ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಮೆಂಟಲ್ ಕಂಡೀಷನಿಂಗ್ ಕೋಚ್ ಬೇಕಿದೆ'; ಟಿ20 ವಿಶ್ವಕಪ್‌ನಲ್ಲಿ ರಾಹುಲ್ ಫಾರ್ಮ್ ಬಗ್ಗೆ ಗವಾಸ್ಕರ್ ಮಾತು

Mental Conditioning Coach Needed To KL Rahul For Poor Batting Form In T20 World Cup Says Sunil Gavaskar

ಭಾರತದ ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಫಾರ್ಮ್‌ನಿಂದ ಹೊರಗಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ 14 ಎಸೆತಗಳಲ್ಲಿ ಕೇವಲ 9 ರನ್ ಗಳಿಸುವ ಮೂಲಕ ಮತ್ತೊಂದು ಕೆಟ್ಟ ಇನ್ನಿಂಗ್ಸ್ ಪಡೆದದುಕೊಂಡರು.

ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆಡಿದ ಮೂರು ಪಂದ್ಯಗಳಲ್ಲಿ ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಅರಂಭಿಸಿದ ಕೆಎಲ್ ರಾಹುಲ್ ಕ್ರಮವಾಗಿ 4, 9 ಮತ್ತು 9 ಸ್ಕೋರ್ ದಾಖಲಿಸಿದ್ದಾರೆ.

T20 World Cup 2022: ಸೂರ್ಯಕುಮಾರ್ ಬೌಲರ್‌ಗಳ ಮನಸ್ಸಿನೊಂದಿಗೆ ಆಡುತ್ತಾರೆ; ಪಾಕ್ ಕ್ರಿಕೆಟಿಗT20 World Cup 2022: ಸೂರ್ಯಕುಮಾರ್ ಬೌಲರ್‌ಗಳ ಮನಸ್ಸಿನೊಂದಿಗೆ ಆಡುತ್ತಾರೆ; ಪಾಕ್ ಕ್ರಿಕೆಟಿಗ

ಬಲಗೈ ಬ್ಯಾಟರ್ ಸಂಪೂರ್ಣವಾಗಿ ಬ್ಯಾಟಿಂಗ್ ಪ್ರದರ್ಶನ ತೋರುತ್ತಿಲ್ಲ ಮತ್ತು ಅವರು ನಿರಂತರವಾಗಿ ಸ್ಟ್ರೈಕ್ ಅನ್ನು ತಿರುಗಿಸಲು ಸಹ ಸಾಧ್ಯವಾಗಲಿಲ್ಲ. ಹೀಗಾಗಿ, ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಅವರ ಅಗತ್ಯವಿದೆ ಮತ್ತು ಕೆಎಲ್ ರಾಹುಲ್ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುಬೇಕಿದೆ ಎಂದು ಹೇಳಿದ್ದಾರೆ.

ಆಟಗಾರನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮಾತನಾಡುವ ಅವಶ್ಯಕತೆಯಿದೆ

ಆಟಗಾರನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮಾತನಾಡುವ ಅವಶ್ಯಕತೆಯಿದೆ

"ಭಾರತ ತಂಡ ಪ್ಯಾಡಿ ಅಪ್ಟನ್ ಅವರನ್ನು ಮೆಂಟಲ್ ಕಂಡೀಷನಿಂಗ್ ತರಬೇತುದಾರರನ್ನಾಗಿ ಹೊಂದಿದೆ. ಬ್ಯಾಟಿಂಗ್ ಕೋಚ್ ಅವರಿಗೆ ಅವರ ತಪ್ಪುಗಳನ್ನು ಹೇಳಬಹುದಾದರೂ, ಮಾನಸಿಕ ಕಂಡೀಷನಿಂಗ್ ಕೋಚ್ ಆಟಗಾರನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮಾತನಾಡುವ ಅವಶ್ಯಕತೆಯಿದೆ. ಆ ಕೋಚ್, ಪ್ರತಿಭೆಯನ್ನು ಹೊಂದಿದ್ದೆಯಾ ಮತ್ತು ದೊಡ್ಡ ರನ್ ಗಳಿಸಬಹುದು ಎಂದು ಕೆಎಲ್ ರಾಹುಲ್‌ಗೆ ಧೈರ್ಯ ತುಂಬಬೇಕು," ಎಂದು ಸುನಿಲ್ ಗವಾಸ್ಕರ್ ಸ್ಪೋರ್ಟ್ಸ್ ಟಾಕ್‌ನಲ್ಲಿ ತಿಳಿಸಿದರು.

