಾಹ ನೀಡಿದ್ದಾರೆ ಆ ಹೆತ್ತಪ್ಪ.

ಶಿವಾನಂದ ಗುಂಚಾಳ ಅವರ ಮಾರ್ಗದರ್ಶನ

ಶಿವಾನಂದ ಗುಂಚಾಳ ಅವರ ಮಾರ್ಗದರ್ಶನ

ಈತನ ಕ್ರಿಕೆಟ್ ಆಟವನ್ನು ನೋಡಿದ ಶಿವಾನಂದ ಗುಂಚಾಳ ಇವರಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಮಾಡಿ ಇವತ್ತು ಅಂಗವಿಕಲ ಕ್ರಿಕೆಟ್ ಟೀಮ್ ನಲ್ಲಿ ಸ್ಥಾನ ಸಿಗೋದಕ್ಕೆ ಕಾರಣವಾಗಿದ್ದಾರೆ. ಆದರೆ, ಈ ಮಂಜುನಾಥ ಕ್ರಿಕೆಟ್ ನಲ್ಲಿ ದೊಡ್ಡ ಸಾಧನೆ ಮಾಡಿ ವಿಕಲಚೇತನರಿಗೆ ಸಹಾಯ ಮಾಡಬೇಕು ಎನ್ನುವ ಅಭಿಲಾಷೆಯನ್ನು ವ್ಯಕ್ತಪಡಿಸುತ್ತಾರೆ.

ಮಂಜುನಾಥನಿಗೆ ಶುಭಹಾರೈಕೆ

ಮಂಜುನಾಥನಿಗೆ ಶುಭಹಾರೈಕೆ

ಓರ್ವ ಅಂಗವಿಕಲನಾಗಿ ಕ್ರಿಕೆಟ್ ನಲ್ಲಿ ದೊಡ್ಡ ಸಾಧನೆ ಮಾಡಿ, ಆ ಹಣದಿಂದ ವಿಕಲಚೇತನರಿಗೆ ಕಲ್ಯಾಣ ಮಾಡಬೇಕು ಎನ್ನುವ ಈ ಮಂಜುನಾಥ ಅವರ ಕನಸು ನನಸಾಗಲಿ ಎಂದು ಉಣಕಲ್ ನ ಮಂದಿ ಶುಭಹಾರೈಸಿದ್ದಾರೆ.

Story first published: Monday, November 27, 2017, 8:05 [IST]
Other articles published on Nov 27, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