"ಭಾರತ ತಂಡ ಕೇವಲ ಮೂರು ಪಂದ್ಯಗಳನ್ನು ಆಡಿದೆ ಮತ್ತು ಸೂಪರ್ 12 ಹಂತದಲ್ಲಿ ಒಟ್ಟು 5 ಪಂದ್ಯಗಳನ್ನು ಆಡಬೇಕು. ನಿಮಗೆ ಬೇರೆ ಯಾವುದೇ ಓಪನರ್ ಇಲ್ಲ, ಕೆಎಲ್ ರಾಹುಲ್ ಅವರ ಸ್ಥಾನವನ್ನು ಪಡೆದುಕೊಳ್ಳುವ ಓಪನರ್ ಭಾರತ ತಂಡದಲ್ಲಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಹೀಗಾಗಿ ರಾಹುಲ್ ಅವರೊಂದಿಗೆ ತಾಳ್ಮೆಯನ್ನು ತೋರಿಸಬೇಕು, ಅವನು ಪೂರ್ಣ ಫಾರ್ಮ್‌ನಲ್ಲಿದ್ದಾಗ ಅವನು ಏನು ಮಾಡಬಹುದೆಂದು ನಮಗೆ ತಿಳಿದಿದೆ. ಯಾರಾದರೂ ಅವನೊಂದಿಗೆ ಮಾತನಾಡಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟರು.

ಐದು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿದ ದಕ್ಷಿಣ ಆಫ್ರಿಕಾ

ಐದು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿದ ದಕ್ಷಿಣ ಆಫ್ರಿಕಾ

ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಗ್ರೂಪ್ 2 ಸೂಪರ್ 12 ಪಂದ್ಯದಲ್ಲಿ ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಆಲ್‌ರೌಂಡ್ ಪ್ರದರ್ಶನದ ಮೂಲಕ ಐದು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು.

ರೋಹಿತ್ ಶರ್ಮಾ ನಾಯಕತ್ವದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ನಂತರ, ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲಿಂಗ್ ದಾಳಿಗೆ ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಸೇರಿದಂತೆ ಅಗ್ರ ಬ್ಯಾಟರ್‌ಗಳು ಕಳಪೆಯಾಗಿ ವಿಕಟ್ ಒಪ್ಪಿಸಿದರು.

ಸೂರ್ಯಕುಮಾರ್ ಯಾದವ್ ಕೇವಲ 40 ಎಸೆತಗಳಲ್ಲಿ 68 ರನ್

ಸೂರ್ಯಕುಮಾರ್ ಯಾದವ್ ಕೇವಲ 40 ಎಸೆತಗಳಲ್ಲಿ 68 ರನ್

ಸೂರ್ಯಕುಮಾರ್ ಯಾದವ್ ಕೇವಲ 40 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 68 ರನ್ ಗಳಿಸಿ ಭಾರತದ ಪರ ಮಿಂಚಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದರು.

134 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪರ ಏಡೆನ್ ಮಾರ್ಕ್ರಾಮ್ ಮತ್ತು ಡೇವಿಡ್ ಮಿಲ್ಲರ್ ಅರ್ಧಶತಕ ಗಳಿಸಿ ಮಿಂಚಿದರು. ದಕ್ಷಿಣ ಆಫ್ರಿಕಾ ತಂಡವು ಐದು ವಿಕೆಟ್‌ಗಳು ಮತ್ತು ಎರಡು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗಡಿ ತಲುಪಿದರು.

Story first published: Monday, October 31, 2022, 15:51 [IST]
Other articles published on Oct 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X